»   » ನಟ ದರ್ಶನ್ ಸದ್ದಿಲ್ಲದೇ ಹೈದರಾಬಾದ್ ಗೆ ಹಾರಿದ್ದು ಯಾಕೆ.?

ನಟ ದರ್ಶನ್ ಸದ್ದಿಲ್ಲದೇ ಹೈದರಾಬಾದ್ ಗೆ ಹಾರಿದ್ದು ಯಾಕೆ.?

Posted By:
Subscribe to Filmibeat Kannada

'ಚಕ್ರವರ್ತಿ' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸುತ್ತಿರುವಾಗಲೇ, 'ತಾರಕ್' ಸಿನಿಮಾದ ಶೂಟಿಂಗ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಜಿಯಾದರು. ಇನ್ನೂ ದರ್ಶನ್ ಅಭಿನಯಿಸಲಿರುವ 50ನೇ ಸಿನಿಮಾದ ಬಗ್ಗೆ ದಿನಕ್ಕೊಂದು ಇಂಟ್ರೆಸ್ಟಿಂಗ್ ಸುದ್ದಿ ಹೊರಬೀಳುತ್ತಿದೆ.

ಹೀಗಿರುವಾಗಲೇ, ನಿಮ್ಮೆಲ್ಲರ ಪ್ರೀತಿಯ 'ದಾಸ' ದರ್ಶನ್ ಇತ್ತೀಚೆಗಷ್ಟೇ ಸೈಲೆಂಟ್ ಆಗಿ ಹೈದರಾಬಾದ್ ಗೆ ಹೋಗಿ ಬಂದಿದ್ರಂತೆ. ಅದಕ್ಕೆ ಕಾರಣ ಏನು ಗೊತ್ತಾ.?

ಸದ್ದಿಲ್ಲದೇ ಹೈದರಾಬಾದ್ ಗೆ ಹಾರಿದ್ದ ದರ್ಶನ್

ಮೊನ್ನೆಮೊನ್ನೆಯಷ್ಟೇ ನಟ ದರ್ಶನ್ ಹೈದರಾಬಾದ್ ಗೆ ಹೋಗಿದ್ರಂತೆ. ಅದಕ್ಕೆ ಕಾರಣ ತಮ್ಮ 50ನೇ ಸಿನಿಮಾ 'ಕುರುಕ್ಷೇತ್ರ' [ನಿರ್ಮಾಪಕ ಮುನಿರತ್ನ ರವರಿಗಿದೆ ಬಹುದೊಡ್ಡ ಆಸೆ: ದರ್ಶನ್-ಸುದೀಪ್ 'ತಥಾಸ್ತು' ಎನ್ನಬೇಕಷ್ಟೆ.!]

ಟ್ರಯಲ್ ಫೋಟೋಶೂಟ್

ಹೈದರಾಬಾದ್ ನಲ್ಲಿರುವ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಇತ್ತೀಚೆಗಷ್ಟೇ ತಮ್ಮ 50ನೇ ಚಿತ್ರ 'ಕುರುಕ್ಷೇತ್ರ'ಕ್ಕಾಗಿ ಟ್ರಯಲ್ ಫೋಟೋಶೂಟ್ ಮುಗಿಸಿ ಬಂದಿದ್ದಾರೆ ನಟ ದರ್ಶನ್. ['ಕುರುಕ್ಷೇತ್ರ' ಯುದ್ಧಕ್ಕೆ ಬಜೆಟ್ ಮಿತಿ ಇಲ್ಲ! ಎಷ್ಟು ಕೋಟಿ ಖರ್ಚಾಗುತ್ತೋ ದೇವರೇ ಬಲ್ಲ!]

'ದುರ್ಯೋಧನ' ದರ್ಶನ್

'ಕುರುಕ್ಷೇತ್ರ' ಚಿತ್ರದಲ್ಲಿ ದುರ್ಯೋಧನನ ಪಾತ್ರದಲ್ಲಿ ನಟ ದರ್ಶನ್ ಮಿಂಚಲಿದ್ದಾರೆ. ದರ್ಶನ್ ಜೊತೆ ಸಿನಿಮಾದಲ್ಲಿ ಯಾರೆಲ್ಲಾ ಅಭಿನಯಿಸಲಿದ್ದಾರೆ ಎಂಬುದು ಇನ್ನೂ ಪಕ್ಕಾ ಆಗಿಲ್ಲ.

ಜೂನ್ ನಲ್ಲಿ ಚಿತ್ರೀಕರಣ

'ಕುರುಕ್ಷೇತ್ರ' ಚಿತ್ರಕ್ಕೆ ನಾಗಣ್ಣ ಆಕ್ಷನ್ ಕಟ್ ಹೇಳ್ತಿದ್ರೆ, ಮುನಿರತ್ನ ಬಂಡವಾಳ ಹಾಕಲಿದ್ದಾರೆ. ಮೂಲಗಳ ಪ್ರಕಾರ, ಬಿಗ್ ಬಜೆಟ್ ಸಿನಿಮಾ 'ಕುರುಕ್ಷೇತ್ರ' ಜೂನ್ ತಿಂಗಳಿನಲ್ಲಿ ಆರಂಭವಾಗಲಿದೆ. [ಕನ್ನಡದ 'ಕುರುಕ್ಷೇತ್ರ'ಕ್ಕೆ ಮುಹೂರ್ತ ಫಿಕ್ಸ್!]

English summary
Challenging Star Darshan does trial photo shoot for his 50th film 'Kurukshetra' in Ramoji Film City, Hyderabad.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada