»   »  ಈ ವಾರ ತೆರೆ ಮೇಲೆ 'ಸ್ಟೂಡೆಂಟ್ಸ್'

ಈ ವಾರ ತೆರೆ ಮೇಲೆ 'ಸ್ಟೂಡೆಂಟ್ಸ್'

Posted By:
Subscribe to Filmibeat Kannada

ಸದ್ಯದಲ್ಲಿ ಸ್ಯಾಂಡಲ್ ವುಡ್ ನಲ್ಲಿ ಸಾಮಾಜಿಕ ಕಾರ್ಯಗಳ ಮೂಲಕ ಗಮನ ಸೆಳೆದಿರುವ ಚಿತ್ರತಂಡ ಅಂದ್ರೆ 'ಸ್ಟೂಡೆಂಟ್ಸ್' ಸಿನಿಮಾದವರು. ಪ್ರತಿಭಾನ್ವಿತ ಹೊಸ ಯುವ ನಟರನ್ನು ಒಳಗೊಂಡ ಚಿತ್ರ 'ಸ್ಟೂಡೆಂಟ್ಸ್'. ಈ ಚಿತ್ರ ಈ ವಾರ ಜೂನ್ 16 ರಂದು ಬಿಡುಗಡೆ ಆಗಲಿದ್ದು, ಈ ಬಗ್ಗೆ ಇಂದು ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ದೇಶಕ ಸಂತೋಷ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.[ಸಾಮಾನ್ಯರಲ್ಲಿ ಅಸಮಾನ್ಯರು ಈ 'ಸ್ಟೂಡೆಂಟ್ಸ್'.!]

ಇಂದು ಸಮಾಜದಲ್ಲಿ ಹಲವು ಚಟಗಳಿಗೆ ಒಳಗಾದವರಿಗೆ(ಡ್ರಗ್ ಅಡಿಟ್‌ಗಳಿಗೆ) ನೇರವಾಗಿ ಗದರಿಸಿ ಹೇಳಿದರೆ ಅರ್ಥ ಮಾಡಿಕೊಳ್ಳುವುದಿಲ್ಲ. ಆದರೆ ಅದನ್ನೇ ಪ್ರೀತಿಯಿಂದ ಹೇಳಿದರೆ ಕೇಳುತ್ತಾರೆ. ಅದು ಮಕ್ಕಳಿಗೆ ಆದರೂ ಸಹ ಹೀಗೆ ಹೇಳಬೇಕು. ಈ ನಿಟ್ಟಿನಲ್ಲಿ ಪೋಷಕರಿಗೆ ಹಾಗೂ ಮಕ್ಕಳಿಗೆ ಒಂದು ಸಂದೇಶ ಹೇಳುವ ಚಿತ್ರವನ್ನು ಮನರಂಜನಾತ್ಮಕವಾಗಿ ತೆರೆಮೇಲೆ ತಂದಿರುವುದಾಗಿ ಸಂತೋಷ್ ಕುಮಾರ್ ಸಿನಿಮಾ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

kannada movie 'students' releasing on june 16th

ಚಿತ್ರದಲ್ಲಿ ಸಂಪೂರ್ಣ ಹೊಸಬರ ತಾರಾಬಳವಿದ್ದು, ಅವರನ್ನು ಹುಬ್ಬಳ್ಳಿ, ಧಾರಾವಾಡ, ಮಂಗಳೂರು, ಶಿವಮೊಗ್ಗದಲ್ಲಿ ಮೂರು ಭಾರಿ ಆಡಿಷನ್ ನಡೆಸಿ ಆಯ್ಕೆ ಮಾಡಿ ನಟನೆ ಮಾಡಿಸಲಾಗಿದೆ. ಚಿತ್ರದಲ್ಲಿ 5 ಹಾಡುಗಳಿದ್ದು, 4 ಸಾಂಗ್ ಗಳು ಸಂದರ್ಭಕ್ಕೆ ತಕ್ಕನಾಗಿ ಮತ್ತು ಇನ್ನೊಂದು ಟೈಟಲ್ ಹಾಡಿದೆ. ಚಿತ್ರ ಸಂಪೂರ್ಣ ಮನರಂಜನಾತ್ಮಕವಾಗಿದ್ದು ರಾಜ್ಯದಾದ್ಯಂತ 40 ಥಿಯೇಟರ್ ಗಳಲ್ಲಿ ಬಿಡುಗಡೆ ಆಗುತ್ತಿದೆ. ಚಿತ್ರವನ್ನು ನೋಡಿ ಹರಸಿ ಹಾರೈಸಿ ಎಂದು ನಿರ್ದೇಶಕ ಸಂತೋಷ್ ಹೇಳಿದರು.

kannada movie 'students' releasing on june 16th

ಚಿತ್ರದಲ್ಲಿ ರೇಖಾ ದಾಸ್ ಅಭಿನಯಿಸಿದ್ದು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ತಮ್ಮ ಪಾತ್ರ ಕುರಿತು ಮಾತನಾಡಿ, "ಚಿತ್ರದಲ್ಲಿ ನಾನು ಹಾಸ್ಯ ಪಾತ್ರದಲ್ಲಿ ರಾಮ್ ಪುರೋಹಿತ್ ಎಂಬುವರೊಂದಿಗೆ ಅಭಿನಯಿಸಿದ್ದೇನೆ. ನಾನು ನಟಿಸಿರುವ ಎಲ್ಲಾ ದೃಶ್ಯಗಳು ಬೆಂಗಳೂರಿನಲ್ಲೇ ಚಿತ್ರೀಕರಣಗೊಂಡಿವೆ. ಹೊಸಬರು ತಮ್ಮ ಚಿತ್ರಗಳಿಗೆ ಹಿರಿಯ ನಟ-ನಟಿಯರನ್ನು ಸೇರಿಸಿಕೊಳ್ಳಲು ಹಿಂಜರಿಯುತ್ತಾರೆ. ಆದರೆ ನಮಗೂ ಸಹ ಹೊಸಬರ ತಂಡದಲ್ಲಿ ಅಭಿನಯಿಸುವ ಆಸೆ ಇರುತ್ತದೆ. ಈ ಚಿತ್ರದಲ್ಲಿ ಯುವ ಕಲಾವಿದರೊಂದಿಗೆ ನಟಿಸಿದ್ದು ಬಹಳ ಸಂತೋಷವಾಯಿತು. ಆ ಯುವಕರು ಆಗಾಗ ಏನಾದ್ರು ತಪ್ಪಾಗಿದ್ರೆ ಹೇಳಿ ಮೇಡಂ ಎಂದು ಕೇಳಿಕೊಳ್ಳುತ್ತಿದ್ದರು. ಸಾಮಾನ್ಯವಾಗಿ ಕೆಲವರಿಗೆ ಜಂಬ ಇರುತ್ತೆ. ಆದರೆ ಈ ಯುವಕರು ತುಂಬಾ ಒಳ್ಳೆಯವರು. ಅವರಿಗೆ ಬೆಸ್ಟ್‌ ಆಫ್ ಲಕ್ ಹೇಳುತ್ತೇನೆ" ಎಂದು ಹೇಳಿ ತಮ್ಮ ಮಾತು ಮುಗಿಸಿದರು.

kannada movie 'students' releasing on june 16th

'ಸ್ಟೂಡೆಂಟ್ಸ್' ಚಿತ್ರದಲ್ಲಿ ಹಿರಿಯ ನಟಿ ಭವ್ಯ ರವರು ಟೀಚರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಚಿನ್ ಪುರೋಹಿತ್, ಸಚಿನ್ ಜಿ.ಎಸ್ ಮತ್ತು ಕಿರಣ್ ಎಂಬುವವರು ಚಿತ್ರದ ನಾಯಕರಾಗಿದ್ದು, ಇವರಿಗೆ ನಾಯಕಿಯರಾಗಿ ಭವ್ಯ ಕೃಷ್ಣ, ಅಂಕಿತ ಮತ್ತು ಸುವರ್ಣ ಶೆಟ್ಟಿ ಕಾಣಿಸಿಕೊಂಡಿದ್ದಾರೆ.[ಸ್ಯಾಂಡಲ್ ವುಡ್ 'ಸ್ಟೂಡೆಂಟ್ಸ್'ಗೆ ಸಾ.ರಾ ಗೋವಿಂದು ಸಾಥ್]

ಕಥೆ-ಚಿತ್ರಕಥೆ ಬರೆದು ನಿರ್ದೇಶನದ ಜೊತೆಗೆ ಸಂತೋಷ್ ಕುಮಾರ್ ಚಿತ್ರವನ್ನು ನಿರ್ಮಾಣ ಸಹ ಮಾಡಿದ್ದಾರೆ. ಹಾವೇರಿ ಮೂಲದ ವಿ.ಎಚ್.ಹೇಮಂತ್ ಕುಮಾರ್ ರವರು ಸಂಭಾಷಣೆ ಬರೆದಿದ್ದಾರೆ. ಜೆ.ಜೆ.ಶರ್ಮಾ ರವರ ಛಾಯಾಗ್ರಹಣ, ಎಡ್ವರ್ಡ್ ರವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

English summary
Kannada Movie 'Students' will release on June 16th. The movie is directed by Santhosh Kumar, features Sachin, Sachin Purohith, Kiran, Bhavya krishna, Ankitha, Suvarna Shetty, veteran actress Bhavya, Rekha Das And Others.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada