»   » ರಾಕಿಂಗ್ ಸ್ಟಾರ್ ಯಶ್ ಸಾಹಸ ತರಬೇತಿಯ ಅಪರೂಪದ ಚಿತ್ರಗಳು

ರಾಕಿಂಗ್ ಸ್ಟಾರ್ ಯಶ್ ಸಾಹಸ ತರಬೇತಿಯ ಅಪರೂಪದ ಚಿತ್ರಗಳು

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಈಗ ಕೇವಲ ನಟ ಅಲ್ಲ. ಸಮಾಜದ ಬಗ್ಗೆ ಹೆಚ್ಚು ಕಾಳಜಿಯುಳ್ಳ ಒಬ್ಬ ಚಿಂತಕ. ಯೂತ್ಸ್‌ಗಳ ರೋಲ್ ಮಾಡೆಲ್ ಆಗಿರುವ ಯಶ್ ಪರಿಸರ ಸಂರಕ್ಷಣೆ, ಜಲಸಂರಕ್ಷಣೆ ಬಗ್ಗೆ ದೂರದೃಷ್ಟಿ ಇಟ್ಟುಕೊಂಡು ಕರ್ನಾಟಕದ ರೈತರಿಗೆ ಬೆನ್ನಲುಬಾಗಿ ಹಲವು ಕೆಲಸಗಳನ್ನು ಮಾಡುತ್ತಿದ್ದಾರೆ. ಅವರು ಈ ರೀತಿ ಇತರರಿಗೆ ನೆರವಾಗಲು ಸಾಧ್ಯವಾಗಿರುವುದು ಸಿನಿ ಜಗತ್ತಿನಲ್ಲಿ ತಾರೆಯಾಗಿ ಮಿಂಚಲು ಪಟ್ಟ ಶ್ರಮ. ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ಅವರು ಪಟ್ಟ ಶ್ರಮಕ್ಕೆ ಉದಾಹರಣೆಯಾಗಿ ಅವರು ಸಾಹಸ ತರಬೇತಿ ಪಡೆಯುತ್ತಿದ್ದಾಗ ತೆಗೆದ ಅಪರೂಪದ ಫೋಟೋಗಳನ್ನು ನಿಮಗೆ ತೋರಿಸುತ್ತಿದ್ದೇವೆ ನೋಡಿ.

In Pics: Rocking star yash in Adventure training

ಬರಗಾಲದಲ್ಲಿ ಉತ್ತರ ಕರ್ನಾಟಕದ ಜನತೆಗೆ ಸ್ವಂತ ಹಣದಲ್ಲಿ ಕುಡಿಯುವ ನೀರು ಪೂರೈಕೆ ಮಾಡಿದ ಯೂತ್ ಐಕಾನ್ ಯಶ್ ಸಾಹಸ ಕಲೆ ತರಬೇತಿ ಪಡೆಯುತ್ತಿರುವ ಈ ಮೇಲಿನ ಫೋಟೋ ನೋಡಿ.['ಕೆ.ಜಿ.ಎಫ್' ಚಿತ್ರದಿಂದ ಬಾಲಿವುಡ್ ತಲುಪಿದೆ ಯಶ್ ಜನಪ್ರಿಯತೆ]

In Pics: Rocking star yash in Adventure training

ರಾಕಿಂಗ್ ಸ್ಟಾರ್ ಯಶ್ ರವರು 'ಲಕ್ಕಿ', 'ಜಾನು', ಡ್ರಾಮಾ' ಚಿತ್ರಗಳಲ್ಲಿ ಅಭಿನಯಿಸಿದ 2012ನೇ ಇಸವಿಯಲ್ಲಿ ಹಲವು ಸಾಹಸ ಕಲೆಗಳನ್ನು ಕಲೆಯುವುದರಲ್ಲಿಯೂ ಬ್ಯುಸಿ ಆಗಿದ್ದರು. ಆ ವೇಳೆ ಈ ಮೇಲಿನ ಅಪರೂಪದ ಫೋಟೋವನ್ನು ಸೆರೆಹಿಡಿಯಾಲಾಗಿದೆ.

In Pics: Rocking star yash in Adventure training

ಪ್ರತಿಯೊಂದು ಚಿತ್ರದಲ್ಲಿಯ ತಮ್ಮ ಪಾತ್ರಕ್ಕೆ ತಕ್ಕಂತೆ ಯಶ್ ತಮ್ಮ ದೇಹವನ್ನು ದಂಡಿಸಿ ಮಾರ್ಪಾಡು ಮಾಡಿಕೊಳ್ಳುತ್ತಾರೆ. ಅಲ್ಲದೇ ಪಾತ್ರಕ್ಕೆ ಬೇಕಾದ ಎಲ್ಲಾ ಅಗತ್ಯ ತಯಾರಿ ಮಾಡಿಕೊಳ್ಳುತ್ತಾರೆ. ಅದು ಹೇರ್ ಸ್ಟೈಲ್ ಆಗಿರಬಹುದು ಅಥವಾ ಫಿಟ್ ನೆಸ್ ಗೆ ಸಂಬಂಧಿಸಿರಬಹುದು.

In Pics: Rocking star yash in Adventure training

ಯಶ್ ಈ ಹಿಂದೆ 'ಗಜಕೇಸರಿ', 'ಮಾಸ್ಟರ್ ಪೀಸ್' ಮತ್ತು 'ಸಂತು ಸ್ಟ್ರೈಟ್ ಫಾರ್ವರ್ಡ್' ಚಿತ್ರಗಳಿಗೆ ಸಖತ್ ವರ್ಕೌಟ್ ಮಾಡಿ ಕಟ್ಟುಮಸ್ತಾದ ಮೈಕಟ್ಟಿನಲ್ಲಿ ಕಾಣಿಸಿಕೊಂಡಿದ್ದರು. ಅಂತೆಯೇ ಈಗ 'ಕೆ.ಜಿ.ಎಫ್' ಚಿತ್ರಕ್ಕಾಗಿ ಗಡ್ಡ ಬಿಟ್ಟು ವಿಭಿನ್ನ ಲುಕ್‌ ನಲ್ಲಿ ಗಮನಸೆಳೆದಿದ್ದಾರೆ. ಆದರೆ ಅಭಿನಯಕ್ಕೆ ಬೇಕಾದ ಅಗತ್ಯ ಕಲೆಗಳ ತರಬೇತಿ ಪಡೆಯುವುದರಲ್ಲಿ ಯಶ್ ತಾವು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಕಾಲದಿಂದಲೂ ಶ್ರಮ ಪಟ್ಟಿದ್ದಾರೆ ಎಂಬುದು ಈ ಅಪರೂಪದ ಫೋಟೋಗಳಿಂದ ತಿಳಿಯುತ್ತದೆ.[ಕುತೂಹಲ ಹುಟ್ಟಿಸಿದ 'ಕೆ.ಜಿ.ಎಫ್' ಫಸ್ಟ್ ಲುಕ್: ಯಶ್ ಪಾತ್ರ ಏನು?]

English summary
In Pics: Rocking star yash in Adventure training.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada