twitter
    For Quick Alerts
    ALLOW NOTIFICATIONS  
    For Daily Alerts

    ರಾಜ್ಯ ಪ್ರಶಸ್ತಿ ಪ್ರಕಟ: ಪುನೀತ್ ಶ್ರೇಷ್ಠ ನಟ, ರಮ್ಯಾ ಶ್ರೇಷ್ಠ ನಟಿ

    By Mahesh
    |

    ಬೆಂಗಳೂರು, ಅ.25: 2010-11ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾಗಿವೆ. ಪುನೀತ್ ರಾಜ್ ಕುಮಾರ್ ಮತ್ತು ರಮ್ಯಾ ಅವರು ಅತ್ಯುತ್ತಮ ನಟ ಮತ್ತು ನಟಿ ಪ್ರಶಸ್ತಿ ಬಾಚಿಕೊಂಡಿದ್ದಾರೆ.

    2010-11ನೇ ಸಾಲಿನ ಚಲನಚಿತ್ರ ಪರಿಷ್ಕೃತ ಪಟ್ಟಿಯನ್ನು ಶುಕ್ರವಾರ ಬೆಳಗ್ಗೆ ಎಸ್.ಕೆ ಭಗವಾನ್ ನೇತೃತ್ವದ ಸಮಿತಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು. ವಾರ್ತಾ ಸಚಿವ ಸಂತೋಷ್ ಲಾಡ್ ಅವರು ಪಟ್ಟಿಯನ್ನು ಪರಿಶೀಲಿಸಿ ತಮ್ಮ ಅಂಕಿತ ಹಾಕುವ ಮೂಲಕ ಹೊಸ ಪಟ್ಟಿಯನ್ನು ಪ್ರಕಟಿಸಲು ಅನುಮತಿ ಸೂಚಿಸಿದರು.

    ಏನಿದು ವಿವಾದ: ಭಾರತಿ ವಿಷ್ಣುವರ್ಧನ್ ನೇತೃತ್ವದ ಸಮಿತಿ ನೀಡಿದ್ದ ಪಟ್ಟಿಯಲ್ಲಿ ದೋಷ ಕಂಡು ಬಂದಿದೆ. ಸೂಪರ್ ಚಿತ್ರಕ್ಕೆ ಶ್ರೇಷ್ಠ ಚಿತ್ರ ಪ್ರಶಸ್ತಿ ನೀಡಲಾಗಿದೆ. ಸೂಪರ್ ಚಿತ್ರದ ಛಾಯಾಗ್ರಾಹಕರಾಗಿರುವ ಅಶೋಕ್ ಕಶ್ಯಪ್ ಅವರು ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿದ್ದರು. ಇದು ನಿಯಮ ಬಾಹಿರವಾಗಿದೆ ಎಂದು ನಟಿ ಪ್ರಿಯಾ ಹಾಸನ್ ಮತ್ತು ನಿರ್ಮಾಪಕ ಬಸಂತ್ ಕುಮಾರ್ ಪಾಟೀಲ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

    ಹಳೆ ಪಟ್ಟಿಗೆ ತಡೆ ಹಿಡಿಯುವಂತೆ ಹೈಕೋರ್ಟ್ ನೀಡಿದ ಸೂಚನೆ ಮೇರೆಗೆ ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಹೊಸ ಪಟ್ಟಿ ಸಿದ್ಧ ಪಡಿಸಲು ಭಗವಾನ್ ನೇತೃತ್ವದ ಸಮಿತಿಗೆ ಸೂಚಿಸಿತ್ತು.

    karnataka state film awards 2011

    ಅತ್ಯುತ್ತಮ ನಟ, ನಟಿ ಪ್ರಶಸ್ತಿಯು ರು.20 ಸಾವಿರ ನಗದು ಬಹುಮಾನ 100 ಗ್ರಾಂ ಬೆಳ್ಳಿಯ ಪದಕ ಹಾಗೂ ಫಲಕವನ್ನು ಒಳಗೊಂಡಿದೆ. ಡಾ.ರಾಜ್ ಕುಮಾರ್ ಪ್ರಶಸ್ತಿ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಯು ತಲಾ ರು.2 ಲಕ್ಷ ನಗದು ಹಾಗೂ ಚಿನ್ನಲೇಪಿತ ಫಲಕವನ್ನು ಒಳಗೊಂಡಿದೆ.

    2010-11 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿ
    ಕ್ರ.ಸಂ ಪ್ರಶಸ್ತಿಗಳ ವಿವರಗಳು ವಿವರಗಳು ಪ್ರಶಸ್ತಿ ಮೊತ್ತ
    1. ಪ್ರಥಮ ಅತ್ಯುತ್ತಮ ಚಿತ್ರ : ಮಾಗಿಯ ಕಾಲ ರೂ. ಒಂದು ಲಕ್ಷಗಳು ಮತ್ತು 50 ಗ್ರಾಂನ ಚಿನ್ನದ ಪದಕ ಹಾಗೂ ಫಲಕ
    ---
    2. ದ್ವಿತೀಯ ಅತ್ಯುತ್ತಮ ಚಿತ್ರ : ತಮಸ್ಸು ಎ) ನಿರ್ಮಾಪಕರು
    ಸೈಯದ್ ಅಮಾನ್ ಬಚ್ಚನ್
    ಎಂ.ಎಸ್. ರವೀಂದ್ರ
    ಮೆ: ಮೇಘ ಮೂವೀಸ್, ಬೆಂಗಳೂರು
    ರೂ 75 ಸಾವಿರ ಮತ್ತು 100 ಗ್ರಾಂನ ಬೆಳ್ಳಿಯ ಪದಕ ಹಾಗೂ ಫಲಕ
    ಬಿ) ನಿರ್ದೇಶಕರು

    ಆಗ್ನಿ ಶ್ರೀಧರ್
    ರೂ 75 ಸಾವಿರ ಮತ್ತು 100 ಗ್ರಾಂನ ಬೆಳ್ಳಿಯ ಪದಕ ಹಾಗೂ ಫಲಕ

    3. ತೃತೀಯ ಅತ್ಯುತ್ತಮ ಚಿತ್ರ : ಮಾನಸ ಎ) ನಿರ್ಮಾಪಕರು
    ಶ್ರೀಮತಿ ಅನಿತಾ ರಾಣಿ
    ಮೆ: ಅನಿ ಆಟ್ರ್ಸ್, ಬೆಂಗಳೂರು
    ರೂ 50 ಸಾವಿರ ಮತ್ತು 100 ಗ್ರಾಂನ ಬೆಳ್ಳಿಯ ಪದಕ ಹಾಗೂ ಫಲಕ
    ಬಿ) ನಿರ್ದೇಶಕರು
    ಕೋಡ್ಲು ರಾಮಕೃಷ್ಣ
    ರೂ 50 ಸಾವಿರ ಮತ್ತು 100 ಗ್ರಾಂನ ಬೆಳ್ಳಿಯ ಪದಕ ಹಾಗೂ ಫಲಕ
    4. ವಿಶೇಷ ಸಾಮಾಜಿಕ ಪರಿಸರ ಕಥಾ ಚಿತ್ರ : ಬ್ಯಾರಿ
    ಭಾಷೆ: ಬ್ಯಾರಿ ಭಾಷೆ
    ಎ) ನಿರ್ಮಾಪಕರು
    ಅಲ್ತಾಫ್ ಹುಸೇನ್
    ಮೆ: ತಣ್ಣೀರ್ ಫಿಲಂಸ್.
    ರೂ 75 ಸಾವಿರ ಮತ್ತು 50 ಗ್ರಾಂನ ಚಿನ್ನದ ಪದಕ ಹಾಗೂ ಫಲಕ
    ಬಿ) ನಿರ್ದೇಶಕರು
    ಸುವೀರನ್
    ರೂ 75 ಸಾವಿರ ಮತ್ತು 100 ಗ್ರಾಂನ ಬೆಳ್ಳಿಯ ಪದಕ ಹಾಗೂ ಫಲಕ
    5. ಅತ್ಯುತ್ತಮ ಮಕ್ಕಳ ಚಿತ್ರ: ಒಂದೂರಲ್ಲಿ ಎ) ನಿರ್ಮಾಪಕರು
    ಟಿ.ಜಿ. ರಂಗನಾಥ್
    ಮೆ: ಸಾಯಿ ರಕ್ಷಾ ಎಂಟರ್‍ಟೈನ್‍ಮೆಂಟ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು
    ರೂ 50 ಸಾವಿರ ಮತ್ತು 50 ಗ್ರಾಂನ ಚಿನ್ನದ ಪದಕ ಹಾಗೂ ಫಲಕ
    ಬಿ) ನಿರ್ದೇಶಕರು
    ನಿಖಿಲ್ ಮಂಜೂ
    ರೂ 50 ಸಾವಿರ ಮತ್ತು 100 ಗ್ರಾಂನ ಬೆಳ್ಳಿಯ ಪದಕ ಹಾಗೂ ಫಲಕ
    6. ಅತ್ಯುತ್ತಮ ನಟ
    (ಸುಬ್ಬಯ್ಯ ನಾಯ್ಡು ಪ್ರಶಸ್ತಿ)
    ಪುನೀತ್ ರಾಜ್‍ಕುಮಾರ್ ಚಿತ್ರ : ಜಾಕಿ ರೂ 20 ಸಾವಿರ ಮತ್ತು 100 ಗ್ರಾಂನ ಬೆಳ್ಳಿಯ ಪದಕ ಹಾಗೂ ಫಲಕ
    7. ಅತ್ಯುತ್ತಮ ನಟಿ ಕುಮಾರಿ ರಮ್ಯ
    ಚಿತ್ರ : ಸಂಜು ವೆಡ್ಸ್ ಗೀತಾ
    ರೂ 20 ಸಾವಿರ ಮತ್ತು 100 ಗ್ರಾಂನ ಬೆಳ್ಳಿಯ ಪದಕ ಹಾಗೂ ಫಲಕ
    8. ಅತ್ಯುತ್ತಮ
    ಪೋಷಕ ನಟ
    (ಕೆ.ಎಸ್.ಅಶ್ವಥ್ ಪ್ರಶಸ್ತಿ)
    ಅಚ್ಯುತ್ ಕುಮಾರ್
    ಚಿತ್ರ: ಹೆಜ್ಜೆಗಳು
    ರೂ 20 ಸಾವಿರ ಮತ್ತು 100 ಗ್ರಾಂನ ಬೆಳ್ಳಿಯ ಪದಕ ಹಾಗೂ ಫಲಕ
    9. ಅತ್ಯುತ್ತಮ
    ಪೋಷಕ ನಟಿ
    ಕುಮಾರಿ ಹರ್ಷಿಕಾ ಪೂಣಚ್ಚ
    ಚಿತ್ರ: ತಮಸ್ಸು
    ರೂ 20 ಸಾವಿರ ಮತ್ತು 100 ಗ್ರಾಂನ ಬೆಳ್ಳಿಯ ಪದಕ ಹಾಗೂ ಫಲಕ
    10. ಅತ್ಯುತ್ತಮ
    ಕಂಠದಾನ ಕಲಾವಿದ
    ಶೃಂಗೇರಿ ರಾಮಣ್ಣ
    ಚಿತ್ರ: ವೀರಬಾಹು
    ರೂ 20 ಸಾವಿರ ಮತ್ತು 100 ಗ್ರಾಂನ ಬೆಳ್ಳಿಯ ಪದಕ ಹಾಗೂ ಫಲಕ
    11. ಅತ್ಯುತ್ತಮ
    ಕಂಠದಾನ ಕಲಾವಿದೆ
    ಕುಮಾರಿ ಅನುಶ್ರೀ
    ಚಿತ್ರ: ಮುರಳಿ ಮೀಟ್ಸ್ ಮೀರಾ
    ರೂ 20 ಸಾವಿರ ಮತ್ತು 100 ಗ್ರಾಂನ ಬೆಳ್ಳಿಯ ಪದಕ ಹಾಗೂ ಫಲಕ
    12. ಅತ್ಯುತ್ತಮ
    ಕಥೆ ಬರಹಗಾರ
    ಈಶ್ವರಚಂದ್ರ
    ಚಿತ್ರ: ಮಾಗಿಯ ಕಾಲ
    ರೂ 20 ಸಾವಿರ ಮತ್ತು 100 ಗ್ರಾಂನ ಬೆಳ್ಳಿಯ ಪದಕ ಹಾಗೂ ಫಲಕ
    13. ಅತ್ಯುತ್ತಮ
    ಚಿತ್ರಕಥೆ ಬರಹಗಾರ
    ಆಗ್ನಿ ಶ್ರೀಧರ್
    ಚಿತ್ರ: ತಮಸ್ಸು
    ರೂ 20 ಸಾವಿರ ಮತ್ತು 100 ಗ್ರಾಂನ ಬೆಳ್ಳಿಯ ಪದಕ ಹಾಗೂ ಫಲಕ
    14. ಅತ್ಯುತ್ತಮ
    ಸಂಭಾಷಣೆಕಾರ
    ಲಕ್ಷ್ಮೀಪತಿ ಕೋಲಾರ
    ಚಿತ್ರ: ಭಗವತಿ ಕಾಡು
    ರೂ 20 ಸಾವಿರ ಮತ್ತು 100 ಗ್ರಾಂನ ಬೆಳ್ಳಿಯ ಪದಕ ಹಾಗೂ ಫಲಕ
    15. ಅತ್ಯುತ್ತಮ
    ಛಾಯಾಗ್ರಾಹಕ
    ಬಿ.ಎಲ್. ಬಾಬು
    ಚಿತ್ರ: ಒಂದೂರಲ್ಲಿ
    ರೂ 20 ಸಾವಿರ ಮತ್ತು 100 ಗ್ರಾಂನ ಬೆಳ್ಳಿಯ ಪದಕ ಹಾಗೂ ಫಲಕ
    16. ಅತ್ಯುತ್ತಮ ಸಂಗೀತ ನಿರ್ದೇಶನ ಜಯಶ್ರೀ ಅರವಿಂದ್
    ಚಿತ್ರ: ಒಂದೂರಲ್ಲಿ
    ರೂ 20 ಸಾವಿರ ಮತ್ತು 100 ಗ್ರಾಂನ ಬೆಳ್ಳಿಯ ಪದಕ ಹಾಗೂ ಫಲಕ
    17. ಅತ್ಯುತ್ತಮ
    ಧ್ವನಿಗ್ರಾಹಕ
    ಪಳನಿ ಡಿ. ಸೇನಾಪತಿ
    ಚಿತ್ರ: ಕಾಲ್ಗೆಜ್ಜೆ
    ರೂ 20 ಸಾವಿರ ಮತ್ತು 100 ಗ್ರಾಂನ ಬೆಳ್ಳಿಯ ಪದಕ ಹಾಗೂ ಫಲಕ
    18. ಅತ್ಯುತ್ತಮ
    ಸಂಕಲನಕಾರ
    ಸುರೇಶ್ ಅರಸ್
    ಚಿತ್ರ: ಐದೊಂದ್ಲ ಐದು
    ರೂ 20 ಸಾವಿರ ಮತ್ತು 100 ಗ್ರಾಂನ ಬೆಳ್ಳಿಯ ಪದಕ ಹಾಗೂ ಫಲಕ
    19. ಅತ್ಯುತ್ತಮ
    ಬಾಲ ನಟ
    ಮಾಸ್ಟರ್ ಚನ್ನಕುಮಾರ್
    ಚಿತ್ರ: ಒಂದೂರಲ್ಲಿ
    ರೂ 20 ಸಾವಿರ ಮತ್ತು 100 ಗ್ರಾಂನ ಬೆಳ್ಳಿಯ ಪದಕ ಹಾಗೂ ಫಲಕ
    20. ಅತ್ಯುತ್ತಮ
    ಬಾಲ ನಟಿ
    ಬೇಬಿ ಪ್ರಕೃತಿ
    ಚಿತ್ರ: ಹೆಜ್ಜೆಗಳು
    ರೂ 20 ಸಾವಿರ ಮತ್ತು 100 ಗ್ರಾಂನ ಬೆಳ್ಳಿಯ ಪದಕ ಹಾಗೂ ಫಲಕ
    21. ಅತ್ಯುತ್ತಮ ಕಲಾ ನಿರ್ದೇಶಕ ಇಸ್ಮಾಯಿಲ್
    ಚಿತ್ರ: ಸಂಜು ವೆಡ್ಸ್ ಗೀತಾ
    ರೂ 20 ಸಾವಿರ ಮತ್ತು 100 ಗ್ರಾಂನ ಬೆಳ್ಳಿಯ ಪದಕ ಹಾಗೂ ಫಲಕ
    22. ಅತ್ಯುತ್ತಮ
    ಗೀತ ರಚನೆಕಾರ
    ಎ. ಬಂಗಾರು
    ಗೀತೆ : ಬದುಕಿನಲಿ ಬಯಸಿದೆ ನಾನೊಂದು .......
    ಚಿತ್ರ: ಕಾಲ್ಗೆಜ್ಜೆ
    ರೂ 20 ಸಾವಿರ ಮತ್ತು 100 ಗ್ರಾಂನ ಬೆಳ್ಳಿಯ ಪದಕ ಹಾಗೂ ಫಲಕ
    23. ಅತ್ಯುತ್ತಮ
    ಹಿನ್ನಲೆ ಗಾಯಕ
    ರವೀಂದ್ರ ಸೊರಗಾವಿ
    ಹಾಡು :ಬಂದದಾರಿ ಸರಿಯೋ.......
    ಚಿತ್ರ: ಪುಟ್ಟಕ್ಕನ ಹೈವೇ
    ರೂ 20 ಸಾವಿರ ಮತ್ತು 100 ಗ್ರಾಂನ ಬೆಳ್ಳಿಯ ಪದಕ ಹಾಗೂ ಫಲಕ
    24. ಅತ್ಯುತ್ತಮ
    ಹಿನ್ನಲೆ ಗಾಯಕಿ
    ರಕ್ಷಾ ಪ್ರಿಯರಾಮ್ ಹಾಡು:
    ಹಕ್ಕಿಗೆಲ್ಲಾ ಮಾತುಬಂತು ಈಗೀಗ ......
    ಚಿತ್ರ: ಒಂದೂರಲ್ಲಿ
    ರೂ 20 ಸಾವಿರ ಮತ್ತು 100 ಗ್ರಾಂನ ಬೆಳ್ಳಿಯ ಪದಕ ಹಾಗೂ ಫಲಕ
    25. ವಿಶೇಷ ಪ್ರಶಸ್ತಿ (ವಿಶೇಷ ತಾಂತ್ರಿಕ ವಿಷಯಗಳು ವೇಷಭೂಷಣ ಮತ್ತು ಇತರ ಪ್ರಶಸ್ತಿಗಳು)
    ಚಿತ್ರ: ಸೂಪರ್( ಗ್ರ್ಯಾಫಿಕ್ಸ್ ವಿನ್ಯಾಸಕ್ಕಾಗಿ )
    ರೂ 20 ಸಾವಿರ ಮತ್ತು 100 ಗ್ರಾಂನ ಬೆಳ್ಳಿಯ ಪದಕ ಹಾಗೂ ಫಲಕ
    26. ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ : ನಾ ಪುಟ್ಟ್‍ನ ಮಣ್ಣ್
    ಭಾಷೆ: ಕೊಡವ
    ನಿರ್ಮಾಪಕರು :
    ಸುರೇಶ್ ನಂಜಪ್ಪ
    ಮೆ: ಅಶ್ವಿನಿ ಸಿನಿ ಕ್ರಿಯೇಷನ್ಸ್, ಬೆಂಗಳೂರು
    ರೂ 20 ಸಾವಿರ ಮತ್ತು 100 ಗ್ರಾಂನ ಬೆಳ್ಳಿಯ ಪದಕ ಹಾಗೂ ಫಲಕ
    27. ದಿ. ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ( ಕನ್ನಡ ಚಿತ್ರರಂಗಕ್ಕೆ ಅಪೂರ್ವ ಕೊಡುಗೆ ನೀಡಿದ ನಿರ್ದೇಶಕರಿಗೆ ನೀಡುವ ಜೀವಮಾನ ಸಾಧನೆ ಪ್ರಶಸ್ತಿ ) ಭಾರ್ಗವ
    ರೂ 2 ಲಕ್ಷ ಮತ್ತು ಚಿನ್ನಲೇಪಿತ ಫಲಕ
    28. ಡಾಃ ರಾಜ್‍ಕುಮಾರ್ ಪ್ರಶಸ್ತಿ ( ಕನ್ನಡ ಚಿತ್ರರಂಗದ ಸಮಗ್ರ ಬೆಳವಣಿಗೆಗೆ ಅಪೂರ್ವ ಕೊಡುಗೆ ನೀಡಿದ ಸಾಧಕರಿಗೆ ನೀಡುವ ಜೀವಿತಾವಧಿ ಸಾಧನೆ ಪ್ರಶಸ್ತಿ ) ಶ್ರೀ ಎಸ್.ಶಿವರಾಂ ರೂ 2 ಲಕ್ಷ ಮತ್ತು ಚಿನ್ನಲೇಪಿತ ಫಲಕ
    29. ಡಾಃ ವಿಷ್ಣುವರ್ಧನ್ ಪ್ರಶಸ್ತಿ ( ಕನ್ನಡ ಚಲನಚಿತ್ರ ರಂಗದ ವಿವಿಧ ವಲಯಗಳಲ್ಲಿ ಅಪೂರ್ವ ಸಾಧನೆ ಮಾಡಿದ ಹಿರಿಯ ಚೇತನಗಳಿಗೆ ನೀಡುವ ಜೀವಮಾನ ಸಾಧನೆ ಪ್ರಶಸ್ತಿ )
    ಶ್ರೀ ಅಂಬರೀಷ್
    ರೂ 2 ಲಕ್ಷ ಮತ್ತು ಚಿನ್ನಲೇಪಿತ ಫಲಕ

    English summary
    The state award for 2010-11 headed by bhagwan has been announced. Puneet Rajkumar is the best actor for Jackie movie and best actress is Ramya for Sanju Weds Geetha. Dr. Rajkumar award has been given to Shivaram and Puttanna Kanagal Award to Director Bhargava. Dr Vishnuvardhan award has gone to Ambareesh.
    Sunday, October 27, 2013, 17:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X