»   » 'ಸಂಜು ಮತ್ತು ನಾನು' ಹೊಸ ಟೀಸರ್, ಅಸಲಿಗೆ ಈ 'ನಾನು' ಯಾರು?

'ಸಂಜು ಮತ್ತು ನಾನು' ಹೊಸ ಟೀಸರ್, ಅಸಲಿಗೆ ಈ 'ನಾನು' ಯಾರು?

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಪ್ರಣಯ ಪಕ್ಷಿಗಳು ಒಟ್ಟಾಗಿ ಅಭಿನಯಿಸುತ್ತಿರುವುದು ಈಗಾಗಲೇ ಗೊತ್ತಿದೆ. ಸಂಜನಾ, ಭುವನ್ ಮತ್ತು ಒಳ್ಳೆ ಹುಡುಗ ಪ್ರಥಮ್ ಮೂವರು ಒಂದೇ ಧಾರವಾಹಿಯಲ್ಲಿ ಬಣ್ಣ ಹಚ್ಚಲಿದ್ದು, ಈಗಾಗಲೇ ಸಂಜನಾ ಅವರ ಫಸ್ಟ್ ಲುಕ್ ಪೋಸ್ಟರ್ ಹಾಗೂ ಟೀಸರ್ ಬಿಡುಗಡೆಯಾಗಿದ್ದು ಗಮನ ಸೆಳೆಯುತ್ತಿದೆ.

ಇದೀಗ, ಈ ಮೂವರ ರೊಮ್ಯಾಂಟಿಕ್ ಥ್ರಿಲ್ಲರ್ ನ ಎರಡನೇ ಟೀಸರ್ ರಿಲೀಸ್ ಆಗಿದ್ದು, ಸಂಜನಾ ಜೊತೆ ಅಭಿನಯಿಸಲಿರುವ ಪ್ರಥಮ್ ಮತ್ತು ಭುವನ್ ಅವರ ಗೆಟಪ್ ಗಳು ರಿವಿಲ್ ಆಗಿದೆ.[ಪ್ರಥಮ್-ಸಂಜನಾ-ಭುವನ್ ತ್ರಿಕೋನ ಪ್ರೇಮಕಥೆಗೆ ಕ್ಲೈಮ್ಯಾಕ್ಸ್ ಕೊಡದ ಕಿಚ್ಚ!]

Sanju mathu Nannu Second Teaser Release

ಇಲ್ಲಿ ಕುತೂಹಲ ಏನಪ್ಪಾ ಅಂದ್ರೆ, ಸಂಜನಾ ಟೈಟಲ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದ್ರೆ, ಸಂಜನಾ ಜೊತೆ 'ನಾನು' ಯಾರು ಎಂಬುದು ಕುತೂಹಲವಾಗಿದೆ. ಒಂದು ಕಡೆ ಭುವನ್ ನಾನು ಎನ್ನುತ್ತಿದ್ದರೇ, ಮತ್ತೊಂದೆಡೆ ಪ್ರಥಮ್ ಕೂಡ ನಾನು ಎನ್ನುತ್ತಿದ್ದಾರೆ. ನಿಜವಾಗಲೂ ಸಂಜು ಜೊತೆ ಹೆಜ್ಜೆ ಹಾಕಲಿರುವ ಈ 'ನಾನು' ಯಾರು ಎಂಬುದು ತೆರೆ ಮೇಲೆನೇ ನೋಡಬೇಕಿದೆ.

ಅಂದ್ಹಾಗೆ, ಇದು 24 ಎಪಿಸೋಡ್ ಗಳ ಕಥೆಯಾಗಿದ್ದು, ಕಿರು ಧಾರವಾಹಿ ರೀತಿಯಲ್ಲಿ ಪ್ರಸಾರವಾಗಲಿದೆ. ಪ್ರತಿವಾರಾಂತ್ಯದಲ್ಲಿ ಶನಿವಾರ ಮತ್ತು ಭಾನುವಾರ 1 ಗಂಟೆಯ ಕಾಲ ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ ಧಾರವಾಹಿ ಮೂಡಿ ಬರಲಿದೆ.

English summary
Colors Kannada Coming up with a weekend fiction, Saturday and Sunday. New Serial of 24 episodes. Pratham, Sanjana and Bhuvan are in lead roles.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada