'ಕೆ ಜಿ ಎಫ್'ಗೆ ಜೈ ಎಂದ ಕಬಾಲಿ ನಿರ್ದೇಶಕ
'ಕೆ ಜಿ ಎಫ್' ಕನ್ನಡದ ಹೆಮ್ಮೆಯ ಸಿನಿಮಾ ಆಗುವ ಎಲ್ಲ ಲಕ್ಷಣಗಳು ಕಾಣುತ್ತಿದೆ. ಪ್ರತಿಯೊಬ್ಬರು ಚಿತ್ರದ ಟ್ರೇಲರ್ ನೋಡಿ ಹೊಗಳುತ್ತಿದ್ದಾರೆ. ಕನ್ನಡ ಮಾತ್ರವಲ್ಲದೆ ಬೇರೆ ಚಿತ್ರರಂಗದಲ್ಲಿಯೂ ಚಿತ್ರದ ಟ್ರೇಲರ್ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ.
'ಕೆ ಜಿ ಎಫ್' ತಮಿಳು ಭಾಷೆಯ ಟ್ರೇಲರ್ ಅನ್ನು 'ಕಬಾಲಿ' ಖ್ಯಾತಿಯ ನಿರ್ದೇಶಕ ಪಾ ರಂಜಿತ್ ವೀಕ್ಷಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಅದ್ಬುತ ಟ್ರೇಲರ್ ಎಂದು ಚಿತ್ರತಂಡದ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ಜೊತೆಗೆ ಟ್ರೇಲರ್ ಅನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ರವಿತೇಜಗೂ ಆಗ್ಲಿಲ್ಲ, ದೇವರಕೊಂಡಗೂ ಆಗ್ಲಿಲ್ಲ: ಅಲ್ಲೂ ಯಶ್ ನಂ.1.!
ತಮಿಳು ಭಾಷೆಯ 'ಕೆ ಜಿ ಎಫ್' ಟ್ರೇಲರ್ ಗೆ ಸಹ ಯೂಟ್ಯೂಬ್ ನಲ್ಲಿ ದೊಡ್ಡ ಮಟ್ಟದ ಪ್ರಶಂಸೆ ಸಿಗುತ್ತಿದೆ. ಈಗಾಗಲೇ ಒಂದು ಮಿಲಿಯನ್ ಗೂ ಅಧಿಕ ಹಿಟ್ಸ್ ಅನ್ನು ಟ್ರೇಲರ್ ಪಡೆದುಕೊಂಡಿದೆ.
ಶಾರೂಖ್, ರಜನಿಯನ್ನ ಹಿಂದಿಕ್ಕಿದ 'ಕೆಜಿಎಫ್' ಭಾರತದ ನಂ.1 ಸಿನಿಮಾ
'ಕೆ ಜಿ ಎಫ್' ಸಿನಿಮಾದ ಟ್ರೇಲರ್ ಐದು ಭಾಷೆಯಲ್ಲಿ ರಿಲೀಸ್ ಆಗಿದೆ. ಕನ್ನಡ, ಹಿಂದಿ, ತೆಲುಗು, ಮಲೆಯಾಳಂನಲ್ಲಿಯೂ ಟ್ರೇಲರ್ ದೊಡ್ಡ ಮಟ್ಟದ ಹಿಟ್ ಆಗಿದೆ.


Click it and Unblock the Notifications











