ಜೂನಿಯರ್ 'ಬಂಗಾರದ ಮನುಷ್ಯ'ನಿಗೆ ಶುಭ ಹಾರೈಸಿದ ಜಗ್ಗೇಶ್
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರಕ್ಕೆ ನವರಸ ನಾಯಕ ಜಗ್ಗೇಶ್ ಶುಭ ಹಾರೈಸಿದ್ದಾರೆ.
''ನನ್ನ ಸಹೋದರನಿಗೆ ಹೇಳಿ ಮಾಡಿಸಿದ ಶೀರ್ಷಿಕೆ. ಕನ್ನಡ ಚಿತ್ರರಂಗದ ಅಪ್ಪಟ ಬಂಗಾರ ನಮ್ಮ ಯಜಮಾನರ ಮಗ. ಶುಭಹಾರೈಕೆ jnr ಬಂಗಾರದ ಮನುಷ್ಯನಿಗೆ..'' ಎಂದು ಟ್ವಿಟ್ಟರ್ ಮೂಲಕ ವಿಶ್ ಮಾಡಿದ್ದಾರೆ.[ಗಾಂಧಿನಗರದಲ್ಲಿ ದಾಖಲೆ ನಿರ್ಮಿಸಿದ ಶಿವಣ್ಣನ ಕಟೌಟ್]

ಅಂದ್ಹಾಗೆ, 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ನಾಳೆ (ಮೇ 19) ರಾಜ್ಯಾದ್ಯಂತ ಬಂಗಾರದ ಮನುಷ್ಯ ಚಿತ್ರ ಬಿಡುಗಡೆಯಾಗುತ್ತಿದೆ. ಯೋಗಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಹ್ಯಾಟ್ರಿಕ್ ಹೀರೋ ಎನ್.ಆರ್.ಐ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.['ಬಂಗಾರದ ಮನುಷ್ಯ' ಶಿವಣ್ಣ ಜೊತೆ ಕೈ ಜೋಡಿಸಿದ ರಾಕಿಂಗ್ ಸ್ಟಾರ್ ಯಶ್]
ತಮಿಳು ನಟಿ ವಿದ್ಯಾ ಪ್ರದೀಪ್ ಚಿತ್ರದ ನಾಯಕಿಯಾಗಿದ್ದು, ವಿಶಾಲ್ ಹೆಗಡೆ, ಶ್ರೀನಾಥ್, ಶ್ರೀನಿವಾಸ ಮೂರ್ತಿ, ಶಿವರಾಂ, ಹೊನ್ನವಳ್ಳಿ ಕೃಷ್ಣ ಮುಂತಾದವರು ಅಭಿನಯಿಸಿದ್ದಾರೆ. ವಿ.ಹರಿಕೃಷ್ಣ ಅವರ ಸಂಗೀತವಿದ್ದು, ಜೈ ಆನಂದ್ ಛಾಯಾಗ್ರಹಣ, ಡಾ.ಕೆ ರವಿವರ್ಮ ಮತ್ತು ಮಾಸ್ ಮಾದ ಸ್ಟಂಟ್ಸ್ ಚಿತ್ರಕ್ಕಿದೆ.


Click it and Unblock the Notifications











