»   » 'ಹೆಬ್ಬುಲಿ' ನಿರ್ದೇಶಕ ಕೃಷ್ಣ & ಸುದೀಪ್ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ..

'ಹೆಬ್ಬುಲಿ' ನಿರ್ದೇಶಕ ಕೃಷ್ಣ & ಸುದೀಪ್ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ..

Posted By:
Subscribe to Filmibeat Kannada

ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು ಅಬ್ಬರಿಸುತ್ತಿರುವ 'ಹೆಬ್ಬುಲಿ' ಮೂರನೇ ವಾರಕ್ಕೆ ಕಾಲಿಟ್ಟಿದ್ದು ಘರ್ಜಿಸುತ್ತಿದೆ. ಚಿತ್ರದ ನಿರ್ದೇಶಕ ಎಸ್.ಕೃಷ್ಣ ಅವರು ಹಲವು ಕುತೂಹಲಕಾರಿ ತಿರುವುಗಳಿಂದ ಪ್ರೇಕ್ಷಕರಿಗೆ ಎಲ್ಲೂ ಬೋರ್ ಆಗದಂತೆ ಜಾಗರೂಕತೆಯಿಂದ ಚಿತ್ರಕಥೆ ರಚಿಸಿರುವುದು, ಕಿಚ್ಚ ಸುದೀಪ್ ರನ್ನು ಪ್ಯಾರಾ ಕಮಾಂಡರ್ ಆಗಿ ಹೊಸ ಸ್ಟೈಲಿಶ್ ಗೆಟಪ್ ನಲ್ಲಿ ತೋರಿಸಿರುವುದು ಚಿತ್ರದ ಯಶಸ್ಸನ್ನು ಎತ್ತರಕ್ಕೆ ಕೊಂಡುಯ್ಯುತ್ತಿದೆ.['ಹೆಬ್ಬುಲಿ' ಚಿತ್ರದ ಬಗ್ಗೆ ನಿರ್ದೇಶಕ ಕೃಷ್ಣ ಹೇಳಿದಿಷ್ಟು..]

ತಮ್ಮ ನಿರ್ದೇಶನದ 'ಹೆಬ್ಬುಲಿ' ಚಿತ್ರ ಗ್ಯಾಂಡ್ ಹಿಟ್ ಪಡೆದ ಸಂತಸದಲ್ಲಿರುವ ಡೈರೆಕ್ಟರ್ ಎಸ್.ಕೃಷ್ಣ ಅವರು, ಈಗ ತಮ್ಮ ಮುಂದಿನ ಚಿತ್ರಕ್ಕೂ ಸುದೀಪ್ ಗೆ ನಿರ್ದೇಶನ ಮಾಡುವ ಬಗ್ಗೆ ಹೇಳಿದ್ದಾರೆ. ಈ ಬಗ್ಗೆ ಡೀಟೇಲ್ಸ್ ಇಲ್ಲಿದೆ ನೋಡಿ.


ಎಸ್.ಕೃಷ್ಣ ಮುಂದಿನ ಸಿನಿಮಾ ಸಹ ಸುದೀಪ್ ಗೆ

'ಹೆಬ್ಬುಲಿ' ಸೂಪರ್ ಹಿಟ್ ಯಶಸ್ಸಿನಲ್ಲಿರುವ ನಿರ್ದೇಶಕ ಎಸ್.ಕೃಷ್ಣ ತಮ್ಮ ಮುಂದಿನ ಸಿನಿಮಾಗು ಕಿಚ್ಚ ಸುದೀಪ್ ಅವರಿಗೆ ಆಕ್ಷನ್ ಕಟ್ ಹೇಳುತ್ತಾರಂತೆ. ಈಗಂತ ಅವರೇ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಹಾಕಿಕೊಂಡಿದ್ದಾರೆ.


ಸ್ಕ್ರಿಪ್ಟಿಂಗ್ ಕಾರ್ಯದಲ್ಲಿ ಎಸ್.ಕೃಷ್ಣ

ತಾವೇ ಚಿತ್ರಕಥೆ ಬರೆದಿದ್ದ ಸುದೀಪ್ ಅಭಿನಯದ 'ಹೆಬ್ಬುಲಿ' ಚಿತ್ರವನ್ನು ಅವರೇ ನಿರ್ದೇಶನ ಮಾಡಿದ್ದರು. ಈಗ ಮತ್ತೆ ಸುದೀಪ್ ಗೆ ಆಕ್ಷನ್ ಕಟ್ ಹೇಳಲಿರುವ ಮುಂದಿನ ಸಿನಿಮಾಗೂ ಅವರೇ ಸ್ಕ್ರಿಪ್ಟಿಂಗ್ ರೆಡಿ ಮಾಡುತ್ತಿದ್ದಾರೆ. ಒಮ್ಮೆ ಕಂಪ್ಲೀಟ್ ಆದ ತಕ್ಷಣ ಚಿತ್ರದ ಬಗ್ಗೆ ಪ್ರಕಟಣೆ ಮಾಡುವ ಬಗ್ಗೆ ಟ್ವೀಟ್ ಮಾಡಿದ್ದಾರೆ.


ನಿರ್ಮಾಪಕರು ಯಾರು?

ಎಸ್.ಕೃಷ್ಣ ತಮ್ಮ ಮುಂದಿನ ಸಿನಿಮಾದ ನಿರ್ಮಾಣ ಹೊಣೆ ಯಾರದ್ದು ಎಂಬ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದರೆ ಒಮ್ಮೆ ಚಿತ್ರಕಥೆ ಕಂಪ್ಲೀಟ್ ಆದ ನಂತರ ಈ ಬಗ್ಗೆ ಮಾಹಿತಿ ಹೊರಬೀಳಲಿದೆ.


ಟೈಟಲ್ ಏನು?

ಚಿತ್ರದ ಟೈಟಲ್ ಇನ್ನು ಫಿಕ್ಸ್ ಆಗಿಲ್ಲ.


ಕೃಷ್ಣ ಮುಂದಿನ ನಿರ್ದೇಶನ ಬಗ್ಗೆ ಕಾಡುತ್ತಿರುವ ಡೌಟ್..

'ಜಾಗ್ವಾರ್' ಚಿತ್ರದ ನಂತರ ನಿಖಿಲ್ ಕುಮಾರ್ ಎರಡನೇ ಸಿನಿಮಾವನ್ನು ಕೃಷ್ಣ ನಿರ್ದೇಶನ ಮಾಡುತ್ತಾರೆ ಎಂಬ ಸುದ್ದಿ ಈಗಾಗಲೇ ಹರಿದಾಡಿದೆ. ಈ ನಡುವೆ ಕೃಷ್ಣ ತಮ್ಮ ಮುಂದಿನ ಸಿನಿಮಾ ಸಹ ಕಿಚ್ಚ ಸುದೀಪ್ ಸರ್ ಜೊತೆ ಎಂದು ಟ್ವೀಟ್ ಮಾಡಿರುವುದು ತಲೆಗೆ ಸಣ್ಣ ಹುಳ ಬಿಟ್ಟಂತಾಗಿದೆ. ಆದ್ದರಿಂದ ಕೃಷ್ಣ ಮೊದಲು ನಿಖಿಲ್ ಕುಮಾರ್ ಗೆ ಡೈರೆಕ್ಟ್ ಮಾಡುತ್ತಾರಾ ಅಥವಾ ಸುದೀಪ್ ಗೆ ಡೈರೆಕ್ಟ್ ಮಾಡುತ್ತಾರಾ ಎಂಬುದರ ಬಗ್ಗೆ ಅವರೇ ಕ್ಲಾರಿಟಿ ಕೊಡಬೇಕಿದೆ.['ನಿಖಿಲ್ ಕುಮಾರ್'ಗೆ ಆಕ್ಷನ್ ಕಟ್ ಹೇಳುವ ಕನ್ನಡದ ನಿರ್ದೇಶಕ ಯಾರು?]


'ಹೆಬ್ಬುಲಿ' ವಿಜಯಯಾತ್ರೆಯಲ್ಲಿ ಕೃಷ್ಣ ಬಿಜಿ

ಸದ್ಯದಲ್ಲಿ ನಿರ್ದೇಶಕ ಎಸ್.ಕೃಷ್ಣ ಅವರು 'ಹೆಬ್ಬುಲಿ' ವಿಜಯಯಾತ್ರೆ, ಪ್ರಚಾರ ಕಾರ್ಯ ಅಂತ ಫುಲ್ ಬಿಜಿಯಾಗಿದ್ದಾರೆ.


English summary
'Hebbuli' Director Krishna will Direct a Film with Sudeep Again. Krishna anounced this in his twitter account recently.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada