ಈ ಆರು ತಿಂಗಳಲ್ಲಿ ಶತಕ ಭಾರಿಸಿದ್ದು ಮೂರೇ ಚಿತ್ರಗಳು
ಜೂನ್ ತಿಂಗಳಲ್ಲಿ ಕಡ್ಡಿಪುಡಿ (ಚಿತ್ರ ವಿಮರ್ಶೆ ಓದಿ) ಭರ್ಜರಿ ಓಪನಿಂಗ್ ಪಡೆದು-50 ನೇ ದಿನದತ್ತ ಸಾಗ್ತಿದೆ....ರಾಧನಗಂಡ-ಮಹಾನದಿ ಓಕೆಓಕೆ ಅನ್ಸಿದ್ರು-ಆಟೋರಾಜ-ಚಂದ್ರ-ನಮ್ ದುನಿಯಾ ನಮ್ ಸ್ಟೈಲ್ ಇನ್ನು ಥಿಯೇಟರ್ ಅಂಗಳದಲ್ಲಿದೆ....
ಈ 6 ತಿಂಗಳಲ್ಲಿ 61 ಸಿನಿಮಾಗಳು ರಿಲೀಸ್ ಆದ್ರು 3 ಚಿತ್ರಗಳು ಮಾತ್ರ 100 ದಿನದ ಸಂಭ್ರಮ ಆಚರಿಸಿದ್ವು. ಕೇವಲ 4 ಚಿತ್ರಗಳು ಹಾಫ್ ಸೆಂಚೂರಿ ಬಾರಿಸಿದ್ವು. ಸದ್ಯ ಬುಲ್ ಬುಲ್ 100 ನೇ ದಿನದತ್ತ-ಕಡ್ಡಿಪುಡಿ 50 ನೇ ದಿನದತ್ತ ಸಾಗ್ತಿದೆ. ಹಾಗೇ ಈ 6 ತಿಂಗಳಲ್ಲಿ ಆಲ್ ಮೋಸ್ಟ್ ಎಕ್ಸ್ ಪೆಕ್ಡೆಡ್ ಡೈರೆಕ್ಟರ್ಸ್ ಗಳಾದ ಸೂರಿ-ನಾಗಶೇಖರ್-ಆರ್.ಚಂದ್ರು -ಗುರುಪ್ರಸಾದ್ -ಎಮ್ ಡಿ ಶ್ರೀಧರ್-ಶಶಾಂಕ್-ಎ ಎಮ್ ಆರ್ ರಮೇಶ್ ಎಲ್ರ ಸಿನಿಮಾಗಳು ರಿಲೀಸ್ ಆಗಿಹೋಗಿದೆ...

ಅಂದ್ಹಾಗೆ ಮುಂದಿನ ಆರು ತಿಂಗಳಲ್ಲಿ ಅಂಥಾ ಹೇಳಿಕೊಳ್ಳೋಂಥ ಸಿನಿಮಾಗಳ್ಯಾವುದು ತೆರೆಗೆ ರೆಡಿಯಿಲ್ಲ. ದರ್ಶನ್ ಅಭಿನಯದ ಬೃಂದಾವನ -ಉಪ್ಪಿ ಅಭಿನಯದ ಬ್ರಹ್ಮ-ಶ್ರೀನಗರ ಕಿಟ್ಟಿ ಅಭಿನಯದ ಟೋನಿ ಮತ್ತು ಬಹುಪರಾಕ್ ಸಿನಿಮಾಗಳು ವರ್ಷದ ಕೊನೆಗೆ ರಿಲೀಸ್ ಆಗೋ ಸಾಧ್ಯತೆಯಿದೆ.
ಒಟ್ನಲ್ಲಿ 2013ನ ಹಾಫ್ ಇಯರ್ ಕಂಪ್ಲೀಟ್ ಆಗಿದೆ. ಇಲ್ಲಿ ಸಕ್ಸಸ್ ಗಿಂತ ಸೋಲಿನ ಸಂಖ್ಯೆನೇ ಜಾಸ್ತಿಯಿದೆ. ಆದ್ರೆ ಮುಂದಿನ ಆರು ತಿಂಗಳಲ್ಲಿ ತೆರೆಕಾಣೋ ಸಿನಿಮಾಗಳು ಯಶಸ್ಸಿನ ಹಾದಿ ಹಿಡಿಲಿ ಅನ್ನೋದೇ ಎಲ್ರ ಆಶಯ.


Click it and Unblock the Notifications











