ಲಾಕ್‌ಡೌನ್ ಮಧ್ಯೆಯೂ ಮನೆಯಿಂದ ಹೊರಬಂದ ಸುಧಾರಾಣಿ, ಕಾರು ಓಡಿಸಿದ ಮಗಳು: ಕಾರಣ ಇದು

ಮನೆಯಲ್ಲಿಯೇ ಇರಿ, ಮನೆಯಲ್ಲಿಯೇ ಇರಿ- ಇದು ಸರ್ಕಾರ ಮತ್ತು ಅಧಿಕಾರಿಗಳು ಪದೇ ಪದೇ ಹೇಳುತ್ತಿರುವ ಮಾತು. ಕೊರೊನಾ ವೈರಸ್ ಸೋಂಕು ಎಲ್ಲಿಂದ ಯಾರಿಗೆ ಹೇಗೆ ಹರಡಬಹುದು ಎನ್ನುವುದೇ ಗೊತ್ತಾಗುವುದಿಲ್ಲ. ಹೀಗಾಗಿ ನೀವು ಮನೆಯಲ್ಲಿ ಇದ್ದರೆ ಮಾತ್ರ ಅದರ ಸರಪಳಿಯನ್ನು ತುಂಡರಿಸಲು ಸಾಧ್ಯ ಎನ್ನುವುದು ಸರ್ಕಾರದ ಕಳಕಳಿ.

ಹಾಗೆಂದು ಜನರು ಮನೆಯಲ್ಲಿಯೇ ಇರಲು ಸಾಧ್ಯವಿಲ್ಲ. ಅಗತ್ಯ ವಸ್ತುಗಳನ್ನು ಖರೀದಿಸಲು ಹೊರಬರಲೇಬೇಕು. ಹಾಗೆ ಅನಿವಾರ್ಯವಾಗಿ ಬರುವಾಗ ಕೆಲವು ಸುರಕ್ಷೆಯ ಕ್ರಮಗಳನ್ನು ತೆಗೆದುಕೊಳ್ಳಿ ಎನ್ನುವುದು ಸರ್ಕಾರದ ಮನವಿ. ಮುಖ್ಯವಾಗಿ ಎಷ್ಟೇ ಅಗತ್ಯ ವಸ್ತುಗಳು ಬೇಕಿದ್ದರೂ ಒಬ್ಬರು ಮಾತ್ರವೇ ಬಂದು ತೆಗೆದುಕೊಳ್ಳಿ. ಸಾಧ್ಯವಾದಷ್ಟು ವಾಹನಗಳನ್ನು ಹೊರತೆಗೆಯ ಬೇಡಿ. ಕಾಲ್ನಡಿಗೆಯಲ್ಲಿಯೇ ಹೋಗಿ ಬನ್ನಿ ಎಂದು ಮನವಿ ಮಾಡುತ್ತಿದ್ದಾರೆ. ಆದರೆ ನಟಿ ಸುಧಾರಾಣಿ ಮತ್ತು ಅವರ ಮಗಳು ಮನೆಯಿಂದ ಹೊರಬಂದಿದ್ದಾರೆ. ಕಾರು ಚಲಾಯಿಸಿದ್ದಾರೆ. ಮುಂದೆ ಓದಿ...

ಖರೀದಿಯ ಅನಿವಾರ್ಯತೆ

ಖರೀದಿಯ ಅನಿವಾರ್ಯತೆ

ಅಗತ್ಯ ವಸ್ತುಗಳು ಪ್ರತಿಯೊಬ್ಬರಿಗೂ ಬೇಕು. ಈ ಸಂದರ್ಭದಲ್ಲಿ ಎಷ್ಟೇ ದೊಡ್ಡವರಾದರೂ, ಸೆಲೆಬ್ರಿಟಿಗಳಾದರೂ ದಿನಸಿ, ತರಕಾರಿಗಳ ಖರೀದಿಗೆ ಹೊರಗೆ ಬರಲೇಬೇಕಾದ ಸ್ಥಿತಿ ಇದೆ. ಹಾಗೆಯೇ ನಟಿ ಸುಧಾರಾಣಿ ಮತ್ತು ಅವರ ಮಗಳು ನಿಧಿ ಹೊರಬಂದಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಸುಧಾರಾಣಿ ಪೋಸ್ಟ್

ಇನ್‌ಸ್ಟಾಗ್ರಾಂನಲ್ಲಿ ಸುಧಾರಾಣಿ ಪೋಸ್ಟ್

ಈ ಸಂಗತಿಯನ್ನು ಸ್ವತಃ ಸುಧಾರಾಣಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಹಾಗೆಯೇ ತಮ್ಮ ಪೋಸ್ಟ್ ವಿವಾದಕ್ಕೆ ಕಾರಣವಾಗಬಹುದು ಎಂಬ ಮುನ್ನೆಚ್ಚರಿಕೆಯಿಂದ ಅದಕ್ಕೆ ವಿವರಣೆಯನ್ನೂ ನೀಡಿದ್ದಾರೆ.

'ಬಿಗ್ ಬಾಸ್' ಥರ ಮನೇಲಿ ಕೂರಲಿಲ್ಲ ದೀಪಿಕಾ ದಾಸ್: ಈಗ ಏನ್ಮಾಡ್ತಿದ್ದಾರೆ ನೋಡಿ...

ತರಕಾರಿ, ದಿನಸಿ ಎಲ್ಲ ಖಾಲಿ

ನಿಮ್ಮ ಕಾಳಜಿಗಾಗಿ ಮೊದಲಿಗೆ ಎಲ್ಲರಿಗೂ ಧನ್ಯವಾದಗಳನ್ನು ಹೇಳುತ್ತೇನೆ. ಲಾಕ್‌ಡೌನ್ ಶುರುವಾದಾಗಿನಿಂದಲೂ ನಾನು ಮನೆಯಿಂದ ಹೊರಗೆ ಬಂದಿರಲಿಲ್ಲ. ಆದರೆ ಎಲ್ಲ ತರಕಾರಿಗಳು ಹಾಗೂ ಕೆಲವು ದಿನಸಿ ಸಾಮಾನುಗಳು ಖಾಲಿಯಾಗಿದ್ದರಿಂದ ಅವುಗಳನ್ನು ಖರೀದಿಸಲು ಇಂದು ನಮಗೆ ಬೇರೆ ಆಯ್ಕೆಯೇ ಇರಲಿಲ್ಲ ಎಂದು ತಿಳಿಸಿದ್ದಾರೆ.

ಆಕೆಯ ಬಳಿ ಲೈಸೆನ್ಸ್ ಇದೆ

ಆಕೆಯ ಬಳಿ ಲೈಸೆನ್ಸ್ ಇದೆ

ಈ ಕಾರಣದಿಂದಾಗಿ ನಾವು ಹೊರ ಹೋದೆವು. ಹಾಗೆಯೇ ಆಕೆಯ ಬಳಿ ಲೈಸೆನ್ಸ್ ಇದೆ. ಹಾಗೆಂದು ಈ ಮೂಲಕ ನಾವು ಜನರು ಮನೆಯಿಂದ ಹೊರಹೋಗುವುದನ್ನು ಪ್ರೋತ್ಸಾಹಿಸುವುದಿಲ್ಲ. ಈ ಫೋಟೊ ಅಪ್‌ಲೋಡ್ ಆಗುವವರೆಗೂ ಇದು ಗೊತ್ತಾಗಿರಲಿಲ್ಲ. ಬಹಳ ಹೊತ್ತಿನ ನಂತರ ಗೊತ್ತಾಯಿತು ಎಂದು ತಿಳಿಸಿದ್ದಾರೆ.

More from Filmibeat

English summary
Actress Sudharani has shared an instagram post that she and her daughter Nidhi stepped out and drive car amid lockdown for gorcery and vegetables.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X