»   » 'ಬಂಗಾರದ ಮನುಷ್ಯ' ಶಿವಣ್ಣ ಜೊತೆ ಕೈ ಜೋಡಿಸಿದ ರಾಕಿಂಗ್ ಸ್ಟಾರ್ ಯಶ್

'ಬಂಗಾರದ ಮನುಷ್ಯ' ಶಿವಣ್ಣ ಜೊತೆ ಕೈ ಜೋಡಿಸಿದ ರಾಕಿಂಗ್ ಸ್ಟಾರ್ ಯಶ್

Posted By:
Subscribe to Filmibeat Kannada

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಇಬ್ಬರು ಒಳ್ಳೆಯ ಗೆಳೆಯರು. ಚಿತ್ರರಂಗದ ಅನೇಕ ಕಾರ್ಯಕ್ರಮಗಳಲ್ಲಿ ಈ ಇಬ್ಬರು ನಟರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಶಿವಣ್ಣ ನಟನೆಯ 'ಸಂತೆಯಲ್ಲಿ ನಿಂತ ಕಬೀರ' ಚಿತ್ರದ ಆಡಿಯೋವನ್ನು ಯಶ್ ಬಿಡುಗಡೆ ಮಾಡಿದ್ದರು.

ಅದೇನೇ ಇದ್ದರೂ, ಈಗ ಶಿವಣ್ಣ ಮತ್ತು ಯಶ್ ಒಂದು ಸಿನಿಮಾಗಾಗಿ ಒಂದಾಗಿದ್ದಾರೆ. ಶಿವಣ್ಣ ಅಭಿನಯದ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಸಿನಿಮಾದಲ್ಲಿ ಶಿವಣ್ಣನಿಗೆ ಯಶ್ ಸಾಥ್ ನೀಡಿದ್ದಾರೆ.

ಯಶ್ ತಮ್ಮ 'ಯಶೋ ಮಾರ್ಗ' ಮೂಲಕ ರೈತರ ಪರ ಅನೇಕ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಸಿನಿಮಾ ಸಹ ರೈತರ ಕಥೆ ಹೊಂದಿದೆ. ಒಂದು ಕಡೆ ಶಿವಣ್ಣ, ಇನ್ನೊಂದು ಕಡೆ ರೈತರು ಈ ಎರಡು ಕಾರಣಕ್ಕೆ ಈ ಸಿನಿಮಾದಲ್ಲಿ ಯಶ್ ಕೈ ಜೋಡಿಸಿದ್ದಾರೆ. ಮುಂದೆ ಓದಿ....

ರಾಕಿಂಗ್ ವಾಯ್ಸ್

ಶಿವಣ್ಣನ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಸಿನಿಮಾದಲ್ಲಿ ನಟ ಯಶ್ ಧ್ವನಿ ನೀಡಿದ್ದಾರೆ.

ಕಥಾ ಪರಿಚಯ

'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಸಿನಿಮಾದಲ್ಲಿ ಚಿತ್ರಕಥೆಯ ಪರಿಚಯವನ್ನು ಯಶ್ ಮಾಡಿ ಕೊಡಲಿದ್ದಾರೆ. ಚಿತ್ರದ ಪ್ರಾರಂಭದಲ್ಲಿ ಬರುವ ಸೀನ್ ನಲ್ಲಿ ಯಶ್ ಧ್ವನಿ ಇರುವುದು ತುಂಬ ಸ್ಪೆಷಲ್ ಎನಿಸಿಕೊಂಡಿದೆ.

ಶಿವಣ್ಣ ಮತ್ತು ಯಶ್

ಶಿವಣ್ಣ ಮತ್ತು ಯಶ್ ತುಂಬ ಆಪ್ತರು. ಈ ಹಿಂದೆ 'ತಮಸ್ಸು' ಚಿತ್ರದಲ್ಲಿ ಯಶ್ ಹಾಗೂ ಶಿವಣ್ಣ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈಗ ಶಿವಣ್ಣ ಸಿನಿಮಾದಲ್ಲಿ ಯಶ್ ಧ್ವನಿ ಕೇಳವ ಟೈಂ ಬಂದಿದೆ.

ಒಂದು ಮಾತಿಗೆ ಒಪ್ಪಿಕೊಂಡ ಯಶ್

ಚಿತ್ರದ ಆರಂಭಿಕ ದೃಶ್ಯಕ್ಕೆ ದನಿ ನೀಡಲು ಚಿತ್ರತಂಡ ಯಶ್ ಅವರಿಗೆ ಕೇಳಿಕೊಂಡಿದೆ. ಆಗ ಯಶ್ ಹಿಂದು ಮುಂದು ನೋಡದೆ ಒಂದೇ ಮಾತಿಗೆ ಖುಷಿಯಿಂದ ಒಪ್ಪಿಕೊಂಡಿದ್ದಾರೆ.

ಯಶ್ ನೆಚ್ಚಿನ ಬ್ಯಾನರ್

ಯಶ್ ನಟನೆಯ ಅನೇಕ ಸಿನಿಮಾಗಳು ಜಯಣ್ಣ ಕಂಬೈನ್ಸ್ ನಲ್ಲಿ ನಿರ್ಮಾಣವಾಗಿದ್ದವು. ಈಗ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರಕ್ಕೂ ಜಯಣ್ಣ ಬಂಡವಾಳ ಹಾಕಿದ್ದು, ಯಶ್ ಈ ಚಿತ್ರಕ್ಕೆ ಸಾಥ್ ನೀಡಿರುವುದಕ್ಕೆ ಮತ್ತೊಂದು ಕಾರಣ.

ಇದೇ ವಾರ ತೆರೆಗೆ

'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಸಿನಿಮಾ ಇದೇ ಶುಕ್ರವಾರ ರಾಜ್ಯಾದ್ಯಂತ ತೆರೆಗೆ ಬರಲಿದೆ.

ಸ್ಟಾರ್ ಧ್ವನಿಗಳು

ಈ ಹಿಂದೆ ದರ್ಶನ್ ಅಭಿನಯದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಸಿನಿಮಾಗೆ ಸುದೀಪ್ ಧ್ವನಿ ನೀಡಿದ್ದರು. ಪುನೀತ್ ರಾಜ್ ಕುಮಾರ್ 'ಬಹದ್ದೂರ್' ಸಿನಿಮಾಗೆ ಕಂಠದಾನ ಮಾಡಿದ್ದರು.

English summary
Kannada Actor Yash gives Voice Over For Shiva Rajkumar's 'Bangara s/o Bangarada Manushya'
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada