»   » ಕುತೂಹಲ ಹುಟ್ಟಿಸಿದ 'ಕೆ.ಜಿ.ಎಫ್' ಫಸ್ಟ್ ಲುಕ್: ಯಶ್ ಪಾತ್ರ ಏನು?

ಕುತೂಹಲ ಹುಟ್ಟಿಸಿದ 'ಕೆ.ಜಿ.ಎಫ್' ಫಸ್ಟ್ ಲುಕ್: ಯಶ್ ಪಾತ್ರ ಏನು?

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು 'ಸಂತು ಸ್ಟ್ರೈಟ್ ಫಾರ್ವಡ್' ಚಿತ್ರದ ನಂತರ ಅವರ ಮುಂದಿನ ಸಿನಿಮಾ ಯಾವುದಿರಬಹುದು ಎಂಬ ಕುತೂಹಲ ಇಟ್ಟುಕೊಂಡಿದ್ದರು. ಸಿನಿ ಪ್ರಿಯರ ಈ ಕುತೂಹಲಕ್ಕೆ ಯಶ್ ಹುಟ್ಟುಹಬ್ಬದಂದು ಬಿಡುಗಡೆ ಆಗಿದ್ದ ಕೆ.ಜಿ.ಎಫ್ ಚಿತ್ರದ ಮೊದಲ ಪೋಸ್ಟರ್ ಬ್ರೇಕ್ ಬಿದ್ದಿತ್ತು. ನಂತರ ಎಲ್ಲೂ ಸದ್ದು ಮಾಡದ ಚಿತ್ರತಂಡವೀಗ 'ಕೆ.ಜಿ.ಎಫ್' ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದೆ.

1970 ರ ದಶಕದ ಚಿತ್ರಕಥೆ ಹೊಂದಿರುವ 'ಕೆ.ಜಿ.ಎಫ್' ಚಿತ್ರದ ಫಸ್ಟ್ ಲುಕ್ ಅನ್ನು ಯಶ್ ತಮ್ಮ ಟ್ವಿಟರ್ ಖಾತೆಯಲ್ಲಿ ಇಂದು ಶೇರ್ ಮಾಡಿದ್ದು, ಚಿತ್ರದ ಬಗ್ಗೆ ಮತ್ತು ಯಶ್ ಲುಕ್ ಬಗ್ಗೆ ಇದ್ದ ಅಭಿಮಾನಿಗಳ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ.

Yash Starrer 'KG'F Movie First Look Released today (may 3rd)

ಅಂದಹಾಗೆ ಯಶ್ ತಮ್ಮ ಹಿಂದಿನ ಮಾಸ್ ಸಿನಿಮಾಗಳಿಗಿಂತ ವಿಭಿನ್ನವಾಗಿ 'ಕೆ.ಜಿ.ಎಫ್' ಫಸ್ಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಸ್ಯಾಂಡಲ್ ವುಡ್ ಸಿನಿ ಪ್ರಿಯರ ತಲೆಯೊಳಗೆ ಹುಳ ಬಿಟ್ಟಿದ್ದಾರೆ. ಯಾಕಂದ್ರೆ ಅವರ 'ಕೆ.ಜಿ.ಎಫ್' ಚಿತ್ರದ ಮೊದಲ ಲುಕ್ ಅಷ್ಟೊಂದು ಡಿಫರೆಂಟ್ ಆಗಿ ಕಾಣುತ್ತಿದೆ. ಚಿತ್ರವನ್ನು ಗಮನಿಸಿದರೆ ಯಶ್ ಜೀತದಾಳು ಪಾತ್ರ ನಿರ್ವಹಿಸುತ್ತಿದ್ದಾರಾ? ಕಳ್ಳನಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಾ? ಅಥವಾ ಜೀತದಾಳುಗಳನ್ನು ರಕ್ಷಿಸುವ ಸರದಾರನಾಗಿ, ಐತಿಹಾಸಿಕ ಪಾತ್ರವನ್ನು ಅಭಿನಯಿಸುತ್ತಿದ್ದಾರಾ.. ಎಂಬ ಹಲವು ನಿರೀಕ್ಷೆಗಳನ್ನು ಹುಟ್ಟಿಸಿದೆ. ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗಬೇಕೆಂದರೇ ಸ್ವಲ್ಪ ದಿನಗಳ ಕಾಲ ಕಾಯಲೇಬೇಕಾಗಿದೆ. ಜೊತೆಗೆ ಫಸ್ಟ್ ಲುಕ್ ನಲ್ಲಿ ಯಶ್ ಹಿಂದೆ ನಿಂತಿರುವ ಜನರ ಬಗ್ಗೆಯೂ ಹಲವು ಪ್ರಶ್ನೆಗಳು ಹುಟ್ಟುತ್ತವೆ.

ಇನ್ನೂ ಚಿತ್ರದಲ್ಲಿ ಯಶ್ ಗೆ 24 ವರ್ಷದ ಬ್ಯೂಟಿ ಕ್ವೀನ್ ಶ್ರೀನಿಧಿ ಶೆಟ್ಟಿ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದು, 'ಕೆ.ಜಿ.ಎಫ್' ಫಸ್ಟ್ ಲುಕ್ ನೋಡಿದ ನಂತರ ನಟಿ ಇನ್ಯಾವ ರೀತಿಯಲ್ಲಿ ಕಾಣಿಸಿಕೊಳ್ಳಬಹುದು ಎಂಬ ಕ್ಯೂರಿಯಾಸಿಟಿ ಹುಟ್ಟುತ್ತದೆ. 'ಉಗ್ರಂ' ಖ್ಯಾತಿಯ ಪ್ರಶಾಂತ್ ನೀಲ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಹೊಂಬಾಳೆ ಫಿಲ್ಮ್ ಅಡಿಯಲ್ಲಿ ವಿಜಯ್ ಕಿರಗಂದೂರ್ ನಿರ್ಮಾಣ ಮಾಡುತ್ತಿದ್ದಾರೆ.['ಕಾಮಿಡಿ ಕಿಲಾಡಿ' ನಯನಗೆ 'ಯಶ್' ಕಡೆಯಿಂದ ಬಂದ ಬಂಪರ್ ಆಫರ್ ಇದು.!]

English summary
Rocking Star Yash Starrer 'KGF' Movie First Look Released today (May 3). The Movie Directed by Prashanth Neel.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada