For Quick Alerts
  ALLOW NOTIFICATIONS  
  For Daily Alerts

  ಸಾಮಾನ್ಯರಲ್ಲಿ ಅಸಮಾನ್ಯರು ಈ 'ಸ್ಟೂಡೆಂಟ್ಸ್'.!

  By Bharath Kumar
  |

  ಕನ್ನಡದ ಸ್ಟಾರ್ ನಟರ ಅಬ್ಬರ ಮಧ್ಯೆ ಪ್ರತಿಭಾನ್ವಿತ ಯುವ ನಟರು ಎಂಟ್ರಿಗೆ ಸ್ಯಾಂಡಲ್ ವುಡ್ ಸಜ್ಜಾಗಿದೆ. ಪವರ್ ಫುಲ್ ಟೈಟಲ್, ಅದಕ್ಕೆ ತಕ್ಕ ನಾಯಕರು, ನಾಯಕಿಯರು ಮತ್ತು ಕಲಾತ್ಮಕ ಚಿತ್ರತಂಡ ಸೇರಿ ಮಾಡಿರುವ ಚಿತ್ರ 'ಸ್ಟೂಡೆಂಟ್ಸ್'. ಎಲ್ಲ ಅಂದುಕೊಂಡಂತೆ ಆದರೇ, ಜೂನ್ 16 ರಂದು ಈ ಸಿನಿಮಾ ತೆರೆಗೆ ಬರಲಿದೆ.

  'ಸ್ಟೂಡೆಂಟ್ಸ್' ಚಿತ್ರದ ಬಗ್ಗೆ ಹೇಳುವುದಾದರೇ ಎಲ್ಲರು ಹೊಸಬರೇ. ಹಾಗಂತ ಸಿನಿಮಾದ ಅನುಭವವಿಲ್ಲ ಎನ್ನುವಂತಿಲ್ಲ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಸಿನಿಮಾ ಜಗತ್ತಿನ ಜೊತೆ ನಂಟು ಇರಿಸಿಕೊಂಡವರೇ.[ಗಾಂಧಿನಗರಕ್ಕೆ ಬರ್ತಿದ್ದಾರೆ ಭರವಸೆಯ 'ಸ್ಟೂಡೆಂಟ್ಸ್']

  ಸಚಿನ್ ಪುರೋಹಿತ್, ಸಚಿನ್ ಜಿ.ಎಸ್ ಮತ್ತು ಕಿರಣ್ ರಾಯಬಾಗಿ ಎಂಬ ಮೂವರು ನಾಯಕರು. ಸಚಿನ್ ಪುರೋಹಿತ್, ಈಗಾಗಲೇ ಟೆಕ್ನಿಶಿಯನ್ ಆಗಿ ಕೆಲಸ ಮಾಡಿದ್ದಾರೆ. ಮತ್ತೆ ಪುಣೆಯಲ್ಲಿ ಆಕ್ಟಿಂಗ್ ಕೋರ್ಸ್ ಮಾಡಿದ್ದಾರೆ. ಸಚಿನ್ ಜಿ.ಎಸ್ ಈ ಚಿತ್ರದ ಮತ್ತೊರ್ವ ನಾಯಕ. ಹಾಲಿವುಡ್ ಸಿನಿಮಾಗಳಿಗೆ ವಿಎಫ್ ಎಕ್ಸ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಇವರು ಕೂಡ ಆಕ್ಟಿಂಗ್ ಕೋರ್ಸ್ ಕೂಡ ಮಾಡಿದ್ದಾರೆ. ಇನ್ನು ಕಿರಣ್ ರಾಯಬಾಗಿ ಇಂಜಿನಿಯರಿಂಗ್ ವಿದ್ಯಾರ್ಥಿ ಆಗಿದ್ದವರು. ಈ ಮೂವರಿಗೆ ಇದು ಚೊಚ್ಚಲ ಚಿತ್ರ. ಒಂದೊಳ್ಳೆ ಮನರಂಜನೆಯ ಜೊತೆಗೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಡ್ತಿರುವ ಇವರು ಸಾಕಷ್ಟು ಕನಸುಗಳನ್ನ ಹೊಂದಿದ್ದಾರೆ.[ಕಾಲೇಜ್ ಕ್ಯಾಂಪಸ್ ಗಳಲ್ಲಿ 'ಸ್ಟೂಡೆಂಟ್ಸ್' ಚಿತ್ರದ ಕಲರವ]

  ಇನ್ನು ಚಿತ್ರದಲ್ಲಿ ಭವ್ಯ ಕೃಷ್ಣ, ಅಂಕಿತ, ಮತ್ತು ಕಿರುತೆರೆ ನಟಿ ಸುವರ್ಣ ಶೆಟ್ಟಿ ಎಂಬ ಮೂವರು ಯುವ ನಟಿಯರಿದ್ದು, ಚಿತ್ರದಲ್ಲಿ ಟೆನ್ನಿಸ್ ತಾರೆ, ಪೊಲಿಟಿಶಿಯನ್ ಮತ್ತು ಸಿನಿಮಾ ತಾರೆ ಆಗಿ ಕಾಣಿಸಿಕೊಂಡಿದ್ದಾರೆ.[ಸಮಾಜಕ್ಕೆ ಮಾದರಿಯಾದ 'ಸ್ಟೂಡೆಂಟ್ಸ್' ಚಿತ್ರತಂಡ]

  ಅಪ್ಪಟ ಯುವ ಪ್ರತಿಭೆಗಳನ್ನ ಕಟ್ಟಿಕೊಂಡು ಸಿನಿಮಾ ಮಾಡಿರುವುದು ನಿರ್ದೇಶಕ ಸಂತೋಷ್ ಕುಮಾರ್. ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜೊತೆಗೆ ನಿರ್ಮಾಣ ಕೂಡ ಮಾಡಿದ್ದಾರೆ. ''ಸ್ಟೂಡೆಂಟ್ಸ್' ಎನ್ನುವುದು ಕೇವಲ ಸಿನಿಮಾವಲ್ಲ, ಇದು ಕಲಿಕೆಯ ಪ್ರತಿರೂಪ ಎನ್ನಬಹುದು. ಕಥೆಯೇ ಚಿತ್ರದ ಜೀವಾಳ. ಸಿನಿಮಾ ನೋಡುವ ಪ್ರೇಕ್ಷಕರಿಗೆ ಮನರಂಜನೆಯ ಜೊತೆಗೆ ಒಂದು ಮೆಸೆಜ್ ಇದೆ'' ಎನ್ನುತ್ತಾರೆ ನಿರ್ದೇಶಕರು.

  ಈ ಚಿತ್ರಕ್ಕೆ ಸಂಭಾಷಣೆ ಬರೆದಿರುವುದು ವಿ.ಎಚ್.ಹೇಮಂತ್ ಹಾವೇರಿ. ಇದು ಇವರ ಚೊಚ್ಚಲ ಸಿನಿಮಾ. ಯಾವುದೇ ಡಬಲ್ ಮೀನಿಂಗ್ ಡೈಲಾಗ್ ಗಳಿಲ್ಲದೇ, ಇಂದಿನ ಪ್ರೇಕ್ಷಕರಿಗೆ ಇಷ್ಟವಾಗುವ ಸಂಭಾಷಣೆಯನ್ನ ನೀಡಿದ್ದಾರಂತೆ.

  ಉಳಿದಂತೆ 'ಸ್ಟೂಡೆಂಟ್ಸ್' ಚಿತ್ರಕ್ಕೆ ಜೆ.ಜೆ.ಶರ್ಮಾ ಅವರ ಛಾಯಾಗ್ರಹಣವಿದ್ದು, ಎಡ್ವರ್ಡ್ ಅವರು ಸಂಗೀತ ನೀಡಿದ್ದಾರೆ. ನೆಲಮನೆ ರಾಘವೇಂದ್ರ ಅವರ ಸಾಹಿತ್ಯ ಚಿತ್ರಕ್ಕಿದೆ. ಒಟ್ನಲ್ಲಿ, ಎಲ್ಲ ಹೊಸ ಪ್ರತಿಭೆಗಳು ಸೇರಿ ಮಾಡಿರುವ 'ಸ್ಟೂಡೆಂಟ್ಸ್' ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ ಭರವಸೆ ಮೂಡಿಸಿದ್ದು, ಜೂನ್ 16 ರಂದು ಈ ಎಲ್ಲ ಕುತೂಗಳಿಗೆ ತೆರೆ ಬೀಳಲಿದೆ.

  English summary
  Kannada Movie Students is all set to release on June 16th all over Karnataka. The movie is directed by Santhosh Kumar, features Sachin, Sachin Purohith, Kiran And Others.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X