»   » 'ಕನಕ' ವಿಜಯ್ ಗೆ ವಿಲನ್ ಆದ್ರು ಕೆ.ಪಿ.ನಂಜುಂಡಿ

'ಕನಕ' ವಿಜಯ್ ಗೆ ವಿಲನ್ ಆದ್ರು ಕೆ.ಪಿ.ನಂಜುಂಡಿ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಆರ್ ಚಂದ್ರು ನಿರ್ದೇಶನದ ದುನಿಯಾ ವಿಜಯ್ ಅಭಿನಯದ 'ಕನಕ' ಚಿತ್ರ ದಿನದಿಂದ ದಿನಕ್ಕೇ ಹೆಚ್ಚು ಸದ್ದು ಮಾಡುತ್ತಿದೆ. ಅಪ್ಪಟ ಡಾ.ರಾಜ್ ಕುಮಾರ್ ಅವರ ಅಭಿಮಾನಿಯ ಕಥೆ ಹೊಂದಿರುವ ಈ ಚಿತ್ರಕ್ಕೆ ಇತ್ತೀಚೆಗೆ ರಚಿತಾ ರಾಮ್ ನಾಯಕಿ ಆಗಿ ಸೇರ್ಪಡೆ ಆಗಿದ್ದರು. ಈಗ ಚಿತ್ರತಂಡಕ್ಕೆ ನಟ-ನಿರ್ಮಾಪಕರು ಆದ ಕೆ ಪಿ ನಂಜುಂಡಿ ರವರು ಸೇರಿಕೊಂಡಿದ್ದು, ಸಿನಿಮಾ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ಚಿಸಿದ್ದಾರೆ.[ಮತ್ತೊಮ್ಮೆ 'ಲಕ್ಕಿ ಹೀರೋಯಿನ್' ಆದ ಡಿಂಪಲ್ ಕ್ವೀನ್ ರಚಿತಾ.!]

ಹೌದು, ಹಲವು ಜನಪ್ರಿಯ ಧಾರಾವಾಹಿಗಳನ್ನು ನಿರ್ಮಿಸಿ ಕಿರುತೆರೆ ಮೂಲಕ ಜನಪ್ರಿಯರಾದ ಕೆ ಪಿ ನಂಜುಂಡಿ ರವರು ಈಗ 'ಕನಕ' ಚಿತ್ರದಲ್ಲಿ ಕನ್ನಡ ಪರ ಕಾರ್ಯಕರ್ತನಾಗಿ ಅಭಿನಯಿಸಲಿದ್ದಾರಂತೆ. ಅಲ್ಲದೇ ಖಳನಾಯಕನಾಗಿ ಚಿತ್ರದ ನಾಯಕ ದುನಿಯಾ ವಿಜಯ್ ಜೊತೆ ಫೈಟ್ ಸಹ ಮಾಡಲಿದ್ದಾರಂತೆ. ಅವರ ನಟನೆಯ ಭಾಗದ ದೃಶ್ಯಗಳನ್ನು ಬೆಂಗಳೂರಿನ ನೈಸ್ ರೋಡ್ ನಲ್ಲಿ ಚಿತ್ರೀಕರಿಸಲಾಗುತ್ತದೆ ಎಂದು ತಿಳಿದಿದೆ.

K P Nanjundi is playing the role of a pro-Kannada activist in 'Kanaka' Film

ಅಂದಹಾಗೆ ಈ ಹಿಂದೆ ಉದಯ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ ಅಂಬಿಕಾ ಮತ್ತು ಭಾಗೀರಥಿ ಧಾರಾವಾಹಿಗಳನ್ನು ಕೆ ಪಿ ನಂಜುಂಡಿ ರವರು ಎಸ್.ನಾರಾಯಣ್ ರೊಂದಿಗೆ ನಿರ್ಮಾಣ ಮಾಡಿದ್ದರು. ಅಲ್ಲದೇ 'ಅಂಬಿಕಾ' ಧಾರಾವಾಹಿಯಲ್ಲಿ ಪಾಂಡುರಂಗ ಎಂಬ ವಕೀಲನ ಪಾತ್ರದಿಂದ ಮನೆಮಾತಾಗಿದ್ದರು. ಇವರದೇ ನಿರ್ಮಾಣದ 'ಭಾಗೀರಥಿ' ಸೀರಿಯಲ್ ನಲ್ಲು ಅಭಿನಯಿಸಿದ್ದರು.

K P Nanjundi is playing the role of a pro-Kannada activist in 'Kanaka' Film

'ಕನಕ' ಚಿತ್ರವನ್ನು ಆರ್.ಚಂದ್ರು ಅವರೇ ನಿರ್ದೇಶನದ ಜೊತೆಗೆ ನಿರ್ಮಾಣ ಹೊಣೆಯನ್ನು ಹೊತ್ತಿದ್ದಾರೆ. ಚಿತ್ರದಲ್ಲಿ ದುನಿಯಾ ವಿಜಯ್ ಗೆ ರಚಿತಾ ರಾಮ್ ಜೊತೆಯಾಗಿ ನಟಿಸಲಿದ್ದು, ಮಾನ್ವಿತಾ ಹರೀಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ನವೀನ್ ಸಜ್ಜು ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣ ನಿರ್ವಹಣೆ ಮಾಡಲಿದ್ದಾರೆ.[ಮತ್ತೆ 'ಜಾನಿ' ಜಪ ಮಾಡಲು ಆರಂಭಿಸಿದ ದುನಿಯಾ ವಿಜಯ್-ಪ್ರೀತಂ ಗುಬ್ಬಿ]

English summary
Actor-producer K P Nanjundi is playing the role of a pro-Kannada activist in Duniya Vijay Starrer 'Kanaka' Film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada