»   » 'ಕಿರಿಕ್ ಕೀರ್ತಿ'ಯ ಲವ್ ಸ್ಟೋರಿಗೆ ಬಬ್ಲಿ ಬೆಡಗಿ ನಾಯಕಿ

'ಕಿರಿಕ್ ಕೀರ್ತಿ'ಯ ಲವ್ ಸ್ಟೋರಿಗೆ ಬಬ್ಲಿ ಬೆಡಗಿ ನಾಯಕಿ

Posted By:
Subscribe to Filmibeat Kannada
'ಬಿಗ್ ಬಾಸ್ ಕನ್ನಡ 4' ಸ್ಪರ್ಧಿ ಕಿರಿಕ್ ಕೀರ್ತಿ ತಮ್ಮ ಹೆಸರಲ್ಲೇ ಸಿನಿಮಾ ಮಾಡುತ್ತಿರುವುದಾಗಿ ಫಿಲ್ಮಿ ಬೀಟ್ ನಲ್ಲಿ ನಿಮಗೆ ಹೇಳಿದ್ವಿ. ನಾಯಕಿಗಾಗಿ ಹುಡುಕಾಟ ನಡೆಸಿದ್ದ ಚಿತ್ರತಂಡ ಈಗ 'ಬಿಗ್ ಬಾಸ್ ಕನ್ನಡ 4' ಸ್ಪರ್ಧಿಯೊಬ್ಬರನ್ನೇ ಆಯ್ಕೆ ಮಾಡಿದೆ.[ಬೆಳ್ಳಿ ತೆರೆಯಲ್ಲೂ ಶುರುವಾಗಲಿದೆ ಕೀರ್ತಿಯ ಕಿರಿಕ್]

'ಬಿಗ್ ಬಾಸ್ ಕನ್ನಡ 4' ಹಲವು ಸ್ಪರ್ಧಿಗಳ ಲೈಫ್ ಅನ್ನೇ ಬದಲಾಯಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಗುರುತಿಸಿಕೊಂಡಿದ್ದ ಕಿರಿಕ್ ಕೀರ್ತಿ ಗಾಂದೀನಗರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಒಳ್ಳೆ ಹುಡುಗ ಪ್ರಥಮ್ ಹೆಚ್ಚು ಸುದ್ದಿಯಲ್ಲಿರುವ ಸೆಲೆಬ್ರಿಟಿ ಆಗಿದ್ದಾರೆ. ಈಗ ಬಿಗ್ ಬಾಸ್ ಮನೆಯ ಬಬ್ಲಿ ಸ್ಪರ್ಧಿಯೊಬ್ಬರು ಕಿರಿಕ್ ಕೀರ್ತಿಗೆ ಚಿತ್ರದಲ್ಲಿ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ಅವರು ಯಾರು? ಇಲ್ಲಿದೆ ಡೀಟೈಲ್ಸ್..

'ಕಿರಿಕ್ ಕೀರ್ತಿ'ಗೆ ಬಿಗ್ ಬಾಸ್ ಸ್ಪರ್ಧಿ ನಾಯಕಿ

ಕೀರ್ತಿ ನಾಯಕನಾಗಿ ಅಭಿನಯಿಸುವ 'ಕಿರಿಕ್ ಕೀರ್ತಿ' ಸಿನಿಮಾಗೆ ಎನ್.ಓಂ ಪ್ರಕಾಶ್ ರಾವ್ ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷ ಏನಪ್ಪಾ ಅಂದ್ರೆ ಈ ಇಬ್ಬರು ಸಹ 'ಬಿಗ್ ಬಾಸ್ ಕನ್ನಡ 4' ರ ಸ್ಪರ್ಧಿಗಳಾಗಿದ್ದರು. ಈಗ ಇದೇ ಚಿತ್ರಕ್ಕೆ ನಾಯಕಿ ಆಗಿ 'ಬಿಗ್ ಬಾಸ್ ಕನ್ನಡ 4' ಕನ್ ಟೆಸ್ಟಂಟ್ ಒಬ್ಬರು ಆಯ್ಕೆ ಆಗಿದ್ದಾರೆ.['ಲಾರ್ಡ್' ಪ್ರಥಮ್ ಕಂಡ್ರೆ 'ಕಿರಿಕ್' ಕೀರ್ತಿಗೆ ಏನ್ ಇಷ್ಟ.? ಏನ್ ಕಷ್ಟ.?]

ಕಿರಿಕ್ ಕೀರ್ತಿಗೆ ನಾಯಕಿ ಇವರೇ..

'ಬಿಗ್ ಬಾಸ್ ಕನ್ನಡ 4' ನ ಸಂಜನಾ ಅವರೇ ಕಿರಿಕ್ ಕೀರ್ತಿಗೆ ನಾಯಕಿ ಆಗಿ ಆಯ್ಕೆ ಆಗಿರುವ ಆ ಬಬ್ಲಿ ಹುಡುಗಿ.

ಕಿರುತೆರೆಯಿಂದ ಬೆಳ್ಳಿತೆರೆಗೆ ಸಂಜನಾ

ಕಿರುತೆರೆಯಲ್ಲಿದ್ದ ಸಂಜನಾ, ಬಿಗ್ ಬಾಸ್ ಮನೆಯಿಂದ ಮತ್ತಷ್ಟು ಖ್ಯಾತಿಗಳಿಸಿ ಈಗ ಫುಲ್ ಟೈಮ್ ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಳ್ಳುವ ಎಲ್ಲಾ ಸೂಚನೆಗಳನ್ನು ನೀಡಿದ್ದಾರೆ. ಇದಕ್ಕೆ ಉದಾಹರಣೆಯಾಗಿ ಇತ್ತೀಚೆಗಷ್ಟೆ ಶ್ರೀನಿವಾಸ್ ಕೌಶಿಕ್ ನಿರ್ದೇಶನದ 'ಮೊಂಬತ್ತಿ' ಚಿತ್ರದ ಐಟಂ ಸಾಂಗ್ ವೊಂದಕ್ಕೆ ಸೊಂಟ ಬಳುಕಿಸಿದ್ದರು.

'ಕಿರಿಕ್ ಕೀರ್ತಿ' ಯಲ್ಲಿ ಸಂಜನಾ

ಅಂದಹಾಗೆ ಸಂಜನಾ 'ಕಿರಿಕ್ ಕೀರ್ತಿ' ಸಿನಿಮಾದಲ್ಲಿ ಅವರು ರಿಯಲ್ ಲೈಫ್ ನಲ್ಲಿ ಇರುವಂತೆ, ರೀಲ್ ನಲ್ಲಿಯೂ ಬಬ್ಲಿ ಬಬ್ಲಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ವಿಶೇಷ ಅಂದ್ರೆ ಇವರನ್ನು ನಾಯಕಿ ಆಗಿ ಸೆಲೆಕ್ಟ್ ಮಾಡಿದ್ದು ಓಂ ಪ್ರಕಾಶ್ ರಾವ್ ಅಂತೆ.

ಎರಡನೇ ನಾಯಕಿಗಾಗಿ ಹುಡುಕಾಟ

ಚಿತ್ರದಲ್ಲಿ ಇಬ್ಬರು ನಾಯಕಿಯರ ಪಾತ್ರವಿದ್ದು, ಇನ್ನೊಬ್ಬ ನಾಯಕಿಗಾಗಿ ಚಿತ್ರತಂಡ ಹುಟುಕಾಟ ನಡೆಸಿದೆಯಂತೆ. ಮೂಲಗಳ ಪ್ರಕಾರ ಮೈಸೂರಿನ ಹುಡುಗಿಯೊಬ್ಬಳು ಸೆಲೆಕ್ಟ್ ಆಗುವ ಸಾಧ್ಯತೆ ಇದೆಯಂತೆ.

ಟ್ರಯಾಂಗಲ್ ಲವ್ ಸ್ಟೋರಿ

'ಕಿರಿಕ್ ಕೀರ್ತಿ' ಚಿತ್ರಕಥೆ ಟ್ರಯಾಂಗಲ್ ಲವ್ ಸ್ಟೋರಿ ಹೊಂದಿದ್ದು, ಚಿತ್ರದ ಕ್ಲೈಮ್ಯಾಕ್ಸ್ ಸುದೀಪ್ ಅವರ ಹುಚ್ಚ ಸಿನಿಮಾದ ಕ್ಲೈಮ್ಯಾಕ್ಸ್ ರೀತಿಯಲ್ಲಿಯೇ ಇರಲಿದೆಯಂತೆ.

English summary
Big Boss season 4 contestant Sanjana was selected as heroine to 'Kirik Keerthi' movie. Which has directed by om Prakash Rao

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada