ಬೆರಗು ಮೂಡಿಸುತ್ತದೆ ನಟ ಧ್ರುವ ಸರ್ಜಾ ವರ್ಕೌಟ್ ಶೈಲಿ

ನಟ ಧ್ರುವ ಸರ್ಜಾ ಜಿಮ್‌ನಲ್ಲಿ ಸರ್ಕಸ್ ಮಾಡಿ ಬೆವರಿಳಿಸುವುದರಲ್ಲಿ ಪರಿಣತ. ಅವರ ವರ್ಕೌಟ್ ವಿಡಿಯೋ ನೋಡುವವರೂ ಸುಸ್ತಾಗಿ ಬೆವರಿಳಿಸುವ ಮಟ್ಟಿಗೆ ಕಸರತ್ತು ನಡೆಸುತ್ತಾರೆ. ಆರಂಭದಲ್ಲಿ ಚಾಕೋಲೇಟ್ ಬಾಯ್ ರೀತಿ ಇದ್ದ ಧ್ರುವ, ಈಗ ಬಾಡಿ ಬಿಲ್ಡರ್‌ನಂತೆ ದೇಹ ಬೆಳೆಸಿದ್ದಾರೆ.

Recommended Video

ಬಿಡುಗಡೆಗೆ ಸಿದ್ಧವಾಗಿದೆ ಸ್ಟಾರ್ ನಟರ ಸಿನಿಮಾಗಳು | Darshan | Puneeth RajKumar | FILMIBEAT KANNADA

ಅವರ ಕಟ್ಟು ಮಸ್ತಾದ ದೇಹ ಮತ್ತು ಅದಕ್ಕಾಗಿ ನಡೆಸುತ್ತಿರುವ ಸತತ ವರ್ಕೌಟ್‌ಗಳು 'ಪೊಗರು' ಚಿತ್ರಕ್ಕಾಗಿ. ಈ ಚಿತ್ರಕ್ಕಾಗಿ ಮೂರು ವರ್ಷದಿಂದ ಅವರು ದೇಹ ಬೆಳೆಸಲು ಶ್ರಮಿಸುತ್ತಿದ್ದಾರೆ. ತಾವು ನಡೆಸುವ ವರ್ಕೌಟ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಇತರರಿಗೂ ಸ್ಫೂರ್ತಿಯಾಗುತ್ತಿದ್ದಾರೆ. ಇದೇ ರೀತಿ ಪ್ರೇರಣೆ ನೀಡುತ್ತಿರುವ ನಟರೆಂದರೆ ಪುನೀತ್ ರಾಜ್ ಕುಮಾರ್. ಸೂಪರ್ ಮ್ಯಾನ್ ರೀತಿ ಜಿಗಿಯುವ ಪುನೀತ್, ಅವರ ದೇಹ ಬಾಗುವ ರೀತಿ ಅಚ್ಚರಿ ಮೂಡಿಸುತ್ತದೆ. ಆದರೆ ಪುನೀತ್ ಹಾಗೂ ಧ್ರುವ ಸರ್ಜಾ ಇಬ್ಬರ ವರ್ಕೌಟ್ ಶೈಲಿಗಳು ಬೇರೆ ಬೇರೆ. ಮುಂದೆ ಓದಿ...

ಧ್ರುವ ಸರ್ಜಾ ವರ್ಕೌಟ್ ವಿಡಿಯೋ

ಧ್ರುವ ಸರ್ಜಾ ವರ್ಕೌಟ್ ವಿಡಿಯೋ

'ಪೊಗರು' ಚಿತ್ರಕ್ಕಾಗಿ ದೇಹವನ್ನು ಬಾಡಿ ಬಿಲ್ಡರ್ ರೀತಿ ಹಿಗ್ಗಿಸಿರುವ ಧ್ರುವ ಸರ್ಜಾ, ಲಾಕ್ ಡೌನ್ ಅವಧಿಯಲ್ಲಿಯೂ ಜಿಮ್‌ನಲ್ಲಿ ಬೆವರು ಸುರಿಸುವುದನ್ನು ಕಡಿಮೆ ಮಾಡಿಲ್ಲ. ಫಿಟ್ನೆಸ್ ಕೋಚ್ ಸಲಹೆಯಂತೆ ಅವರು ವರ್ಕೌಟ್ ಮಾಡುತ್ತಿದ್ದಾರೆ.

ಬೆನ್ನ ಮೇಲೆ ಕೋಚ್ ಸವಾರಿ

ಬೆನ್ನ ಮೇಲೆ ಕೋಚ್ ಸವಾರಿ

ಇನ್‌ಸ್ಟಾಗ್ರಾಂನ ಸ್ಟೋರೀಸ್‌ನಲ್ಲಿ ಧ್ರುವ ಶೇರ್ ಮಾಡಿರುವ ವಿಡಿಯೋ ಬೆರಗು ಹುಟ್ಟಿಸುವಂತಿದೆ. ಏರೋಬಿಕ್ ಸ್ಟೆಪ್ಪರ್ ಮೇಲೆ ತುದಿಗಾಲಿನಲ್ಲಿ ನಿಂತಿರುವ ಧ್ರುವ, ಮತ್ತೊಂದು ಜಿಮ್ ಸಾಧನವೊಂದನ್ನು ಆಧಾರವಾಗಿ ಹಿಡಿದು ಬಾಗಿ ನಿಂತಿದ್ದಾರೆ. ಅವರ ಬೆನ್ನ ಮೇಲೆ ಹೆಚ್ಚೂ ಕಡಿಮೆ ಅವರಷ್ಟೇ ತೂಕವಿರುವ ಕೋಚ್ ಕುಳಿತಿದ್ದಾರೆ. ಈ ವಿಡಿಯೋ ಕಂಡು ಅಭಿಮಾನಿಗಳು ಹೈರಾಣಾಗಿದ್ದಾರೆ.

ಸಲೀಸಾಗಿ ಕೌಂಟ್ ಮಾಡುವ ಧ್ರುವ

ಸಲೀಸಾಗಿ ಕೌಂಟ್ ಮಾಡುವ ಧ್ರುವ

ಒಬ್ಬ ವ್ಯಕ್ತಿಯನ್ನು ಬೆನ್ನ ಮೇಲೆ ಕೂರಿಸಿಕೊಂಡು ಡಿಬ್ಸ್ ಹೊಡೆಯುವಂತೆ ಏಳುವುದು ಸುಲಭದ ಮಾತಲ್ಲ. ಆದರೆ ಧ್ರುವ ಸಲೀಸಾಗಿ ಅವರನ್ನು ಮೇಲೆತ್ತುತ್ತಾರೆ. ಹತ್ತು-ಇಪ್ಪತ್ತು ಕೌಂಟ್‌ಗಳನ್ನು ಮಾಡುವವರೆಗೂ ಈ ಸಾಹಸ ಮಾಡಿದ್ದಾರೆ.

More from Filmibeat

English summary
Actor Dhruva Sarja working out heavily for his movie Pogaru is sharing many videos on social media. One of his video of workout can make you stun.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X