'ಬೆಳ್ಳಿ ಹೆಜ್ಜೆ'ಯಲ್ಲಿ ಡಾ.ನಾಗತಿಹಳ್ಳಿ ಚಂದ್ರಶೇಖರ ನಡೆದು ಬಂದ ದಾರಿ!

By Suneel

ಕರ್ನಾಟಕ ಚಲನಚಿತ್ರ ಆಕಾಡೆಮಿ ಬೆಳ್ಳಿತೆರೆಯ ಸಾಧಕರನ್ನು ಕರೆತಂದು, ಅವರ ಸಾಧನೆ ಮತ್ತು ನಡೆದು ಬಂದ ದಾರಿಯನ್ನು ಮೆಲುಕು ಹಾಕುವ 'ಬೆಳ್ಳಿ ಹೆಜ್ಜೆ' ಸಂವಾದ ಕಾರ್ಯಕ್ರಮಕ್ಕೆ ಈ ಬಾರಿ ಡಾ. ನಾಗತಿಹಳ್ಳಿ ಚಂದ್ರಶೇಖರ ಅವರನ್ನು ಕರೆತಂದಿದೆ.

ಡಾ.ನಾಗತಿಹಳ್ಳಿ ಚಂದ್ರಶೇಖರ ಅವರು ಕಥೆಗಾರ, ಕಾದಂಬರಿಕಾರ, ನಿರ್ದೇಶಕ, ಉಪನ್ಯಾಸಕರು ಆಗಿ ಗ್ರಾಮೀಣ ಪತ್ರಿಭೆಗಳಿಗೆ ಸ್ಫೂರ್ತಿಯಾದ ಬಹುಮುಖ ಪತ್ರಿಭೆ. ಅಲ್ಲದೇ 'ಅಮೇರಿಕಾ ಅಮೆರಿಕಾ', 'ಹೂಮಳೆ', 'ನನ್ನ ಪ್ರೀತಿಯ ಹುಡುಗಿ', 'ಅಮೃತಧಾರೆ', 'ಮಾತಾಡ್ ಮಾತಾಡು ಮಲ್ಲಿಗೆ', 'ಇಷ್ಟಕಾಮ್ಯ' ಎಂಬ ಹಲವು ಚಿತ್ರಗಳನ್ನು ನಿರ್ದೇಶಿಸಿ ಉತ್ತಮ ಅಭಿರುಚಿ ಸಿನಿಮಾಗಳನ್ನು ಮಾಡಿದ್ದಾರೆ. ಸಿನಿಮಾ ರಂಗದಲ್ಲಿ ತರಬೇತಿ ಪಡೆಯುವವರಿಗೆ ಹೊಸ ವೇದಿಕೆ ಕಟ್ಟಿಕೊಟ್ಟ ಅವರು ಈ ಬಾರಿಯ 'ಬೆಳ್ಳಿ ಹೆಜ್ಜೆ' ಸಂವಾದ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದು, ತಮ್ಮ ಸಿನಿಮಾ ರಂಗದ ಪಯಣ, ನಡೆದು ಬಂದ ದಾರಿ, ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.[ನಾಗತಿಹಳ್ಳಿ ಚಂದ್ರಶೇಖರ್ ಪುತ್ರಿ ಫಾರಿನ್ ಪರಿಣಯ]

Kannada Director Dr.Nagathihalli Chandrashekhar in 'Belli Hejje' Interact Program.

ಗುರುವಾರ, ಮಾರ್ಚ್ 16 ರಂದು, ಸಂಜೆ 5 ಗಂಟೆಗೆ ಬೆಂಗಳೂರಿನ ಕುಮಾರ ಪಾರ್ಕ್ ರಸ್ತೆಯ ಗಾಂಧಿ ಭವನದಲ್ಲಿರುವ, ಮಹದೇವ ದೇಸಾಯಿ ಸಭಾಂಗಣದಲ್ಲಿ ಡಾ. ನಾಗತಿಹಳ್ಳಿ ಚಂದ್ರಶೇಖರ ಅವರೊಂದಿಗೆ 'ಬೆಳ್ಳಿ ಹೆಜ್ಜೆ' ಸಂವಾದ ಕಾರ್ಯಕ್ರಮವನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಹಮ್ಮಿಕೊಂಡಿದೆ.[ಬಿಗ್ ಬಾಸ್ 'ಬೋರಿಂಗ್' ಎಂದ ನಾಗತಿಹಳ್ಳಿ ಚಂದ್ರಶೇಖರ್.!]

ಸಂವಾದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಅಧ್ಯಕ್ಷರಾದ ಡಾ.ಹೊ.ಶ್ರೀನಿವಾಸಯ್ಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕರಾದ ಶ್ರೀ ಎನ್.ಆರ್.ವಿಶುಕುಮಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಶ್ರೀ ಸಾ.ರಾ. ಗೋವಿಂದು ಆಗಮಿಸಲಿದ್ದಾರೆ.

ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಎಸ್. ವಿ. ರಾಜೇಂದ್ರ ಸಿಂಗ್ ಬಾಬು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. 'ಬೆಳ್ಳಿ ಹೆಜ್ಜೆ' ಕಾರ್ಯಕ್ರಮದಲ್ಲಿ ಕೆ.ಎಸ್.ಪರಮೇಶ್ವರ ನಿರ್ದೇಶನದ 'ಬರಿಯ ಮೇಷ್ಟ್ರಲ್ಲೋ ಅಣ್ಣಾ' ಸಾಕ್ಷ್ಯಚಿತ್ರ ಹಾಗೂ ನಾಗತಿಹಳ್ಳಿಯವರ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ.

More from Filmibeat

English summary
Belli - Hejje program organized by Karnataka Chalana Chitra Academy on march 16th at 5 pm in Gandhi Bhavan Mahadev Desai Hall, Kumara Park Road Bengaluru. Kannada Director Dr.Nagathihalli Chandrashekar will be guest.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X