»   » ಹೇಮಂತ್ ರಾವ್ ಮುಂದಿನ ಚಿತ್ರ ಪುನೀತ್ ರಾಜ್‌ ಕುಮಾರ್ ಜೊತೆಗೆ

ಹೇಮಂತ್ ರಾವ್ ಮುಂದಿನ ಚಿತ್ರ ಪುನೀತ್ ರಾಜ್‌ ಕುಮಾರ್ ಜೊತೆಗೆ

Posted By:
Subscribe to Filmibeat Kannada

ಚಿತ್ರದ ತಾರಾಗಣ ನೋಡಿ ಥಿಯೇಟರ್‌ ಗೆ ಹೋಗುತ್ತಿದ್ದ ಕಾಲ ಬದಲಾಗಿದೆ. ಈಗ ತಾರಾಗಣದ ಜೊತೆಗೆ ಡೈರೆಕ್ಟರ್ ಯಾರು ಎಂದು ತಿಳಿದು ಸಿನಿಮಾಗೆ ಹೋಗುವವರ ಸಂಖ್ಯೆಯು ಹೆಚ್ಚಿದೆ. 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕ ಹೇಮಂತ್ ರಾವ್ ಉತ್ತಮ ವಿಮರ್ಶೆಗಳನ್ನು ಪಡೆದಿದ್ದರು.

ಹೇಮಂತ್ ರಾವ್ ಈ ಚಿತ್ರದಲ್ಲಿ ತಂದೆ ಮತ್ತು ಮಗನ ನಡುವಿನ ಅಸಾಧಾರಣ ಬಾಂಧವ್ಯವನ್ನು ಪ್ರೇಕ್ಷಕರಿಗೆ ಕಟ್ಟಿಕೊಡುವ ಮೂಲಕ ಅವರ ಮುಂದಿನ ಸಿನಿಮಾ ಯಾವುದು? ಎಂಬ ನಿರೀಕ್ಷೆಯಲ್ಲಿ ಕಾಯುವಂತೆ ಸಿನಿ ಪ್ರಿಯರಲ್ಲಿ ಕುತೂಹಲ ಹುಟ್ಟು ಹಾಕಿದ್ದರು. ಈಗ ಈ ಕುತೂಹಲಕ್ಕೆ ಬ್ರೇಕ್‌ ಬಿದ್ದಿದೆ.

Director Hemanth M Rao next movie with Puneeth Rajkumar

ಅಂದಹಾಗೆ ಹೇಮಂತ್ ರಾವ್ ತಮ್ಮ ಮುಂದಿನ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ ಕುಮಾರ್ ರವರಿಗೆ ಆಕ್ಷನ್‌ ಕಟ್ ಹೇಳಲಿದ್ದಾರಂತೆ. ಚಿತ್ರ ನಿರ್ಮಾಪಕ ಕಾರ್ತಿಕ್ ಗೌಡ ಈ ಬಗ್ಗೆ ಸ್ವತಃ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. "ಪುನೀತ್ ಮತ್ತು ನಾನು ಚಿತ್ರದಲ್ಲಿ ಮತ್ತೆ ಒಟ್ಟಾಗಿ ಬರುತ್ತಿದ್ದು, ಇದು ಥ್ರಿಲ್ಲರ್ ಆಗಿರಲಿದೆ. ಕೇವಲ ಸಿಂಗಲ್ ಹೀರೋ ಇರದೇ ಪಾತ್ರದಷ್ಟೇ ಪ್ರಾಮುಖ್ಯತೆಯನ್ನು ಸ್ಕ್ರಿಪ್ಟ್‌ ಗೆ ನೀಡಲಾಗುತ್ತಿದೆ" ಎಂದು ಸ್ಟೇಟಸ್ ಹಾಕಿದ್ದಾರೆ.[ಪವರ್ ಸ್ಟಾರ್ ಮುಂದಿನ ಚಿತ್ರದಲ್ಲಿ ಬಹುಭಾಷಾ ನಟಿ ಅಭಿನಯ]

Director Hemanth M Rao next movie with Puneeth Rajkumar

"ಹೇಮಂತ್ ರಾವ್ ನಿರ್ದೇಶನದಲ್ಲಿ ಮೂಡಿ ಬರಲಿರುವ 'ಪುನೀತ್ ರಾಜ್ ಕುಮಾರ್ ಅಭಿನಯದ ಮುಂದಿನ ಚಿತ್ರಕ್ಕೆ ಚರಣ್‌ ರಾಜ್ ಸಂಗೀತ ವಿದೆ. ಸದ್ಯದಲ್ಲಿ ಸಿನಿಮಾ ಕಾಸ್ಟಿಂಗ್ ನಡೆಯುತ್ತಿದ್ದು ಈ ತಿಂಗಳ ಅಂತ್ಯಕ್ಕೆ ಕಾಸ್ಟಿಂಗ್ ಮುಕ್ತಾಯವಾಗಲಿದೆ. ಏಪ್ರಿಲ್ ಮಧ್ಯಾಂತರದಿಂದ ಚಿತ್ರೀಕರಣ ಶುರುವಾಗಲಿದೆ" ಎಂದು ಕಾರ್ತಿಕ್ ಗೌಡ ರವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.[ಪುನೀತ್ 'ರಾಜಕುಮಾರ' ಟೀಸರ್ ನಲ್ಲಿವೆ ಹಲವು 'ಸರ್ಪ್ರೈಸ್'!]

English summary
Many Have been wondering Hemanth M Rao's next Movie. Especially after how his debut film, Godhi Banna Sadharana Mykattu. Now Filmmaker Karthik Gowda revialed about Hemanth M Rao's directing next movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada