Pushpaka Vimana: 'ಪುಷ್ಪಕ ವಿಮಾನ' ರೀ ರಿಲೀಸ್‌ಗೆ ಕಮಲ್ ಹಾಸನ್ ನಿರ್ಧಾರ.. ಪೋಸ್ಟರ್‌ನಲ್ಲಿ ಕನ್ನಡ ಟೈಟಲ್ ಏಲ್ಲಿ?

ಭಾರತೀಯ ಚಿತ್ರರಂಗ ಕಂಡ ಎವರ್‌ಗ್ರೀನ್ ಸಿನಿಮಾ 'ಪುಷ್ಪಕ ವಿಮಾನ'. 80 ದಶಕದಲ್ಲಿಯೇ ವಿಶಿಷ್ಟ ಪ್ರಯೋಗ ಮಾಡಿ ಅಭೂತಪೂರ್ವ ಯಶಸ್ಸು ಗಳಿಸಿದ್ದ ಸಿನಿಮಾ 'ಪುಷ್ಪಕ ವಿಮಾನ'. ಸಂಭಾಷಣೆಯೇ ಇಲ್ಲದೆ ಇಡೀ ಸಿನಿಮಾವನ್ನು ಚಿತ್ರೀಕರಣ ಮಾಡಲಾಗಿತ್ತು. ಹೀಗಾಗಿ ಎಲ್ಲಾ ಭಾಷೆಯಲ್ಲೂ ಈ ಸಿನಿಮಾಗೆ ಮೆಚ್ಚುಗೆ ಸಿಕ್ಕಿತ್ತು.

ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ 'ಪುಷ್ಪಕ ವಿಮಾನ' ಸಿನಿಮಾವನ್ನು ನಿರ್ದೇಶಿಸಿದ್ದರು. 1987ರಲ್ಲಿ ತೆರೆಕಂಡಿದ್ದ 'ಪುಷ್ಪಕ ವಿಮಾನ' ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಅದ್ಭುತ ಯಶಸ್ಸು ಕಂಡಿತ್ತು.

pushpaka-vimana-kannada-movie-release

ಇದೇ 'ಪುಷ್ಪಕ ವಿಮಾನ' ಸಿನಿಮಾವನ್ನು ಮರು ಬಿಡುಗಡೆ ಮಾಡುವುದಕ್ಕೆ ಕಮಲ್ ಹಾಸನ್ ಸಂಸ್ಥೆ ನಿರ್ಧರಿಸಿದೆ. ಕಮಲ್ ಹಾಸನ್ ಒಡೆತನದ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಸಂಸ್ಥೆ ಟ್ವೀಟ್ ಮಾಡಿದ್ದು, ಸಿನಿಮಾದ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದೆ.

ಬೆಂಗಳೂರಿನ ವಿಂಡ್ಸರ್ ಮ್ಯಾನರ್‌ನಲ್ಲಿ ಬಹುತೇಕ ಸಿನಿಮಾ ಚಿತ್ರೀಕರಣವನ್ನು ಮಾಡಲಾಗಿತ್ತು. ಹೀಗಾಗಿ 'ಪುಷ್ಪಕ ವಿಮಾನ' ಸಿನಿಮಾಗೂ ಕರ್ನಾಟಕಕ್ಕೂ ಬಿಡಲಾರದ ನಂಟಿದೆ. ಹಿಂದೆ ಕೂಡ ಈ ಸಿನಿಮಾ ಕನ್ನಡದಲ್ಲೂ 'ಪುಷ್ಪಕ ವಿಮಾನ' ಅಂತ ಟೈಟಲ್ ಕೊಟ್ಟು ಬಿಡುಗಡೆ ಮಾಡಲಾಗಿತ್ತು. ಆದ್ರೀಗ ಮರುಬಿಡುಗಡೆ ಬಗ್ಗೆ ಅನೌನ್ಸ್‌ಮೆಂಟ್‌ನಲ್ಲಿ ಪೋಸ್ಟರ್‌ನಲ್ಲಿ ಕನ್ನಡದ ಟೈಟಲ್ ಇಲ್ಲದಂತಾಗಿದೆ.

ಕಮಲ್ ಹಾಸನ್ ನಿರ್ಮಾಣ ಸಂಸ್ಥೆ 'ರಾಜ್ ಕಮಲ್ ಫಿಲ್ಮ್ಸ್ ಇಂಟರ್​ನ್ಯಾಷನಲ್' 'ಪುಷ್ಪಕ ವಿಮಾನ' ಸಿನಿಮಾವನ್ನು ನಿರ್ಮಾಣ ಮಾಡಿತ್ತು. ಹಾಗೇ ಶ್ರೀನಗರ ನಾಗರಾಜ್ ಈ ಸಂಸ್ಥೆಯೊಂದಿಗೆ ಕೈ ಜೋಡಿಸಿದ್ದರು. ಸುಮಾರು 35 ಲಕ್ಷ ರೂಪಾಯಿ ವೆಚ್ಚದಲ್ಲಿ ಅಂದೇ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಸಿನಿಮಾಗೆ ಎಲ್ಲಾ ಭಾಷೆಯಲ್ಲೂ ಅದ್ಭುತ ಯಶಸ್ಸು ಸಿಕ್ಕಿದ್ದರಿಂದ ಕೋಟಿ ಲೆಕ್ಕದಲ್ಲಿ ಕಲೆಕ್ಷನ್ ಆಗಿತ್ತು.

ಈಗ ಸದ್ಯಕ್ಕೆ ಕಮಲ್ ಹಾಸನ್ ನಿರ್ಮಾಣ ಸಂಸ್ಥೆ 'ಪುಷ್ಪಕ ವಿಮಾನ' ಸಿನಿಮಾವನ್ನು ರೀ ರಿಲೀಸ್ ಮಾಡಲು ಮುಂದಾಗಿದ್ದಾರೆ. ಆದರೆ, ಈ ಸಂಬಂಧ ಎರಡು ಭಾಷೆಯ ಟೈಟಲ್ ರಿವೀಲ್ ಮಾಡಿದ್ದಾರೆ. ತಮಿಳಿನಲ್ಲಿ 'ಪೇಸುಂ ಪದಂ' ಹಾಗೂ ಹಿಂದಿಯಲ್ಲಿ 'ಪುಷ್ಪಕ್' ಅನ್ನೋ ಟೈಟಲ್ ಇಟ್ಟಿರುವ ಪೋಸ್ಟರ್‌ಗಳು ರಿವೀಲ್ ಆಗಿವೆ. ಹೀಗಾಗಿ ಕನ್ನಡ ಟೈಟಲ್ ಎಲ್ಲಿ ಅಂತ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

ಕರ್ನಾಟಕದಲ್ಲಿಯೇ 'ಪುಷ್ಪಕ ವಿಮಾನ' ಸಿನಿಮಾ ಚಿತ್ರೀಕರಣ ಆಗಿದೆ. ಅಲ್ಲದೆ ಕನ್ನಡಿಗರಿಗೂ ಈ ಸಿನಿಮಾ ಇಷ್ಟ. ಕರ್ನಾಟಕದಲ್ಲೂ 'ಪುಷ್ಪಕ ವಿಮಾನ' ಒಂದೊಳ್ಳೆ ಕಲೆಕ್ಷನ್ ಮಾಡಿತ್ತು. ಹೀಗಾಗಿ ಕರ್ನಾಟಕದಲ್ಲಿ ರೀ ರಿಲೀಸ್ ಮಾಡುತ್ತಾರಾ? ಇಲ್ಲವೋ ಅನ್ನೋ 'ಪುಷ್ಪಕ ವಿಮಾನ' ಸಿನಿಮಾದ ಅಭಿಮಾನಿಗಳ ಗೊಂದಲವಿದೆ.

ಕಮಲ್ ಹಾಸನ್ 'ಪುಷ್ಪಕ ವಿಮಾನ' ಸಿನಿಮಾವನ್ನು ಸುಮ್ಮನೆ ರೀ ರಿಲೀಸ್ ಮಾಡುತ್ತಿಲ್ಲ. ಈ ಸಿನಿಮಾಗೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗುತ್ತಿದೆ. ಈ ಕಾರಣಕ್ಕೆ 'ಪುಷ್ಪಕ ವಿಮಾನ' ಕರ್ನಾಟಕದಲ್ಲೂ ರೀ ರಿಲೀಸ್ ಆಗಬೇಕು ಅಂತ ಇಷ್ಟ ಪಡುತ್ತಿದ್ದಾರೆ. ಆದರೆ, ಈ ಬಗ್ಗೆ ಕಮಲ್ ಹಾಸನ್ ಇನ್ನೂ ಸುಳಿವು ನೀಡಿಲ್ಲ.

ಬ್ಲ್ಯಾಕ್ ಕಾಮಿಡಿ ಸಿನಿಮಾದಲ್ಲಿ ಸಂಭಾಷಣೆ ಇಲ್ಲದೆ ಇರೋದು ವಿಶೇಷ. ಈ ಕಾರಣಕ್ಕೆ ಡಬ್ಬಿಂಗ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ. ಸದ್ಯ ಎರಡು ಭಾಷೆಯಲ್ಲಿ ಅನೌನ್ಸ್ ಮಾಡಿದ್ದು, ಉಳಿದ ಭಾಷೆಗಳ ಪೋಸ್ಟರ್ ಅನ್ನು ಮುಂದಿನ ದಿನಗಳಲ್ಲಿ ರಿಲೀಸ್ ಮಾಡುವ ಸಾಧ್ಯತೆಯಿದೆ.

More from Filmibeat

English summary
Kamal Haasan iconic movie Pushpaka Vimana Re Releasing
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X