Ind Vs Pak 2023: "ಪಾಕಿಸ್ತಾನ ತಂಡ ಇಷ್ಟೇ ಸ್ಕೋರ್ ಮಾಡುತ್ತೆ".. ಶಿವಣ್ಣ ಕೊಟ್ಟಿದ್ದ ಸ್ಕೋರ್ ಟಾರ್ಗೆಟ್ ಎಷ್ಟಿತ್ತು?

ನಿನ್ನೆ (ಅಕ್ಟೋಬರ್ 14) ಭಾರತ Vs ಪಾಕಿಸ್ತಾನ ನಡುವೆ ಹೈ ವೋಲ್ಟೇಜ್ ಪಂದ್ಯ ನಡೆದಿದೆ. ಸಂಪ್ರದಾಯಕ ಎದುರಾಳಿ ಪಾಕಿಸ್ತಾನ ನಡುವೆ ನಡೆಯೋ ಪಂದ್ಯ ಯಾವಾಲೂ ಭಾರತೀಯರಿಗೆ ಸ್ಪೆಷಲ್ ಆಗಿರುತ್ತೆ. ಸೀಟಿನ ತುದಿಯಿಂದ ಅಲ್ಲಾಡದೆ ಕೂರುವ ಅದೆಷ್ಟೋ ಕ್ಷಣಗಳು ಇವೆ. ಇನ್ನು ಸಿನಿಮಾ ತಾರೆಯರೂ ಕೂಡ ತಮ್ಮೆಲ್ಲಾ ಕೆಲಸವನ್ನು ಬಿಟ್ಟು ಭಾರತ Vs ಪಾಕಿಸ್ತಾನ ಪಂದ್ಯವನ್ನು ವೀಕ್ಷಣೆ ಮಾಡುತ್ತಾರೆ.

ಭಾರತ Vs ಪಾಕಿಸ್ತಾನ ಪಂದ್ಯ ಕನ್ನಡಿಗರ ಪಾಲಿಗೆ ಮತ್ತಷ್ಟು ವಿಶೇಷವಾಗಿತ್ತು. ಯಾಕಂದ್ರೆ, ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಈ ಪಂದ್ಯದ ಭಾಗವಾಗಿದ್ದರು. ಸ್ಟಾರ್‌ ಸ್ಪೋರ್ಟ್ಸ್ ಸ್ಟುಡಿಯೋದಲ್ಲಿ ಕ್ರಿಕೆಟ್ ದಿಗ್ಗಜರೊಂದಿಗೆ ಶಿವಣ್ಣ ಕೂಡ ಕಾಮೆಂಟರಿ ಮಾಡಿದ್ದಾರೆ.

Ind vs. Pak 2023: Shivarajkumar prediction of Pakistan scoring under 225 becomes true

'ಘೋಸ್ಟ್' ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿರುವ ಶಿವಣ್ಣ 'ಭಾರತ Vs ಪಾಕಿಸ್ತಾನ' ಪಂದ್ಯದ ಕಾಮೆಂಟೇಟರ್ ಆಗಿದ್ದರು. ಈ ವೇಳೆ ಶಿವಣ್ಣ ಪಾಕಿಸ್ತಾನ ಇಷ್ಟೇ ಸ್ಕೋರ್ ಮಾಡುತ್ತೆ ಎಂದು ಭವಿಷ್ಯ ನುಡಿದಿದ್ದರು. ಅದು ಅಕ್ಷರಶ: ನಿಜವಾಗಿದೆ. ಹಾಗಿದ್ದರೆ, ಶಿವಣ್ಣ ಕೊಟ್ಟಿದ್ದ ಸ್ಕೋರ್ ಎಷ್ಟು? ತಿಳಿಯಲು ಮುಂದೆ ಓದಿ.

ಭಾರತ Vs ಪಾಕಿಸ್ತಾನದಲ್ಲಿ ಶಿವಣ್ಣ

ಸ್ಟಾರ್‌ ಸ್ಪೋರ್ಟ್ಸ್ ಕನ್ನಡ ಭಾರತ Vs ಪಾಕಿಸ್ತಾನ ಪಂದ್ಯಕ್ಕೂ ಮೊದಲೇ ವಿಶೇಷವಾದ ಪ್ರೋಮೊ ರಿಲೀಸ್ ಮಾಡಿತ್ತು. ಕಾಮೆಂಟೇಟರ್‌ ಜೊತೆಗೆ ಶಿವಣ್ಣ ಕೂಡ ಇರುತ್ತಾರೆ ಎಂದು ತಿಳಿಸಿತ್ತು. ಅದರಂತೆ ಕನ್ನಡ ಕಾಮೆಂಟೇರ್‌ಗಳಾದ ವಿಜಯ್ ಭಾರದ್ವಾಜ್, ಶ್ರೀನಿವಾಸಮೂರ್ತಿ ಅಲಿಯಾಸ್ ಜಾನಿ ಇವರೊಂದಿಗೆ ಶಿವರಾಜ್‌ಕುಮಾರ್ ಕಾಮೆಂಟರಿ ಬಾಕ್ಸ್‌ನಲ್ಲಿ ಕಾಣಿಸಿಕೊಂಡಿದ್ದರು. ಇದು ಶಿವಣ್ಣ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ಥ್ರಿಲ್ ಆಗಿತ್ತು. ಈ ವೇಳೆ ಸೆಂಚುರಿ ಸ್ಟಾರ್ ಪಾಕಿಸ್ತಾನ ಇಷ್ಟೇ ಸ್ಕೋರ್ ಮಾಡುತ್ತೆ ಎಂದು ಭವಿಷ್ಯ ನುಡಿದಿದ್ದರು. ಅದನ್ನು ಯಾರೂ ನೋಟೀಸ್ ಮಾಡಿಯೇ ಇಲ್ಲ.

ಶಿವಣ್ಣ ಕೊಟ್ಟ ಸ್ಕೋರ್ ಎಷ್ಟು?

ಭಾರತ ಹಾಗೂ ಪಾಕಿಸ್ತಾನ ಪಂದ್ಯ ಆರಂಭಕ್ಕೂ ಮುನ್ನ ಶಿವರಾಜ್‌ಕುಮಾರ್ ಕಾಮೆಂಟರಿ ಬಾಕ್ಸ್‌ನಲ್ಲಿ ಇದ್ದರು. ಈ ವೇಳೆ ಶಿವಣ್ಣಗೆ ಪಾಕಿಸ್ತಾನ ತಂಡ ಎಷ್ಟು ಸ್ಕೋರ್ ಮಾಡಬಹುದು ಎಂದು ಪ್ರಶ್ನೆ ಹಾಕಲಾಗಿತ್ತು. ಈ ವೇಳೆ ಶಿವಣ್ಣ ಕಾನ್ಫಿಡೆಂಟ್‌ ಆಗಿ ಪಾಕಿಸ್ತಾನ ತಂಡ 225ರ ಒಳಗೆ ಸ್ಕೋರ್ ಮಾಡುತ್ತೆ ಎಂದು ಭವಿಷ್ಯ ನುಡಿಸಿದ್ದರು. ಅದರಂತೆಯೇ ಪಾಕಿಸ್ತಾನ ಇನ್ನೂರರ ಗಡಿಯನ್ನೂ ದಾಟಲು ವಿಫಲ ಆಯ್ತು.

Ind vs. Pak 2023: Shivarajkumar prediction of Pakistan scoring under 225 becomes true

ಶಿವಣ್ಣನ ಭವಿಷ್ಯದಂತೆ ಪಾಕ್ 191ಕ್ಕೆ ಆಲ್‌ಔಟ್

ಶಿವಣ್ಣ ಪಂದ್ಯಕ್ಕೂ ಮುನ್ನ ಮತ್ತು ಪಂದ್ಯ ನಡುತ್ತಿರುವ ವೇಳೆ ಎರಡು ಬಾರಿ ಕಾಮೆಂಟರಿ ಬಾಕ್ಸ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಪಾಕಿಸ್ತಾನದ ಎರಡು ವಿಕೆಟ್‌ಗಳಷ್ಟೇ ಉರುಳಿದ್ದವು. ಪಾಕಿಸ್ತಾನದ ಕ್ಯಾಪ್ಟನ್ ಬಾಬರ್ ಅಜಾಮ್ ಮತ್ತು ರಿಜ್ವಾನ್ ಪಾರ್ಟ್ನರ್‌ಶಿಪ್ ಚೆನ್ನಾಗಿತ್ತು. ಈ ವೇಳೆ ಪಾಕಿಸ್ತಾನ 225ರನ್‌ಗಳನ್ನು ಹೊಡೆಯುವುದಿಲ್ಲ ಎಂದು ಅನಿಸುತ್ತದೆ ಎಂದು ಹೇಳಿದ್ದರು. ಹಾಗೇ ಇಬ್ಬರ ಪಾರ್ಟ್ನರ್‌ಶಿಪ್ ನೋಡಿದರೆ, 250 ರಿಂದ 270 ಆಗಲೂಬಹುದು. ಆದರೆ, ನನಗೆ ಅನಿಸಿಕೆ ಪ್ರಕಾರ, 225 ರನ್ ದಾಟುವುದಿಲ್ಲ ಎಂದು ಹೇಳಿದ್ದರು. ಅಂತೆಯೇ ಪಾಕಿಸ್ತಾನ 191ಕ್ಕೆ ಆಲ್‌ಔಟ್ ಆಗಿತ್ತು.

'ಘೋಸ್ಟ್‌' ಪ್ರಚಾರದಲ್ಲಿ ಬ್ಯುಸಿ

ಶಿವರಾಜ್‌ಕುಮಾರ್ ಸದ್ಯ 'ಘೋಸ್ಟ್' ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಅಕ್ಟೋಬರ್ 19ಕ್ಕೆ ಈ ಸಿನಿಮಾ ದೇಶಾದ್ಯಂತ ರಿಲೀಸ್ ಆಗುತ್ತಿದೆ. ಈ ಬೆನ್ನಲ್ಲೇ ಶಿವಣ್ಣ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾವನ್ನು ಪ್ರಚಾರ ಮಾಡುತ್ತಿದ್ದಾರೆ. ಶ್ರೀನಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಬಾಲಿವುಡ್ ನಟ ಅನುಪಮ್ ಖೇರ್, ಮಲಯಾಳಂ ನಟ ಜಯರಾಮ್ ಕಾಣಿಸಿಕೊಂಡಿದ್ದಾರೆ.

More from Filmibeat

English summary
Ind vs. Pak 2023: Shivarajkumar prediction of Pakistan scoring under 225 becomes true
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X