»   » ಫೋಟೋಗ್ರಾಫರ್ ವಿರುದ್ಧ ನಟಿ ರಮ್ಯಾ ದೂರು

ಫೋಟೋಗ್ರಾಫರ್ ವಿರುದ್ಧ ನಟಿ ರಮ್ಯಾ ದೂರು

By: ಉದಯರವಿ
Subscribe to Filmibeat Kannada
Actress Ramya
ಗೋಲ್ಡನ್ ಗರ್ಲ್ ರಮ್ಯಾ ಅವರು ಸಿನಿಮಾ ಛಾಯಾಗ್ರಹಕ ಕೆ.ಎನ್.ನಾಗೇಶ್ ಕುಮಾರ್ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಮ್ಮ ಅನುಮತಿ ಇಲ್ಲದೆ ತಮ್ಮ ಫೋಟೋವನ್ನು ವೆಬ್ ಸೈಟ್ ಹಾಗೂ ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ ಎಂದು ರಮ್ಯಾ ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ರಮ್ಯಾ ಅವರ ಲೇಟೆಸ್ಟ್ ಚಿತ್ರ 'ನೀರ್ ದೋಸೆ' ಚಿತ್ರೀಕರಣಕ್ಕೆ ಸಂಬಂಧಿಸಿದ ಚಿತ್ರಗಳನ್ನು ನಾಗೇಶ್ ಅವರು ತೆಗೆದಿದ್ದರು. ಆದರೆ ಆ ಫೋಟೋಗಳನ್ನು ವೆಬ್ ಸೈಟ್ ಅಥವಾ ಟ್ವಿಟ್ಟರ್ ಗೆ ಅಪ್ ಲೋಡ್ ಮಾಡಬಾರದು ಎಂದು ರಮ್ಯಾ ಹೇಳಿದ್ದರು ಎನ್ನಲಾಗಿದೆ.

ಆದರೂ ಬೆಸ್ಟ್ ಕ್ಲಬ್ ನಲ್ಲಿ ನಡೆದ 'ನೀರ್ ದೋಸೆ' ಚಿತ್ರೀಕರಣದ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ ಎಂದು ರಮ್ಯಾ ಆರೋಪಿಸಿದ್ದಾರೆ. ಈ ಸಂಬಂಧ ಅವರು ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ನಾಗೇಶ್ ಅವರು, "ನೀರ್ ದೋಸೆ ಚಿತ್ರೀಕರಣಕ್ಕೆ ನಮ್ಮನ್ನು ಆಹ್ವಾನಿಸಿದ್ದರು. ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಅವರ ಒಂದು ಫೋಟೋವನ್ನು ವೆಬ್ ಸೈಟ್ ಗೆ ಅಪ್ ಲೋಡ್ ಮಾಡಿದ್ದು ನಿಜ. ಆದರೆ ಟ್ವಿಟ್ಟರ್ ನಲ್ಲಿ ಯಾರು ಹಾಕಿದರು ಎಂಬುದು ನಮಗೆ ಗೊತ್ತಿಲ್ಲ. ನಮ್ಮನ್ನು ಅಧಿಕೃತವಾಗಿ ಆಹ್ವಾನಿಸಲಾಗಿತ್ತು. ಹಾಗಾಗಿ ಫೋಟೋ ತೆಗೆದಿದ್ದೇವೆ. ನಾನೇನು ಕದ್ದುಮುಚ್ಚಿ ತೆಗೆದಿಲ್ಲ" ಎಂದಿದ್ದಾರೆ.

"ಈ ಘಟನೆಯಿಂದ ನಮ್ಮಂತಹ ಫೋಟೋಗ್ರಾಫರ್ಸ್ ಗೆ ತುಂಬಾ ಅವಮಾನವಾಗಿದೆ. ನಾವೇನು ಕದ್ದುಮುಚ್ಚಿ ಫೋಟೋ ತೆಗೆದಿಲ್ಲ. ಇದಿಷ್ಟೇ ಅಲ್ಲದೆ ರಮ್ಯಾ ಅವರು ಫೋಟೋ ತೆಗೆಯುವಂತೆ ತಿಳಿಸಿದ ಬಳಿಕ ಅದನ್ನು ವೆಬ್ ಸೈಟಿನಿಂದ ತೆಗೆದಿದ್ದೇವೆ. ಆ ಬಳಿಕವೂ ಅವರು ಕಂಪ್ಲೇಂಟ್ ನೀಡಿದ್ದಾರೆ" ಎಂದು ನಾಗೇಶ್ ಟಿವಿ9 ಕನ್ನಡ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

English summary
Golden Girl Ramya has filed complaint against cinema photographer KN Nagesh Kumar at Ashok Nagar police station. The actress alleged that her photos (Neer Dose shooting stills) were uploading to twitter without her consent. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada