»   » ಬಿಗ್ ಬಾಸ್ 'ಬೋರಿಂಗ್' ಎಂದ ನಾಗತಿಹಳ್ಳಿ ಚಂದ್ರಶೇಖರ್.!

ಬಿಗ್ ಬಾಸ್ 'ಬೋರಿಂಗ್' ಎಂದ ನಾಗತಿಹಳ್ಳಿ ಚಂದ್ರಶೇಖರ್.!

Posted By:
Subscribe to Filmibeat Kannada

''ಬಿಗ್ ಬಾಸ್' ಕಾರ್ಯಕ್ರಮ ಸಖತ್ ಬೋರಿಂಗ್ ಆಗಿದೆ'' - ಹೀಗಂತ ಹೇಳಿರೋದು ಬೇರೆ ಯಾರೂ ಅಲ್ಲ, ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್.!

ಹೌದು, ಬೋರಿಂಗ್ ಆಗಿರುವ 'ಬಿಗ್ ಬಾಸ್' ಕಾರ್ಯಕ್ರಮದ ಬಗ್ಗೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಒಂದು ಟ್ವೀಟ್ ಮಾಡಿ, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.['ಬಿಗ್ ಬಾಸ್' ಮನೆಯ ಡೇಂಜರಸ್ ಲೇಡಿ ಯಾರು ಗೊತ್ತಾ.?]

bigg-boss-is-boring-tweets-nagathihalli-chandrashekar

''ಬಿಗ್ ಬಾಸ್' ಬೋರಿಂಗ್ ಆಗಿದೆ. ಎಲ್ಲ ಸ್ಪರ್ಧಿಗಳು ಸುಸ್ತಾಗಿದ್ದಾರೆ ಅನ್ಸುತ್ತೆ. ಆತ್ಮೀಯ ಸುದೀಪ್, ದಯವಿಟ್ಟು ಸ್ಪರ್ಧಿಗಳಿಗೆ ನಗುವುದನ್ನು ಕಲಿಸಿ. ಹ್ಯಾಪು ಮೋರೆಗಳನ್ನ ನೋಡಲು ಕಷ್ಟವಾಗುತ್ತಿದೆ'' ಅಂತ ನಾಗತಿಹಳ್ಳಿ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.

ನಾಗತಿಹಳ್ಳಿ ಚಂದ್ರಶೇಖರ್ ರವರ ಈ ಮಾತುಗಳನ್ನ ಕಿಚ್ಚ ಸುದೀಪ್ ಕೊಂಚ ಗಂಭೀರವಾಗಿ ಸ್ವೀಕರಿಸಿದರೆ, ಕೊನೆಯ ಎರಡು ವಾರಗಳಾದರೂ 'ಬಿಗ್ ಬಾಸ್ ಕನ್ನಡ-4' ಮನರಂಜನೆ ನೀಡಬಹುದು.['ಬಿಗ್ ಬಾಸ್ ಕನ್ನಡ-4': ಈ ವಾರ ನಿಮ್ಮ ನಿರೀಕ್ಷೆ ಏನು.?]

English summary
Kannada Director Nagathihalli Chandrashekar has taken his twitter account to express his displeasure on 'Bigg Boss Kannada 4'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada