"ಫೈಟರ್ ಏನ್ಮಾಡ್ತಾನೆ ಅಂದ್ರು.. ಕೆಲವರು ನಮ್ಮ ಬದುಕನ್ನೇ ನಾಶ ಮಾಡಿದ್ದಾರೆ" ದುನಿಯಾ ವಿಜಯ್ ಟಾಂಗ್ ಕೊಟ್ಟಿದ್ಯಾರಿಗೆ?

'ಸಲಗ' ಸಿನಿಮಾ ಮೂಲಕ ದುನಿಯಾ ವಿಜಯ್ ಸೆಕೆಂಡ್ ಇನ್ನಿಂಗ್ಸ್ ಆರಂಭ ಮಾಡಿದ್ದಾರೆ. ಮೊದಲ ಬಾರಿಗೆ ನಿರ್ದೇಶನ ಮಾಡಿ ಗೆದ್ದಿದ್ದಾರೆ. ಈಗ ಎರಡನೇ ಬಾರಿ ನಿರ್ದೇಶನಕ್ಕೆ ಇಳಿದಿದ್ದಾರೆ. 'ಭೀಮಾ' ಸಿನಿಮಾ ಶೂಟಿಂಗ್ ಇನ್ನೇನು ಮುಗಿದಿದೆ. ನಿಧಾನವಾಗಿ ಸಿನಿಮಾ ಪ್ರಚಾರವನ್ನೂ ಆರಂಭ ಮಾಡಿದ್ದಾರೆ.

ಈ ಗ್ಯಾಪ್‌ನಲ್ಲಿ ಮರಿ ಟೈಗರ್ ವಿನೋದ್ ಪ್ರಭಾಕರ್ ಅಭಿನಯದ 'ಫೈಟರ್' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ದುನಿಯಾ ವಿಜಯ್ ತಮ್ಮ ಬದುಕಿನ ಕೆಲವು ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಚಿತ್ರರಂಗದಲ್ಲಿ ತಾವು ಸವೆದ ಕಷ್ಟದ ಹಾದಿಗಳನ್ನು ನೆನಪಿಸಿಕೊಂಡಿದ್ದಾರೆ.

Duniya Vijay says some industry people wants to finish him in fighter event

ಇದೇ ವೇಳೆ ಚಿತ್ರರಂಗದಲ್ಲಿ ತಮ್ಮ ನಾಶ ಮಾಡುವುದಕ್ಕೆ ಪ್ರಯತ್ನ ಪಟ್ಟಿದ್ದರು ಎಂದು ದುನಿಯಾ ವಿಜಯ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ. "ಫೈಟರ್ ಅಂದ್ರು. ನೋಡಕ್ಕೆ ಕಪ್ಪು ಅಂದ್ರು. ನಾಶ ಮಾಡೋಕೆ ಪ್ರಯತ್ನ ಪಟ್ಟರು" ಎಂದಿದ್ದಾರೆ. ಅಷ್ಟಕ್ಕೂ ದುನಿಯಾ ವಿಜಯ್ ಯಾಕೆ ಹಿಂಗದ್ರು? ಅನ್ನೋದನ್ನು ತಿಳಿಯಲು ಮುಂದೆ ಓದಿ.

"ನನ್ನ ಆಕ್ಟೀಂಗ್ ಅನ್ನು ಯಾರೂ ನೋಡಿಲ್ಲ"

ವಿನೋದ್ ಪ್ರಭಾಕರ್ ನಟನೆಯ 'ಫೈಟರ್' ಸಿನಿಮಾ ಅಕ್ಟೋಬರ್ 6ಕ್ಕೆ ರಿಲೀಸ್ ಆಗುತ್ತಿದೆ. ಹೀಗಾಗಿ ಪ್ರೀ ರಿಲೀಸ್ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ವೇಳೆ ದುನಿಯಾ ವಿಜಯ್ ಫೈಟರ್ ಆಗೋದು ಎಷ್ಟು ಕಷ್ಟ ಅನ್ನೋದನ್ನು ಜನರಿಗೆ ತಿಳಿಸಿಕೊಟ್ಟಿದ್ದಾರೆ."ಈಗೇನು ಎನರ್ಜಿಟಿಕ್ ಆಗಿ ಕೂಗುತ್ತಿದ್ದಾರೆ. ನಾನು ಹಾಗೇ ಇದ್ದವನು. ಅವರ ತರನೇ ಇದ್ದವನು. ಸಿನಿಮಾಗೆ ಸೇರಬೇಕಲ್ಲ ಅಂತ ನಿಧಾನಕ್ಕೆ ಫೈಟ್ ಕಲಿತೆ. ಕಲಿತಾ ಕಲಿತಾನೇ ಡ್ಯಾಮೇಜ್ ಆಗಿದ್ದು. ಇದರ ಮಧ್ಯೆ ಆಕ್ಟಿಂಗ್ ಕಲಿತೆ. ಇದನ್ನು ಯಾರೂ ನೋಡಲಿಲ್ಲ. ಅದನ್ನು ನೋಡಿ ಇವನು ಯಾರೋ ಫೈಟರ್ ಬಂದ ಬಿಡ್ರಿ. ಇವನು ಏನು ಮಾಡಿಕೊಳ್ತಾನೆ. ನೋಡಕ್ಕೆ ಬೇರೆ ಕಪ್ಪು." ಅಂತ ಅಂದರು ಎಂದು ದುನಿಯಾ ವಿಜಯ್ ಹೇಳಿದ್ದಾರೆ.

"ಫೈಟರ್ ಏನು ಮಾಡ್ತಾನೆ ನೋಡೋಣ ಅಂದ್ರು"

"ದುನಿಯಾ ಆದಾಗಲೂ ಅಂದ್ರು, ಅವನು ಫೈಟರ್ ಏನು ಮಾಡುತ್ತಾನೋ ನೋಡೋಣ ಅಂದ್ರು. ಆ ಫೈಟರ್ ಒಬ್ಬ ಒಳ್ಳೆ ಆಕ್ಟರ್ ಆದ. ಅಂದವರೇ ಬೆಳೆಸಿದ್ರು. ಸರಿ ಹೆಂಗಾದ್ರೂ ಮಾಡಿ ಆಕ್ಟರ್ ಅನ್ನು ಹೊಡೆದು ಬಿಡೋಣ ಅಂದ್ರು, ಪ್ರಡ್ಯೂಸರ್ ಮಾಡಿದ್ರು. ಸರಿ ಇವನನ್ನು ಹೊಡೆದು ಹಾಕೋಣ ಅಂತ ಮಾಡಿದ್ರು. ಡೈರೆಕ್ಟರ್ ಕೂಡ ಮಾಡಿಬಿಟ್ರು. ಅದಕ್ಕೆ ಫೈಟಿಂಗ್ ಯಾವಾಗಲೂ ತುಂಬಾನೇ ಮುಖ್ಯ. ಫೈಟ್ ಮಾಡುತ್ತಲೇ ಇರಿ. ಯಾವತ್ತೂ ಬಿಡಬೇಡಿ. ಪ್ರತಿಯೊಬ್ಬರ ಲೈಫ್‌ನಲ್ಲಿ ಫೈಟ್ ನಡೆಯುತ್ತಲೇ ಇರಬೇಕು. ಒಂದು ಹೊಡೆದಾಗ ಇನ್ನೊಂದು ಎದ್ದು ನಿಲ್ಲುತ್ತಾ ಇರಬೇಕು. ಆಗ ಮಾತ್ರ ಇಂಡಸ್ಟ್ರಿಯಲ್ಲಿ ಎದ್ದು ನಿಲ್ಲುವುದಕ್ಕೆ ಸಾಧ್ಯ. ಬಿಟ್ರೆ ಹೊಡೆದು ಹಾಕುತ್ತಾರೆ." ಎಂದು ದುನಿಯಾ ವಿಜಯ್ ಹೇಳಿದ್ದಾರೆ.

Duniya Vijay says some industry people wants to finish him in fighter event

"ನಮ್ಮ ಬದುಕು ನಾಶ ಮಾಡಿದ್ದಾರೆ"

ಇದೇ 'ಫೈಟರ್' ಕಾರ್ಯಕ್ರಮದಲ್ಲಿ ದುನಿಯಾ ವಿಜಯ್ ಹಲವು ಸಂಗತಿಗಳನ್ನು ಬಿಚ್ಚಿದ್ದಾರೆ. ಕೆಲವರು ತಮ್ಮ ಬದುಕನ್ನೇ ನಾಶ ಮಾಡಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಇದನ್ನು ನಿರ್ಧಿಷ್ಟವಾಗಿ ಯಾರಿಗೆ ಹೇಳಿದ್ದಾರೆ? ಅನ್ನೋ ಪ್ರಶ್ನೆ ಉತ್ತರ ಸಿಕ್ಕಿಲ್ಲ. "ಕೆಲವರು ನಮ್ಮ ಬದುಕು ನಾಶ ಮಾಡಿದ್ದಾರೆ. ಕೆಲವರು ಉದ್ದಾರನೂ ಮಾಡಿದ್ದಾರೆ. ಇಂತಹ ವೇದಿಕೆ ನಿಂತಾಗ ಇಂತಹ ನೋವಿನ ಸಂಗತಿಗಳು ಬರುತ್ತೆ. ಫೈಟ್‌ ಕಲಿತಿದ್ದಕ್ಕೆ ಫೈಟರ್ ಅಂದ್ರು. ಏ ಫೈಟರ್ ಬಿಡಿ ಹೀರೊ ಆದ ಅಂದರು. ಅದಕ್ಕೆ ಅವರು ಅಲ್ಲೇ ಇದ್ದಾರೆ. ನಾನು ಬೆಳೆಯುತ್ತಲೇ ಇದ್ದೀನಿ." ಎಂದು ದುನಿಯಾ ವಿಜಯ್ 'ಫೈಟರ್' ಸಿನಿಮಾ ವೇದಿಕೆಯಲ್ಲಿ ಹೇಳಿದ್ದಾರೆ.

"ಉಪ್ಪಿನಕಾಯಿ ಮಾಡಿ..ಬಿರಿಯಾನಿ ಮಾಡ್ಬೇಡಿ"

"ನಾನು ಪ್ರಭಾಕರ್ ಸರ್ ನೋಡಿದ್ದೀನಿ. ಅವರಿಗೆ ಒಂದು ಕಾಲ ಪ್ರಾಬ್ಲಮ್ ಇದ್ದರೂ ಎಲ್ಲೂ ಅವರು ತೋರಿಸಿಕೊಂಡಿಲ್ಲ. ಅವರು ನಿಂತರೇನೆ ಅನಿಸೋದು. ಹುಲಿ ಬಂದು ಎದುರುಗಡೆ ನಿಲ್ತು ಅಂತ. ಅದು ಅವರು ಬ್ಯಾಲೆನ್ಸ್ ಮಾಡಿಕೊಂಡು ಬಂದಿದ್ದು ಲೈಫ್‌ನಲ್ಲಿ. ಅದಕ್ಕೆ ನಿರ್ದೇಶಕರಿಗೆ ಹೇಳಿದೆ. ಎಷ್ಟೇ ಲೇಟ್ ಆದರೂ ಪರ್ವಾಗಿಲ್ಲ. ಉಪ್ಪಿನಕಾಯಿ ಎಷ್ಟೇ ದಿನ ಆದರೂ ಕೇಡೋದಿಲ್ಲ. ಬಿರಿಯಾನಿ ಕೆಟ್ಟೋಗುತ್ತೆ. ಅದಕ್ಕೆ ನಿರ್ದೇಶಕರಿಗೆ ಉಪ್ಪಿನಕಾಯಿ ಮಾಡಿ ಇಡಿ. ಲೇಟ್ ಆದರೂ ರುಚಿಯಾಗಿರುತ್ತೆ." ಎಂದು ದುನಿಯಾ ವಿಜಯ್ ಹೇಳಿದ್ದಾರೆ.

More from Filmibeat

English summary
Duniya Vijay says some industry people wants to finish him in Vinod Prabhakar fighter event
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X