»   » 'ಲಾರ್ಡ್' ಪ್ರಥಮ್ ಕಂಡ್ರೆ 'ಕಿರಿಕ್' ಕೀರ್ತಿಗೆ ಏನ್ ಇಷ್ಟ.? ಏನ್ ಕಷ್ಟ.?

'ಲಾರ್ಡ್' ಪ್ರಥಮ್ ಕಂಡ್ರೆ 'ಕಿರಿಕ್' ಕೀರ್ತಿಗೆ ಏನ್ ಇಷ್ಟ.? ಏನ್ ಕಷ್ಟ.?

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಕೀರ್ತಿ ಮತ್ತು ಪ್ರಥಮ್ ಒಂಥರಾ ಎಣ್ಣೆ-ಸೀಗೇಕಾಯಿ ಇದ್ಹಂಗೆ. ಒಬ್ಬರನ್ನ ಕಂಡ್ರೆ ಇನ್ನೊಬ್ಬರಿಗೆ ಆಗಲ್ಲ. ಇಬ್ಬರ ನಡುವೆ ಸದಾ ಕಿರಿಕಿರಿ... ಪಿರಿಪಿರಿ...

ಹಾಗಂತ, ಒಬ್ಬರ ವ್ಯಕ್ತಿತ್ವದಲ್ಲಿ ಇರುವ ಪಾಸಿಟೀವ್ ಅಂಶಗಳನ್ನ ಇನ್ನೊಬ್ಬರು ಗುರುತಿಸಿಲ್ಲ ಅಂತಿಲ್ಲ. 'ಲಾರ್ಡ್' ಪ್ರಥಮ್ ರವರ ಕೆಲವು ಗುಣಗಳು ಕೀರ್ತಿಗೆ ಖುಷಿ ಕೊಟ್ಟಿವೆ. ಹಾಗೇ, 'ಕಿರಿಕ್' ಕೀರ್ತಿ ರವರ ಕನ್ನಡ ಪ್ರೇಮ ಪ್ರಥಮ್ ಮನಮುಟ್ಟಿದೆ. ಮುಂದೆ ಓದಿರಿ....

ಆರೋಗ್ಯಕರ ಮಾತುಕತೆಗೆ ನಾಂದಿ ಹಾಡಿದ ಸುದೀಪ್

ಪ್ರಥಮ್ ಮತ್ತು ಕೀರ್ತಿ... ಪರಸ್ಪರ ಇಷ್ಟ ಪಡುವ ಗುಣಗಳ ಕುರಿತು ಮಾತನಾಡುವ ಅವಕಾಶವನ್ನು ಇಬ್ಬರಿಗೂ ಸುದೀಪ್ ನೀಡಿದರು.

ಪ್ರಥಮ್ ರವರಲ್ಲಿ ಕೀರ್ತಿಗೆ ಏನು ಇಷ್ಟ.?

''* ಅದ್ಭುತ ವಾಗ್ಮಿ.. ತುಂಬಾ ಚೆನ್ನಾಗಿ ಮಾತನಾಡುತ್ತಾರೆ ಪ್ರಥಮ್.

* ಅಗಾಧ ನೆನಪಿನ ಶಕ್ತಿ ಇದೆ, ಇಲ್ಲಿ ವಾಚ್ ಇಲ್ಲ ಆದರೂ ಕರೆಕ್ಟ್ ಆಗಿ ಟೈಮ್ ಹೇಳುತ್ತಾರೆ ಪ್ರಥಮ್.

* ತಪ್ಪು ಆದರೆ ಹೋಗಿ ಕ್ಷಮೆ ಕೇಳುವುದು ನನಗೆ ಇಷ್ಟ ಆಯ್ತು

* ಒಬ್ಬ ವ್ಯಕ್ತಿ ಇಷ್ಟವಾದರೆ, ಅದಕ್ಕೆ ಬದ್ಧ ಆಗಿರುವುದು'' ಅಂತ ಕೀರ್ತಿ ಹೇಳಿದರು

['ಬಿಗ್ ಬಾಸ್' ಫಿನಾಲೆಯಲ್ಲಿ ಕನ್ನಡಿಗರ ಮನಗೆದ್ದ ತಂದೆ-ಮಗ!]

ಮನರಂಜನೆಯಲ್ಲಿ ಪ್ರಥಮ್ ರನ್ನ ಮೀರಿಸುವವರಿಲ್ಲ.!

''ಪ್ರಥಮ್ ಅದ್ಭುತ ಎಂಟರ್ ಟೇನರ್. ಎಂಟರ್ ಟೇನ್ಮೆಂಟ್ ವಿಚಾರದಲ್ಲಿ ಅವರು ಏನು ಮಾಡುವುದಕ್ಕೂ ಹೇಸಲ್ಲ. ಈ ಬಾರಿಯ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ನಾವೆಲ್ಲ ವಿಗ್ರಹದ ಬೇರೆ ಬೇರೆ ಅಂಗಗಳು ಆದರೆ, ಪ್ರಾಣ ಪ್ರತಿಷ್ಠಾಪನೆ ಮಾಡಿದವರು ಪ್ರಥಮ್'' - ಕಿರಿಕ್ ಕೀರ್ತಿ ['ಫೇಸ್ ಬುಕ್'ನಲ್ಲಿ ಕೀರ್ತಿ, ರೇಖಾಗೆ ಗೆಲುವಿನಾರ್ಪಣೆ ಮಾಡಿದ 'ಬಿಗ್ ಬಾಸ್' ಪ್ರಥಮ್!]

ಪ್ರಥಮ್ ಇರಲಿಲ್ಲ ಅಂದಿದ್ರೆ....

''ಪ್ರಥಮ್ ಇರಲಿಲ್ಲ ಅಂದ್ರೆ 14 ವಾರಗಳನ್ನು ಕಳೆಯುವುದು ತುಂಬಾ ಕಷ್ಟ ಆಗ್ತಿತ್ತೇನೋ... ಅವರ ಕಾಮಿಡಿ ಟೈಮಿಂಗ್ ಅದ್ಭುತ'' ಅಂತ ಪ್ರಥಮ್ ರವರನ್ನ ಕೀರ್ತಿ ಕೊಂಡಾಡಿದರು.

ಪ್ರಥಮ್ ಕಂಡ್ರೆ ಕೀರ್ತಿಗೆ ಏನು ಕಷ್ಟ.?

''ಪ್ರಥಮ್ ರವರ ಏರುಧ್ವನಿ ಅಸ್ತ್ರ ಆಗಬಾರದು ಅಂತ ಕೇಳಿಕೊಳ್ಳುತ್ತೇನೆ'' ಎಂದರು ಕೀರ್ತಿ

ಕೀರ್ತಿ ಕಂಡ್ರೆ ಪ್ರಥಮ್ ಗೆ ಏನು ಇಷ್ಟ.?

''* ಹೆಸರು ಇರುವ ಹಾಗೆ ಕಿರಿಕ್ ಅಲ್ಲ.

* ಸ್ವಲ್ಪ ಧಾರಾಳತನ ಇದೆ

* ಸಂಬಂಧದ ಮಹತ್ವ ನಾನು ಅವರಿಂದ ಕಲಿತಿದ್ದೇನೆ.

* ಕನ್ನಡ ಪರ ವಿಶೇಷ ಅಭಿರುಚಿ ಇರುವ ಮನುಷ್ಯ

* ಹದಿನಾಲ್ಕು ವಾರದಲ್ಲಿ ನನ್ನ ಬಗ್ಗೆ ಅಸಮಾಧಾನ ಇದ್ದರೂ, ನನಗೆ ಅಪ್ರೀಶಿಯೇಟ್ ಮಾಡ್ತಿದ್ರು. ಕೀರ್ತಿ ಮೇಧಾವಿ... ಒಳ್ಳೆಯದಾಗಲಿ...'' ಎಂದರು ಪ್ರಥಮ್.

English summary
Bigg Boss Kannada 4: Which quality of Pratham does Keerthi like.? Read the article to know the answer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada