Darshan: ಯೋಗರಾಜ್ ಭಟ್ 'ಗರಡಿ'ಯಲ್ಲಿ ದರ್ಶನ್ ಲುಕ್ ಹೇಗಿದೆ? ಈ ಲುಕ್ ನೋಡಿದ್ರೆ ಕಳೆದುಹೋಗೋದು ಗ್ಯಾರಂಟಿ!
ಯೋಗರಾಜ್ ಭಟ್ ಎರಡೆರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದು ಬಿ ಸಿ ಪಾಟೀಲ್ ನಿರ್ದೇಶಿಸುತ್ತಿರುವ 'ಗರಡಿ'. ಇನ್ನೊಂದು ರಾಕ್‌ಲೈನ್ ವೆಂಕಟೇಶ್ ಸಿನಿಮಾ 'ಕರಟಕ ದಮನಕ'. ಈ ಎರಡೂ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಿದೆ. ಇದಕ್ಕೆ ಕಾರಣ ಭಟ್ಟರ ನಿರ್ದೇಶನ. ಜೊತೆ ಸ್ಟಾರ್‌ಗಳು.
ಇದರಲ್ಲಿ 'ಗಾಳಿಪಟ 2' ಬಿಡುಗಡೆಗೂ ಮುನ್ನವೇ ಅನೌನ್ಸ್ ಮಾಡಿದ್ದ ಸಿನಿಮಾ 'ಗರಡಿ'. ಇದೇ ಮೊದಲ ಬಾರಿಗೆ ಯೋಗರಾಜ್ ಭಟ್ ಕುಸ್ತಿಯನ್ನು ಆಧರಿಸಿದ ಕಥೆಯೊಂದನ್ನು ಹೆಣೆದು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಹೀರೊ ಯಶಸ್ ಸೂರ್ಯ. ಇವರಿಗೆ ಬೆನ್ನೆಲುಬಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿಂತಿದ್ದಾರೆ.

ಈಗಾಗಲೇ ಗೊತ್ತಿರೋ ಹಾಗೇ ಚಾಲೆಂಜಿಂಗ್ ಸ್ಟಾರ್ ಕೂಡ 'ಗರಡಿ' ಸಿನಿಮಾದಲ್ಲಿ ನಟಿಸಿದ್ದಾರೆ. ಹೀಗಾಗಿ ಸಿನಿಮಾ ಬಗ್ಗೆ ನಿರೀಕ್ಷೆ ದುಪ್ಪಟ್ಟಿದೆ. ಅದರಲ್ಲೂ ಯೋಗರಾಜ್ ಭಟ್ ನಿರ್ದೇಶನದಲ್ಲಿ ದರ್ಶನ್ ಪಾತ್ರ ಹೇಗಿರುತ್ತೆ? ಅನ್ನೋದನ್ನು ನೋಡುವುದಕ್ಕೆ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಆ ಕುತೂಹಲ ಈಗ ಮತ್ತಷ್ಟೂ ಹೆಚ್ಚಾಗಿದೆ. ಅದಕ್ಕೆ ಕಾರಣ ಗರಡಿ ಸಿನಿಮಾದ ದರ್ಶನ್ ಪಾತ್ರದ ಫೋಟೊಗಳು.
'ಗರಡಿ' ರಿಲೀಸ್‌ಗೆ ರಡಿ
ಯೋಗರಾಜ್ ಭಟ್ ಸಿನಿಮಾ ಅಂದರೆ ಮನರಂಜನೆಗೇನು ಕಮ್ಮಿಯಿರೋದಿಲ್ಲ. ಡೈಲಾಗ್, ಸೀನ್ಸ್ ಎಲ್ಲವೂ ಕನ್ನಡಿಗರನ್ನು ಸೆಳೆಯುತ್ತವೆ. ಆದರೆ, ಇದೇ ಮೊದಲ ಬಾರಿಗೆ ಬೇರೆ ಶೈಲಿಯ ಸಿನಿಮಾಕ್ಕೆ ಹೈ ಹಾಕಿದ್ದಾರೆ. ಅದೂ ಮಾಸ್ ಸಬ್ಜೆಕ್ಟ್‌ಗೆ. ಹೀಗಾಗಿ 'ಗರಡಿ' ನಿರೀಕ್ಷೆಯನ್ನು ದುಪ್ಪಟ್ಟು ಮಾಡಿವೆ. ಇದರೊಂದಿಗೆ ಚಾಲೆಂಜಿಂಗ್ ಸ್ಟಾರ್ ಇದೇ ಮೊದಲ ಬಾರಿಗೆ ಭಟ್ಟರ ನಿರ್ದೇಶನದಲ್ಲಿ ನಟಿಸಿದ್ದಾರೆ. ಇದು ಸಿನಿ ಪ್ರಿಯರನ್ನು ಸಿನಿಮಾ ನೋಡಲು ತುದಿಗಾಲಲ್ಲಿ ನಿಲ್ಲಿದೆ. ಸದ್ಯಕ್ಕೆ 'ಗರಡಿ' ಸಿನಿಮಾದಲ್ಲಿ ದರ್ಶನ್ ಹೇಗೆ ಕಾಣಿಸಬಹುದು ಅನ್ನೋದಕ್ಕೆ ಎರಡು ಸ್ವಿಲ್‌ಗಳು ಹೊರಬಿದ್ದಿವೆ. ಅವುಗಳು ಹೇಗಿವೆ ನೋಡಿ.
ಗರಡಿಯಲ್ಲಿ ದರ್ಶನ್ ಲುಕ್ ಹೇಗಿದೆ?
ದರ್ಶನ್ ಅಂದರೆ ಮಾಸ್.. ಎಂಟ್ರಿ, ಲುಕ್, ಡೈಲಾಗ್ ಎಲ್ಲವೂ ಮಾಸ್ ಆಗಿಯೇ ಇರುತ್ತವೆ. ಅದರಲ್ಲೂ 'ಗರಡಿ' ಸಿನಿಮಾದಲ್ಲಿ ದರ್ಶನ್ ಹೇಗೆ ಕಾಣಿಸಬಹುದು ಅನ್ನೋದಕ್ಕೆ ಎರಡು ಫೋಟೊಗಳು ಅಭಿಮಾನಿಗಳ ಕೈ ಸೇರಿವೆ. ಅದರಲ್ಲೂ ದರ್ಶನ್ ಮಾಸ್ ಅವತಾರದಲ್ಲಿಯೇ ಕಾಣಿಸುತ್ತಾರೆ. ಕಪ್ಪು ಶರ್ಟ್, ಖಾಕಿ ಪ್ಯಾಂಟ್ ಹಾಕಿ ಕೆಂಪು ಮಣ್ಣು ಹಿಡಿದು ಅಖಾಡಕ್ಕೆ ಇಳಿಯಲು ಸಜ್ಜಾಗಿರೋ ದರ್ಶನ್ ಲುಕ್‌ಗಳು ದರ್ಶನ್ ಫ್ಯಾನ್ಸ್‌ಗೆ ಸಖತ್ ಕಿಕ್ ಕೊಡುತ್ತಿವೆ.

'ಗರಡಿ'ಯಲ್ಲಿ ದರ್ಶನ್ ಅತಿಥಿಗಿಂತಲೂ ಹೆಚ್ಚು
ದರ್ಶನ್ ತಮ್ಮ ಆತ್ಮೀಯರಿಗಾಗಿ ಆಗಾಗ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ಇದೆ. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಸಿನಿಮಾದಿಂದ ಹಿಡಿದು ಯಶಸ್ ಸೂರ್ಯವರೆಗೂ ಅತಿಥಿಯಾಗಿ ನಟಿಸಿದ್ದಾರೆ. 'ಗರಡಿ' ಸಿನಿಮಾದಲ್ಲಿ ದರ್ಶನ್‌ರದ್ದು ಅತಿಥಿ ಪಾತ್ರವೇ ಆಗಿದ್ದರೂ, ಹೆಚ್ಚು ಹೊತ್ತು ತೆರೆಮೇಲೆ ಇರುತ್ತಾರೆ. ಸುಮಾರು 13 ನಿಮಿಷಗಳ ಕಾಲ ಕಾಣಿಸಿಕೊಳ್ಳುತ್ತಾರೆ ಅನ್ನೋ ಮಾತಿದೆ. ಯಶಸ್ ಸೂರ್ಯ ಅಣ್ಣನಾಗಿ ಕುಸ್ತಿ ಅಖಾಡದಲ್ಲಿ ಇಳಿಯಲಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.
'ಗರಡಿ' ಯಾವಾಗ ರಿಲೀಸ್?
ಯೋಗರಾಜ್ ಭಟ್ ನಿರ್ದೇಶನದ 'ಗರಡಿ' ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಸಿನಿಮಾ ಎಲ್ಲಾ ಕೆಲಸವೂ ಬಹುತೇಕ ಮುಗಿದಿದೆ ಎನ್ನಲಾಗುತ್ತಿದೆ. ರಾಜ್ಯೋತ್ಸವದ ತಿಂಗಳು ನವೆಂಬರ್ 10ರಂದು ಈ ಸಿನಿಮಾ ರಿಲೀಸ್ ಆಗುತ್ತಿದೆ. ಯಶಸ್ ಸೂರ್ಯ ಕಮ್‌ಬ್ಯಾಕ್ ಸಿನಿಮಾಗೆ ದರ್ಶನ್ ಸಾಥ್ ಕೊಟ್ಟಿದ್ದು, ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಅನ್ನೋದು ಸದ್ಯಕ್ಕೆ ಕುತೂಹಲ.


Click it and Unblock the Notifications











