2013ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ

By Mahesh

2013ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ರೋಷನ್ ಬೇಗ್ ಅವರು ಭಾನುವಾರ (ಜ.4) ಸಂಜೆ ಪ್ರಕಟಿಸಿದರು. ಅತ್ಯುತ್ತಮ ನಟನಾಗಿ ಹಜ್ ಚಿತ್ರದ ಅಭಿನಯಕ್ಕಾಗಿ ನಿಖಿಲ್ ಮಂಜೂ ಹಾಗೂ ಅತ್ಯುತ್ತಮ ನಟಿಯಾಗಿ ಡಿಸೆಂಬರ್ 1 ಚಿತ್ರದ ನಟಿ ನಿವೇದಿತಾ ಅವರು ಆಯ್ಕೆಯಾಗಿದ್ದಾರೆ.

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳ 2013 ನೇ ಸಾಲಿನ ಆಯ್ಕೆ ಸಮಿತಿಯ ಅಧ್ಯಕ್ಷ ಜಿ. ಕೆ. ಗೋವಿಂದ ರಾವ್ ಅವರ ನೇತೃತ್ವದ ಸಮಿತಿ ಚಿತ್ರಗಳನ್ನು ಆಯ್ಕೆ ಮಾಡಿದೆ. [ನಾನು ಎಂದಿಗೂ ಪ್ರಶಸ್ತಿ ಬಯಸಿದವಳಲ್ಲ]

2013ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಸುಮಾರು 69 ಚಿತ್ರಗಳನ್ನು ವೀಕ್ಷಿಸಿದೆ. 69 ಚಿತ್ರಗಳಲ್ಲಿ ಏಳು ಮಕ್ಕಳ ಚಲನಚಿತ್ರಗಳೂ ಇದ್ದು, ಇದರಲ್ಲಿ ಒಂದು ಮಕ್ಕಳ ಸಿನಿಮಾಗೆ ಪ್ರಶಸ್ತಿ ಲಭ್ಯವಾಗಿದೆ.

ಪ್ರಶಸ್ತಿಗಳಿಗೆ ಅರ್ಹರನ್ನು ಗುರುತಿಸುವಲ್ಲಿ ಸಮಿತಿಯು ಅತ್ಯಂತ ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸಿದೆ ಎಂದು ಸಚಿವ ರೋಷನ್ ಬೇಗ್ ತಿಳಿಸಿದರು. ಪ್ರಶಸ್ತಿ ವಿಜೇತರ ಪಟ್ಟಿ: 2011 | 2012

Nikhil and Niveditha

2013ನೇ ಸಾಲಿನ ಪ್ರಶಸ್ತಿಗೆ ಭಾಜನರಾದವರ ಪಟ್ಟಿ ಇಂತಿದೆ:

ಸಂಖ್ಯೆ ಪ್ರಶಸ್ತಿಗಳ ವಿವರ
ಪ್ರಶಸ್ತಿ ವಿಜೇತರು
ಪ್ರಶಸ್ತಿ ಮೊತ್ತದ ವಿವರ
1 ಡಾ. ರಾಜ್‍ಕುಮಾರ್ ಪ್ರಶಸ್ತಿ ಶ್ರೀನಾಥ್ ಎರಡು ಲಕ್ಷ ರೂ.ಗಳ ನಗದು ಮತ್ತು ಚಿನ್ನದ ಪದಕ
2 ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಪಿ.ಹೆಚ್. ವಿಶ್ವನಾಥ್ ಎರಡು ಲಕ್ಷ ರೂ.ಗಳ ನಗದು ಮತ್ತು ಚಿನ್ನದ ಪದಕ
3 ಡಾ. ವಿಷ್ಣುವರ್ಧನ್ ಪ್ರಶಸ್ತಿ ಕೆ.ವಿ. ಗುಪ್ತ,
ಚಲನಚಿತ್ರ ವಿತರಕ ಹಾಗೂ ನಿರ್ಮಾಪಕ
ಎರಡು ಲಕ್ಷ ರೂ.ಗಳ ನಗದು ಮತ್ತು ಚಿನ್ನದ ಪದಕ
4 ಪ್ರಥಮ ಅತ್ಯುತ್ತಮ ಚಿತ್ರ : ಹಜ್ ನಿರ್ಮಾಪಕ (ಕೆ.ಸಿ.ಎನ್. ಗೌಡ ಪ್ರಶಸ್ತಿ)

ಮೆ: ಸೂರ್ಯ ಎಂಟರ್‍ಟೈನರ್ಸ್, ಉಡುಪಿ
ನಿರ್ದೇಶಕ: ಹೆಚ್.ಎಲ್.ಎನ್. ಸಿಂಹ ಪ್ರಶಸ್ತಿ
ನಿಖಿಲ್ ಮಂಜೂ

ನಿರ್ಮಾಪಕ ಹಾಗೂ ನಿರ್ದೇಶಕ ಇಬ್ಬರಿಗೂ ತಲಾ

ಒಂದು ಲಕ್ಷ ರೂ.ಗಳ ನಗದು ಹಾಗೂ 50 ಗ್ರಾಂನ ಚಿನ್ನದ ಪದಕ

5 ದ್ವಿತೀಯ ಅತ್ಯುತ್ತಮ ಚಿತ್ರ : ಜಟ್ಟ ನಿರ್ಮಾಪಕ:
ಮೆ: ಓಂಕಾರ್ ಮೂವೀಸ್, ಬೆಂಗಳೂರು
ನಿರ್ದೇಶಕ: ಬಿ.ಎಂ. ಗಿರಿರಾಜ್
ನಿರ್ಮಾಪಕ ಹಾಗೂ ನಿರ್ದೇಶಕ ಇಬ್ಬರಿಗೂ ತಲಾ ಎಪ್ಪತ್ತೈದು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ
6 ತೃತೀಯ ಅತ್ಯುತ್ತಮ ಚಿತ್ರ : ಪ್ರಕೃತಿ ನಿರ್ಮಾಪಕ
ಮೆ: ಆರ್ಟ್ ಫಿಲಂಸ್, ಬೆಂಗಳೂರು.
ನಿರ್ದೇಶಕ: ಪಂಚಾಕ್ಷರಿ
ನಿರ್ಮಾಪಕ ಹಾಗೂ ನಿರ್ದೇಶಕ ಇಬ್ಬರಿಗೂ ತಲಾ ಐವತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ
7 ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ : ಇಂಗಳೆ ಮಾರ್ಗ ನಿರ್ಮಾಪಕ
ಮೆ: ವೈಷ್ಣೋ ದೇವಿ ಕ್ರಿಯೇಷನ್ಸ್, ಬಾಗಲಕೋಟೆ

ನಿರ್ದೇಶಕ: ವಿಶಾಲ್‍ರಾಜ್

ನಿರ್ಮಾಪಕ ಹಾಗೂ ನಿರ್ದೇಶಕ ಇಬ್ಬರಿಗೂ ತಲಾ ಎಪ್ಪತ್ತೈದು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ
8 ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ : ಚಾರ್‍ಮಿನಾರ್ ನಿರ್ಮಾಪಕ
(ನರಸಿಂಹರಾಜು ಪ್ರಶಸ್ತಿ)
ಮೆ: ಶ್ರೀ ಸಿದ್ದೇಶ್ವರ ಎಂಟರ್‍ಪ್ರೈಸಸ್
ಚಿಕ್ಕಬಳ್ಳಾಪುರ.

ನಿರ್ದೇಶಕ: ಆರ್. ಚಂದ್ರಶೇಖರ್

ನಿರ್ಮಾಪಕ ಹಾಗೂ ನಿರ್ದೇಶಕ ಇಬ್ಬರಿಗೂ ತಲಾ ಐವತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ
9 ಅತ್ಯುತ್ತಮ ಮಕ್ಕಳ ಚಿತ್ರ : ಹಾಡು ಹಕ್ಕಿ ಹಾಡು ನಿರ್ಮಾಪಕ
ಮೆ: ಗುರುಬಲ ಎಂಟರ್‍ಟೇನರ್ಸ್, ಬೆಂಗಳೂರು.
ನಿರ್ದೇಶಕ: ವಿ. ನಾಗೇಂದ್ರ ಶಾ
ನಿರ್ಮಾಪಕ ಹಾಗೂ ನಿರ್ದೇಶಕ ಇಬ್ಬರಿಗೂ ತಲಾ ಐವತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ
10 ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ ಪ್ರಶಸ್ತಿ : ಅಗಸಿ ಪಾರ್ಲರ್ ನಿರ್ಮಾಪಕ
ಮೆ: ಅನು ಕ್ರಿಯೇಷನ್ಸ್,
ಬಳ್ಳಾರಿ.
ನಿರ್ದೇಶಕ :ಮಹಾಂತೇಶ ರಾಮದುರ್ಗ
ನಿರ್ಮಾಪಕ ಹಾಗೂ ನಿರ್ದೇಶಕ ಇಬ್ಬರಿಗೂ ತಲಾ ಐವತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ
11 ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ : ರಿಕ್ಷಾ ಡ್ರೈವರ್ ( ತುಳು ) ನಿರ್ಮಾಪಕ
ಮೆ: ಮುತ್ತು ಫಿಲಂಸ್, ಮಂಗಳೂರು.
ನಿರ್ದೇಶಕ: ಹ.ಸು. ರಾಜಶೇಖರ್
ನಿರ್ಮಾಪಕ ಹಾಗೂ ನಿರ್ದೇಶಕ ಇಬ್ಬರಿಗೂ ತಲಾ ಐವತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ
12 ಅತ್ಯುತ್ತಮ ನಟ (ಸುಬ್ಬಯ್ಯ ನಾಯ್ಡು ಪ್ರಶಸ್ತಿ)
ನಿಖಿಲ್ ಮಂಜೂ ಚಿತ್ರ : ಹಜ್
ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
13 ಅತ್ಯುತ್ತಮ ನಟಿ ನಿವೇದಿತ

ಚಿತ್ರ : ಡಿಸೆಂಬರ್ - 1

ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
14 ಅತ್ಯುತ್ತಮ ಪೋಷಕ ನಟ
(ಕೆ.ಎಸ್.ಅಶ್ವಥ್ ಪ್ರಶಸ್ತಿ)
ಶರತ್ ಲೋಹಿತಾಶ್ವ
ಚಿತ್ರ : ಮತ್ತೆ ಸತ್ಯಾಗ್ರಹ
ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
15 ಅತ್ಯುತ್ತಮ ಪೋಷಕ ನಟಿ ಭಾಗೀರಥಿ ಬಾಯಿ ಕದಂ
ಚಿತ್ರ : ಅಗಸಿ ಪಾರ್ಲರ್
ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
16 ಅತ್ಯುತ್ತಮ ಕತೆ ಶ್ರೀಲಲಿತೆ
ಚಿತ್ರ : ಹಜ್
ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
17 ಅತ್ಯುತ್ತಮ ಚಿತ್ರಕತೆ ಜಯತೀರ್ಥ
ಚಿತ್ರ : ಟೋನಿ
ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
18 ಅತ್ಯುತ್ತಮ ಸಂಭಾಷಣೆ ನಾಗಶೇಖರ್
ಚಿತ್ರ : ಮೈನಾ
ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
19 ಅತ್ಯುತ್ತಮ ಛಾಯಾಗ್ರಹಣ ಪಿ.ಕೆ.ಹೆಚ್. ದಾಸ್
ಚಿತ್ರ : ಚಂದ್ರ
ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
20 ಅತ್ಯುತ್ತಮ ಸಂಗೀತ ನಿರ್ದೇಶನ ಪೂರ್ಣಚಂದ್ರ ತೇಜಸ್ವಿ
ಚಿತ್ರ : ಲೂಸಿಯಾ
ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
21 ಅತ್ಯುತ್ತಮ ಸಂಕಲನ ಕೆ.ಎಂ. ಪ್ರಕಾಶ್
ಚಿತ್ರ : ಟೋನಿ
ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
22 ಅತ್ಯುತ್ತಮ ಬಾಲ ನಟ ಮಾಸ್ಟರ್ ಪ್ರದ್ಯುಮ್ನ
ಚಿತ್ರ : ಕರಿಯಾ ಕಣ್‍ಬಿಟ್ಟ
ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
23 ಅತ್ಯುತ್ತಮ ಬಾಲ ನಟಿ ಬೇಬಿ ಶ್ರೇಯಾ
ಚಿತ್ರ: ಅತಿ ಅಪರೂಪ
ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
24 ಅತ್ಯುತ್ತಮ ಕಲಾ ನಿರ್ದೇಶನ ರವಿ
ಚಿತ್ರ : ಭಜರಂಗಿ
ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
25 ಅತ್ಯುತ್ತಮ ಗೀತ ರಚನೆ ಅರಸು ಅಂತಾರೆ

ಗೀತೆ : ಮಳೆ ಹನಿಯೇ
ಕಣ್ಣೀರ ಹಾಕಿದಂತೆ

ಚಿತ್ರ : ಮದರಂಗಿ

ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
26 ಅತ್ಯುತ್ತಮ ಹಿನ್ನಲೆ ಗಾಯಕ ನವೀನ್ ಸಜ್ಜು

ಹಾಡು : ಎದೆಯೊಳಗೆ ತಮತಮ ತಮಟೆ...
ಚಿತ್ರ : ಲೂಸಿಯಾ

ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
27 ಅತ್ಯುತ್ತಮ ಹಿನ್ನಲೆ ಗಾಯಕಿ ಸಚಿನಾ ಹೆಗ್ಗಾರ್

ಗೀತೆ : ಹೆದರ್‍ಬ್ಯಾಡ್ರಿ ಅಂತ...

ಚಿತ್ರ : ಕಡ್ಡಿಪುಡಿ

ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ

More from Filmibeat

English summary
Karnataka state film awards 2013 announced. Here is the complete list. Best actor Nikhil Manju, Best actress Niveditha, Best film Hajj, Second best film Jatta and 3rd best film Prakruthi. The awards list announced by Information minister Roshan Baig on 4th Jan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X