»   » 'ಹೆಬ್ಬುಲಿ' ಚಿತ್ರದ ಬಗ್ಗೆ ನಿರ್ದೇಶಕ ಕೃಷ್ಣ ಹೇಳಿದಿಷ್ಟು..

'ಹೆಬ್ಬುಲಿ' ಚಿತ್ರದ ಬಗ್ಗೆ ನಿರ್ದೇಶಕ ಕೃಷ್ಣ ಹೇಳಿದಿಷ್ಟು..

Posted By:
Subscribe to Filmibeat Kannada

ಸಿನಿಮಾಗಳಿಗೆ ಛಾಯಾಗ್ರಹಣ ಮಾಡುತ್ತಿದ್ದ ಎಸ್.ಕೃಷ್ಣ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದು ಅಚಾನಕ್ಕಾಗಿರಬಹುದು. ಆದ್ರೆ, ನಿರ್ದೇಶಕನಾಗಬೇಕು ಎಂಬ ಕನಸು ಅವರಿಗೆ ಮೊದಲಿನಿಂದಲೂ ಇತ್ತು.

ಹಾಗೆ, ಡೈರೆಕ್ಟರ್ ಸೀಟ್ ನಲ್ಲಿ ಕೂತರೆ... ಮೊದಲು ಇದೇ ಸಿನಿಮಾ ಮಾಡಬೇಕು ಅಂತ 'ಹೆಬ್ಬುಲಿ' ಸ್ಕ್ರಿಪ್ಟ್ ರೆಡಿ ಮಾಡಿಟ್ಟುಕೊಂಡಿದ್ದರಂತೆ ಎಸ್.ಕೃಷ್ಣ. ಆದರೂ, ಅವರು ಮೊದಲು ಆಕ್ಷನ್ ಕಟ್ ಹೇಳಿದ್ದು 'ಗಜಕೇಸರಿ' ಚಿತ್ರಕ್ಕೆ.['ಹೆಬ್ಬುಲಿ' ಬೇಟೆ ಇದೇ ಗುರುವಾರದಿಂದಲೇ.. ಬದಲಾವಣೆ ಇಲ್ಲ..!]


ತಮ್ಮ ಸಿನಿ ಜರ್ನಿ ಹಾಗೂ 'ಹೆಬ್ಬುಲಿ' ಚಿತ್ರದ ಬಗ್ಗೆ ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಸ್.ಕೃಷ್ಣ ಹೇಳಿದಿಷ್ಟು....


ನಿರ್ದೇಶಕ ಆಗಿದ್ದು ಹೇಗೆ.?

''ನಿರ್ದೇಶಕ ಆಗಿದ್ದೇ ಸಡನ್ ಡಿಸಿಷನ್. ಒಂದು ದಿನ ಜಯಣ್ಣ ಫೋನ್ ಮಾಡಿ, ''ಒಂದು ಸಿನಿಮಾ ಡೈರೆಕ್ಟ್ ಮಾಡ್ತೀಯಾ'' ಅಂತ ಕೇಳಿದರು. ''ಯೋಚನೆ ಮಾಡಿ ಹೇಳ್ತೀನಿ'' ಅಂದೆ. ''ಟೈಮ್ ಇಲ್ಲ ದೇವಸ್ಥಾನದಲ್ಲಿ ಇದ್ದೀನಿ...ಈಗಲೇ ಹೇಳಬೇಕು'' ಅಂದರು. ಆಗ, ''ಸರಿ'' ಅಂದೆ. 'ಗಜಕೇಸರಿ' ಶುರು ಆಯ್ತು. ಅಲ್ಲಿಂದ ನನ್ನ ನಿರ್ದೇಶನದ ಜರ್ನಿ ಸ್ಟಾರ್ಟ್ ಆಯ್ತು'' - ಎಸ್.ಕೃಷ್ಣ[ಎಲ್ಲೇ ಹೋದ್ರೂ ಸುದೀಪ್ 'ರನ್ನ' ನೆನೆಯದೇ ರವಿಶಂಕರ್ ಮಾತು ಮುಗಿಸೋಲ್ಲ.!]


'ಹೆಬ್ಬುಲಿ' ಸ್ಕ್ರಿಪ್ಟ್ ರೆಡಿ ಇತ್ತು

''ಹೆಬ್ಬುಲಿ' ನನ್ನ ನಿರ್ದೇಶನದ ಮೊದಲ ಸಿನಿಮಾ ಆಗ್ಬೇಕಿತ್ತು. 'ಗಜಕೇಸರಿ' ಮೊದಲೇ 'ಹೆಬ್ಬುಲಿ' ಸ್ಕ್ರಿಪ್ಟ್ ರೆಡಿ ಇತ್ತು'' - ಎಸ್.ಕೃಷ್ಣ ['ಹೆಬ್ಬುಲಿ' ನೋಡಲು ಈಗಲೇ ಟಿಕೆಟ್ ಬುಕ್ ಮಾಡಿ.. ಇಲ್ಲಾಂದ್ರೆ ಲಾಸ್ ನಿಮಗೆ.!]


ಸುದೀಪ್ ರಿಂದ ಕಲಿಯುವುದು ಬಹಳ ಇದೆ

''ಕೆಂಪೇಗೌಡ' ಚಿತ್ರದಲ್ಲಿ ಸುದೀಪ್ ಸರ್ ಜೊತೆ ಕೆಲಸ ಮಾಡುವಾಗ ಕಲಿತಿದ್ದು 'ಹೆಬ್ಬುಲಿ' ಚಿತ್ರದಲ್ಲಿ ಸಹಾಯ ಆಯ್ತು. 'ಹೆಬ್ಬುಲಿ' ಚಿತ್ರದಲ್ಲಿ ಸುದೀಪ್ ಸರ್ ರವರಿಂದ ತುಂಬಾ ಕಲಿತಿದ್ದೇನೆ'' - ಎಸ್.ಕೃಷ್ಣ


ಎಲ್ಲರ ಶ್ರಮ ಕಾರಣ

''ಸಿನಿಮಾ ಶುರು ಆಗುವ ಆರು ತಿಂಗಳ ಹಿಂದಿನಿಂದ ತುಂಬಾ ಹೋಮ್ ವರ್ಕ್ ಮಾಡಿದ್ವಿ. ನನ್ನ ಟೆಕ್ನಿಕಲ್ ಟೀಮ್ ನನಗೆ ತುಂಬಾ ಸಪೋರ್ಟ್ ಮಾಡಿದರು. ಇವತ್ತು ಸಿನಿಮಾ ಚೆನ್ನಾಗಿ ಬಂದಿದೆ ಅಂದ್ರೆ ಅದಕ್ಕೆ ಎಲ್ಲರ ಶ್ರಮ ಕಾರಣ'' - ಎಸ್.ಕೃಷ್ಣ


English summary
Kannada Director S.Krishna spoke about Kiccha Sudeep during 'Hebbuli' Press Meet.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada