»   » ಪಡ್ಡೆಗಳಿಗೆ ಶಾಕ್:ಸಿಲ್ಕ್ ಚಿತ್ರ ಪ್ರಸಾರಕ್ಕೆ ಕೋರ್ಟ್ ತಡೆ

ಪಡ್ಡೆಗಳಿಗೆ ಶಾಕ್:ಸಿಲ್ಕ್ ಚಿತ್ರ ಪ್ರಸಾರಕ್ಕೆ ಕೋರ್ಟ್ ತಡೆ

Posted By:
Subscribe to Filmibeat Kannada

ಪಾಕಿಸ್ತಾನದ ಸೆಕ್ಸಿ ಬೆಡಗಿ ವೀಣಾ ಮಲಿಕ್ ಅಭಿನಯದ 'ಸಿಲ್ಕ್' ಚಿತ್ರ ಪ್ರಸಾರ ಮಾಡದಂತೆ ಕೋರ್ಟ್ ತಡೆಯಾಜ್ಞೆ ನೀಡಿದೆ. ರಾಜ್ಯದ ಯಾವುದೇ ಚಿತ್ರಮಂದಿರದಲ್ಲಿ ಸೆಪ್ಟಂಬರ್ ಹತ್ತನೇ ತಾರೀಕಿನವರೆಗೆ ಚಿತ್ರ ಪ್ರದರ್ಶಿಸುವಂತಿಲ್ಲ ಎಂದು ಸಿವಿಲ್ ಕೋರ್ಟ್ ಆದೇಶ ನೀಡಿದೆ.

ಕರ್ನಾಟಕ ನವನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ್ ಪಾಟೀಲ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಬುಧವಾರ (ಆ 7) ವಿಚಾರಣೆಗೆ ತೆಗೆದುಕೊಂಡ ನ್ಯಾಯಾಲಯ ಅರ್ಜಿದಾರರ ಮನವಿಯನ್ನು ಪುರಷ್ಕರಿಸಿ ಈ ಆದೇಶ ನೀಡಿದೆ.

ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಬಿಸಿಬಿಸಿ ದೃಶ್ಯಗಳು ಚಿತ್ರದಲ್ಲಿ ಇರುವುದರಿಂದ ಮತ್ತು ರಾಜ್ಯದೆಲ್ಲಡೆ ಕಾನೂನು ಬಾಹಿರವಾಗಿ ಚಿತ್ರದ ಪೋಸ್ಟರ್ ಗಳು ರಾರಾಜಿಸುತ್ತಿರುವುದರಿಂದ ಚಿತ್ರ ಪ್ರಸಾರಕ್ಕೆ ನಿಷೇಧ ಹೇರಬೇಕೆಂದು ಪಾಟೀಲ್ ಕೋರ್ಟಿಗೆ ಮನವಿ ಸಲ್ಲಿಸಿದ್ದರು.

Bangalore City Civil Court stay on Silk Movie

ಅಲ್ಲದೇ, ಚಿತ್ರದ ಹಾಡುಗಳಲ್ಲಿನ ದೃಶ್ಯಗಳು ಅಶ್ಲೀಲವಾಗಿದೆ ಮತ್ತು ಮಹಿಳಾ ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಎಂದು ಭೀಮಾಶಂಕರ್ ಪಾಟೀಲ್ ಮನವಿಗೆ ಕೋರ್ಟ್ ಸ್ಪಂಧಿಸಿ ಸೆಪ್ಟಂಬರ್ 10ರವರೆಗೆ ಚಿತ್ರ ಪ್ರಸಾರಕ್ಕೆ ತಡೆಯಾಜ್ಞೆ ನೀಡಿದೆ.

ಚಿತ್ರದ ಅಶ್ಲೀಲ ಪೋಸ್ಟರ್ ಗಳ ವಿರುದ್ಧ 9ನೇ ಎಸಿಎಂಎಂ ಕೋರ್ಟ್ ನಲ್ಲಿ ಖಾಸಗಿ ದೂರು ಆಗಸ್ಟ್ ಎರಡರಂದು ದಾಖಲಾಗಿತ್ತು. ಚಿತ್ರದ ನಿರ್ಮಾಪಕ ಆರ್ ವಿ ವೆಂಕಟಪ್ಪ, ನಿರ್ದೇಶಕ ತ್ರಿಶೂಲ್, ಚಿತ್ರದ ನಾಯಕ ನಟ ಅಕ್ಷಯ್ ಹಾಗೂ ಪಾಕಿಸ್ತಾನಿ ಬೆಡಗಿ ವೀಣಾ ಮಲಿಕ್ ವಿರುದ್ಧ ದೂರು ದಾಖಲಾಗಿತ್ತು. ದೂರನ್ನು ಅಂಗೀಕರಿಸಿರುವ ನ್ಯಾಯಾಲಯ ವಿಚಾರಣೆಯನ್ನು ಆ.8ಕ್ಕೆ ಮುಂದೂಡಿತ್ತು.

ಚಿತ್ರವನ್ನು ಕೂಲಂಕುಶವಾಗಿ ವೀಕ್ಷಿಸಿ, ಪರಿಶೀಲಿಸಿ ಸೆನ್ಸಾರ್ ಮಂಡಳಿ ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ನೀಡಿತ್ತು. ಆದಾಗ್ಯೂ, ಸಿವಿಲ್ ಕೋರ್ಟ್ ಆದೇಶದ ಕೆಲವು ಅಂಶಗಳು ಸೆನ್ಸಾರ್ ಮಂಡಳಿಯ ಗಮನಕ್ಕೆ ಯಾಕೆ ಬಂದಿಲ್ಲಾ ಅನ್ನುವುದೇ ಇಲ್ಲಿ ಉಳಿದುಕೊಂಡಿರುವ ಮಿಲಿಯನ್ ಡಾಲರ್ ಪ್ರಶ್ನೆ.

English summary
City civil court in Bangalore has given a stay on the screening of the film Silk across Karnataka till September 10. 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada