For Quick Alerts
  ALLOW NOTIFICATIONS  
  For Daily Alerts

  ನಾಯಕಿ ಎದೆಗೇ ಕೈಹಾಕಿದ 'ಬಹುಪರಾಕ್' ನಾಯಕ

  By Rajendra
  |

  ಈ ಚಿತ್ರದಲ್ಲಿ ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ ಸಂದರ್ಭ ಬಂದರೆ ಲಾಂಗ್ ಹಿಡಿಯುತ್ತಾರೆ. ಅಷ್ಟೇ ಸೊಗಸಾಗಿ ಡೈಲಾಗ್ ಸಹ ಕಟ್ ಮಾಡ್ತಾರೆ. ಇನ್ನು ಪ್ರೀತಿ ಪ್ರೇಮ ಪ್ರಣಯ ಸನ್ನಿವೇಶಗಳಿಗೂ ಬರವಿಲ್ಲ. ಕತ್ಲಲ್ಲಿ ಹುಡುಗಿ ಎದೆಗೂ ಕೈ ಹಾಕುತ್ತಾರೆ. ಕೆನ್ನೆಗೆ ರಪ್ ಅಂತ ಬಿದ್ದ ಸೌಂಡ್ ಕೇಳಿಸುತ್ತದೆ. ಕಿಟ್ಟಿ ಹಿಂಗಾ ಮಾಡೋದು?

  ಒಟ್ಟು 7.59 ನಿಮಿಷಗಳ ಟ್ರೇಲರ್ ನಲ್ಲಿ ಇವೆಲ್ಲವನ್ನೂ ಒಂದೇ ಏಟಿಗೆ ತೋರಿಸಿದ್ದಾರೆ. ಇಷ್ಟಕ್ಕೂ ಈ ಚಿತ್ರದ ಹೆಸರು 'ಬಹುಪರಾಕ್'. 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರತಂಡದ ಮತ್ತೊಂದು ಪ್ರಯೋಗ. ಇಲ್ಲೂ ಡೈಲಾಗ್ ಗಳೇ ಚಿತ್ರದ ಪ್ರಮುಖ ಆಕರ್ಷಣೆ ಎನ್ನಬಹುದು. ಏಕೆಂದರೆ ಟ್ರೇಲರ್ ನಲ್ಲಿ ಗಮನಸೆಳೆಯುವ ಅಂಶಗಳಲ್ಲಿ ಸಂಭಾಷಣೆಯೇ ಕಿವಿಗೆ ಇಂಪು ತಂಪು.

  "ಮರಿ ಈ ಟ್ರೇಲರ್ ನೋಡಿದ್ದೀಯಾ....ಹೊಸ ಎಕ್ಸ್ ಪೆರಿಮೆಂಟ್ ಅಂತೆ. ಒಂದು ಗೆಲ್ಲುತ್ತೆ ಅಂದ್ರೆ ಎಲ್ಲಾ ಗೆಲ್ಲುತ್ತಾ" ಎಂಬ ಮಾತಿನೊಂದಿಗೆ 'ಬಹುಪರಾಕ್' ಟ್ರೇಲರ್ ಆರಂಭವಾಗುತ್ತದೆ. ಪ್ರಯೋಗಕ್ಕೆ ಸಾವಿದೆ ಪ್ರಯತ್ನಕ್ಕಲ್ಲ ಎಂಬ ಉತ್ತರವೂ ಈ ಇಲ್ಲಿದೆ. ಇಷ್ಟಕ್ಕೂ ಈ ಟ್ರೇಲರ್ ನಲ್ಲಿ ಅಂತಹದ್ದೇನಿದೆ...

  'ಸಿಂಪಾಲ್ಲಾಗ್ ಒಂದ್ ಲವ್ ಸ್ಟೋರಿ'ಯ ಹೀರೋ ರಕ್ಷಿತ್ ಶೆಟ್ಟಿ ಚಿತ್ರದಲ್ಲಿ ಪ್ರಮುಖ ಪಾತ್ರ ಪೋಷಿಸಿದ್ದಾರೆ. ಈಗಾಗಲೆ ಬಹುಪರಾಕ್ ಚಿತ್ರೀಕರಣ ಭರದಿಂದ ಸಾಗಿದೆ. ವಿಶೇಷ ಎಂದರೆ ಸಿಂಪಲ್ಲಾಗ್ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದರು. ಇಲ್ಲಿ ರಕ್ಷಿತ್ ಅವರದು ಅತಿಥಿ ಪಾತ್ರ.

  ಭರತ್ ಬಿಜೆ ಅವರ ಸಂಗೀತ, ಮನೋಹರ್ ಜೋಶಿ ಅವರ ಛಾಯಾಗ್ರಹಣ 'ಬಹುಪರಾಕ್' ಚಿತ್ರಕ್ಕಿದೆ. ಚಿತ್ರದ ನಾಯಕಿ ಮೇಘನಾ ರಾಜ್. ಈ ಚಿತ್ರಕ್ಕೆ 'ಕನ್ನಡ ಪ್ರಭ' ಸಿನಿಮಾ ಪತ್ರಕರ್ತ ಹರಿ ಅವರ ಸಂಭಾಷಣೆ ಇದೆ. ಹೇಮಂತ್ ಹಾಗೂ ಸುರೇಶ್ ಬೈರಸಂದ್ರ ಚಿತ್ರದ ನಿರ್ಮಾಪಕರು. ಕಥನ, ರಚನ, ವಚನ, ಗೀತರಚನ, ನಿರ್ದೇಶನ ಸುನಿ. ಸ್ಲೈಡ್ ಗಳಲ್ಲಿ ಚಿತ್ರದ ಒಂದಷ್ಟು ಡೈಲಾಗ್ಸ್....

  ಹುಟ್ಟು ಉಚಿತ ಸಾವೂ ಕೂಡಾ ಉಚಿತ

  ಹುಟ್ಟು ಉಚಿತ ಸಾವೂ ಕೂಡಾ ಉಚಿತ

  ಹುಟ್ಟು ಉಚಿತ, ಬದುಕಿಗೆ ಸರಿಯಾದ ಬೆಲೆ ಕಟ್ಟದಿದ್ದರೆ ಸಾವು ಕೂಡಾ ಉಚಿತ. ಲವ್ ಅಂದ ಮೇಲೆ ಕಾಮಿಡಿ ಇರುತ್ತದೆ, ಆಕ್ಷನ್ ಸೆಂಟಿಮೆಂಟ್ ಟ್ರ್ಯಾಜಿಡಿನೂ ಇರುತ್ತದೆ, ಬಟ್ ಇವನ್ನೆಲ್ಲಾ ಫ್ರೆಂಡ್ ಶಿಪ್ ಅನ್ನೋ ರಿಮೋಟ್ ಆಪರೇಟ್ ಮಾಡುತ್ತೆ.

  ಹುಕ್ಕಾ ಹೊಡೆಯುವ ನಾಯಕ ನಟ ಕಿಟ್ಟಿ

  ಹುಕ್ಕಾ ಹೊಡೆಯುವ ನಾಯಕ ನಟ ಕಿಟ್ಟಿ

  ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಹುಕ್ಕಾ ಹೊಡೆಯುತ್ತಾರೆ. ಹೀಗೂ ಒಂದು ಡೈಲಾಗ್ ಇದೆ...ಊರಿಗೊಬ್ಬನೇ ಗೌಡ ಇರ್ಬೇಕು ಸಿನಿಮಾಗೆ ಒಬ್ಬನೇ ಹೀರೋ ಇರಬೇಕು.

  ಲವ್ ರೋಡ್ ಆದ್ರೆ ಫ್ರೆಂಡ್ಶಿಪ್ ಹಮ್ಸ್ ಇದ್ದಂತೆ

  ಲವ್ ರೋಡ್ ಆದ್ರೆ ಫ್ರೆಂಡ್ಶಿಪ್ ಹಮ್ಸ್ ಇದ್ದಂತೆ

  ಈ ಮಣಿ ತುಂಡ್ ತುಂಡ್ ಆಗಿ ಕತ್ತರಿಸಲ್ಲ, ಇಂಚ್ ಇಂಚ್ ಆಗಿ ಕುಯ್ತಾನೆ...ಲವ್ ರೋಡ್ ಆದ್ರೆ ಫ್ರೆಂಡ್ಶಿಪ್ ಹಮ್ಸ್ ಇದ್ದಂತೆ...ಲವ್ ಮಾಡೋದಕ್ಕೆ ಹೋದಾಗ್ಲೆಲ್ಲಾ ಹಮ್ಸ್ ಅಡ್ಡ ಬರುತ್ತೆ...

  ಬಲಗೈಗೆ ರಾಖಿ ಕಟ್ಟಿದ್ದಿದ್ರೆ ಕೆಮ್ಮಂಗಿರ್ತಿರಲಿಲ್ಲ

  ಬಲಗೈಗೆ ರಾಖಿ ಕಟ್ಟಿದ್ದಿದ್ರೆ ಕೆಮ್ಮಂಗಿರ್ತಿರಲಿಲ್ಲ

  ಆ ಹೊತ್ತು ಎಡಗೈಗೆ ವಾಚ್ ಕೊಡಿಸೋ ಬದ್ಲು ಬಲಗೈಗೆ ರಾಖಿ ಕಟ್ಟಿದ್ದಿದ್ರೆ ಕೆಮ್ಮಂಗಿರ್ತಿಲಿಲ್ಲ ಅಂತಾಳೆ ನಾಯಕಿ. ಇದಕ್ಕೆ ನಾಯಕ ಉತ್ತರ...ನಾವೂ ಅಷ್ಟೇ ಕಾಲಿಗೆ ಗೆಜ್ಜೆ ಕಟ್ಟೋಬದ್ಲು ಕತ್ತಿಗೆ ತಾಳಿ ಕಟ್ಟಿದ್ದಿದ್ರೆ ಕೆಮ್ಮೇನು ವಾಂತಿನೇ ಮಾಡಿಸ್ಬಿಡ್ತಿದ್ದೆ..

  ಎಲ್ಲಾ ನಾಯಿಗಳಿಗೂ ಒಂದೇ ತರಹ ಅಲ್ಲ

  ಎಲ್ಲಾ ನಾಯಿಗಳಿಗೂ ಒಂದೇ ತರಹ ಅಲ್ಲ

  ಎಲ್ಲಾ ನಾಯಿಗಳಿಗೂ ಕಲ್ಲೆತ್ತಿಕೊಂಡು ಹೊಡೆಯೋ ಹಂಗಿಲ್ಲ ಕೆಲವಕ್ಕೆ ಕಲ್ ಎತ್ತಿಕೊಂಡಂತೆ ಆಕ್ಟ್ ಮಡಿದ್ರೆ ಸಾಕು ಓಡಿ ಹೋಗುತ್ತವೆ....

  ನೀನು ನನ್ನನ್ನು ಇಟ್ಟುಕೊಂಡ್ರು ಪರ್ವಾಗಿಲ್ಲ

  ನೀನು ನನ್ನನ್ನು ಇಟ್ಟುಕೊಂಡ್ರು ಪರ್ವಾಗಿಲ್ಲ

  ನಾಯಕಿ ಅಂತಾಳೆ: ನೀನು ನನ್ನನ್ನು ಇಟ್ಟುಕೊಂಡ್ರು ಪರ್ವಾಗಿಲ್ಲ ಜೀವನ ಪೂರ್ತಿ ನಿನ್ನ ಜೊತೆನೇ ಕಳೀತೀನಿ. ನಾಯಕ ಹೇಳ್ತಾನೆ: ಒಂದೇ ದಿನ ಬದುಕಿದ್ರೂ ಪರ್ವಾಗಿಲ್ಲ ಕಟ್ಟಿಕೊಂಡೇ ಬಾಳ್ತೀನಿ...

  ಸಿಂಪಲ್ ಪ್ರೀತಿ ಅಲಕ್ ಬುಲಕ್

  ಸಿಂಪಲ್ ಪ್ರೀತಿ ಅಲಕ್ ಬುಲಕ್

  ನನಗೆ ವಿಕೆಟ್ ತೆಗೀಬೇಕು ಅನ್ನಿಸಿದಾಗಲೆಲ್ಲಾ ಬೌಲಿಂಗ್ ಅಲ್ಲ ಬ್ಯಾಟಿಂಗ್ ಆಡ್ತೀನಿ..ಒಂದು ಅವನು ಸಾಯಬೇಕು ಇಲ್ಲಾ ನಾನು ಬದುಕಬೇಕು. ಟ್ರೇಲರ್ ಕೊನೆಯಲ್ಲಿ ಬರುವ ಹಾಡು ಸಿಂಪಲ್ ಪ್ರೀತಿ ಅಲಕ್ ಬುಲಕ್ ಹುಡುಗೀರ ಹೃದಯಕ್ಕೆ ಬಹುಪರಾಕ್.

  English summary
  Diamond Star Srinaga Kitty forthcoming movie Bahuparak directed by Simple aag Ondu Love Story famed director, Suni. Bahuparak will portray Kitty in four different shades. Meghana Raj is the female lead of the film. Here is the few dialogues and trailer of the Bahuparak.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X