ಬಡ್ಡಿ ಬಂಗಾರಮ್ಮ ಖ್ಯಾತಿಯ ಉಮಾ ಶಿವಕುಮಾರ್ ನಿಧನ

ಉಮಾ ಶಿವಕುಮಾರ್ ಅವರು ಸರಿಸುಮಾರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರೂ ಅವರಿಗೆ ಜನಪ್ರಿಯತೆ ತಂದ ಚಿತ್ರ ಕೊಮ್ಮಿನೇನಿ ನಿರ್ದೇಶನದ ಬಡ್ಡಿ ಬಂಗಾರಮ್ಮ. ಆ ಪಾತ್ರದ ಮೂಲಕ ಜನ ಅವರನ್ನು ಬಡ್ಡಿ ಬಂಗಾರಮ್ಮ ಎಂದೇ ಗುರಿತಿಸುವಷ್ಟರ ಮಟ್ಟಿಗೆ ಜನಪ್ರಿಯರಾದರು.
ಮದುವೆ ಮಾಡಿ ನೋಡು, ಕಾಡು, ಭಾಗ್ಯದ ಲಕ್ಷ್ಮಿ ಬಾರಮ್ಮ, ಮಕ್ಕಳಿರಲವ್ವ ಮನೆತುಂಬ, ಸತಿ ಸಕ್ಕುಬಾಯಿ, ಭಕ್ತ ಸಿರಿಯಾಳ, ನೆನಪಿನ ನೆರಳು, ಮನೆಯೇ ಮಂತ್ರಾಲಯ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಉಮಾ ಅಭಿನಯದ ಚಂದನದ ಗೊಂಬೆ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಒಲಿದಿತ್ತು. ಉಮಾ ಶಿವಕುಮಾರ್ ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.
ಜಗಳಗಂಟಿ ಅತ್ತೆಯಾಗಿ, ಬಾಯಿಬಡಕಿ ತಾಯಿಯಾಗಿ, ಗಂಡುಬೀರಿ, ಬಜಾರಿ ಪಾತ್ರಗಳಲ್ಲಿ ಅವರು ಅಭಿನಯಿಸಿ ಆ ಪಾತ್ರಗಳಿಗೆ ಜೀವ ತುಂಬುತ್ತಿದ್ದರು. ಅದೆಷ್ಟೋ ಮಂದಿಯ ಕೆಂಗಣ್ಣಿಗೂ ಗುರಿಯಾಗುತ್ತಿದ್ದರು. ಬಡ್ಡಿ ಬಂಗಾರಮ್ಮ ಚಿತ್ರದ ಉಮಾ ಶಿವಕುಮಾರ್ ಡೈಲಾಗ್ ವರಸೆ ಹೀಗಿದೆ ನೋಡಿ.
"ಬಂಗಾರದಂತಹ ನನ್ನ ಪಿಂಗಾಣಿ ಪಾತ್ರೆಗಳನ್ನು ಒಡೆದು ಹಾಕಿಬಿಟ್ಟೆಯಲ್ಲೋ ಅಯ್ಯೋ ನಿನ್ನ ಕೈ ಸೇದೋಗ...ಏನೋ ಶೇಷಾ ನಿನ್ನ ನಮಸ್ಕಾರಕ್ಕೆ ಬೆಂಕಿ ಹಾಕ, ಎಲ್ಲೋ ಬಡ್ಡಿ ದುಡ್ಡು, ಎಲ್ಲಾ ಖರ್ಚಾಗೋಯ್ತಾ ನಸುಗುನ್ನಿ, ನಿನ್ನ ಕತ್ತಲ್ಲಿರುವ ತಾಳಿ ಬಿಚ್ಚು...ಕೊಡು ತಾಳೀನ, ಮಾನ ಮರ್ಯಾದೆ ಇಲ್ಲದವನು ಯಾಕೆ ನನ್ನ ಹತ್ರ ಸಾಲ ತಂಗೊಂಡೆ..." (ಒನ್ಇಂಡಿಯಾ ಕನ್ನಡ)


Click it and Unblock the Notifications











