ನಿಧಿ ಸುಬ್ಬಯ್ಯ ಅವರದ್ದು ಲವ್ ಮ್ಯಾರೇಜಾ..? ಮದುವೆ ಬಗ್ಗೆ ಹೇಳಿದ್ದೇನು?
ಪಂಚರಂಗಿ ರಂಗಿ ಬೆಡಗಿ ನಿಧಿ ಸುಬ್ಬಯ್ಯ ಮುಂದಿನ ತಿಂಗಳು ಹಸೆಮಣೆ ಏರಲು ಸಜ್ಜಾಗುತ್ತಿದ್ದಾರೆ. ಮುಂಬೈ ಮೂಲದ ಉದ್ಯಮಿ ಲವೇಶ್ ಖೈರಜನಿ ಅವರನ್ನು ಸದ್ಯದಲ್ಲೇ ವರಿಸಲಿದ್ದಾರೆ.[ಕೊಡಗಿನ ಬೆಡಗಿ, ನಟಿ, ರೂಪದರ್ಶಿ ನಿಧಿ ಸುಬ್ಬಯ್ಯಗೆ ಕಲ್ಯಾಣ]
ಈವರೆಗೆ ಮದುವೆಯ ಬಗ್ಗೆ ಎಲ್ಲೂ ಬಾಯಿಬಿಡದ ನಿಧಿ ಅವರ ಮದುವೆ ಈಗ ಸಡೆನ್ ಆಗಿ ಪ್ರಕಟಗೊಂಡಿರುವುದು ಹಲವರಿಗೆ ಕುತೂಹಲದ ವಿಷಯ. ನಿಧಿ ಮದುವೆ ಆಗ್ತಿರೋದೇನೋ ಓಕೆ.. ಅಂದಹಾಗೆ ನಿಧಿ ಸುಬ್ಬಯ್ಯ ಅವರದ್ದು ಲವ್ ಮ್ಯಾರೇಜಾ ಅಥವಾ ಆರೇಂಜ್ಡ್ ಮ್ಯಾರೆಜಾ.., ಮುದುವೆ ಯಾವಾಗ? ಎಲ್ಲಿ? ಯಾರ್ಯಾರು ಮದುವೆಗೆ ಬರುತ್ತಾರೆ ಎಂಬಿತ್ಯಾದಿ ಪ್ರಶ್ನೆಗಳು ಸ್ಯಾಂಡಲ್ ವುಡ್ ಸಿನಿಪ್ರಿಯರಿಗೆ ಕಾಡುತ್ತಿರಬಹುದು. ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ..

ಪಕ್ಕಾ ಲವ್ ಮ್ಯಾರೇಜ್?
ನಿಧಿ ಸುಬ್ಬಯ್ಯ, ತಾವು ವರಿಸುತ್ತಿರುವ ಮುಂಬೈ ಮೂಲದ ಉದ್ಯಮಿ ಲವೇಶ್ ಖೈರಜನಿ ಅವರನ್ನು ಮೊದಲೇ ಮೀಟ್ ಆಗಿದ್ದರಂತೆ. ಇದು ಪಕ್ಕಾ ಲವ್ ಮ್ಯಾರೇಜ್.[ಪ್ರೀತಿಯ ತಂದೆ ಕಳೆದುಕೊಂಡ ನಟಿ ನಿಧಿ ಸುಬ್ಬಯ್ಯ]

ಲವ್ ಪ್ರಪೋಸ್ ಮಾಡಿದ್ದು ಯಾರು?
ಲವೇಶ್ ಖೈರಜನಿ, ನಿಧಿ ಸುಬ್ಬಯ್ಯ ಅವರಿಗೆ ಕಾಮನ್ ಫ್ರೆಂಡ್ ಗಳ ಮೂಲಕ ಒಂದೂವರೆ ವರ್ಷಗಳ ಹಿಂದೆ ಪರಿಚಯ ಆಗಿದ್ದರಂತೆ. ಹೊಸ ವರ್ಷದ ಸಂಭ್ರಮಾಚರಣೆ ದಿನ (ಜನವರಿ 1) ದಂದು ರೆಸಾರ್ಟ್ ವೊಂದರಲ್ಲಿ ಲವೇಶ್ ಖೈರಜನಿ, ನಿಧಿ ಗೆ ಉಂಗುರ ತೊಡಿಸುವ ಮೂಲಕ ಪ್ರಪೋಸ್ ಮಾಡಿದ್ದರಂತೆ. ನಂತರ ಮದುವೆಗೆ ನಿಧಿ ಸುಬ್ಬಯ್ಯ ಅವರ ಅಪ್ಪನೇ ಒಪ್ಪಿಕೊಂಡಿದ್ದರಂತೆ.

ಲವೇಶ್ ಖೈರಜನಿ ಬಗ್ಗೆ..
ಮುಂಬೈ ಮೂಲದ ಲವೇಶ್ ಖೈರಜನಿ ತಂದೆ ಉದ್ಯಮಿ. ಟೆಕ್ಸ್ ಟೈಲ್ಸ್ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಲವೇಶ್ ಸಹ ಅವರ ತಂದೆ ಉದ್ಯಮವನ್ನು ನೋಡಿಕೊಳ್ಳುತ್ತಿದ್ದಾರೆ.

ಮದುವೆ ಯಾವಾಗ?
ಫೆಬ್ರವರಿ 10 ಮತ್ತು 11 ರಂದು ನಿಧಿ ಅವರ ಮದುವೆ ನಡೆಯಲಿದ್ದು, ಈಗಿನಿಂದಲೇ ಸಿದ್ಧತೆ ಭರದಿಂದ ಸಾಗಿದೆ.

ಮದುವೆ ಎಲ್ಲಿ? ವಿಶೇಷತೆ ಏನು?
ನಿಧಿ ಸುಬ್ಬಯ್ಯ ಅವರ ಮದುವೆ ಕೂರ್ಗ್ ನ ರೆಸಾರ್ಟ್ ಒಂದರಲ್ಲಿ ಎರಡು ದಿನಗಳ ಕಾಲ ನಡೆಯಲಿದ್ದು, ಈಗಾಗಲೇ ರೆಸಾರ್ಟ್ ಬುಕ್ ಮಾಡಲಾಗಿದೆಯಂತೆ. ಅಂದಹಾಗೆ ನಾರ್ತ್ ಮತ್ತು ಸೌತ್ ಸಂಪ್ರದಾಯದಂತೆ ಮದುವೆ ನಡೆಯುತ್ತಿದೆ. ಮದುವೆಯಲ್ಲಿ ಫೇರಾ, ಸಂಗೀತ್, ಪೂಲ್ ಪಾರ್ಟಿ, ಕೊಡವ ವೆಡ್ಡಿಂಗ್ ಹೀಗೆ ಹಲವು ಕಾರ್ಯಕ್ರಮಗಳು ನಡೆಯಲಿವೆಯಂತೆ.

ಮದುವೆ ಗೆ ಯಾರ್ಯಾರು ಬರಲಿದ್ದಾರೆ?
ನಿಧಿ ಸುಬ್ಬಯ್ಯ ಈಗಾಗಲೇ ಸ್ಯಾಂಡಲ್ ವುಡ್ ನ ಸಾಕಷ್ಟು ನಟ-ನಟಿಯರಿಗೆ ಮದುವೆಗೆ ಆಹ್ವಾನ ನೀಡಿದ್ದಾರಂತೆ. ಸ್ಯಾಂಡಲ್ ವುಡ್ ನಿಂದ ನಿಧಿ ಅವರ ಸ್ನೇಹಿತರು, ನಟರು, ನಿರ್ದೇಶಕರು, ನಿರ್ಮಾಪಕರು ಮತ್ತು ಬಾಲಿವುಡ್ ನಿಂದ ಅರ್ಜುನ್ ಬಿದ್ಲಾನಿ, ಕಬೀರ್ ಬೇಡಿ, ಸುಶ್ಮಿತಾ ಸೇನ್ ಮತ್ತು ಸಹ ನಟರು ಬರುತ್ತಾರಂತೆ.

ನಿಧಿ ಸುಬ್ಬಯ್ಯ ಮದುವೆಯ ಥೀಮ್ ಇದು...
ನಿಧಿ ಸುಬ್ಬಯ್ಯ ತಮ್ಮ ಮುದುವೆಯನ್ನು ಒಂದು ಥೀಮ್ ಪ್ರಕಾರ ನಡೆಸುತ್ತಿದ್ದಾರೆ. ಮದುವೆಯು ಸಿನಿಮಾದ ರೀತಿಯಲ್ಲೇ ನಡೆಯಲಿದ್ದು, ರೆಸಾರ್ಟ್ ನಲ್ಲಿ ಅದ್ಧೂರಿ ಸೆಟ್ ಜೊತೆಗೆ, ವಿಂಟೇಜ್ ಗಾರ್ಡನ್ ಕಾನ್ಸೆಪ್ಟ್ ನಲ್ಲಿ ವೇದಿಕೆ ಸಿದ್ಧವಾಗುತ್ತಿದೆಯಂತೆ. ಇದೇ ವೇದಿಕೆಯಲ್ಲಿ ಪ್ರಖ್ಯಾತ ಕಲಾವಿದರು ಹಾಡುಗಳಿಗೆ ಹೆಜ್ಜೆ ಸಹ ಹಾಕಲಿದ್ದಾರಂತೆ.

ನಿಧಿ ಸುಬ್ಬಯ್ಯ ಅವರ ಮುಂದಿನ ಪ್ಲಾನ್ ಏನು?
ನಿಧಿ ಸುಬ್ಬಯ್ಯ ಉದ್ಯಮಿ ಅನ್ನು ವರಿಸುತ್ತಿರುವ ಕಾರಣ, ಮದುವೆ ನಂತರ ಪ್ರೊಡ್ಯೂಸರ್ ಆಗುತ್ತಾರಂತೆ. ಅಲ್ಲದೇ ತಮ್ಮದೇ ಆದ ಪ್ರೊಡಕ್ಷನ್ ಹೌಸ್ ಮಾಡಿ, ಕನ್ನಡ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾರಂತೆ.

ನಿಧಿ ಅವರು ನಟಿಸಿದ ಸಿನಿಮಾಗಳಿವು..
ಕನ್ನಡದಲ್ಲಿ 'ಪಂಚರಂಗಿ', 'ಅಣ್ಣಾ ಬಾಂಡ್', 'ಕೃಷನ್ ಮ್ಯಾರೇಜ್ ಸ್ಟೋರಿ' ಚಿತ್ರಗಳಲ್ಲಿ ನಟಿಸಿದ್ದರು. ಹಿಂದಿಯಲ್ಲಿ 'ಓ ಮೈಗಾಡ್' ಮತ್ತು 'ಅಜಬ್ ಗಜನ್ ಲವ್' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.


Click it and Unblock the Notifications











