»   » ಮತ್ತೊಮ್ಮೆ 'ಲಕ್ಕಿ ಹೀರೋಯಿನ್' ಆದ ಡಿಂಪಲ್ ಕ್ವೀನ್ ರಚಿತಾ.!

ಮತ್ತೊಮ್ಮೆ 'ಲಕ್ಕಿ ಹೀರೋಯಿನ್' ಆದ ಡಿಂಪಲ್ ಕ್ವೀನ್ ರಚಿತಾ.!

Posted By:
Subscribe to Filmibeat Kannada

ನಟಿ 'ಬುಲ್ ಬುಲ್' ರಚಿತಾ ರಾಮ್ ತುಂಬ ಲಕ್ಕಿ ಹೀರೋಯಿನ್ ಎನ್ನುವುದು ಗಾಂಧಿನಗರದ ಮಾತು. ಚಿತ್ರರಂಗಕ್ಕೆ ಎಂಟ್ರಿಯಾದ ಕೆಲವೇ ವರ್ಷಗಳಲ್ಲಿ ಬಹುತೇಕ ಎಲ್ಲ ಸ್ಟಾರ್ ನಟರ ಜೊತೆ ರಚಿತಾ ಸಿನಿಮಾ ಮಾಡಿದ್ದಾರೆ. ಹೀಗಿರುವಾಗ, ಮತ್ತೊಮ್ಮೆ ರಚಿತಾಗೆ ಅದೃಷ್ಟ ಒಲಿದು ಬಂದಿದೆ.

ದರ್ಶನ್, ಸುದೀಪ್, ಗಣೇಶ್, ರಮೇಶ್ ಅರವಿಂದ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವು ನಾಯಕರ ಜೊತೆ ರಚಿತಾ ಸ್ಕ್ರೀನ್ ಶೇರ್ ಮಾಡಿದ್ದಾರೆ. ಸದ್ಯ, ಉಪೇಂದ್ರ ಅವರ 'ಉಪ್ಪ-ರುಪ್ಪಿ' ಮತ್ತು ಶಿವಣ್ಣ ಅವರ 'ಖದರ್' ಸಿನಿಮಾಗಳಲ್ಲಿಯೂ ರಚಿತಾ ರಾಮ್ ನಟಿಸುತ್ತಿದ್ದಾರೆ.[ಮೋಹಕ ತಾರೆ ರಮ್ಯಾ ಜಾಗಕ್ಕೆ ರಚಿತಾ ರಾಮ್ ಎಂಟ್ರಿ!]

ಹೀಗೆ, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ರಚಿತಾ ರಾಮ್ ಈಗ ಸ್ಯಾಂಡಲ್ ವುಡ್ ನ ಮತ್ತೊಬ್ಬ ಸ್ಟಾರ್ ನಟನ 2 ಚಿತ್ರಗಳಿಗೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಮುಂದೆ ಓದಿ...

ದುನಿಯಾ ವಿಜಯ್ ಜೊತೆ ರಚಿತಾ

ನಟ ದುನಿಯಾ ವಿಜಯ್ ನಟನೆಯ 'ಜಾನಿ ಜಾನಿ ಯೆಸ್ ಪಪ್ಪಾ' ಸಿನಿಮಾಗೆ ರಚಿತಾ ರಾಮ್ ನಾಯಕಿಯಾಗಿ ಆಯ್ಕೆಯಾಗಿದ್ದರು. ಇದೀಗ, ದುನಿಯಾ ವಿಜಯ್ ಜೊತೆ ರಚಿತಾ ಇನ್ನೊಂದು ಸಿನಿಮಾ ಮಾಡುತ್ತಿದ್ದಾರೆ.

'ಕನಕ'ನ ರಾಣಿ

ಆರ್.ಚಂದ್ರು ಹಾಗೂ ದುನಿಯಾ ವಿಜಯ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ 'ಕನಕ' ಚಿತ್ರದ ನಾಯಕಿಯಾಗಿ ರಚಿತಾ ರಾಮ್ ಆಯ್ಕೆ ಆಗಿದ್ದಾರಂತೆ.[ದರ್ಶನ್-ಸುದೀಪ್ ಬಗ್ಗೆ ಮನ ಬಿಚ್ಚಿ ಮಾತನಾಡಿದ ರಚಿತಾ ರಾಮ್]

ಕನಕನಿಗೆ ಮಾನ್ವಿತಾ ಸಾಥ್

'ಕನಕ' ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದಾರೆ. 'ಕೆಂಡಸಂಪಿಗೆ' ಬೆಡಗಿ ಮಾನ್ವಿತಾ ಹರೀಶ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.[ಆರ್ ಚಂದ್ರು 'ಕನಕ' ಚಿತ್ರಕ್ಕೆ ಫಿಕ್ಸ್ ಆದ ಮೊದಲ ನಾಯಕಿ ಇವರು...?]

ಡಾ.ರಾಜ್ ಅಭಿಮಾನಿಯ ಕಥೆ

'ಕನಕ' ಸಿನಿಮಾ ಒಬ್ಬ ಅಪ್ಪಟ್ಟ ಡಾ.ರಾಜ್ ಕುಮಾರ್ ಅವರ ಅಭಿಮಾನಿಯ ಕಥೆಯಾಗಿದ್ದು, ಇಲ್ಲಿ ದುನಿಯಾ ವಿಜಯ್ ಆಟೋ ಡ್ರೈವರ್ ಆಗಿದ್ದಾರೆ.

ಆರ್.ಚಂದ್ರು ನಿರ್ದೇಶನ

ಅಂದ್ಹಾಗೆ ಕನಕ ಚಿತ್ರವನ್ನ ಆರ್.ಚಂದ್ರು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇಷ್ಟು ದಿನ ಚಿತ್ರದ ನಾಯಕಿಯ ಹುಡುಕಾಟದಲ್ಲಿದ್ದ ಚಂದ್ರು ಅಂತಿಮವಾಗಿ ರಚಿತಾ ರಾಮ್ ಅವರನ್ನ ಕರೆತಂದಿದ್ದಾರೆ.[ಫೋಟೋಶೂಟ್ ನಲ್ಲಿ ಮಿರ ಮಿರ ಮಿಂಚಿದ ಆಟೋ ಚಾಲಕ 'ಕನಕ]

ಕನ್ನಡದ ಬೇಡಿಕೆಯ ನಟಿ

ಸ್ಯಾಂಡಲ್ ವುಡ್ ನಲ್ಲಿ ರಚಿತ ರಾಮ್ ಸಖತ್ ಬೇಡಿಕೆ ಇರುವ ನಟಿ. ಸದ್ಯ, ಮೂರು ಬೇರೆ ಬೇರೆ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದ ಇವರು ಈಗ ದುನಿಯಾ ವಿಜಯ್ ಅವರ 2 ಚಿತ್ರದಲ್ಲಿ ನಟಿಸಲಿದ್ದಾರೆ.[ಜನಜಂಗುಳಿಯಲ್ಲಿ ನಡೆಯಲಿದೆ 'ಕನಕ'ನ ಫೋಟೋಶೂಟ್]

English summary
Kannada Actress 'Rachita Ram' is Selected to play lead opposite Kannada Actor Duniya Vijay in 'Kanaka'. The Movie Directed by R Chandru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada