»   » ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಕಂಪ್ಲೀಟ್ ಲಿಸ್ಟ್

ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಕಂಪ್ಲೀಟ್ ಲಿಸ್ಟ್

Posted By:
Subscribe to Filmibeat Kannada

2011ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿಯನ್ನು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಗುರುವಾರ (ಮಾ.14) ಮಧ್ಯಾಹ್ನ ಪ್ರಕಟಿಸಿದರು. ಅತ್ಯುತ್ತಮ ನಟನಾಗಿ ಅರ್ಜುನ್ ಸರ್ಜಾ ಹಾಗೂ ಅತ್ಯುತ್ತಮ ನಟಿಯಾಗಿ ಭಾವನಾ ಆಯ್ಕೆಯಾಗಿದ್ದಾರೆ.

ನಟ ಅನಂತ್ ನಾಗ್ ಅವರು ವಿಷ್ಣುವರ್ಧನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನಾದಬ್ರಹ್ಮ ಬಿರುದಾಂಕಿತ ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಜೀವಮಾನ ಸಾಧನೆಗಾಗಿ ಡಾ.ರಾಜ್ ಕುಮಾರ್ ಪ್ರಶಸ್ತಿ ಗೌರವ ನೀಡಲಾಗಿದೆ.

ಕನ್ನಡ ಚಿತ್ರರಂಗದ ಸುಪ್ರಸಿದ್ಧ ಚಲನಚಿತ್ರ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅವರನ್ನೊಳಗೊಂಡ ಒಂಬತ್ತು ಸದಸ್ಯರ ಆಯ್ಕೆ ಸಮಿತಿ ಈ ಬಾರಿಯ ಪ್ರಶಸ್ತಿಗಳನ್ನು ಆಯ್ಕೆ ಮಾಡಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಸುನೀಲ್ ಕುಮಾರ್ ದೇಸಾಯಿ, ಪ್ರಶಸ್ತಿಗಳಿಗೆ ಅರ್ಹರನ್ನು ಗುರುತಿಸುವಲ್ಲಿ ಸಮಿತಿಯು ಅತ್ಯಂತ ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ಅನೂರಾಧ, ಹಿರಿಯ ನಟಿ ಭವ್ಯಾ, ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಬಸವರಾಜು, ವಾರ್ತಾ ಇಲಾಖೆಯ ನಿರ್ದೇಶಕ ಎನ್. ಆರ್. ವಿಶುಕುಮಾರ್ ಅವರೂ ಸೇರಿದಂತೆ ಹಲವು ಗಣ್ಯರ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

1. ಪ್ರಥಮ ಅತ್ಯುತ್ತಮ ಚಿತ್ರ : ಪ್ರಸಾದ್

ನಿರ್ದೇಶಕ (ಹೆಚ್.ಎಲ್.ಎನ್. ಸಿಂಹ ಪ್ರಶಸ್ತಿ) ಮನೋಜ್ ಸತಿ. ನಿರ್ಮಾಪಕ ಅಶೋಕ್ ಖೇಣಿ, ಎ.ಕೆ.ಕೆ. ಎಂಟರ್‍ಟೈನ್‍ಮೆಂಟ್ ಪ್ರೈಲಿ., ಬೆಂಗಳೂರು
ಒಂದು ಲಕ್ಷ ರೂ.ಗಳ ನಗದು ಹಾಗೂ 50 ಗ್ರಾಂನ ಚಿನ್ನದ ಪದಕ.

2. ದ್ವಿತೀಯ ಅತ್ಯುತ್ತಮ ಚಿತ್ರ : ಕೂರ್ಮಾವತಾರ

ನಿರ್ದೇಶಕ: ಗಿರೀಶ್ ಕಾಸರವಳ್ಳಿ, ನಿರ್ಮಾಪಕ: ಬಸಂತ್ ಕುಮಾರ್ ಪಾಟೀಲ್, ಬಸಂತ್ ಪ್ರೊಡಕ್ಷನ್ಸ್, ಬೆಂಗಳೂರು. ಎಪ್ಪತ್ತೈದು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ

3. ತೃತೀಯ ಅತ್ಯುತ್ತಮ ಚಿತ್ರ : ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ

ನಿರ್ದೇಶಕ:ಗೋಪಿ ಪೀಣ್ಯ, ನಿರ್ಮಾಪಕಿ: ರೂಪ ಸೌರವ್, ಸಿರಿ ಪ್ರೊಡಕ್ಷನ್ಸ್, ಬೆಂಗಳೂರು. ಐವತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ

4. ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ : ಸರಸಮ್ಮನ ಸಮಾಧಿ

ನಿರ್ದೇಶಕ: ಕೆ.ಎನ್.ಟಿ. ಶಾಸ್ತ್ರಿ, ನಿರ್ಮಾಪಕ: ಬಸಂತ್ ಕುಮಾರ್ ಪಾಟೀಲ್, ಬಸಂತ್ ಪ್ರೊಡಕ್ಷನ್ಸ್, ಬೆಂಗಳೂರು. ಎಪ್ಪತ್ತೈದು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ

5. ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ : ಸಾರಥಿ

ನಿರ್ದೇಶಕ: ದಿನಕರ್.ಎಸ್. ನಿರ್ಮಾಪಕ: ಕೆ.ವಿ. ಸತ್ಯಪ್ರಕಾಶ್, ಶ್ರೀ ಅರಸೇಶ್ವರಿ ಸಿನಿ ಪ್ರೊಡಕ್ಷನ್ಸ್, ಬೆಂಗಳೂರು. ಐವತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ

6. ಅತ್ಯುತ್ತಮ ಮಕ್ಕಳ ಚಿತ್ರ : ಕಂಸಾಳೆ ಕೈಸಾಳೆ

ನಿರ್ದೇಶಕ: ಟಿ.ಎಸ್. ನಾಗಭರಣ, ನಿರ್ಮಾಪಕ: ಮಹೇಶ್ ನಂಜಯ್ಯ ಮತ್ತು ನಾಗಿಣಿಭರಣ, ಶೃತಾಲಯ ಫಿಲಂಸ್,ಬೆಂಗಳೂರು. ಐವತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ.

7. ಪ್ರಥಮ ನಿರ್ದೇಶಕರ ಅತ್ಯುತ್ತಮ ಚಿತ್ರ ಪ್ರಶಸ್ತಿ : ಸಿದ್ಲಿಂಗು

ನಿರ್ದೇಶಕ: ವಿಜಯ್ ಪ್ರಸಾದ್, ನಿರ್ಮಾಪಕ: ಟಿ.ಪಿ. ಸಿದ್ಧರಾಜು, ಸಾಮಿ ಅಸೋಸಿಯೇಟ್ಸ್, ಬೆಂಗಳೂರು. ಐವತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ.

8. ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ : ಉಜ್ವಾಡು ( ಕೊಂಕಣಿ ಭಾಷೆ )

ನಿರ್ದೇಶಕ: ಕಾಸರಗೋಡು ಚಿನ್ನ, ನಿರ್ಮಾಪಕ: ಕೆ.ಜೆ. ಧನಂಜಯ, ಅನುರಾಧ ಪಡಿಮಾರ್, ಮಿತ್ರ ಮೀಡಿಯ ಪ್ರೈ.ಲಿ., ಬೆಂಗಳೂರು. ಐವತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ

9. ಪುಟ್ಟಣ್ಣ ಕಣಗಾಲ್ ಪ್ರಶಸ್ತಿ: ಡಿ. ರಾಜೇಂದ್ರ ಬಾಬು

ಕನ್ನಡ ಚಿತ್ರರಂಗಕ್ಕೆ ಅಪೂರ್ವ ಕೊಡುಗೆ ನೀಡಿದ ನಿರ್ದೇಶಕರಿಗೆ ನೀಡುವ ಜೀವಮಾನ ಸಾಧನೆ ಪ್ರಶಸ್ತಿ. ಎರಡು ಲಕ್ಷ ರೂ.ಗಳ ನಗದು ಮತ್ತು ಚಿನ್ನದ ಪದಕ.

10. ಡಾ. ರಾಜ್ ಕುಮಾರ್ ಪ್ರಶಸ್ತಿ: ಹಂಸಲೇಖ

ಕನ್ನಡ ಚಿತ್ರರಂಗದ ಸಮಗ್ರ ಬೆಳವಣಿಗೆಗೆ ಅಪೂರ್ವ ಕೊಡುಗೆ ನೀಡಿದ ಸಾಧಕರಿಗೆ ನೀಡುವ ಜೀವಿತಾವಧಿ ಸಾಧನೆ ಪ್ರಶಸ್ತಿ. ಎರಡು ಲಕ್ಷ ರೂ.ಗಳ ನಗದು ಮತ್ತು ಚಿನ್ನದ ಪದಕ

11. ಡಾ. ವಿಷ್ಣುವರ್ಧನ್ ಪ್ರಶಸ್ತಿ: ಅನಂತನಾಗ್

ಕನ್ನಡ ಚಲನಚಿತ್ರ ರಂಗದ ವಿವಿಧ ವಲಯಗಳಲ್ಲಿ ಅಪೂರ್ವ ಸಾಧನೆ ಮಾಡಿದ ಹಿರಿಯ ಚೇತನಗಳಿಗೆ ನೀಡುವ ಜೀವಮಾನ ಸಾಧನೆ ಪ್ರಶಸ್ತಿ. ಎರಡು ಲಕ್ಷ ರೂ.ಗಳ ನಗದು ಮತ್ತು ಚಿನ್ನದ ಪದಕ.

12. ಅತ್ಯುತ್ತಮ ನಟ : ಅರ್ಜುನ್ ಸರ್ಜಾ

ಚಿತ್ರ: ಪ್ರಸಾದ್. (ಸುಬ್ಬಯ್ಯ ನಾಯ್ಡು ಪ್ರಶಸ್ತಿ) ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ.

13. ಅತ್ಯುತ್ತಮ ನಟಿ: ಭಾವನಾ

ಚಿತ್ರ : ಭಾಗೀರಥಿ. ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ.

14. ಅತ್ಯುತ್ತಮ ಪೋಷಕ ನಟ: ಶ್ರೀಧರ್ಕೆ.ಎಸ್.

ಅಶ್ವಥ್ ಪ್ರಶಸ್ತಿ. ಚಿತ್ರ : ಕಂಸಾಳೆ ಕೈಸಾಳೆ. ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ.

15. ಅತ್ಯುತ್ತಮ ಪೋಷಕ ನಟಿ: ಗಿರಿಜಾ ಲೋಕೇಶ್

ಚಿತ್ರ : ಸಿದ್ಲಿಂಗು. ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ

16. ಅತ್ಯುತ್ತಮ ಕಥೆ: ಕುಂ ವೀರಭದ್ರಪ್ಪ

ಚಿತ್ರ: ಕುರ್ಮಾವತಾರ. ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ

17. ಅತ್ಯುತ್ತಮ ಚಿತ್ರಕತೆ: ರವೀಂದ್ರ ಹೆಚ್.ಪಿ. ದಾಸ್

ಚಿತ್ರ : ಮತ್ತೆ ಬನ್ನಿ ಪ್ರೀತ್ಸೋಣ. ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ

18. ಅತ್ಯುತ್ತಮ ಸಂಭಾಷಣೆ: ಗೋಪಿ ಪೀಣ್ಯ

ಚಿತ್ರ: ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ. ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ

19. ಅತ್ಯುತ್ತಮ ಛಾಯಾಗ್ರಹಣ: ಜಿ.ಎಸ್. ಭಾಸ್ಕರ್

ಚಿತ್ರ : ಕುರ್ಮಾವತಾರ. ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ

20. ಅತ್ಯುತ್ತಮ ಸಂಗೀತ ನಿರ್ದೇಶನ: ಅನೂಪ್ ಸೀಲಿನ್

ಚಿತ್ರ : ಸಿದ್ಲಿಂಗು. ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ

21. ಅತ್ಯುತ್ತಮ ಸಂಕಲನ: ಬಿ.ಎಸ್. ಕೆಂಪರಾಜು

ಚಿತ್ರ : ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ. ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ.

22. ಅತ್ಯುತ್ತಮ ಬಾಲ ನಟ : ಮಾಸ್ಟರ್ ಸಂಕಲ್ಪ (ಚಿತ್ರ ಪ್ರಸಾದ್)

ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ

23. ಅತ್ಯುತ್ತಮ ಬಾಲ ನಟಿ: ಬೇವಿ ಸುಹಾಸಿನಿ (ಬಣ್ಣದ ಕೊಡೆ)

ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ

24. ಅತ್ಯುತ್ತಮ ಕಲಾ ನಿರ್ದೇಶನ: ಈಶ್ವರಿ ಕುಮಾರ್ (ಸಾರಥಿ)

ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ

25. ಅತ್ಯುತ್ತಮ ಗೀತ ರಚನೆ: ಡಾ: ಬರಗೂರು ರಾಮಚಂದ್ರಪ್ಪ

ಗೀತೆ : ಬೇರು ಒಂದು ಕಡೆ ಬಳ್ಳಿಬೇರ್ ಒಂದು ಕಡೆ. ಚಿತ್ರ : ಭಾಗೀರಥಿ. ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ

26. ಅತ್ಯುತ್ತಮ ಹಿನ್ನೆಲೆ ಗಾಯಕ: ಆದಿತ್ಯರಾವ್

ಚಿತ್ರ : ಬಾಲ್ ಪೆನ್. ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ

27. ಅತ್ಯುತ್ತಮ ಹಿನ್ನಲೆ ಗಾಯಕಿ: ಅರ್ಚನಾ ಉಡುಪ

ಗೀತೆ : ಬೇರು ಒಂದು ಕಡೆ ಬಳ್ಳಿಬೇರ್ ಒಂದು ಕಡೆ
ಚಿತ್ರ : ಭಾಗೀರಥಿ
ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ

28. ತೀರ್ಪುಗಾರರ ವಿಶೇಷ ಪ್ರಶಸ್ತಿ : ರಾಜನ್

ವಿಭಾಗ: ಸ್ಪೆಷಲ್ ಎಫೆಕ್ಟ್ಸ್. ಚಿತ್ರ: ಸಾರಥಿ. ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ.

English summary
karnataka state film awards 2011 announced. Here is the complete list. Best actor Arjun Sarja, Best actress Bhavana, Best film Prasad, Second best film Koormavatara and 3rd best film Allide Nammane Illi Bande Summane. The awards list announced by Chief Minister Jagadish Shettar on 14th March.
Please Wait while comments are loading...