»   » ಸಿಲ್ಕ್ ಅಶ್ಲೀಲ ಪೋಸ್ಟರ್ ಗಳ ವಿರುದ್ಧ ದೂರು ದಾಖಲು

ಸಿಲ್ಕ್ ಅಶ್ಲೀಲ ಪೋಸ್ಟರ್ ಗಳ ವಿರುದ್ಧ ದೂರು ದಾಖಲು

Posted By:
Subscribe to Filmibeat Kannada

ಪಾಕಿಸ್ತಾನಿ ಬೆಡಗಿ ವೀಣಾ ಮಲಿಕ್ ಅಭಿನಯದ 'ಸಿಲ್ಕ್' ಸಖತ್ ಹಾಟ್ ಚಿತ್ರಕ್ಕೆ ಮತ್ತೊಂದು ವಿವಾದ ಎದುರಾಗಿದೆ. ಈ ಚಿತ್ರದ ಅಶ್ಲೀಲ ಪೋಸ್ಟರ್ ಗಳ ವಿರುದ್ಧ 9ನೇ ಎಸಿಎಂಎಂ ಕೋರ್ಟ್ ನಲ್ಲಿ ಖಾಸಗಿ ದೂರು ದಾಖಲಾಗಿದೆ. [ಸಿಲ್ಕ್ ಸಖತ್ ಹಾಟ್ ಚಿತ್ರ ವಿಮರ್ಶೆ]

ಚಿತ್ರದ ಪೋಸ್ಟರ್ ಗಳು ಅಶ್ಲೀಲವಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಲಾಗಿದೆ. ಚಿತ್ರದ ಹಾಡು ಹಾಗೂ ಕೆಲವು ದೃಶ್ಯಗಳಲ್ಲೂ ಅಶ್ಲೀಲತೆ ಇದ್ದು ಅವನ್ನು ತೆಗೆಯುವಂತೆ ಆದೇಶಿಸುವಂತೆ ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಅರ್ಜಿ ಸಲ್ಲಿಸಿದ್ದಾರೆ.


ಸಿಲ್ಕ್ ಚಿತ್ರ ಸೆನ್ಸಾರ್ ಮಂಡಳಿ ನಿಯಮಗಳನ್ನೂ ಗಾಳಿಗೆ ತೂರಿರುವ ಚಿತ್ರ ತಂಡದ ವಿರುದ್ಧ ಕ್ರಮ ಕೈಗೊಳ್ಳುವಂತೆ ನವನಿರ್ಮಾಣ ಸೇನೆ ಆಗ್ರಹಿಸಿದೆ. ಬೆಂಗಳೂರಿನ ಗೋಡೆ ಗೋಡೆಗಳಿಗೆ ಅಂಟಿಸಿರುವ ಸಿಲ್ಕ್ ಚಿತ್ರದ ಪೋಸ್ಟರ್ ಗಳು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವಂತಿವೆ. ಚಿತ್ರದ ಪೋಸ್ಟರ್ ಗಳನ್ನು ತೆರೆವುಗೊಳಿಸುವಂತೆ ದೂರು ದಾಖಲಿಸಿದ್ದಾರೆ.

ಚಿತ್ರದ ನಿರ್ಮಾಪಕ ಆರ್ ವಿ ವೆಂಕಟಪ್ಪ, ನಿರ್ದೇಶಕ ತ್ರಿಶೂಲ್, ಚಿತ್ರದ ನಾಯಕ ನಟ ಅಕ್ಷಯ್ ಹಾಗೂ ಪಾಕಿಸ್ತಾನಿ ಬೆಡಗಿ ವೀಣಾ ಮಲಿಕ್ ವಿರುದ್ಧ ದೂರು ದಾಖಲಾಗಿದೆ. ದೂರನ್ನು ಅಂಗೀಕರಿಸಿರುವ ನ್ಯಾಯಾಲಯ ವಿಚಾರಣೆಯನ್ನು ಆ.8ಕ್ಕೆ ಮುಂದೂಡಿದೆ. ಸಿಲ್ಕ್ ಚಿತ್ರಕ್ಕೆ ತಡೆಯಾಜ್ಞೆ ಕೋರಿ ಶನಿವಾರ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗುವುದು ಎಂದು ಭೀಮಾಶಂಕರ ಪಾಟೀಲ ತಿಳಿಸಿದ್ದಾರೆ. (ಏಜೆನ್ಸೀಸ್)

English summary
The poster of Veena Malik's new film ‘Silk Sakat Hot’ might have delighted the actor’s fans, but not all seems to be well! Navanirmana Sene has lodged a complaint against Veena Malik, for posing in an obscene manner for the posters. The court accepted the complaint and hearing on 8th August.
Please Wait while comments are loading...