Darshan: ವಿರಾಜ್‌ಪೇಟೆ.. ಸಕಲೇಶ್‌ಪುರ ಆಯ್ತು.. ಈ ಬಾರಿ ಮಡಿಕೇರಿ.. ದರ್ಶನ್ ಆಪ್‌ ರೋಡ್‌ ಟ್ರಿಪ್ ಹೇಗಿತ್ತು?

ಇತ್ತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಧ್ರುವ ಸರ್ಜಾ ನಡುವಿನ ಮುನಿಸಿನ ಮ್ಯಾಟರ್ ವೈರಲ್ ಆಗುತ್ತಿದೆ. ಧ್ರುವ ಸರ್ಜಾ ಕೊಟ್ಟ ಹೇಳಿಕೆಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ದರ್ಶನ್ ಅಭಿಮಾನಿಗಳು ಕಮೆಂಟ್‌ಗಳ ಸುರಿ ಮಳೆಯನ್ನೇ ಸುರಿಸುತ್ತಿದ್ದಾರೆ. ಇನ್ನೊಂದು ಧ್ರುವ ಫ್ಯಾನ್ಸ್ ತಮ್ಮ ನಟನ ಬೆಂಬಲಕ್ಕೆ ನಿಂತಿದ್ದಾರೆ.

ಒಂದ್ಕಡೆ ಈ ಮ್ಯಾಟರ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ದರ್ಶನ್ ಅದ್ಯಾವುದಕ್ಕೂ ತಲೆ ಕೆಡಿಸಿಕೊಂಡಂತೆ ಇಲ್ಲ. ತಮ್ಮ ಅಭಿಮಾನಿಗಳಿಗಾಗಿ ಮಡಿಕೇರಿಗೆ ಆಫ್‌ ರೋಡ್ ಟ್ರಿಪ್ ಹೋಗಿದ್ದ ವಿಡಿಯೋವನ್ನು ಹೊರಬಿಟ್ಟಿದ್ದಾರೆ. ಸ್ನೇಹಿತರೊಂದಿಗೆ ಮಸ್ತ್ ಎಂಜಾಯ್ ಮಾಡಿದ್ದ ವಿಡಿಯೋ ಈಗ ಯೂಟ್ಯೂಬ್‌ನಲ್ಲಿ ಸದ್ದು ಮಾಡುತ್ತಿದೆ.

ಈ ಬಾರಿ ಕೂಡ ದರ್ಶನ್ ಜೊತೆ ಪುತ್ರ ವಿನೀಶ್ ಕಾಣಿಸಿಕೊಂಡಿದ್ದಾರೆ. ತಂದೆ ಮಗನ ಜೋಡಿಯನ್ನು ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದು, ಮತ್ತೊಂದು ಆಫ್ ರೋಡ್ ಟ್ರಿಪ್ ಕಂಡು ಫ್ಯಾನ್ಸ್ ಖುಷಿಯಾಗಿದ್ದಾರೆ. ಈ ಬಾರಿ ಮಡಿಕೇರಿಯ ಆಫ್ ರೋಡ್ ಟ್ರಿಪ್ ಹೇಗಿತ್ತು? ಅನ್ನೋದನ್ನು ತಿಳಿಯಲು ಮುಂದೆ ಓದಿ..

challenging-star-darshan-madikeri-off-road-trip

ಮಡಿಕೇರಿಗೆ ದರ್ಶನ್ ಆಫ್ ರೋಡ್ ಟ್ರಿಪ್

ದರ್ಶನ್‌ಗೆ ಸಿನಿಮಾದಿಂದ ಬಿಡುವು ಸಿಕ್ಕಿದಾಗಲೆಲ್ಲಾ ಟ್ರಿಪ್‌ಗೆ ಹೊರಟು ಬಿಡುತ್ತಾರೆ. ಇದೇ ಹೊಸ ವಿಷಯವಲ್ಲ. ಆದರೆ, ಯಾವಾಗ? ಎಲ್ಲಿಗೆ ಹೋಗುತ್ತಾರೆ? ಅನ್ನೋದು ಮಾತ್ರ ಸಸ್ಪೆನ್ಸ್. ಕೆಲವು ವರ್ಷಗಳ ಹಿಂದೆ ಕಾಡು ಮೇಡು ಸುತ್ತಿ ಫೋಟೊಗ್ರಫಿ ಮಾಡುತ್ತಿದ್ದರು. ಆ ಫೋಟೊಗಳನ್ನು ದುಬಾರಿ ಮೊತ್ತ ಕೊಟ್ಟು ಅಭಿಮಾನಿಗಳೇ ಖರೀದಿ ಮಾಡಿದ್ದು ಇದೆ.

ಕೆಲವು ತಿಂಗಳುಗಳಿಂದ ದರ್ಶನ್ ಆಪ್ ರೋಡ್ ಟ್ರಿಪ್ ಮಾಡುತ್ತಿದ್ದಾರೆ. ಮಳೆ ಬರ್ತಿದೆ ಅಂತ ಗೊತ್ತಾದರೇ ಸಾಕು. ತಮ್ಮ ಗ್ಯಾಂಗ್ ಕಟ್ಟಿಕೊಂಡು ಆಫ್ ರೋಡ್‌ಗೆ ಅಂತಲೇ ಸಿದ್ದಗೊಂಡಿರೊ ಕಾರುಗಳನ್ನು ತೆಗೆದುಕೊಂಡು ಹೊರಟು ಬಿಡುತ್ತಾರೆ. ಈ ಬಾರಿ ಮಡಿಕೇರಿಗೆ ಆಫ್ ರೋಡ್ ಟ್ರಿಪ್ ಮಾಡಿದ್ದಾರೆ. ಅದೇ ವಿಡಿಯೋಗಳು ಈಗ ರಿಲೀಸ್ ಆಗಿದೆ.

ಮಗನೊಂದಿಗೆ ದರ್ಶನ್ ಜಾಲಿ ರೈಡ್

ಮೂರು ನಾಲ್ಕು ಕಡೆ ದರ್ಶನ್ ಆಫ್ ರೋಡ್ ಟ್ರಿಪ್ ಮಾಡಿದ್ದಾರೆ. ದರ್ಶನ್ ಹೋದ ಕಡೆಯಲ್ಲೆಲ್ಲಾ ಮಗ ವಿನೀಶ್ ಅನ್ನೂ ಕರೆದುಕೊಂಡು ಹೋಗಿದ್ದಾರೆ. ಈ ಬಾರಿ ಮಡಿಕೇರಿಗೆ ಹೋದಾಗಲೂ ವಿನೀಶ್ ಜೊತೆಯಲ್ಲಿಯೇ ಇದ್ದರು. ಇದು ವಿಡಿಯೋದಲ್ಲಿ ಕಾಣಿಸುತ್ತಿದೆ. ಅಪ್ಪ-ಮಗ ಇಬ್ಬರನ್ನೂ ನೋಡಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಫ್ಯಾನ್ಸ್ ಫಿದಾ ಆಗಿದ್ದಾರೆ.

challenging-star-darshan-madikeri-off-road-trip

ದರ್ಶನ್ ಕಾಡು, ಮೇಡು, ಪ್ರಾಣಿಗಳ ಜೊತೆ ಜೊತೆಗೆ ಅಡ್ವೆಂಚರ್ ಅಂದರೂ ಇಷ್ಟಾನೇ. ಅದಕ್ಕೆ ಆಗಾಗ ಆಫ್ ರೋಡ್ ಟ್ರಿಪ್ ಮಾಡುತ್ತಾರೆ. ಸದ್ಯ 'ಕಾಟೇರ' ಶೂಟಿಂಗ್ ಮುಗಿಸಿರೋ ದರ್ಶನ್ ಮಗನೊಂದಿಗೆ ಜಾಲಿ ಮೂಡನಲ್ಲಿ ಒಂದಿಷ್ಟು ದಿನ ಆಫ್ ರೋಡ್ ಟ್ರಿಪ್ ಮಾಡಿದ್ದಾರೆ. ಎಂದಿನಂತೆ ದರ್ಶನ್ ಆಪ್ತರು ಇವರಿಗೆ ಜೊತೆಯಾಗಿದ್ದಾರೆ.

ಎಲ್ಲೆಲ್ಲಿ ಆಫ್‌ ರೋಡ್ ಟ್ರಿಪ್

ಮಳೆ ಬಂತು ಅಂದರೆ, ನೆಲವೆಲ್ಲ ಹಸಿಯಾಗಿರುತ್ತೆ. ಈ ವೇಳೆ ಕಾರಿನಲ್ಲಿ ಕಾಡು ಮೇಡುಗಳನ್ನು ಸುತ್ತುವುದು ಅಸಾಧ್ಯದ ಮಾತು. ಅದಕ್ಕಂತಲೇ ವಿಶೇಷವಾಗಿ ಕಾರುಗಳನ್ನು ವಿನ್ಯಾಸ ಮಾಡಿರಬೇಕು. ಅಂತಹ ಕಾರುಗಳಲ್ಲಿ ಕಾಡುಗಳಲ್ಲಿ ಕಾರನ್ನು ಡ್ರೈವ್ ಮಾಡುವುದು ರೋಮಾಂಚಕ. ಇಂತಹ ಸಾಹಸಕ್ಕೆ ದರ್ಶನ್ ಆಗಾಗ ಕೈ ಹಾಕುತ್ತಲೇ ಇರುತ್ತಾರೆ.

ಈ ಹಿಂದೆ ವಿರಾಜ್‌ಪೇಟೆಗೆ ತಮ್ಮ ಸ್ನೇಹಿತರೊಂದಿಗೆ ಹೋಗಿದ್ದರು. ಆ ಟ್ರಿಪ್ ಮುಗಿದ ಕೆಲವು ದಿನಗಳ ಬಳಿಕ ದರ್ಶನ್ ಮತ್ತದೇ ಗ್ಯಾಂಗ್ ಕಟ್ಟಿಕೊಂಡು ಸಕಲೇಶಪುರಕ್ಕೆ ಹೋಗಿದ್ದರು. ಅಲ್ಲಿ ಕಾರು ಡ್ರಿಫ್ಟ್ ಮಾಡಿ ಎಂಜಾಯ್ ಎಂಜಾಯ್ ಮಾಡಿದ್ದರು.

More from Filmibeat

English summary
Challenging star Darshan and friends Madikeri off road trip video out
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X