»   » ಮತ್ತೆ 'ಜಾನಿ' ಜಪ ಮಾಡಲು ಆರಂಭಿಸಿದ ದುನಿಯಾ ವಿಜಯ್-ಪ್ರೀತಂ ಗುಬ್ಬಿ

ಮತ್ತೆ 'ಜಾನಿ' ಜಪ ಮಾಡಲು ಆರಂಭಿಸಿದ ದುನಿಯಾ ವಿಜಯ್-ಪ್ರೀತಂ ಗುಬ್ಬಿ

Posted By:
Subscribe to Filmibeat Kannada

ಕನ್ನಡದ 'ಜಾನಿ ಮೇರಾ ನಾಮ್' ಸಿನಿಮಾ ನೆನಪಿದ್ಯಾ.? 2011ರಲ್ಲಿ ತೆರೆಗೆ ಬಂದ ಈ ಚಿತ್ರ ನಿರ್ದೇಶಕ ಪ್ರೀತಂ ಗುಬ್ಬಿ ಹಾಗೂ ನಟ ದುನಿಯಾ ವಿಜಯ್ ಕಾಂಬಿನೇಷನ್ ಗೆ ಸಾಕ್ಷಿ ಆಗಿತ್ತು. ಲವ್ ಸ್ಟೋರಿ ಜೊತೆಗೆ ಕಾಮಿಡಿ ಮಿಕ್ಸ್ ಆಗಿದ್ದ 'ಜಾನಿ ಮೇರಾ ನಾಮ್' ಪ್ರೇಕ್ಷಕರನ್ನ ರಂಜಿಸುವಲ್ಲಿ ಯಶಸ್ವಿ ಆಗಿತ್ತು.

ಈಗ 'ಜಾನಿ ಮೇರಾ ನಾಮ್' ಚಿತ್ರದ ಬಗ್ಗೆ ನಾವು ಹೇಳಲು ಕಾರಣ ಒನ್ಸ್ ಅಗೇನ್ ಪ್ರೀತಂ ಗುಬ್ಬಿ ಮತ್ತು ದುನಿಯಾ ವಿಜಯ್.[ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್ ವಿಮರ್ಶೆ]

ಆರು ವರ್ಷಗಳ ನಂತರ ಪ್ರೀತಂ ಗುಬ್ಬಿ ಮತ್ತು ದುನಿಯಾ ವಿಜಯ್ ಒಟ್ಟಿಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಆ ಚಿತ್ರ ಯಾವುದು ಗೊತ್ತಾ.?

ಮತ್ತೆ 'ಜಾನಿ' ಜಪ

'ಜಾನಿ ಮೇರಾ ನಾಮ್' ಚಿತ್ರದ ನಂತರ ಪ್ರೀತಂ ಗುಬ್ಬಿ ಹಾಗೂ ದುನಿಯಾ ವಿಜಯ್ ಒಂದಾಗಿರುವ ಸಿನಿಮಾದ ಹೆಸರೇ 'ಜಾನಿ ಜಾನಿ ಎಸ್ ಪಪ್ಪಾ'.!

ಅಲ್ಲಿರುವವರೇ ಇಲ್ಲಿರುತ್ತಾರೆ.!

'ಜಾನಿ ಮೇರಾ ನಾಮ್' ಚಿತ್ರದಲ್ಲಿ ರಂಗಾಯಣ ರಘು, ಸಾಧು ಕೋಕಿಲ, ದತ್ತಣ್ಣ ಮುಂತಾದವರ ತಾರಾಬಳಗ ಇತ್ತು. ಈ ಸಿನಿಮಾದಲ್ಲೂ ಅದೇ ನಟರ ದಂಡೇ ಮುಂದುವರಿಯಲಿದ್ಯಂತೆ.

ನಾಯಕಿ ಯಾರು.?

'ಜಾನಿ ಮೇರಾ ನಾಮ್' ಚಿತ್ರದಲ್ಲಿ ದುನಿಯಾ ವಿಜಯ್ ಜೊತೆ ನಟಿ ರಮ್ಯಾ 'ಊರಿಗೊಬ್ಳೆ ಪದ್ಮಾವತಿ' ಆಗಿ ಹೆಜ್ಜೆ ಹಾಕಿದ್ದರು. ಆದ್ರೆ, 'ಜಾನಿ ಜಾನಿ ಎಸ್ ಪಪ್ಪಾ' ಚಿತ್ರಕ್ಕೆ ನಾಯಕಿ ಇನ್ನೂ ಆಯ್ಕೆ ಆಗಿಲ್ಲ. ಹುಡುಕಾಟ ನಡೆಯುತ್ತಿದೆ.[ರಮ್ಯಾ ಜೊತೆ ಗುಬ್ಬಿ ಪ್ರೇಮ್ ಕಹಾನಿ ಪಾರ್ಟ್ ಟೂ]

ಮುಂದುವರಿದ ಭಾಗ ಅಲ್ಲ.!

'ಜಾನಿ ಮೇರಾ ನಾಮ್' ಹಾಗೂ 'ಜಾನಿ ಜಾನಿ ಎಸ್ ಪಪ್ಪಾ'... ಚಿತ್ರಗಳ ನಡುವೆ ಅನೇಕ ಸಾಮ್ಯತೆ ಇರಬಹುದು. ಆದ್ರೆ, ಇದು 'ಜಾನಿ ಮೇರಾ ನಾಮ್' ಚಿತ್ರದ ಮುಂದುವರಿದ ಭಾಗ ಅಲ್ಲ ಅಂತ ಪ್ರೀತಂ ಗುಬ್ಬಿ ಸ್ಪಷ್ಟಪಡಿಸುತ್ತಾರೆ. ಸದ್ಯದಲ್ಲಿಯೇ ಚಿತ್ರದ ಚಿತ್ರೀಕರಣ ಶುರುವಾಗಲಿದೆ.

English summary
Kannada Actor Duniya Vijay - Director Preetham Gubbi's next titled as 'Johnny Johnny Yes Papa'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada