ಆರು ತಿಂಗಳಲ್ಲಿ ಇಷ್ಟೆಲ್ಲಾ ವಿವಾದಗಳು ನಡೆದವೆ?
2013 ಲಕ್ಕಿ ಇಯರ್ ಅನ್ಕೊಳ್ತಿದ್ದ ಹಾಗೇ ಜನವರಿ 1 ಅಂದ್ರೆ ಹೊಸವರ್ಷದ ಮೊದಲ ದಿನವೇ ಶುರುವಾಗಿದ್ದು ಅಯೋಧ್ಯಪುರಂ ಟೈಟಲ್ ಕಾಂಟ್ರೋವರ್ಸಿ....ಕರುನಾಡ ಸೇನೆಯವ್ರು ಚಿತ್ರದ ಟೈಟಲ್ ಬದಲಿಸಿಬೇಕು ಅಂತ ಚಿತ್ರತಂಡದ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ರು.
ಇದಾದಗ್ತಿದ್ದ ಹಾಗೇ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನೀರ್ ದೋಸೆ ಚಿತ್ರದಿಂದ ಹೊರಬಂದಿದ್ದು ಕೂಡ ಸಾಕಷ್ಟು ಸುದ್ದಿ ಮಾಡ್ತು. ಈ ವಿಷ್ಯ ತಣ್ಣಗಾಗ್ತಿದ್ದ ಹಾಗೇ ಮತ್ತೆ ಆಕೆ ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದು ಮತ್ತು ರಮ್ಯಾರ ಕೆಲ ಪೋಟೋಗಳು ಇಂಟರ್ ನೆಟ್ ನಲ್ಲಿ ಹರಿದಾಡಿದ್ದು ಕೂಡ ವಿವಾದಕ್ಕ ಎಡೆ ಮಾಡಿಕೊಡ್ತು.
ಸ್ಯಾಂಡಲ್ ವುಡ್ ಸ್ಟಾರ್ ಸಿಂಗರ್ ರಾಜೇಶ್ ಕೃಷ್ಣನ್ ಮತ್ತು ಸಿಂಗರ್ ರಮ್ಯಾ ವಸಿಷ್ಟ ದಾಂಪತ್ಯದಲ್ಲಿ ಬಿರುಕು ಬಿಟ್ಟಿದ್ದು ಸಹ ಇಂಡಸ್ಟ್ರಿಯಲ್ಲಿ ಸಾಕಷ್ಟು ವಿವಾದ ಸೃಷ್ಟಿಮಾಡ್ತು. ಇದ್ರ ಜೊತೆಗೆ ನಟಿ ರಿಷಿಕಾಸಿಂಗ್ ಎಂಗೇಜ್ ಮೆಂಟ್ ಮುರಿದು ಬಿದ್ದು ಆಕೆ ಆಸ್ಪತ್ರೆಗೆ ಸೇರಿದ್ದು ಸಹ ನಿಮ್ಗೆ ಗೊತ್ತೇಯಿದೆ.

ಇಷ್ಟೆಲ್ಲಾ ವಿವಾದಗಳ ನಡುವೆಯೂ ಕನ್ನಡ ಚಿತ್ರರಂಗದ ಹಲವು ದಿಗ್ಗಜರು ಕಣ್ಮರೆಯಾಗಿದ್ದು ಇದೆ. ಮಾರ್ಚ್ 3 ರಂದು ಹಿರಿಯ ನಟಿ ರಾಜಸುಲೋಚನ ಚಿತ್ರರಂಗವನ್ನ ಅಗಲಿದ್ರು. ಏಪ್ರಿಲ್ 14 ರಂದು ಗಾನಕೋಗಿಲೆ ಪಿಬಿ ಶ್ರೀನಿವಾಸ್ ಇಹಲೋಕ ತ್ಯಜಿಸಿದ್ದು ತುಂಬಲಾರದ ನಷ್ಟವೇ ಸರಿ.
ಜೂನ್ 22 ರಂದು 'ನೆರಳು' ಚಿತ್ರ ನಿರ್ದೇಶಕ ವಿನೋದ್ ಕುಮಾರ್ -23 ರಂದು ಹಿರಿಯ ಕಲಾವಿದ ಕುಣಿಗಲ್ ನಾಗಭೂಷಣ್ ಮತ್ತು 25 ರಂದು ಹಿರಿಯ ಕಲಾವಿದೆ ಉಮಾಶಿವಕುಮಾರ್ ನಿಧನಹೊಂದಿದ್ರು. ಅದೇನೇ ಇದ್ರೂ ಕೇವಲ 6 ತಿಂಗಳಲ್ಲಿ ಸ್ಯಾಂಡಲ್‍ವುಡ್‍ನಲ್ಲಿ ಇದೆಲ್ಲಾ ನಡೆದುಹೋಯ್ತು.


Click it and Unblock the Notifications











