ಬರ್ತ್‌ಡೇಗೂ ಮುನ್ನ ಸ್ಟೈಲಿಶ್ ಲುಕ್ ಕೊಟ್ಟ ಗಣೇಶ್; ಫೋಟೋ ಕ್ಲಿಕ್ಕಿಸಿದ ನಿತ್ಯಾ ಪ್ರಕಾಶ್ ಯಾರು?
ಕನ್ನಡದ ಚಿತ್ರರಂಗದಲ್ಲಿ ಶಿವಣ್ಣನನ್ನು ಬಿಟ್ಟರೆ ಕೈ ತುಂಬಾ ಸಿನಿಮಾಗಳನ್ನು ಇಟ್ಟುಕೊಂಡಿರುವ ನಟ ಗೋಲ್ಡನ್ ಸ್ಟಾರ್ ಗಣೇಶ್. 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ಗೆಲ್ಲುತ್ತಿದ್ದಂತೆ ಕನ್ನಡ ಚಿತ್ರರಂಗದಲ್ಲಿ ಗಣೇಶ್‌ಗೆ ಬೇಡಿಕೆ ಹೆಚ್ಚಾಗಿದೆ. ಇದರ ಜೊತೆ ಜೊತೆಗೆ ಜುಲೈ 2 ರಂದು ಗೋಲ್ಡನ್ ಸ್ಟಾರ್ 47ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅಂದು ಹೊಸ ಸಿನಿಮಾಗಳು ಅನೌನ್ಸ್ ಆಗುವ ಸಾಧ್ಯತೆಯಿದೆ. ಹೀಗಾಗಿ ಗಣೇಶ್ ಅಭಿಮಾನಿಗಳು ಡಬಲ್ ಖುಷಿಯಲ್ಲಿದ್ದಾರೆ.
ಗಣೇಶ್ ಬರ್ತ್‌ಡೇಯನ್ನು ಗ್ರ್ಯಾಂಡ್ ಆಗಿ ಸೆಲೆಬ್ರೆಟ್ ಮಾಡಬೇಕು ಅಂದುಕೊಂಡಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಯಾಕಂದ್ರೆ, ಗಣೇಶ್ ಈ ಬಾರಿ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿಲ್ಲ. ಎರಡು ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವುದರಿಂದ ಫ್ಯಾನ್ಸ್ ಜೊತೆ ಬರ್ತ್‌ಡೇ ಸೆಲೆಬ್ರೆಟ್ ಮಾಡಿಕೊಳ್ಳುತ್ತಿಲ್ಲ. ಆದರೆ, ತಮ್ಮ ಅಭಿಮಾನಿಗಳಿಗಾಗಿ ಹೊಸ ಫೋಟೋಶೂಟ್ ಅನ್ನು ಮಾಡಿಸಿ, ಸರ್ಪ್ರೈಸ್ ಕೊಟ್ಟಿದ್ದಾರೆ.

ಹುಟ್ಟುಹಬ್ಬಕ್ಕೂ ಮುನ್ನ ಹೊಸ ಲುಕ್ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಪೋಸ್ ಕೊಟ್ಟಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಹೊಸ ಫೋಟೋಶೂಟ್ ಮೂಲಕ ಮಸ್ತ್ ಗಿಫ್ಟ್ ಕೊಟ್ಟಿದ್ದಾರೆ. ಅಂದ್ಹಾಗೆ ಈ ಫೋಟೋಗಳಲ್ಲಿ ಗಣೇಶ್ ಸಖತ್ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದಾರೆ. ಅಷ್ಟಕ್ಕೂ ಗಣೇಶ್ ಅವರನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು ಕೂಡ ಒಬ್ಬ ಹೀರೋ. ಹಾಗಿದ್ದರೆ ಅವರು ಯಾರು? ಹಿನ್ನೆಲೆ ಏನು? ತಿಳಿಯುವುದಕ್ಕೆ ಮುಂದೆ ಓದಿ.
ಯಾವುದೇ ಹೀರೋ ಅಭಿಮಾನಿಗಳಿಗೆ ಅವರ ಅಚ್ಚು ಮೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸುವುದೆಂದರೆ ಅದು ದೊಡ್ಡ ಹಬ್ಬವೇ ಸರಿ. ಇನ್ನು ಆ ಸ್ಟಾರ್‌ಗೂ ಅಷ್ಟೇ ತಮ್ಮ ಅಭಿಮಾನಿಗಳ ಜೊತೆ ಕೆಲ ಸಮಯ ಕಳೆಯಬೇಕು ಎಂಬ ಆಸೆ. ಆದರೆ, ಗಣೇಶ್ ಈ ಬಾರಿ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಬಿಗ್ ಬಜೆಟ್‌ನಲ್ಲಿ ನಿರ್ಮಾಣ ಆಗುತ್ತಿರುವ 'ಪಿನಾಕ' ಹಾಗೂ ರಮೇಶ್ ಅರವಿಂದ್ ಜೊತೆ ನಟಿಸುತ್ತಿರುವ 'ಯುವರ್ ಸಿನ್ಸಿಯರ್ಲಿ ರಾಮ್' ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಬರ್ತ್‌ಡೇಯನ್ನು ಆಚರಿಸಿಕೊಳ್ಳುತ್ತಿಲ್ಲ.

ಫ್ಯಾನ್ಸ್ ಜೊತೆ ಬರ್ತ್‌ಡೇ ಆಚರಣೆ ಮಾಡಿಕೊಳ್ಳಲು ಸಾಧ್ಯವಾಗದೇ ಇರುವುದಕ್ಕೆ ವಿಷಾದ ವ್ಯಕ್ತಪಡಿಸಿ, ಉಡುಗೊರೆಯನ್ನು ನೀಡಿದ್ದಾರೆ. ತಮ್ಮ ಅಭಿಮಾನಿಗಳಿಗಾಗಿಯೇ ವಿಶೇಷವಾಗಿ ಫೋಟೋಶೂಟ್‌ಗಳನ್ನು ಮಾಡಿಸಿದ್ದಾರೆ. ಆ ಫೋಟೋಗಳು ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿವೆ. ಅಂದ್ಹಾಗೆ, ಈ ಫೋಟೋಗಳನ್ನು ಕ್ಲಿಕ್ಕಿಸಿದ್ದು ನಿತ್ಯಾ ಪ್ರಕಾಶ್. ಇವರು ಹವ್ಯಾಸಿ ಛಾಯಾಗ್ರಾಹಕರು. ಆದರೆ, ಅದಕ್ಕಿಂತಲೂ ಇವರೂ ಒಬ್ಬರ ನಟ.
ನಟ ಗಣೇಶ್‌ಗೆ ಬಹಿರಂಗ ಕ್ಷಮೆ ಕೇಳಿದ ನಿರ್ದೇಶಕ ರಘುರಾಮ್; ಅಷ್ಟಕ್ಕೂ ಏನಾಯ್ತು?
ಹೌದು, ಗಣೇಶ್ ಪತ್ನಿ ಶಿಲ್ಪಾ ಗಣೇಶ್ ನಿರ್ಮಿಸುತ್ತಿರುವ ತುಳು ಸಿನಿಮಾಗೆ ಇವರೇ ಹೀರೋ. ನಿತ್ಯಾ ಪ್ರಕಾಶ್ ಬಂಟ್ವಾಳ ನಾಯಕನಾಗಿ ನಟಿಸುತ್ತಿರುವ ಸಿನಿಮಾ ಈಗಾಗಲೇ ಸೆಟ್ಟೇರಿದೆ. ನಿತ್ಯಾ ಪ್ರಕಾಶ್ ನಟನೆ ಜೊತೆ ಜೊತೆಗೆ ಹವ್ಯಾಸಿ ಛಾಯಾಗ್ರಾಹಕರು ಕೂಡ ಹೌದು. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೇ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
'ಕೃಷ್ಣಂ ಪ್ರಣಯ ಸಖಿ' ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಕೈಯಲ್ಲಿ ಹಲವು ಸಿನಿಮಾಗಳಿವೆ. ಈಗಾಗಲೇ ಬಿಗ್ ಬಜೆಟ್ ಸಿನಿಮಾ 'ಪಿನಾಕ' ಶೂಟಿಂಗ್ ನಡೆಯುತ್ತಿದೆ. ಇನ್ನೊಂದು ಕಡೆ 'ಯುವರ್ಸ್ ಸಿನ್ಸಿಯರ್ಲಿ ರಾಮ್' ಸಿನಿಮಾ ಚಿತ್ರೀಕರಣ ಕೂಡ ಭರದಿಂದ ಆಗಿದೆ. ಅರಸು ಅಂತಾರೆ ನಿರ್ದೇಶಿಸುತ್ತಿರುವ ಸಿನಿಮಾ ಸೆಟ್ಟೇರಿದೆ. ಗಣೇಶ್ ಬರ್ತ್‌ಡೇಗೆ 'ಕೃಷ್ಣಂ ಪ್ರಣಯ ಸಖಿ' ತಂಡ ಹಾಗೂ ಭರ್ಜರಿ ಚೇತನ್ ನಿರ್ದೇಶಿಸುತ್ತಿರುವ ಸಿನಿಮಾಗಳು ಅನೌನ್ಸ್ ಆಗುವ ಸಾಧ್ಯತೆಯಿದೆ. ಒಟ್ನಲ್ಲಿ ಶಿವಣ್ಣ ಬಳಿಕ ಹೆಚ್ಚು ಬ್ಯುಸಿಯಾಗಿರುವ ನಟ ಗೋಲ್ಡನ್ ಸ್ಟಾರ್ ಗಣೇಶ್ ಎನಿಸಿಕೊಂಡಿದ್ದಾರೆ.


Click it and Unblock the Notifications











