»   » ರೀಮೇಕ್ ವಿರುದ್ಧ ರಣಕಹಳೆ ಊದಿದ್ರಾ ಚಾಲೆಂಜಿಂಗ್ ಸ್ಟಾರ್ ದರ್ಶನ್.?

ರೀಮೇಕ್ ವಿರುದ್ಧ ರಣಕಹಳೆ ಊದಿದ್ರಾ ಚಾಲೆಂಜಿಂಗ್ ಸ್ಟಾರ್ ದರ್ಶನ್.?

Posted By:
Subscribe to Filmibeat Kannada

ಕನ್ನಡ ಮಾಧ್ಯಮಗಳೆಲ್ಲ ಪರಭಾಷೆಯ ಚಿತ್ರಗಳನ್ನ ವೈಭವೀಕರಿಸಿ... ಹೊಗಳಿ... ಅಟ್ಟಕ್ಕೆ ಏರಿಸುತ್ತಿರುವಾಗ... ಅದರ ವಿರುದ್ಧ ಅಕ್ಷರಶಃ 'ಚಾಲೆಂಜ್' ಮಾಡಿದವರು 'ಚಾಲೆಂಜಿಂಗ್ ಸ್ಟಾರ್' ದರ್ಶನ್.!

''ನಾವಾ... ಅವರಾ... ನೋಡೇ ಬಿಡೋಣ'' ಅಂತ ಪರಭಾಷಾ ಚಿತ್ರಗಳ ಹಾವಳಿ ವಿರುದ್ಧ ತೊಡೆ ತಟ್ಟಿ ನಿಂತಿದ್ದ ನಿಮ್ಮೆಲ್ಲರ ಪ್ರೀತಿಯ 'ದಾಸ' ದರ್ಶನ್ ಇದೀಗ 'ರೀಮೇಕ್' ವಿರುದ್ಧ ರಣಕಹಳೆ ಊದಿರುವ ಹಾಗೆ ಕಾಣುತ್ತಿದೆ.['ದಾಸ' ದರ್ಶನ್ ಬಗ್ಗೆ ಹರಿದಾಡುತ್ತಿದೆ ಹೊಸ ಸುದ್ದಿ: ನಿಜವೋ, ಸುಳ್ಳೋ.?]

ಇಲ್ಲಿಯವರೆಗೂ ಕೆಲವು ರೀಮೇಕ್ ಚಿತ್ರಗಳಲ್ಲಿ ನಟ ದರ್ಶನ್ ಬಣ್ಣ ಹಚ್ಚಿರಬಹುದು. ಆದ್ರೆ, ಇನ್ಮುಂದೆ ಏನ್ ಮಾಡ್ತಾರೋ... ಗೊತ್ತಿಲ್ಲ. ಯಾಕಂದ್ರೆ, ಸದ್ಯ ರೀಮೇಕ್ ಚಿತ್ರದ ಪ್ಲಾನ್ ಒಂದಕ್ಕೆ ದರ್ಶನ್ 'ರೆಡ್ ಸಿಗ್ನಲ್' ಕೊಟ್ಟಿದ್ದಾರೆ ಎಂಬ ಮಾತುಗಳು 'ಡಿ' ಅಡ್ಡದಿಂದ ಕೇಳಿಬರುತ್ತಿದೆ. ಮುಂದೆ ಓದಿ....

'ರೀಮೇಕ್' ಮಾಡಲ್ಲ ಎಂದ್ರಾ ನಟ ದರ್ಶನ್.?

''ದಾಸ' ದರ್ಶನ್ 'ರೀಮೇಕ್' ಚಿತ್ರದಲ್ಲಿ ನಟಿಸದಿರಲು ನಿರ್ಧರಿಸಿದ್ದಾರಾ.?'' ಹೀಗೊಂದು ಪ್ರಶ್ನೆ 'ಡಿ' ಬಾಸ್ ಅಭಿಮಾನಿಗಳ ವಲಯದಲ್ಲಿ ಮೂಡಲು ಕಾರಣ ದರ್ಶನ್ ತೆಗೆದುಕೊಂಡಿರುವ ಹೊಸ ನಿರ್ಧಾರ.

ಯಾವ ನಿರ್ಧಾರ.?

ದರ್ಶನ್ ರವರ ಮುಂಬರುವ ಚಿತ್ರಕ್ಕೆ 'ಚೌಕ' ಚಿತ್ರದ ನಿರ್ದೇಶಕ 'ಕುಂಬಿ' ತರುಣ್ ಸುಧೀರ್ ಆಕ್ಷನ್ ಕಟ್ ಹೇಳಬೇಕಿತ್ತು. ಈ ಹಿಂದಿನ ಪ್ಲಾನ್ ಪ್ರಕಾರ, ತಮಿಳಿನ 'ವೀರಂ' ಚಿತ್ರದ ಕನ್ನಡ ಅವತರಣಿಕೆಗೆ ತರುಣ್ ಸುಧೀರ್ ನಿರ್ದೇಶನ ಮಾಡಬೇಕಿತ್ತು. ಅದರಲ್ಲಿ ದರ್ಶನ್ ಅಭಿನಯಿಸಬೇಕಿತ್ತು. ಆದ್ರೀಗ, ಈ ಪ್ಲಾನ್ ಗೆ ಫುಲ್ ಸ್ಟಾಪ್ ಬಿದ್ದಿದೆ.[ನಟ ದರ್ಶನ್ ಸದ್ದಿಲ್ಲದೇ ಹೈದರಾಬಾದ್ ಗೆ ಹಾರಿದ್ದು ಯಾಕೆ.?]

ಸ್ವಮೇಕ್ ಮಾಡಲು ಸೂಚಿಸಿದ್ದಾರಂತೆ ದರ್ಶನ್.!?

ತಮಿಳಿನ 'ವೀರಂ' ಚಿತ್ರದ ರೀಮೇಕ್ ಪ್ಲಾನ್ ಕೈಬಿಟ್ಟು, ಸ್ವಂತ ಕಥೆ ಬರೆಯುವಂತೆ ನಿರ್ದೇಶಕ ತರುಣ್ ಸುಧೀರ್ ರವರಿಗೆ 'ದಾಸ' ದರ್ಶನ್ ಸೂಚಿಸಿದ್ದಾರಂತೆ.

ಸ್ಕ್ರಿಪ್ಟ್ ಬರೆಯುವಲ್ಲಿ ತರುಣ್ ತಲ್ಲೀನ

ಸದ್ಯ ಹೊಸ ಸ್ಕ್ರಿಪ್ಟ್ ಬರೆಯುವಲ್ಲಿ ನಿರ್ದೇಶಕ ತರುಣ್ ಸುಧೀರ್ ತಲ್ಲೀನರಾಗಿದ್ದಾರೆ. ಮಲೇಶಿಯಾದಿಂದ ದರ್ಶನ್ ವಾಪಸ್ ಆದ ಕೂಡಲೆ, ಅವರಿಗೆ ಸ್ಕ್ರಿಪ್ಟ್ ರೀಡಿಂಗ್ ಕೊಡುತ್ತಾರಂತೆ ತರುಣ್ ಸುಧೀರ್.

ತರುಣ್ ಗೆ ಖುಷಿಯೋ ಖುಷಿ

ಸ್ವಂತ ಕಥೆ ಮಾಡುವಂತೆ ನಟ ದರ್ಶನ್ ಹೇಳಿರುವುದರಿಂದ ನಿರ್ದೇಶಕ ತರುಣ್ ಸುಧೀರ್ ರವರಿಗೆ ಫುಲ್ ಖುಷಿ ಆಗಿದ್ಯಂತೆ. ''ಈ ಬಾರಿ ದರ್ಶನ್ ಗಾಗಿ ವಿಭಿನ್ನ ಕಥಾಹಂದರವನ್ನು ಹೊತ್ತು ತರುತ್ತೇನೆ'' ಎಂದು ವಿಶ್ವಾಸದಿಂದ ನುಡಿಯುತ್ತಾರೆ ನಿರ್ದೇಶಕ ತರುಣ್ ಸುಧೀರ್.

'ತಾರಕ್' ಶೂಟಿಂಗ್ ನಲ್ಲಿ ದರ್ಶನ್ ಬಿಜಿ

'ತಾರಕ್' ಚಿತ್ರದ ಶೂಟಿಂಗ್ ನಿಮಿತ್ತ ಸದ್ಯ ನಟ ದರ್ಶನ್ ಮಲೇಶಿಯಾಗೆ ಹಾರಿದ್ದಾರೆ. 'ತಾರಕ್' ಮುಗಿದ ನಂತರ 'ಕುರುಕ್ಷೇತ್ರ' ಸಿನಿಮಾದ ಚಿತ್ರೀಕರಣದಲ್ಲಿ ದರ್ಶನ್ ತೊಡಗಿಕೊಳ್ಳಲಿದ್ದಾರೆ.

ತರುಣ್ ಸುಧೀರ್ ಜೊತೆ 51ನೇ ಸಿನಿಮಾ

ದರ್ಶನ್ ಅಭಿನಯದ 49ನೇ ಸಿನಿಮಾ 'ತಾರಕ್'. 50ನೇ ಸಿನಿಮಾ 'ಕುರುಕ್ಷೇತ್ರ'. ಈ ಎರಡು ಚಿತ್ರಗಳ ಶೂಟಿಂಗ್ ಮುಗಿದ ಬಳಿಕ ತರುಣ್ ಸುಧೀರ್ ರವರ ಚಿತ್ರಕ್ಕೆ ದರ್ಶನ್ ಚಾಲನೆ ನೀಡಲಿದ್ದಾರೆ.

ಸ್ವಮೇಕ್ ಚಿತ್ರಗಳಿಗೆ ಆದ್ಯತೆ

ಸದ್ಯ ದರ್ಶನ್ ಒಪ್ಪಿಕೊಂಡಿರುವ ಚಿತ್ರಗಳೆಲ್ಲವೂ ಸ್ವಮೇಕ್ ಸಿನಿಮಾಗಳೇ.! ಕನ್ನಡದ ಯುವ ಪ್ರತಿಭೆಗಳಿಗೆ ಆದ್ಯತೆ ನೀಡುವತ್ತ ದರ್ಶನ್ ಗಮನ ಹರಿಸುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.

English summary
Challenging Star Darshan's film with Director Tarun Sudhir is not a remake.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada