ಬಿಗ್‌ಬಾಸ್ ಕನ್ನಡ ಮಾಜಿ ಸ್ಪರ್ಧಿಗಳಿಗೆ ಮತ್ತೆ ಸಂಕಷ್ಟ; ರಜತ್‌ಗೆ ನ್ಯಾಯಾಂಗ ಬಂಧನ-ವಿನಯ್ ಗೌಡ ₹500 ದಂಡ
ಬಿಗ್ ಬಾಸ್ ಕನ್ನಡ ಖ್ಯಾತಿಯ ರಜತ್ ಹಾಗೂ ವಿನಯ್ ಗೌಡ ಲಾಂಗ್ ಹಿಡಿದು ರೀಲ್ಸ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದರು. ಈ ಸಂಬಂಧ ಬೆಂಗಳೂರಿನ ಬಸವೇಶ್ವರ ನಗರ ಠಾಣೆ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆಯಡಿ ಇವರಿಬ್ಬರನ್ನು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ಬಿಗ್ ಬಾಸ್ ಮಾಜಿ ಸ್ಪರ್ಧಿಗಳಿಗೆ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಆದೇಶಿಸಿತ್ತು. ಈಗ ಮತ್ತೆ ಇವರಿಬ್ಬರಿಗೂ ಜಾಮೀನು ರಹಿತ ವಾರೆಂಟ್ ಅನ್ನು ಜಾರಿ ಮಾಡಿದೆ.
ಜಾಮೀನು ರಹಿತ ವಾರೆಂಟ್ ಬಳಿಕ ರಜತ್ ಬಂಧಿಸಿದ 24ನೇ ಎಸಿಎಂಎಂ ಕೋರ್ಟ್‌ನ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ಈ ವೇಳೆ ರಜತ್‌ಗೆ ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ನೀಡಿ ಆದೇಶ ನೀಡಲಾಗಿದೆ.

ಹೀಗಾಗಿ ರಜತ್ ಮತ್ತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಬೇಕಾಗಿದೆ. ರಜತ್ ಪರ ವಕೀಲರು ನಾಳೆ (ಏಪ್ರಿಲ್ 17) ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸುವ ಸಾಧ್ಯತೆಯಿದೆ. ಇನ್ನು ವಿನಯ್ ಗೌಡ ನೇರವಾಗಿ ವಕೀಲರ ಜೊತೆಯಲ್ಲಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇವರಿಗೆ ನ್ಯಾಯಾಧೀಶರು 500 ರೂಪಾಯಿ ದಂಡ ವಿಧಿಸಿದ್ದಾರೆ.
ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಿಂದ ಹೊರ ಬಂದ್ಮೇಲೆ ರಜತ್ ಹಾಗೂ ವಿನಯ್ ಗೌಡ ಸಿನಿಮಾ ಹಾಗೂ ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿದ್ದರು. ಇದೇ ಜೋಷ್‌ನಲ್ಲಿ ಸೆಟ್‌ನ ಪ್ರಾಪರ್ಟಿ ಲಾಂಗ್ ಹಿಡಿದು ಇಬ್ಬರೂ ಗತ್ತಿನಿಂದ ರೀಲ್ಸ್ ಮಾಡಿದ್ದರು. ಅದನ್ನು ರಜತ್ ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಶೇರ್ ಮಾಡಿದ್ದರು. ಅದೇ ಈಗ ಇಷ್ಟೆಲ್ಲ ಅವಾಂತರಕ್ಕೆ ಎಡೆ ಮಾಡಿಕೊಟ್ಟಿದೆ.
ಶಸ್ತ್ರಾಸ್ತ್ರ ಕಾಯ್ದೆ ಅಡಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ರಜತ್ ಕಿಶನ್ ಹಾಗೂ ವಿನಯ್ ಗೌಡ ಶರತ್ತು ಬದ್ಧ ಜಾಮೀನು ಪಡೆದು ಹೊರ ಬಂದಿದ್ದರು. ಜೈಲಿನಿಂದ ಹೊರ ಬಂದ ಬಳಿಕ ಇಬ್ಬರೂ ಶರತ್ತುಗಳನ್ನು ಉಲ್ಲಂಘನೆ ಮಾಡಿರುವ ಆರೋಪವನ್ನು ಎದುರಿಸುತ್ತಿದ್ದು, ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಅನ್ನು ಜಾರಿ ಮಾಡಿದೆ. ಈ ಸಂಬಂಧ ಈಗಾಗಲೇ ರಜತ್ ಕಿಶನ್ ಬಂಧನ ಆಗಿದೆ. ಇನ್ನು ವಿನಯ್ ಗೌಡ ಪೊಲೀಸರ ಕೈಗೆ ಸಿಗದೇ ಇದ್ದಿದ್ದರಿಂದ ಹುಡುಕಾಟ ಮುಂದುವರೆದಿದೆ.
ಬಿಗ್ ಬಾಸ್ ಕನ್ನಡ ಮಾಜಿ ಸ್ಪರ್ಧಿ ರಜತ್ ಹಾಗೂ ವಿನಯ್ ಗೌಡಗೆ ನೀಡಿದ್ದ ಶರತ್ತು ಬದ್ಧ ಜಾಮೀನಿನಲ್ಲಿ ಪ್ರತಿದಿನ ನ್ಯಾಯಾಲಯದ ಮುಂದೆ ಹಾಜರಾಗಬೇಕು. ಖುದ್ದಾಗಿ ಬಂದು ಹಾಜರಾತಿಯನ್ನು ಸ್ಪಷ್ಟಪಡಿಸಬೇಕು ಎಂದು ಹೇಳಿತ್ತು. ಆದರೆ, ರಜತ್ ಕಿಶನ್ ಹಾಗೂ ವಿನಯ್ ಗೌಡ ಇಬ್ಬರೂ ಜಾಮೀನು ಪಡೆದ ಬಳಿಕ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ ಎನ್ನಲಾಗಿದೆ. ಇವರಿಬ್ಬರ ಈ ನಡೆಗೆ ನ್ಯಾಯಾಲಯ ಅಸಮಧಾನ ವ್ಯಕ್ತಪಡಿಸಿ, ಜಾಮೀನು ರಹಿತ ವಾರೆಂಟ್ ಅನ್ನು ಜಾರಿ ಮಾಡಿದೆ.
ನ್ಯಾಯಾಲಯ ಜಾಮೀನು ರಹಿತ ವಾರೆಂಟ್‌ನ ಪ್ರತಿಯನ್ನು ಬೆಂಗಳೂರಿನ ಬಸವೇಶ್ವರ ಪೊಲೀಸ್ ಠಾಣೆಗೆ ಕಳುಹಿಸಿಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಬಸವೇಶ್ವರನಗರ ಪೊಲೀಸರು ರಜತ್ ಮನೆಗೆ ಪೊಲೀಸ್ ಸಿಬ್ಬಂದಿಯನ್ನು ಠಾಣೆಗೆ ಕರೆದುಕೊಂಡು ಬರಲಾಗಿತ್ತು. ರಜತ್ ಪೊಲೀಸ್ ಠಾಣೆಗೆ ಬರುತ್ತಿದ್ದಂತೆ ಅವರನ್ನು ಬಂಧಿಸಲಾಗಿದೆ. ಸದ್ಯ ಅವರನ್ನು ವೈದ್ಯಕೀಯ ಪರೀಕ್ಷೆ ಮಾಡಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆಂದು ವರದಿಯಾಗಿದೆ.
ರೀಲ್ಸ್ ಮಾಡಿ ಅರೆಸ್ಟ್ ಆಗಿದ್ದ ವಿನಯ್ ಗೌಡ ರಿಲೀಸ್; "ಇನ್ಮುಂದೆ ಹೊಸ ಆರಂಭ" ಬಿಗ್ ಬಾಸ್ ಮಾಜಿ ಸ್ಪರ್ಧಿ
ಇನ್ನು ರಜತ್ ಬಂಧನದ ಬೆನ್ನಲ್ಲೇ ಮತ್ತೊಬ್ಬ ಬಿಗ್ ಬಾಸ್ ಕನ್ನಡ ಸ್ಪರ್ಧಿ ವಿನಯ್ ಗೌಡ ಕೂಡ ಟೆನ್ಷನ್ ಹೆಚ್ಚಾಗಿದೆ. ಯಾವುದೇ ಸಮಯದಲ್ಲಿ ವಿನಯ್ ಗೌಡ ಅವರನ್ನೂ ಪೊಲೀಸರು ಬಂಧಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ವಿನಯ್ ಗೌಡ ಶೂಟಿಂಗ್ ನಿಮಿತ್ತ ಹೊರಗಡೆ ಇರುವುದರಿಂದ ಪೊಲೀಸರ ಕೈಗೆ ಸಿಕ್ಕಿಲ್ಲ. ಈ ಕಾರಣಕ್ಕೆ ಅವರನ್ನು ಅವರನ್ನು ಪೊಲೀಸರು ಹುಡುಕುತ್ತಿದ್ದಾರೆ ಎನ್ನಲಾಗಿದೆ. ಇನ್ನೊಂದು ಕಡೆ ವಿನಯ್ ಖುದ್ದಾಗಿ ಪೊಲೀಸರ ಮುಂದೆ ಯಾವುದೇ ಕ್ಷಣದಲ್ಲಿ ಹಾಜರಾಗಬಹುದು ಎಂದೂ ಹೇಳಲಾಗುತ್ತಿದೆ.
ರಜತ್ ಹಾಗೂ ವಿನಯ್ ಗೌಡ ಸುಮಾರು 10 ವರ್ಷಗಳಿಂದ ಸ್ನೇಹಿತರು. ಆದರೆ, ಈ ರೀಲ್ಸ್ ಪ್ರಕರಣದ ಬಳಿಕ ಇಬ್ಬರ ಸ್ನೇಹದಲ್ಲಿ ಬಿರುಕು ಬಿಟ್ಟಿದೆ ಎಂದು ಹೇಳಾಗಿತ್ತು. ಈ ಸಂಬಂಧ ರಜತ್ ಕಿಶನ್ ಹಾಗೂ ವಿನಯ್ ಗೌಡ ಇಬ್ಬರೂ ಮಾತಾಡುವುದನ್ನೇ ನಿಲ್ಲಿಸಿದ್ದಾರೆಂಬ ಸುದ್ದಿಯನ್ನೂ ಓಡಾಡಿತ್ತು. ಈ ವಿಷಯಕ್ಕೆ ಸಂಬಂಧ ಪಟ್ಟಂತೆ ರಜತ್ ಕಿಶನ್ ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯೆಯನ್ನು ನೀಡಿದ್ದರು. ವಿನಯ್ ಗೌಡ ಹಾಗೂ ತನ್ನ ನಡುವೆ ಅಂತಹ ಸಮಸ್ಯೆ ಇಲ್ಲ ಎಂದಿದ್ದರು. ಆ ಬೆನ್ನಲ್ಲೇ ಮತ್ತೆ ರಜತ್ ಹಾಗೂ ವಿನಯ್ ಗೌಡಗೆ ಜಾಮೀನು ರಹಿತ ವಾರೆಂಟ್ ಜಾರಿಯಾಗಿದ್ದು, ಸಂಕಷ್ಟಕ್ಕೆ ಸಿಲುಕಿದೆ.


Click it and Unblock the Notifications











