twitter
    For Quick Alerts
    ALLOW NOTIFICATIONS  
    For Daily Alerts

    'ಬಿಗ್ ಬಾಸ್' ಥರ ಮನೇಲಿ ಕೂರಲಿಲ್ಲ ದೀಪಿಕಾ ದಾಸ್: ಈಗ ಏನ್ಮಾಡ್ತಿದ್ದಾರೆ ನೋಡಿ...

    |

    ಒಂದು ದಿನದ ಹಿಂದಷ್ಟೇ ಮುಖ್ಯಮಂತ್ರಿಗಳ ಕೋವಿಡ್ 19 ಪರಿಹಾರ ನಿಧಿಗೆ ಐದು ಲಕ್ಷ ರೂಪಾಯಿ ದೇಣಿಗೆ ನೀಡುವ ಮೂಲಕ ಮಾನವೀಯತೆ ಪ್ರದರ್ಶಿಸಿದ್ದ ಬಿಗ್ ಬಾಸ್ ಖ್ಯಾತಿಯ ನಟಿ ದೀಪಿಕಾ ದಾಸ್, ಅಷ್ಟಕ್ಕೆ ತಮ್ಮ ಸೇವೆ ಮುಗಿಯಿತೆಂದು ಸುಮ್ಮನೆ ಕುಳಿತಿಲ್ಲ. ಮರುದಿನದಿಂದಲೇ ತಮ್ಮ ಮನೆ ಸುತ್ತಮುತ್ತಲಿನ ಪ್ರದೇಶಗಳಿಗೆ ತೆರಳಿ ಕಷ್ಟದಲ್ಲಿರುವ ಜನರಿಗೆ ನೆರವು ನೀಡುತ್ತಿದ್ದಾರೆ.

    ಈ ಸಂಕಷ್ಟದ ಸಂದರ್ಭದಲ್ಲಿ ಕೆಲವು ಸೆಲೆಬ್ರಿಟಿಗಳು ಜನರಿಗೆ ಸಂದೇಶ ನೀಡಿ ಸುಮ್ಮನಾಗುತ್ತಿದ್ದಾರೆ. ಇನ್ನು ಕೆಲವರು ಹಣಕಾಸಿನ ನೆರವು ಒದಗಿಸುವ, ಆಹಾರ ಪೂರೈಸುವ ಅಥವಾ ದಿನ ಬಳಕೆಯ ವಸ್ತುಗಳನ್ನು ಒದಗಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ದೀಪಿಕಾ ದಾಸ್ ಹಣಕಾಸಿನ ನೆರವಿನ ಜತೆಗೆ, ಕಡುಬಡತನದಲ್ಲಿರುವ ಕುಟುಂಬಗಳಿಗೆ ದೈನಂದಿನ ಅವಶ್ಯಕತೆಗಳನ್ನು ಪೂರೈಸುವ ಮಹತ್ಕಾರ್ಯ ಮಾಡುತ್ತಿದ್ದಾರೆ. 'ಫಿಲ್ಮಿ ಬೀಟ್'ಗೆ ಸಂದರ್ಶನ ನೀಡಿದ ಅವರು ತಮ್ಮ ಸಾಮಾಜಿಕ ಕಾರ್ಯ, ಬಿಗ್ ಬಾಸ್‌ನ ಅನುಭವ ಮತ್ತು ತಮ್ಮ ಸಿನಿಮಾ ಬದುಕಿನ ಕನಸುಗಳನ್ನು ಅವರು ಹಂಚಿಕೊಂಡಿದ್ದಾರೆ. ಮುಂದೆ ಓದಿ...

    ಜನರಿಗೆ ಅವಶ್ಯಕ ವಸ್ತುಗಳ ಪೂರೈಕೆ

    ಜನರಿಗೆ ಅವಶ್ಯಕ ವಸ್ತುಗಳ ಪೂರೈಕೆ

    ಜನರಿಗೆ ಅತಿ ಅವಶ್ಯಕ ವಸ್ತುಗಳನ್ನು ಒದಗಿಸುವ ಸಹಾಯ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ. ನಿನ್ನೆ ಸುಮಾರು 50 ಜನರಿಗೆ ಸಹಾಯ ಮಾಡಿದ್ದೆವು. ಇವತ್ತು 80-88 ಜನರಿಗೆ ಅಕ್ಕಿ, ಬೇಳೆ, ಉಪ್ಪು ಮುಂತಾದ ಅಗತ್ಯ ಸರಕುಗಳನ್ನು ಕೊಡುತ್ತಿದ್ದೇವೆ. ಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್ ಪೂರೈಸುತ್ತಿದ್ದೇವೆ.

    32 ವರ್ಷದ ಹಿಂದೆ ಶಿವಣ್ಣ ಮಾಡಿದ್ದ ದೊಡ್ಡ ಸಹಾಯವನ್ನು ಬಿಚ್ಚಿಟ್ಟ ಮಾಜಿ ಖೈದಿ32 ವರ್ಷದ ಹಿಂದೆ ಶಿವಣ್ಣ ಮಾಡಿದ್ದ ದೊಡ್ಡ ಸಹಾಯವನ್ನು ಬಿಚ್ಚಿಟ್ಟ ಮಾಜಿ ಖೈದಿ

    ಜನರೂ ಪ್ರಭಾವಿತರಾಗಲಿ

    ಜನರೂ ಪ್ರಭಾವಿತರಾಗಲಿ

    ನಿತ್ಯವೂ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡುತ್ತಿದ್ದೇವೆ. ಒಂದು ದಿನ ಮಾಡಿ ಬಿಟ್ಟರೆ ಅದು ಮುಂದುವರಿಯುವುದಿಲ್ಲ. ದಿನವೂ ಇಂತಹ ಕೆಲಸ ಮಾಡಬೇಕು. ಅದರಿಂದ ಒಂದಷ್ಟು ಜನರು ಪ್ರಭಾವಿತರಾಗಿ ಅವರೂ ಸೇವೆಯಲ್ಲಿ ತೊಡಗಲಿ ಎಂಬುದು ನನ್ನ ಉದ್ದೇಶ. ಮುಂದೆ ಆನ್‌ಲೈನ್ ಮೂಲಕ ಬೇಸಿಕ್ ವಸ್ತುಗಳನ್ನು ಖರೀದಿ ಮಾಡಿ ನಂತರ ಅವುಗಳನ್ನು ಜನರಿಗೆ ತಲುಪಿಸುವ ಕಾರ್ಯಕ್ರಮ ಇದೆ.

    ಎನ್‌ಜಿಒದ ಕೆಲವರು ಜತೆಗಿದ್ದಾರೆ

    ಎನ್‌ಜಿಒದ ಕೆಲವರು ಜತೆಗಿದ್ದಾರೆ

    ನನ್ನ ಜತೆಗೆ ಜೀವ ಸ್ಪಂದನ ಎಂಬ ಎನ್‌ಜಿಒದ ಕೆಲವರು ಸೇರಿಕೊಂಡಿದ್ದಾರೆ. ಈ ರೀತಿ ಕಾರ್ಯಗಳಲ್ಲಿ ಮ್ಯಾನ್ ಪವರ್ ಬೇಕಾಗುತ್ತದೆ. ಎನ್‌ಜಿಒ ಎಂದು ಬಂದಾಗ ಓಡಾಡಲು ತೊಂದರೆ ಆಗಲ್ಲ. ಆದರೆ ಬೇರೆಯವರನ್ನು ಕರೆಸಲು ಕಷ್ಟ ಆಗುತ್ತದೆ. ನನ್ನ ಜತೆಗೆ ಇದ್ದು ಓಡಾಡಿಕೊಂಡು ಜನರಿಗೆ ರೀಚ್ ಮಾಡಿಸುವ ಪ್ರಯತ್ನ ಮಾಡುತ್ತಿದ್ದಾರೆ.

    ದಿನನಿತ್ಯ 250 ದಿನಗೂಲಿ ಕಾರ್ಮಿಕರಿಗೆ ಊಟ ಹಾಕುತ್ತಿದ್ದಾರೆ ಪ್ರಕಾಶ್ ರೈದಿನನಿತ್ಯ 250 ದಿನಗೂಲಿ ಕಾರ್ಮಿಕರಿಗೆ ಊಟ ಹಾಕುತ್ತಿದ್ದಾರೆ ಪ್ರಕಾಶ್ ರೈ

    ಮಾನವೀಯತೆ ಪ್ರತಿಯೊಬ್ಬರಲ್ಲೂ ಇರಬೇಕು

    ಮಾನವೀಯತೆ ಪ್ರತಿಯೊಬ್ಬರಲ್ಲೂ ಇರಬೇಕು

    ಈಗಿನ ಸಮಯದಲ್ಲಿ ಜನರಿಗೆ ದುಡ್ಡಿನ ಅವಶ್ಯಕತೆ ಇರೊಲ್ಲ. ಮುಖ್ಯವಾಗಿ ಇರುವುದು ಆಹಾರದ ಅವಶ್ಯಕತೆ. ಹೀಗಾಗಿ ಹಣಕಾಸಿನ ನೆರವು ಮಾಡೊಲ್ಲ. ಇದು ಎಲ್ಲರಿಗೂ ಗೊತ್ತಿರುವ ಮತ್ತು ಅರ್ಥವಾಗಿರುವ ಸನ್ನಿವೇಶ. ಮಾನವೀಯತೆ ಪ್ರತಿಯೊಬ್ಬರಲ್ಲಿಯೂ ಇರಬೇಕು. ಜನರೂ ಅರ್ಥ ಮಾಡಿಕೊಂಡು ಬಾಡಿಗೆಗಳನ್ನು ಕಡಿಮೆ ಪಡೆದುಕೊಳ್ಳಬೇಕು.

    ಇನ್ನೂ ದೊಡ್ಡ ಯೋಜನೆ ಇದೆ

    ಇನ್ನೂ ದೊಡ್ಡ ಯೋಜನೆ ಇದೆ

    ಜನರಿಗೆ ತೀರಾ ಅಗತ್ಯ ಇರುವುದು ನೀರು, ಆಹಾರ, ಜಾಗ. ಜಾಗ ಒದಗಿಸುವ ಕಾರ್ಯ ನಮಗೆ ಕಷ್ಟ ಆಗಬಹುದು. ಆದರೆ ಜಾಗದಲ್ಲಿ ಇದ್ದವರಿಗೆ ಆಹಾರ ಮತ್ತು ನೀರು ಒದಗಿಸುತ್ತಿದ್ದೇವೆ. ಜನರೂ ಸಹಾಯ ಮಾಡಬಹುದು. ಲಾಕ್‌ಡೌನ್ ಅವಧಿ ಮುಗಿದ ಬಳಿಕ ದೊಡ್ಡ ತಂಡದೊಂದಿಗೆ ವೈಯಕ್ತಿಕವಾಗಿ ಸಾಧ್ಯವಾದಷ್ಟು ಹೆಚ್ಚು ಜನರಿಗೆ ಸಹಾಯ ಮಾಡುವ ಉದ್ದೇಶ ಇದೆ. ಅದಕ್ಕೆ ಈಗಿನ ಈ ಎಲ್ಲ ಸಮಸ್ಯೆಗಳು ಮುಗಿಯಬೇಕು.

    ಬೀದಿ ನಾಯಿಗಳಿಗೆ ತುತ್ತುಣಿಸಲು ಬೀದಿಗಿಳಿದ ಸಂಯುಕ್ತ ಹೊರನಾಡುಬೀದಿ ನಾಯಿಗಳಿಗೆ ತುತ್ತುಣಿಸಲು ಬೀದಿಗಿಳಿದ ಸಂಯುಕ್ತ ಹೊರನಾಡು

    ನಿಮ್ಮ ಸುತ್ತಮುತ್ತಲಿನವರಿಗೆ ಸಹಾಯ ಮಾಡಿ

    ನಿಮ್ಮ ಸುತ್ತಮುತ್ತಲಿನವರಿಗೆ ಸಹಾಯ ಮಾಡಿ

    ಅನೇಕರು ನಮ್ಮ ಜತೆ ಸಹಾಯಕ್ಕೆ ಬರಲು ಸಿದ್ಧರಿದ್ದಾರೆ. ಆದರೆ ನಾವು ಅವರನ್ನು ಕರೆಯುವುದು ಈ ಸಮಯದಲ್ಲಿ ಸರಿ ಎನಿಸೊಲ್ಲ. ಎಲ್ಲರೂ ಮನೆಯಲ್ಲಿಯೇ ಇರುವುದು ಮುಖ್ಯ. ನಮ್ಮಿಂದ ಬೇರೆ ಯಾರಿಗೂ ತೊಂದರೆ ಅಗಬಾರದು. ನಮಗೆ ಈಗ ಮ್ಯಾನ್ ಪವರ್ ಅವಶ್ಯಕತೆ ಇಲ್ಲ. ಆಸಕ್ತಿ ಇರುವವರು ನಮಗೆ ವಸ್ತುಗಳನ್ನು ಕಳುಹಿಸಬಹುದು, ಫಂಡ್ ಡೊನೇಟ್ ಮಾಡಬಹುದು. ಅದು ಕಷ್ಟವಾದರೆ ಅಕ್ಕಪಕ್ಕದಲ್ಲಿನ ಜನರಿಗೇ ನೆರವು ನೀಡುವುದು, ಬೀದಿ ನಾಯಿಗಳಿಗೆ ಊಟ ನೀಡುವುದು ಮುಂತಾದ ಕೆಲಸ ಮಾಡಬಹುದು.

    ನಮ್ಮವರಿಗೆ ನಾವೇ ಸಹಾಯ ಮಾಡಬೇಕು

    ನಮ್ಮವರಿಗೆ ನಾವೇ ಸಹಾಯ ಮಾಡಬೇಕು

    ಯಾರೋ ಸಣ್ಣ ಪುಟ್ಟ ಸಹಾಯ ಮಾಡುತ್ತಾರೆ ಎಂದು ನಾವು ಸುಮ್ಮನಾಗಬಹುದು. ಆದರೆ ಇದು ಬಹಳ ದೊಡ್ಡ ಸಮಸ್ಯೆ. ನಮಗೆ ಸಹಾಯ ಮಾಡಬೇಕು ಎಂದರೆ ಬೇರೆ ರಾಜ್ಯಗಳಿಗೂ ಸಮಸ್ಯೆ ಇದೆ. ದೇಶಕ್ಕೆ ಸಹಾಯ ಮಾಡಲು ಬೇರೆ ದೇಶಗಳಿಗೂ ಸಮಸ್ಯೆ ಇದೆ. ಈ ಸಮಯದಲ್ಲಿ ನಮ್ಮವರಿಗೆ ನಾವೇ ಸಹಾಯ ಮಾಡಬೇಕು. ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಬೇರೆ ದಾರಿ ಇಲ್ಲ. ಸರ್ಕಾರ ಸಹಾಯ ಮಾಡುತ್ತದೆ. ಆದರೆ ಅದಕ್ಕೆ ಸಮಯ ಬೇಕು. ಅದಕ್ಕಾಗಿ ಜನರು ಕಾಯಲು ಆಗೊಲ್ಲ. ಏಕೆಂದರೆ ಇದು ಊಟ ತಿಂಡಿ ಬದುಕಿನ ಪ್ರಶ್ನೆ.

    ಕೊರೊನಾ ವೈರಸ್ ಸಂಕಷ್ಟ: 50 ಲಕ್ಷ ರೂ ದೇಣಿಗೆ ನೀಡಿ ಔದಾರ್ಯ ಮೆರೆದ ಪುನೀತ್ ರಾಜ್‌ಕುಮಾರ್ಕೊರೊನಾ ವೈರಸ್ ಸಂಕಷ್ಟ: 50 ಲಕ್ಷ ರೂ ದೇಣಿಗೆ ನೀಡಿ ಔದಾರ್ಯ ಮೆರೆದ ಪುನೀತ್ ರಾಜ್‌ಕುಮಾರ್

    ಮನೆಯಲ್ಲಿ ಇರುವುದು ಬಹಳ ಮುಖ್ಯ

    ಮನೆಯಲ್ಲಿ ಇರುವುದು ಬಹಳ ಮುಖ್ಯ

    ಸರ್ಕಾರ ಕಠಿಣವಾಗಿ ಹೇಳಿದೆ ಮನೆಯಲ್ಲಿಯೇ ಕೂರಬೇಕು ಎಂದು. ಅದನ್ನು ನಾವು ಅನುಸರಿಸಬೇಕು ಎಂದು ನಾನೂ ಸುಮ್ಮನಾಗಿದ್ದೆ. ಶೇ 99ರಷ್ಟು ಇದು ಬಹಳ ಮುಖ್ಯ. ಎಲ್ಲೋ ಒಂದು ಕಡೆ ಮನೆಯಲ್ಲಿ ಇದ್ದಾಗ ಕೆಲಸ ಮಾಡಲು ಆಗಲಿಲ್ಲ. ಹೀಗಾಗಿ ಜನರಿಗೆ ಒಂದಷ್ಟು ದಿನ ಸಹಾಯ ಮಾಡೋಣ ಎಂದು ಬಲವಾದ ನಿರ್ಧಾರ ತೆಗೆದುಕೊಳ್ಳಬೇಕಾಯಿತು.

    ಬಿಗ್‌ ಬಾಸ್‌ಗಿಂತ ಕಷ್ಟವಲ್ಲ

    ಬಿಗ್‌ ಬಾಸ್‌ಗಿಂತ ಕಷ್ಟವಲ್ಲ

    ಒಂದು ಸಂಗತಿ ಎಂದರೆ ಬಿಗ್ ಬಾಸ್‌ನಿಂದ ಈಗ ತಾನೆ ಬಂದಿದ್ದೇನೆ. ಹೀಗಾಗಿ ಲಾಕ್‌ಡೌನ್ ಅವಧಿ ತುಂಬಾ ಕಷ್ಟ ಆಗಲಿಲ್ಲ. ಇದಕ್ಕಿಂತಲೂ ಬಿಗ್ ಬಾಸ್ ಕಷ್ಟ. ಇಲ್ಲಿ ಫ್ಯಾಮಿಲಿ ಇರುತ್ತಾರೆ, ಟಿವಿ ಫೋನ್ ಇರುತ್ತದೆ, ಮಾತನಾಡಬಹುದು, ಬೇಕಾದ ತಂಡಿ ಸಿಗುತ್ತದೆ, ಹೇಗೋ ಸಮಯ ಕಳೆಯಬಹುದು. ಸಮಯವನ್ನು ಮರೆಸುವ ವಿಚಾರಗಳಿವೆ. ಸೃಜನಶೀಲ ಕೆಲಸಗಳಿಗೆ ಸಮಯ ಸಿಕ್ಕಿತ್ತು. ಡ್ರಾಯಿಂಗ್ ಮಾಡುವುದು, ಸಿನಿಮಾಗಳನ್ನು ನೋಡುವುದು, ಓದುವುದು ಮಾಡಿದೆ. ಬಿಗ್‌ಬಾಸ್‌ನಿಂದ ನಾಲ್ಕು ತಿಂಗಳ ಬಳಿಕ ಬಂದಾಗ ನೋಡದೆ ಉಳಿದಿದ್ದ ಸಿನಿಮಾ, ತಿಂಡಿ ತಿನ್ನುವುದರಲ್ಲಿ ಸಮಯ ಕಳೆಯುವುದು ಸುಲಭವಾಗಿತ್ತು.

    ಪ್ರಾಣ, ಸೊಸೈಟಿಗಿಂತ ಯಾವುದೂ ಮುಖ್ಯವಲ್ಲ

    ಪ್ರಾಣ, ಸೊಸೈಟಿಗಿಂತ ಯಾವುದೂ ಮುಖ್ಯವಲ್ಲ

    ಹಾಗೆಂದು ಸುಮ್ಮನೆ ಮನೆಯಲ್ಲಿ ಕೂರಬೇಕು ಎಂದರೆ ತುಂಬಾ ಕಷ್ಟ. ಸಾರ್ವಜನಿಕ ಬದುಕಿನಲ್ಲಿ ಇರುವವರಿಗೆ ಈಸಿ ಕೆಲಸ ಅಲ್ಲವೇ ಅಲ್ಲ. ಒಂದು ಎರಡು ದಿನ ನನಗೋಸ್ಕರ ಬ್ರೇಕ್ ತಗೊಂಡು ಮನೇಲಿ ಕೂರುತ್ತಿದ್ದೆ. ಆಗ ಬೋರಾಗೊಲ್ಲ. ಆದರೆ ದಿನವೂ ಓಡಾಡಿಕೊಂಡು ಕೆಲಸ ಮಾಡೋರಿಗೆ ಮನೇಲಿ ಇರಬೇಕು ಎಂದರೆ ಕಷ್ಟ ಆಗುತ್ತದೆ. ಆದರೆ ಸಂದರ್ಭ ಅರ್ಥ ಮಾಡಿಕೊಂಡು ಮೂರು ಸ್ಟೆಪ್ ಮುಂದಾಲೋಚನೆ ಮಾಡಿಕೊಂಡು ಮನೆಯಲ್ಲಿ ಇದ್ದರೆ ಯಾವ ಬೇಸರವೂ ಆಗೊಲ್ಲ. ನಮ್ಮ ಪ್ರಾಣ, ಸೊಸೈಟಿಗಿಂತ ಯಾವುದೂ ಮುಖ್ಯವಲ್ಲ ಎಂಬ ಸ್ಪಷ್ಟ ಚಿತ್ರಣ ಎದುರು ಬರುತ್ತದೆ.

    ಬಿಗ್ ಬಾಸ್‌ನಲ್ಲಿ ನಮ್ಮನ್ನು ನಾವು ಅರಿತುಕೊಂಡೆವು

    ಬಿಗ್ ಬಾಸ್‌ನಲ್ಲಿ ನಮ್ಮನ್ನು ನಾವು ಅರಿತುಕೊಂಡೆವು

    ಬಿಗ್‌ ಬಾಸ್‌ನಲ್ಲಿ ಕಲಿತಿದ್ದಕ್ಕಿಂತ ಅಲ್ಲಿ ಹೊಸ ಅನುಭವ ಫೀಲ್ ಮಾಡಿದೆ. ನಮ್ಮಲ್ಲಿ ಏನಿತ್ತು ಎಂಬುದನ್ನು ಪ್ರೊಜೆಕ್ಟ್ ಮಾಡಲು, ನಮ್ಮ ಸಾಮರ್ಥ್ಯ ತಿಳಿಯಲು ವೇದಿಕೆ ಸಿಕ್ಕಿತು. ನಾವು ಕಲಿತಿದ್ದು ತೋರಿಸಲು ಸಾಧ್ಯವಾಯಿತು. ನಮ್ಮಲ್ಲಿನ ಪ್ಲಸ್-ಮೈನಸ್ ಅಲ್ಲಿ ಹೋದ ಬಳಿಕವೇ ಗೊತ್ತಾಗಿದ್ದು. ಅಲ್ಲಿ ನಮ್ಮ ಕುಟುಂಬ, ಸಂಪರ್ಕಗಳಿರುವುದಿಲ್ಲ. ನಮ್ಮ ತಾಳ್ಮೆ, ಪ್ರತಿಭೆ, ಅಡುಗೆ, ಟಾಸ್ಕ್‌ಗಳನ್ನು ಮಾಡುವುದು ಮುಂತಾದವುಗಳ ಮೂಲಕ ನಮ್ಮನ್ನು ನಾವು ವಿಶ್ಲೇಷಣೆ ಮಾಡಲು ಸಾಧ್ಯವಾಯಿತು.

    ದೊಡ್ಡ ಜವಾಬ್ದಾರಿಯತ್ತ ಚಿತ್ತ

    ದೊಡ್ಡ ಜವಾಬ್ದಾರಿಯತ್ತ ಚಿತ್ತ

    ಬಿಗ್ ಬಾಸ್ ಮುಗಿಸಿ ಬಂದ ಬಳಿಕ ಒಂದಷ್ಟು ಪ್ಲ್ಯಾನ್ಸ್ ಇದ್ದವು. ಎಲ್ಲ ಎಕ್ಸಿಕ್ಯೂಟ್ ಆಗಲು ಒಂದು ತಿಂಗಳು ಬೇಕಿತ್ತು. ಸಿದ್ಧತೆ ನಡೆಯುತ್ತಿತ್ತು. ಈಗ ಹೋಲ್ಡ್ ಆಗಿರುವುದರಿಂದ ಮುಂದೆ ಹೋಗುವ ಸಾಧ್ಯತೆ ಇದೆ. ಸಿನಿಮಾಗಳಿಂದಲೂ ಅವಕಾಶ ಬರುತ್ತಿವೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಯಾವುದನ್ನೂ ಮುಂದುವರಿಸಲು ಆಗುವುದಿಲ್ಲ. ಒಂದು ಜವಾಬ್ದಾರಿಯಿಂದ ಇನ್ನೊಂದು ಜವಾಬ್ದಾರಿಗೆ ಹೋಗುವಾಗ ಅದಿನ್ನೂ ದೊಡ್ಡದಾಗಿಯೇ ಇರಬೇಕಲ್ಲ.

    ಪಾತ್ರ, ಕಥೆ ಮುಖ್ಯ

    ಪಾತ್ರ, ಕಥೆ ಮುಖ್ಯ

    ಸಿನಿಮಾ ಆಯ್ಕೆ ವಿಚಾರದಲ್ಲಿ ಇಂತಹದ್ದೇ ಇರಬೇಕು ಎಂದಿಲ್ಲ. ಎಲ್ಲ ರೀತಿಯ ಸಿನಮಾಗಳೂ ಓಕೆ. ಆದರೆ ನನಗೆ ನನ್ನ ಪಾತ್ರ, ಕಥೆ ಮತ್ತು ಅದರ ಮೇಕಿಂಗ್ ಹೇಗಿರಲಿದೆ ಎನ್ನುವುದು ಮುಖ್ಯ. ಸಿನಿಮಾದ ಬಜೆಟ್ ಮುಖ್ಯ ಅಲ್ಲ. ಸಿನಿಮಾದ ಗುಣಮಟ್ಟ ಚೆನ್ನಾಗಿರಬೇಕು. ಇದರಲ್ಲಿ ನನ್ನ ಕೆರಿಯರ್ ಮತ್ತು ಅವರ ಕೆರಿಯರ್ ಕೂಡ ಇರುತ್ತದೆಯಲ್ಲ. ನನಗೆ ಮೊದಲು ಪಾತ್ರ ಇಷ್ಟ ಆಗಬೇಕು. ಹಾಗೆಯೇ ಕೆಲವು ಡೈರೆಕ್ಟರ್‌ಗಳ ಜತೆ ಕೆಲಸ ಮಾಡುವ ಆಸೆಗಳಿವೆ. ಆ ನಿರ್ದೇಶಕರೆಲ್ಲರಲ್ಲರೂ ನಾನು ಬಯಸುವ ಸಿನಿಮಾ ಗುಣಗಳನ್ನು ನೀಡುವವರು.

    English summary
    Deepika Das Interview. Kannada Bigg Boss 7 contestant Deepika Das helping poor people by distributing needy items during this lockdown period.
    Thursday, April 2, 2020, 20:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X