»   » 'ನಿಖಿಲ್ ಕುಮಾರ್'ಗೆ ಆಕ್ಷನ್ ಕಟ್ ಹೇಳುವ ಕನ್ನಡದ ನಿರ್ದೇಶಕ ಯಾರು?

'ನಿಖಿಲ್ ಕುಮಾರ್'ಗೆ ಆಕ್ಷನ್ ಕಟ್ ಹೇಳುವ ಕನ್ನಡದ ನಿರ್ದೇಶಕ ಯಾರು?

Posted By:
Subscribe to Filmibeat Kannada

'ಜಾಗ್ವಾರ್' ಚಿತ್ರದ ನಂತರ ನಿಖಿಲ್ ಕುಮಾರ್ ಎರಡನೇ ಚಿತ್ರ ಯಾವುದು ಎಂಬ ಚರ್ಚೆ ಆಗಲೇ ಶುರುವಾಗಿಬಿಟ್ಟಿತ್ತು. ನಿಖಿಲ್ ಅವರ 2ನೇ ಚಿತ್ರಕ್ಕೆ ತೆಲುಗಿನ ಖ್ಯಾತ ನಿರ್ದೇಶಕರೊಬ್ಬರು ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗುತ್ತಿತ್ತು. ಆದ್ರೀಗ, ನಿಖಿಲ್ ಅವರ ಕಡೆಯಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ.

ಹೌದು, ನಿಖಿಲ್ ಅವರ ಮುಂದಿನ ಚಿತ್ರವನ್ನ ಕನ್ನಡದವರೇ ನಿರ್ದೇಶನ ಮಾಡಲಿದ್ದು, 'ಹೆಬ್ಬುಲಿ' ಖ್ಯಾತಿಯ ಕೃಷ್ಣ ಆಕ್ಷನ್ ಕಟ್ ಹೇಳಲಿದ್ದಾರಂತೆ. ಈ ಹಿಂದೆ ಬಹುದ್ದೂರ್ ಚೇತನ್ ಹಾಗೂ ಹರ್ಷ ಅವರ ಹೆಸರು ಕೇಳಿಬಂದಿತ್ತಾದರೂ, ಕೃಷ್ಣ ಅವರ ಹೆಸರು ಅಂತಿಮವಾಗಿದ್ದಾರಂತೆ.[ಎಕ್ಸ್ ಕ್ಲೂಸಿವ್: 'ಜಾಗ್ವಾರ್' ನಾಯಕ ನಿಖಿಲ್ ಕುಮಾರ್ ಸಂದರ್ಶನ ]

Nikhil Kumar's Second Film To Be Direct Hebbuli Krishna

ಈಗಾಗಲೇ ಒನ್ ಲೈನ್ ಕಥೆ ಕೇಳಿರುವ ಹೆಚ್.ಡಿ.ಕುಮಾರ್ ಸ್ವಾಮಿ ಅವರು, ಈ ಚಿತ್ರವನ್ನ ತಾವೇ ನಿರ್ಮಾಣ ಮಾಡಲು ನಿರ್ಧರಿಸಿದ್ದಾರಂತೆ. ಇದೊಂದು ಯೂತ್ಸ್ ಗೆ ಇಷ್ಟವಾಗುವಂತಹ ಕಥೆಯಾಗಿದ್ದು, ಮನರಂಜನೆಯಿಂದ ಕೂಡಿದೆಯಂತೆ.[ವಿಮರ್ಶೆ : ಮಿಂಚಿನ ವೇಗದ 'ಜಾಗ್ವಾರ್' ಚಿಂದಿ ಚಿತ್ರಾನ್ನ]

Nikhil Kumar's Second Film To Be Direct Hebbuli Krishna

ಸದ್ಯ, ನಿರ್ದೇಶಕ ಕೃಷ್ಣ 'ಹೆಬ್ಬುಲಿ' ಚಿತ್ರದ ಬಿಡುಗಡೆಯ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಮತ್ತೊಂದೆಡೆ ನಿಖಿಲ್ ಕುಮಾರ್ ವಿದೇಶದಲ್ಲಿ ತಾಲೀಮು ನಡೆಸುತ್ತಿದ್ದಾರೆ. ಎಲ್ಲ ಅಂದುಕೊಂಡಂತೆ ಆದ್ರೆ, ಜೂನ್ ಹೊತ್ತಿಗೆ ನಿಖಿಲ್ ಕುಮಾರ್ ಮತ್ತು ಕೃಷ್ಣ ಕಾಂಬಿನೇಷನ್ ನಲ್ಲಿ ಎರಡನೇ ಸಿನಿಮಾ ಶುರುವಾಗಲಿದೆಯಂತೆ.

English summary
H. D. Kumaraswamy’s son Nikhil Kumar made his big screen debut recently with a Kannada film titled ‘Jaguar’. Reportedly, this second film starring Nikhil will be helmed by Krishna, Who directed Kannada Movies like ‘Gajakesari’ and 'Hebbuli'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada