ದಂಪತಿಗೆ ಡಿಕ್ಕಿ ಹೊಡೆದ ನಟ ನಾಗಭೂಷಣ್ ಕಾರು: ಪತ್ನಿ ಸಾವು.. ಹಿಟ್ ಅಂಡ್ ರನ್ ಆರೋಪ

ಕನ್ನಡ ನಟ ನಾಗಭೂಷಣ್ ಕಾರು ಅಪಘಾತ ಆಗಿದೆ. ನಿನ್ನೆ (ಸೆಪ್ಟೆಂಬರ್ 30) ತಡ ರಾತ್ರಿ ಶೂಟಿಂಗ್ ಮುಗಿಸಿ ಹಿಂತಿರುಗುತ್ತಿರುವಾಗ ಕೋಣನಕುಂಟೆ ಕ್ರಾಸ್ ಬಳಿ ಕಾರು ಅಪಘಾತ ಆಗಿದೆ. ನಾಗಭೂಷಣ್ ಚಿತ್ರೀಕರಣ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ.

ಫುಟ್ ಪಾತ್‌ ಮೇಲೆ ನಡೆದುಕೊಂಡು ಹೋಗುತ್ತಿದ್ದ ದಂಪತಿಗೆ ನಾಗಭೂಷಣ್ ಕಾರು ಡಿಕ್ಕಿ ಹೊಡೆದಿದೆ. ಈ ವೇಳೆ ಪತ್ನಿ ಪ್ರೇಮ (48 ವರ್ಷ) ಸಾವನ್ನಪ್ಪಿದ್ದಾರೆ. ಪತಿ ಕೃಷ್ಣ ಬಿ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Kannada actor Nagabhushan car accident couple hit wife dead FIR Lodged

ದಂಪತಿ ನಾಗಭೂಷಣ್ ಕಾರಿಗೆ ಅಡ್ಡ ಬಂದಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಅದೇ ಇನ್ನೊಂದು ಕಡೆ ನಾಗಭೂಷಣ್ ವಿರುದ್ಧ ಹಿಟ್ ಅಂಡ್ ರನ್ ಕೇಸ್ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಹೊರಬೀಳಬೇಕಿದೆ.

ದೂರಿನಲ್ಲಿ ನಾಗಭೂಷಣ್ ಕೊಟ್ಟ ಹೇಳಿಕೆ ಏನು?

"ನಾನು ನನ್ನ ಸ್ನೇಹಿತರನ್ನು ನೋಡುವುದಕ್ಕೆ ಆರ್ ಆರ್ ನಗರಕ್ಕೆ ಹೋಗಿದ್ದೆ. ಅಲ್ಲಿಂದ ಜೆಪಿನಗರದಲ್ಲಿರುವ ನನ್ನ ಕಿಯಾ ಸೆಲ್ಟೋಸ್ ಕಾರಿನಲ್ಲಿ ಮನೆಗೆ ಹಿಂತಿರುಗುತ್ತಿದ್ದೆ. ರಾತ್ರಿ ಸುಮಾರು 9.45ರ ಹೊತ್ತಿಗೆ ವಸಂತಪುರ ಮುಖ್ಯ ರಸ್ತೆಯ ಸುಪ್ರಭಾತ ಶ್ರೀಂ ಬ್ರಿಜ್ ಅಪಾರ್ಟ್‌ಮೆಂಟ್ ಕಡೆಯಿಂದ ಒಬ್ಬ ಹೆಂಗಸು ಹಾಗೂ ಒಬ್ಬ ಗಂಡಸು ಪುಟ್‌ಪಾತ್‌ನಿಂದ ಇಳಿದು ರಸ್ತೆಯ ಕಡೆಗೆ ಬಂದರು. ನಾನು ಗಾಬರಿಯಾಗಿ ದಂಪತಿ ಡಿಕ್ಕಿ ಮಾಡಿ, ಬಳಿಕ ಪುಟ್‌ಪಾತ್ ಮೇಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಮಾಡಿದೆ." ಎಂದು ಪೊಲೀಸರ ಮುಂದೆ ಘಟನೆಯನ್ನು ವಿವರಿಸಿದ್ದಾರೆ.

ಪಾದಚಾರಿ ಹೆಂಗಸಿನ ತಲೆಗೆ ಮುಖಕ್ಕೆ ಪೆಟ್ಟಾಗಿತ್ತು

" ಅಪಘಾತವಾದ ಬಳಿಕ ಪಾದಚಾರಿಗಳನ್ನು ಎತ್ತಿ ರಸ್ತೆಯ ಬದಿ ಕೂರಿಸಿದ್ದರು. ತಕ್ಷಣವೇ ಕಾರು ಇಳಿದು ಹೋಗಿ ನೋಡಿದಾಗ ಪಾದಚಾರಿ ಹೆಂಗಸಿನ ತಲೆ ಮತ್ತು ಮುಖಕ್ಕೆ ತುಂಬಾನೇ ಪೆಟ್ಟಾಗಿತ್ತು. ಜಾಸ್ತಿ ಪೆಟ್ಟಾಗಿ ಮಾತನಾಡದ ಸ್ಥಿತಿಯಲ್ಲಿ ಇದ್ದರು. ಮತ್ತೊಬ್ಬ ಪಾದಚಾರಿಯ ಎರಡು ಕಾಲುಗಳಿಗೆ, ಹೊಟ್ಟೆ, ಬೆನ್ನು ತಲೆಗೆ ಪೆಟ್ಟಾಗಿ ರಕ್ತಗಾಯವಾಗಿ ಮಾತಾಡುತ್ತಿದ್ದರು. ತಕ್ಷಣವೇ ಆಸ್ಟ್ರಾ ಆಸ್ಪತ್ರೆಗೆ ಆಟೋರಿಕ್ಷಾದಲ್ಲಿ ಕರೆದುಕೊಂಡು ಹೋದಾಗ ಹೆಂಗಸು ದಾರಿ ಮಧ್ಯೆಯೇ ನಿಧನರಾಗಿದ್ದಾರೆ ವೈದ್ಯರು ತಿಳಿಸಿದ್ದರು." ಎಂದು ಘಟನೆಯ ಮಾಹಿತಿಯನ್ನು ನಾಗಭೂಷಣ್ ಪೊಲೀಸರಿಗೆ ತಿಳಿಸಿದ್ದಾರೆ.

Kannada actor Nagabhushan car accident couple hit wife dead FIR Lodged

ಅಪಘಾತ ಮಾಡಿರುವುದಾಗಿ ಒಪ್ಪಿಕೊಂಡ ನಾಗಭೂಷಣ್

ಪೊಲೀಸರ ಮುಂದೆ ನಟ ನಾಗಭೂಷಣ್ ತಾನೇ ಡ್ರೈವ್ ಮಾಡುತ್ತಿದ್ದೆನೆಂದು ಒಪ್ಪಿಕೊಂಡಿದ್ದಾರೆ. ನಡೆದ ಘಟನೆಯನ್ನು ವಿವರಿಸಿದ್ದಾರೆ. ಅಲ್ಲದೆ ಕಿಯಾ ಸೆಲ್ಟೋಸ್ ಕಾರನ್ನು ತಾನೇ ಚಾಲನೆ ಮಾಡುತ್ತಿದ್ದೆ ಎಂದು ತಿಳಿಸಿದ್ದಾರೆ. ಸದ್ಯ ನಿನ್ನೆ (ಸೆಪ್ಟೆಂಬರ್ 30)ರಾತ್ರಿಯಿಂದ ಪೊಲೀಸ್ ಠಾಣೆಯಲ್ಲಿಯೇ ಇದ್ದಾರೆ. ಸದ್ಯ ಕುಮಾರಸ್ವಾಮಿ ಲೇಔಟ್ ಪೊಲೀಸ್ ಸ್ಟೇಷನ್ ಬಳಿ ಘಟನೆ ನಡೆದಿದೆ.

More from Filmibeat

English summary
Kannada actor Nagabhushan car accident couple hit wife dead FIR Lodged
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X