For Quick Alerts
  ALLOW NOTIFICATIONS  
  For Daily Alerts

  'M.L.A' ಆದ 'ಬಿಗ್ ಬಾಸ್' ಪ್ರಥಮ್!

  By Bharath Kumar
  |

  'ಒಳ್ಳೆ ಹುಡುಗ' ಪ್ರಥಮ್ ಸದ್ಯ 'ದೇವ್ರಂಥ ಮನುಷ್ಯ' ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಇದರ ಜೊತೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಸಂಜು ಮತ್ತು ನಾನು' ವಾರಾಂತ್ಯದ ಧಾರವಾಹಿಯಲ್ಲಿ ಮುಖ್ಯ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ.

  ಈ ಮಧ್ಯೆ ಪ್ರಥಮ್ ಮತ್ತೊಂದು ಹೊಸ ಸಿನಿಮಾವನ್ನ ಘೋಷಣೆ ಮಾಡಿದ್ದಾರೆ. ಹೌದು, ಪ್ರಥಮ್ ಹೊಸದೊಂದು ಚಿತ್ರವನ್ನ ಒಪ್ಪಿಕೊಂಡಿದ್ದು, ಈ ಚಿತ್ರದ ಹೆಸರು ''M.L.A'' ಅಂತೆ.['ಸಂಜು ಮತ್ತು ನಾನು' ಹೊಸ ಟೀಸರ್, ಅಸಲಿಗೆ ಈ 'ನಾನು' ಯಾರು?]

  M.L.A ಅಂದಾಕ್ಷಣ ಚಿತ್ರದಲ್ಲೂ ಶಾಸಕನಾಗಿರಬಹುದು ಎಂದು ಊಹಿಸಬೇಡಿ. M.L.A ಅಂದ್ರೆ, ''ಮದರ್ ಪ್ರಾಮಿಸ್ ಲೆಕ್ಕಕ್ಕೆ ಸಿಗದ ಆಸಾಮಿ'' ಎಂದರ್ಥ.['ದೇವ್ರಂಥ ಮನುಷ್ಯ'ನ ಟೀಸರ್ ರಿಲೀಸ್! ಪ್ರಥಮ್ ಡೈಲಾಗ್ ಗೆ ತಲೆ ಗಿರಗಿಟ್ಲೆ]

  ಅಂದ್ಹಾಗೆ. M.L.A ಚಿತ್ರವನ್ನ ಯಾರು ನಿರ್ದೇಶನ ಮಾಡಲಿದ್ದಾರೆ, ಯಾರು ನಿರ್ಮಾಣ ಮಾಡಲಿದ್ದಾರೆ, ಪ್ರಥಮ್ ಜೊತೆಯಲ್ಲಿ ಯಾರೆಲ್ಲಾ ಅಭಿನಯಿಸಲಿದ್ದಾರೆ ಎಂಬ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದ್ರೆ, ಜೂನ್ ಎರಡನೇ ವಾರದಲ್ಲಿ ಮುಹೂರ್ತ ನೆರವೇರಲಿದೆ ಎಂಬುದನ್ನ ಮಾತ್ರ ಸ್ವತಃ ಪ್ರಥಮ್ ಅವರೇ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದಾರೆ.

  M.L.A ಚಿತ್ರದ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಾಗಿ ಫಿಲ್ಮಿಬೀಟ್ ಕನ್ನಡವನ್ನ ಓದುತ್ತಿರಿ...

  English summary
  Kannada Actor Pratham Announced his New Movie Titled As a 'MLA'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X