»   » ನಾಗತಿಹಳ್ಳಿ ಚಂದ್ರಶೇಖರ್ ಪುತ್ರಿ ಫಾರಿನ್ ಪರಿಣಯ

ನಾಗತಿಹಳ್ಳಿ ಚಂದ್ರಶೇಖರ್ ಪುತ್ರಿ ಫಾರಿನ್ ಪರಿಣಯ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಪುತ್ರಿಯ ಮದುವೆ ನಿಶ್ಚಯವಾಗಿದೆ. ನಾಗತಿಹಳ್ಳಿ ಚಂದ್ರಶೇಖರ್ ಮತ್ತು ಸಿ.ಎಸ್.ಶೋಭಾ ದಂಪತಿಯ ಹಿರಿಯ ಪುತ್ರಿ ಕನಸು ನಾಗತಿಹಳ್ಳಿ ಅವರ ವಿವಾಹ ಆರತಕ್ಷತೆ ಮಾರ್ಚ್ 27, 2015 ರಂದು ನೆರವೇರಲಿದೆ.

ನ್ಯೂ ಯಾರ್ಕ್ ನ NOTTINGHAM UNIVERSITY ಯಲ್ಲಿ ಸ್ನಾತಕ್ಕೋತ್ತರ ಪದವಿ ಪಡೆದಿರುವ ಕನಸು ನಾಗತಿಹಳ್ಳಿ, ವಿದೇಶದಲ್ಲೇ ನೆಲೆಸಿರುವ ಸಾಯಿ ವಿವಸ್ವತ್ ಓಂಕಾರಂ ಅವರನ್ನ ಕೈಹಿಡಿಯಲಿದ್ದಾರೆ.

Kanasu Marriage

ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲೇ ಈ ಜೋಡಿಯ ನಿಶ್ವಿತಾರ್ಥ ನೆರವೇರಿತ್ತು. ಇದೀಗ ಗುರು ಹಿರಿಯರ ಆಶೀರ್ವಾದದೊಂದಿಗೆ ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಬ್ರಿಗೇಡ್ ಮಿಲೇನಿಯಮ್ ಕ್ಯಾಂಪಸ್ ನ ಎಂ.ಎಲ್.ಆರ್. ಕನ್ವೆನ್ಷನ್ ಸೆಂಟರ್ ನಲ್ಲಿ, ಮಾರ್ಚ್ 27, ಸಂಜೆ 7 ಗಂಟೆಗೆ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.

ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಪ್ರತಿಭಾವಂತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್. ಕನ್ನಡ ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ ನಾಗತಿಹಳ್ಳಿ, 'ಕಾಡಿನ ಬೆಂಕಿ' ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ-ಸಾಹಿತ್ಯ ಬರೆಯುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. [ಕನ್ನಡ ಮೇಷ್ಟ್ರು ನಾಗತಿಹಳ್ಳಿಯ ಇಂಗ್ಲಿಷ್ ಪ್ರಣಯ]

Kanasu Marriage

'ಉಂಡು ಹೋದ ಕೊಂಡು ಹೋದ', 'ಕೊಟ್ರೇಶಿ ಕನಸು', 'ಅಮೇರಿಕಾ ಅಮೇರಿಕಾ', 'ನನ್ನ ಪ್ರೀತಿಯ ಹುಡುಗಿ', 'ಅಮೃತಧಾರೆ' ಸೇರಿದಂತೆ ಹಲವಾರು ಸೂಪರ್ ಹಿಟ್ ಚಿತ್ರಗಳನ್ನ ನೀಡಿರುವ ನಾಗತಿಹಳ್ಳಿ ಚಂದ್ರಶೇಖರ್ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಅನ್ನುವುದು ನಿಮಗೆ ಗೊತ್ತೇ ಇದೆ. (ಫಿಲ್ಮಿಬೀಟ್ ಕನ್ನಡ)

English summary
Kannada Director Nagathihalli Chandrashekhar's Daughter Kanasu Nagathihalli marriage is fixed on March 27, 2015. Venue - M.L.R Convention Center, J.P.Nagar, Bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada