ವಿವಾದದ ಬಳಿಕ 'ಥಗ್ ಲೈಫ್' ಕನ್ನಡ ವರ್ಷನ್‌ಗೆ ಸೆನ್ಸಾರ್? ಕಮಲ್ ಹಾಸನ್ ಲೆಕ್ಕಾಚಾರವೇನು?
ದೇಶಾದ್ಯಂತ ಪ್ರೀತಿಸುವ ನಟನೊಬ್ಬ ಅನಾವಶ್ಯಕವಾಗಿ ಭಾಷೆಯ ಬಗ್ಗೆ ಚಕಾರವೆತ್ತಿದ್ದು, ವಿವಾದವನ್ನು ಸೃಷ್ಟಿ ಮಾಡಿದ್ದನ್ನು ಕನ್ನಡಿಗರು ಸಹಿಸಿಕೊಳ್ಳುತ್ತಿಲ್ಲ. ಕಮಲ್ ಹಾಸನ್ ಕೇವಲ ತಮಿಳಿನಲ್ಲಷ್ಟೇ ಅಲ್ಲ. ಕನ್ನಡ ಚಿತ್ರರಂಗಕ್ಕೂ ಕೊಡುಗೆಗಳನ್ನು ನೀಡಿದ್ದಾರೆ. ಕನ್ನಡದ ಸಿನಿಮಾಗಳಲ್ಲೂ ನಟಿಸಿದ್ದಾರೆ. ಹೀಗಿರುವಾಗ ಕನ್ನಡ ಭಾಷೆಯ ಬಗ್ಗೆ ಇಷ್ಟು ಹಗುರವಾಗಿ ಮಾತಾಡುವುದಕ್ಕೆ ಹೇಗೆ ಸಾಧ್ಯ? ಇದರ ಹಿಂದಿನ ಉದ್ದೇಶವೇನು? ಈ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ನಡೆಯುತ್ತಿದೆ.
ಕಮಲ್ ಹಾಸನ್ ಒಂದೇ ಏಟಿಗೆ ಎರಡು ಹಕ್ಕಿಯನ್ನು ಹೊಡೆದರೇ? ಇಂತಹದ್ದೊಂದು ಪ್ರಶ್ನೆಯಂತೂ ಎದ್ದಿದೆ. ಒಂದು ವಿವಾದ ಮಾಡಿಕೊಂಡು ರಾಜಕೀಯ ಹಾಗೂ ಸಿನಿಮಾ ಪ್ರಚಾರ ಎರಡೂ ಉದ್ದೇಶವನ್ನು ಈಡೇರಿಸಿಕೊಂಡಿದ್ದಾರೆಂದು ಸಿನಿಮಾ ಮಂದಿ ಮಾಡಿಕೊಳ್ಳುತ್ತಿದ್ದಾರೆ. ಆದರೂ, ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂಬ ವಿವಾದಾತ್ಮಕ ಹೇಳಿಕೆ ಕನ್ನಡಿಗರಿಗೆ ಸಹಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಕ್ಷಮೆ ಕೇಳುವಂತೆ ಪಟ್ಟು ಹಿಡಿದು ಕೂತಿರುವ ಸಿನಿಮಾ ಮಂದಿ ಹಾಗೂ ಕನ್ನಡ ಹೋರಾಟಗಾರರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ.

'ಥಗ್ ಲೈಫ್' ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಮಾಡುವುದಕ್ಕೆ ಕಮಲ್ ಹಾಸನ್ ಶತಪ್ರಯತ್ನ ಮಾಡುತ್ತಿದ್ದರೆ, ಅತ್ತ ಕನ್ನಡ ಪರ ಹೋರಾಟಗಾರರು ರಿಲೀಸ್ ಮಾಡುವುದನ್ನು ತಡೆಯುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಈ ತಿಕ್ಕಾಟದಲ್ಲಿ ಯಾರಿಗೆ ಗೆಲುವು ಅನ್ನೋದು ಇನ್ನೇನು ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ. ಈ ಮಧ್ಯೆ ಕಮಲ್ ಹಾಸನ್ 'ಥಗ್ ಲೈಫ್'ನ ಕನ್ನಡ ಡಬ್ಬಿಂಗ್ ವರ್ಷನ್‌ಗೆ ಸೆನ್ಸಾರ್ ಕೂಡ ಮಾಡಿಸಿದ್ದಾರೆ ಎನ್ನುವ ಸುದ್ದಿ ಓಡಾಡುತ್ತಿದೆ.
ಹೈಕೋರ್ಟ್ ಮೊರೆ ಹೋದ ಕಮಲ್
ಪರಭಾಷೆಯ ಸಿನಿಮಾಗಳಿಗೆ ಕರ್ನಾಟಕದ ಬಾಕ್ಸಾಫೀಸ್ ತುಂಬಾ ಮುಖ್ಯ. ಅಷ್ಟು ಸುಲಭಕ್ಕೆ ಕರ್ನಾಟಕವನ್ನು ಬಿಟ್ಟುಬಿಡುವುದಕ್ಕೆ ಯಾರೂ ಸಿದ್ಧರಿಲ್ಲ. ಅದರಲ್ಲೂ ಕಮಲ್ ಹಾಸನ್ ಕೂಡ ಒಬ್ಬರು. ಹೀಗಾಗಿ ತನ್ನ ಅಹಂ ಕೂಡ ಗೆಲ್ಲಬೇಕು. ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಕೂಡ ಆಗಬೇಕು. ಅದಕ್ಕೆ ಕರ್ನಾಟಕದಲ್ಲಿ 'ಥಗ್ ಲೈಫ್'ಗೆ ಹೈಕೋರ್ಟ್ ಮೊರೆ ಹೋಗಿದ್ದಾರೆ. ನ್ಯಾಯಾಲಯ ಏನು ತೀರ್ಪು ಕೊಡುತ್ತೋ ಮುಂದಿನ ದಿನಗಲ್ಲಿ ಗೊತ್ತಾಗಲಿದೆ.

'ಥಗ್ ಲೈಫ್' ಕನ್ನಡ ವರ್ಷನ್‌ಗೆ ಸೆನ್ಸಾರ್
ಈ ಮಧ್ಯೆ ಹೊಸ ಸುದ್ದಿ ಏನಪ್ಪಾ ಅಂದರೆ, 'ಥಗ್ ಲೈಫ್' ಕನ್ನಡ ವರ್ಷನ್‌ಗೆ ಕಳೆದ ಶನಿವಾರ ಅಂದರೆ, ಮೇ 31ರಂದು ಪ್ರಾದೇಶಿಕ ಸೆನ್ಸಾರ್ ಮಂಡಳಿಯಲ್ಲಿ ಸೆನ್ಸಾರ್ ಮಾಡಿಸಲಾಗಿದೆ ಎಂಬ ಸುದ್ದಿ ಓಡಾಡುತ್ತಿದೆ. ಇದಕ್ಕೂ ಮುನ್ನ ದಕ್ಷಿಣ ಭಾರತದಲ್ಲಿ ಕನ್ನಡ ಬಿಟ್ಟು ಎಲ್ಲಾ ಭಾಷೆಗೆ ಡಬ್ ಮಾಡಿ ರಿಲೀಸ್ ಮಾಡಲಾಗುತ್ತಿದೆ. ಆದರೆ, ಕನ್ನಡ ಡಬ್ ವರ್ಷನ್ ರಿಲೀಸ್ ಮಾಡುವುದಕ್ಕ ಮುಂದಾಗಿರಲಿಲ್ಲ. ಹೀಗಿರುವಾಗ ಸೆನ್ಸಾರ್ ಮಾಡಿಸಿದ್ದು ಏಕೆ ಎನ್ನುವ ಪ್ರಶ್ನೆ ಎದ್ದಿದೆ.
ಕನ್ನಡ ವರ್ಷನ್ ರಿಲೀಸ್ ಆಗುತ್ತಾ?
'ಥಗ್ ಲೈಫ್' ಕನ್ನಡ ವರ್ಷನ್ ಸೆನ್ಸಾರ್ ಆದ್ಮೇಲೆ ಸಿನಿಮಾನೂ ರಿಲೀಸ್ ಆಗಲೇಬೇಕು. ಆದರೆ, ಕಮಲ್ ಹಾಸನ್ ಕಾದು ನೋಡುವ ತಂತ್ರಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಕನ್ನಡ ವರ್ಷನ್ ರಿಲೀಸ್ ಮಾಡುತ್ತಿಲ್ಲ ಎಂಬ ವಿವಾದ ಎದ್ದ ಬಳಿಕ ಕಮಲ್ ಈ ನಿರ್ಧಾರಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಅಂದರೆ, ಕರ್ನಾಟಕದಲ್ಲಿ ಕನ್ನಡ ವರ್ಷನ್ ರಿಲೀಸ್ ಆದರೂ ಆಗದು. ಇಲ್ಲವೇ ಕೇವಲ ಓಟಿಟಿಯಲ್ಲಿ ಕನ್ನಡ ವರ್ಚನ್ ರಿಲೀಸ್ ಆಗುತ್ತೆ ಎಂದು ಡಿಸ್ಟ್ರಿಬ್ಯೂಚನ್ ಸಂಸ್ಯೆಯ ಆತ್ಮೀಯರು ಮಾಹಿತಿ ಹಂಚಕೊಂಡಿದ್ದಾರೆ. ಇನ್ನು ಎರಡು ದಿನಗಳಲ್ಲಿ 'ಥಗ್ ಲೈಫ್' ಕನ್ನಡ ವರ್ಷನ್‌ಗೆ ಒಂದು ಕ್ಲಾರಿಟಿ ಸಿಗಬಹುದು. ಅಲ್ಲಿವರೆಗೂ ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ 'ಥಗ್ ಲೈಫ್' ರಿಲೀಸ್ ಆಗುತ್ತಾ? ಇಲ್ಲವಾ? ಅನ್ನೋದು ಕುತೂಹಲ.


Click it and Unblock the Notifications











