»   » ಪವರ್ ಸ್ಟಾರ್ ಮುಂದಿನ ಚಿತ್ರದಲ್ಲಿ ಬಹುಭಾಷಾ ನಟಿ ಅಭಿನಯ

ಪವರ್ ಸ್ಟಾರ್ ಮುಂದಿನ ಚಿತ್ರದಲ್ಲಿ ಬಹುಭಾಷಾ ನಟಿ ಅಭಿನಯ

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್‌ ಕುಮಾರ್‌ ರವರಿಗೆ ಸದ್ಯದಲ್ಲೇ ನಟ ಕಮ್ ನಿರ್ದೇಶಕ ಎ.ಹರ್ಷ ಆಕ್ಷನ್‌ ಕಟ್ ಹೇಳಲಿದ್ದಾರೆ ಎಂಬ ಸುದ್ದಿ ಸ್ಯಾಂಡಲ್‌ ವುಡ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಆದರೆ ಸಿನಿಮಾ ಹೆಸರೇನು, ಚಿತ್ರಕಥೆ ಏನು, ಸಿನಿಮಾದಲ್ಲಿ ಯಾರೆಲ್ಲಾ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಮಾತ್ರ ಹೊರಬಿದ್ದಿರಲಿಲ್ಲ. ಈಗ ಈ ಕುತೂಹಲಗಳಿಗೆ ಅರ್ಧದಷ್ಟು ತೆರೆ ಬಿದ್ದಂತಾಗಿದೆ.

ಅಂದಹಾಗೆ ಎ.ಹರ್ಷ, ತಮಿಳಿನ ಪೂಜಾಯ್ ಸಿನಿಮಾ ಕನ್ನಡಕ್ಕೆ ರಿಮೇಕ್ ಆಗುತ್ತಿದ್ದು, ಪುನೀತ್ ರಾಜ್‌ ಕುಮಾರ್ ರವರ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ತಮಿಳಿನ ಪೂಜಾಯ್ ಸಿನಿಮಾಗೆ ಹರಿ ಎಂಬುವವರು ಆಕ್ಷನ್‌ ಹೇಳಿದ್ದರು. ಈ ಸಿನಿಮಾದಲ್ಲಿ ನಟ ವಿಶಾಲ್ ಮತ್ತು ನಟಿ ಶೃತಿ ಹಾಸನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.[ಪುನೀತ್ ರಾಜ್ ಕುಮಾರ್-ಹರ್ಷ ಮಹಾಸಂಗಮದ ಇಂಟ್ರೆಸ್ಟಿಂಗ್ ಡೀಟೈಲ್ಸ್]

Ramya Krishnan to play a prominent role in A.Harsha directing Puneeth's next movie

ಹರ್ಷ ನಿರ್ದೇಶನ ಮಾಡಲಿರುವ, ಟೈಟಲ್ ಇಡದ ಚಿತ್ರದಲ್ಲಿ ಬಹುಭಾಷಾ ನಟಿ ರಮ್ಯಾಕೃಷ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇನ್ನೂ ಪುನೀತ್ ರಾಜ್‌ ಕುಮಾರ್ ಗೆ ನಾಯಕಿಯಾಗಿ ಹನ್ಸಿಕಾ ಮೋಟ್ಸಾನಿ ನಟಿಸಲಿದ್ದಾರೆ ಎಂಬ ಮಾಹಿತಿ ಗಾಂಧಿ ನಗರದ ಕಡೆಯಿಂದ ಕೇಳಿಬರುತ್ತಿದೆ. ಆದರೆ ಚಿತ್ರತಂಡ ಮಾತ್ರ ಈ ಬಗ್ಗೆ ಯಾವುದೇ ಮಾಹಿತಿಯನ್ನು ಪ್ರಕಟಿಸಿಲ್ಲ.[ಗ್ಯಾಲರಿ : ವೈವಿಧ್ಯಮಯ ಚಿತ್ರಗಳಲ್ಲಿ ಓಂ ಪುರಿ]

Ramya Krishnan to play a prominent role in A.Harsha directing Puneeth's next movie

ರವಿ ಶಂಕರ್ ಮತ್ತು ರವಿ ಕಿಶನ್ ವಿಲನ್‌ ಪಾತ್ರಗಳಲ್ಲಿ ಕಾಣಿಸಕೊಳ್ಳಲಿದ್ದಾರಂತೆ. ಜನವರಿ ಅಂತ್ಯದಿಂದ ಶೂಟಿಂಗ್ ಕಾರ್ಯ ಆರಂಭವಾಗಲಿದೆ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಬಿಗ್‌ ಬಜೆಟ್ ಸಿನಿಮಾಗೆ ಜಯಶ್ರೀದೇವಿ ಮತ್ತು ಎಂಎನ್‌ ಕುಮಾರ್ ಸಿನಿಮಾ ನಿರ್ಮಾಣ ಹೊಣೆ ಹೊತ್ತಿದ್ದಾರೆ.[ಪುನೀತ್ 'ರಾಜಕುಮಾರ' ಟೀಸರ್ ನಲ್ಲಿವೆ ಹಲವು 'ಸರ್ಪ್ರೈಸ್'!]

English summary
Choreographer cum Kannada Director A.Harsha to direct Kannada Actor Puneeth Rajkumar's next movie. In this movie Ramya Krishnan to play a prominent role. The movie will be Produced by M.N.Kumar and Jayashree Devi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada