'ಮ್ಯಾಕ್ಸ್' ಕಲೆಕ್ಷನ್ ಮೀರಿಸಲಿಲ್ಲ 'ಥಗ್‌ ಲೈಫ್', 'ಕುಬೇರ'; ಥಿಯೇಟರ್‌ಗಳಿಗೆ ಬೇಕು ವರ್ಷಕ್ಕೆ 2 ಕಿಚ್ಚನ ಸಿನಿಮಾ

2025ರ ಮೊದಲಾರ್ಥವನ್ನು ಭಾರತೀಯ ಚಿತ್ರರಂಗದ ಮುಗಿಸಿದೆ. ಇದರಲ್ಲಿ ಕೆಲವು ಚಿತ್ರರಂಗಕ್ಕೆ ಸಿಹಿ ಮತ್ತೆ ಕೆಲವಕ್ಕೆ ಕಹಿ. ಕನ್ನಡ ಚಿತ್ರರಂಗಕ್ಕೆ ಈ ಆರು ತಿಂಗಳಲ್ಲಿ ಸಿಕ್ಕಿದ್ದು ಸೋಲಿನ ರುಚಿ. ಒಂದೇ ಒಂದು ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಚಮತ್ಕಾರ ಮಾಡಿಲ್ಲ. ಇಂದಿಗೂ ಕರ್ನಾಟಕದ ಟ್ರೇಡ್‌ ಎಕ್ಸ್‌ಪರ್ಟ್‌ಗಳು ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾವನ್ನೇ ಉದಾಹರಣೆಯಾಗಿಟ್ಟುಕೊಳ್ಳುತ್ತಿದ್ದಾರೆ.

ಕಳೆದ ವರ್ಷ ಅಂದರೆ, ಡಿಸೆಂಬರ್ 25, 2024ರಂದು ರಿಲೀಸ್ ಆಗಿದ್ದ 'ಮ್ಯಾಕ್ಸ್' ಕನ್ನಡ ಚಿತ್ರರಂಗಕ್ಕೆ ದೊಡ್ಡ ಯಶಸ್ಸನ್ನು ಕೊಟ್ಟಿತ್ತು. ಹಾಗಂತ ಇದು ಕೇವಲ ಬಾಕ್ಸಾಫೀಸ್ ಗೆಲುವು ಅಷ್ಟೇ ಆಗಿರಲಿಲ್ಲ. ಥಿಯೇಟರ್‌ಗಳಿಗೆ ಜನರ ಬರುತ್ತಿಲ್ಲ ಎಂದು ಗೋಳಾಡಿತ್ತಿದ್ದ ಕಾಲದಲ್ಲಿ ಮತ್ತೆ ಜನರನ್ನು ಚಿತ್ರಮಂದಿರಕ್ಕೆ ಬರುವಂತೆ ಮಾಡಿದ ಸಿನಿಮಾ. ಹೀಗಾಗಿ ಕನ್ನಡ ಚಿತ್ರರಂಗದ ವಿತರಕರು, ಪ್ರದರ್ಶಕರು 'ಮ್ಯಾಕ್ಸ್' ಸಿನಿಮಾವನ್ನೇ ಉದಾಹರಣೆಯಾಗಿ ಇಟ್ಟುಕೊಂಡಿದ್ದಾರೆ.

Kichcha Sudeep Max Day 1 Box Office more than Kamal Haasan s Thug Life and Dhanush Nagarjuna Kubera

ಪ್ಯಾನ್ ಇಂಡಿಯಾ ಕ್ರೇಜ್ ಇರುವ ಸಮಯದಲ್ಲಿ ಪ್ರಾದೇಶಿಕ ಭಾಷೆಯನ್ನಷ್ಟೇ ಗುರಿಯಾಗಿಟ್ಟುಕೊಂಡು 'ಮ್ಯಾಕ್ಸ್' ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು. ವರ್ಷದ ಕೊನೆಯಲ್ಲಿ ಕನ್ನಡ ಚಿತ್ರರಂಗಕ್ಕೆ ಅತೀ ದೊಡ್ಡ ಹಿಟ್ ದಾಖಲಿಸಿತ್ತು. ಅಲ್ಲಿಂದ ಈ ಆರು ತಿಂಗಳಲ್ಲಿ ಇಂತಹ ಮತ್ತೊಂದು ಸಿನಿಮಾ ಬರಲೇ ಇಲ್ಲ. ವಿಶೇಷ ಅಂದರೆ, ಕಮಲ್ ಹಾಸನ್ ಅವರ 'ಥಗ್ ಲೈಫ್', ಧನುಷ್ ನಾಗಾರ್ಜುನ ಅವರ 'ಕುಬೇರ' ಮಲ್ಟಿಸ್ಟಾರರ್ ಆಗಿದ್ದರೂ ಅವರ ರಾಜ್ಯದಲ್ಲಿಯೇ ಮೊದಲ ದಿನ 'ಮ್ಯಾಕ್ಸ್' ಕಲೆಕ್ಷನ್ ಅನ್ನು ಮೀರಿಸುವುದಕ್ಕೆ ಆಗಲಿಲ್ಲ. ಹೀಗಾಗಿ 'ಮ್ಯಾಕ್ಸ್' ಸಿನಿಮಾದಂತೆ ವರ್ಷಕ್ಕೆ 2 ಸಿನಿಮಾ ಬೇಕು ಎನ್ನುವ ಅಭಿಪ್ರಾಯ ಕನ್ನಡ ಚಿತ್ರರಂಗದಲ್ಲಿ ವ್ಯಕ್ತವಾಗುತ್ತಿದೆ.

ಮುಂದೆ ಓದಿ

'ಮ್ಯಾಕ್ಸ್' ಕಲೆಕ್ಷನ್ ಅನ್ನು 'ಥಗ್ ಲೈಫ್', 'ಕುಬೇರ' ಸಿನಿಮಾಗಳು ಹಿಂದಿಕ್ಕಲಿಲ್ಲ '
'ಮ್ಯಾಕ್ಸ್' ಪ್ಯಾನ್ ಇಂಡಿಯಾ ಅಲ್ಲ, ಫ್ರಾಂಚೈಸಿ ಬ್ರ್ಯಾಂಡಿಂಗ್ ಇಲ್ಲ
ಸ್ಯಾಂಡಲ್‌ವುಡ್ ಬಾಕ್ಸಾಫೀಸ್‌ ಪವರ್ ತೋರಿಸಿಕೊಟ್ಟ ಕಿಚ್ಚ ಸುದೀಪ್
ಕಿಚ್ಚ ಸುದೀಪ್ ಸಿನಿಮಾ ವರ್ಷಕ್ಕೆ ಎರಡು ಬೇಕು ಎನ್ನುತ್ತಿರುವ ವಿತರಕರು

ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಮೊದಲ ದಿನ ಕೇವಲ ಕರ್ನಾಟಕದಲ್ಲಷ್ಟೇ ₹12 ಕೋಟಿ ಕಲೆಕ್ಷನ್ ಮಾಡಿತ್ತು. ಇತ್ತೀಚೆಗಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಸೋಲೋ ನಾಯಕನ ಸಿನಿಮಾ ಇಷ್ಟು ಗಳಿಕೆ ಮಾಡಿರಲಿಲ್ಲ. ಅದೂ ಪ್ಯಾನ್ ಇಂಡಿಯಾ ರಿಲೀಸ್ ಮಾಡದೇ, ದೊಡ್ಡ ನಿರ್ಮಾಣ ಸಂಸ್ಥೆಯ ಬ್ರ್ಯಾಂಡಿಂಗ್ ಇಲ್ಲದೆ ಈ ಸಾಧನೆಯನ್ನು 'ಮ್ಯಾಕ್ಸ್' ಮಾಡಿತ್ತು.

Kichcha Sudeep Max Day 1 Box Office more than Kamal Haasan s Thug Life and Dhanush Nagarjuna Kubera

ಇತ್ತೀಚೆಗೆ ತೆರೆಕಂಡಿರುವ ಮಲ್ಟಿಸ್ಟಾರರ್ ಸಿನಿಮಾ ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ತಮಿಳು ನಾಡಿನಲ್ಲಿ ₹10 ರಿಂದ ₹11 ಕೋಟಿಯನ್ನಷ್ಟೇ ಕಲೆ ಹಾಕಿತ್ತು. ನಿನ್ನೆಯಷ್ಟೇ (ಜೂನ್ 20) ತೆರೆಕಂಡಿರುವ ಧನುಷ್-ನಾಗಾರ್ಜನ ಸಿನಿಮಾ ಕೂಡ ತೆಲುಗು ರಾಜ್ಯಗಳಲ್ಲಿ ₹8.75 ಕೋಟಿ ಕಲೆಕ್ಷನ್ ಮಾಡಿದೆ. ಈ ಎರಡು ಸಿನಿಮಾಗಳು ನಾಲ್ಕೈದು ಭಾಷೆಗಳಲ್ಲಿ ರಿಲೀಸ್ ಆಗಿತ್ತು. ಮಲ್ಟಿಸ್ಟಾರ್‌ಗಳು ಇದ್ದರೂ, ದೇಶಾದ್ಯಂತ ಪ್ರಚಾರ ಮಾಡಿದರೂ, 'ಮ್ಯಾಕ್ಸ್' ಕೇವಲ ಕನ್ನಡದಲ್ಲಿ ಗಳಿಸಿದ ₹12 ಕೋಟಿ ಕಲೆಕ್ಷನ್ ಅನ್ನು ಮೀರಿಸಲಿಲ್ಲ.

ವರ್ಷಕ್ಕೆ 2 ಸಿನಿಮಾದ ಬೇಡಿಕೆ

ಕನ್ನಡ ಚಿತ್ರರಂಗದ ಕೆಟ್ಟ ಪರಿಸ್ಥಿತಿ ಚಿತ್ರಮಂದಿರಗಳ ಮೇಲೆ ಬಿದ್ದಿದೆ. ಸಿನಿಮಾಗಳು ಇಲ್ಲದೆ, ಥಿಯೇಟರ್‌ಗಳು ಮುಚ್ಚುವ ಪರಿಸ್ಥಿತಿಗೆ ಬಂದಿವೆ. ಕೆಲವು ಥಿಯೇಟರ್‌ಗಳ ಮಾಲೀಕರು ಸಿಬ್ಬಂದಿಗಳಿಗೆ ಸಂಬಳ ನೀಡುವುದಕ್ಕೆ ಪರದಾಡುತ್ತಿದ್ದಾರೆ. ಈ ಕಾರಣಕ್ಕೆ 'ಮ್ಯಾಕ್ಸ್' ಸಿನಿಮಾದಂತೆ ವರ್ಷಕ್ಕೆ ಸುದೀಪ್ ಎರಡು ಸಿನಿಮಾ ಮಾಡಬೇಕು ಎಂದು ಬೇಡಿಕೆ ಇಡುತ್ತಿದ್ದಾರೆ. ಹೆಚ್ಚಾಗಿ ಸಿಂಗಲ್ ಸ್ಕ್ರೀನ್‌ನ ಮಾಲೀಕರೊಬ್ಬರು "ನಮಗೆ ವರ್ಷಕ್ಕೆ ಕಮ್ಮಿ ಅಂದರೂ ಕಿಚ್ಚ ಸುದೀಪ್ ನಟಿಸುವ ಎರಡು ಸಿನಿಮಾಗಳು ಬೇಕು. ಒಂದು ಸಿನಿಮಾ ಸಾಲುವುದಿಲ್ಲ" ಎಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇದು ಕೇವಲ ಅಭಿಮಾನಿಗಳ ಆಸೆಯಷ್ಟೇ ಅಲ್ಲ. ಪ್ರದರ್ಶಕರ ಅಭಿಲಾಷೆ ಕೂಡ ಹೌದು. ಕಿಚ್ಚ ಸುದೀಪ್ ಸಿನಿಮಾ ರಿಲೀಸ್ ಆದರೆ, ಅಡ್ವಾನ್ಸ್ ಬುಕಿಂಗ್ಸ್ ಚೆನ್ನಾಗಿ ಆಗುತ್ತೆ. ನಗರಗಳಷ್ಟೇ ಅಲ್ಲ, ಸಣ್ಣ ಪಟ್ಟಣಗಳ ಸಿಂಗಲ್ ಸ್ಕ್ರೀನ್‌ಗಳಲ್ಲಿ ಟಿಕೆಟ್ ಸೇಲ್ ಹೆಚ್ಚಾಗುತ್ತೆ. ಈ ಮೂಲಕ ಪ್ರಾದೇಶಿಕ ಚಿತ್ರಮಂದಿರಗಳ ಎಕೋಸಿಸ್ಟಮ್‌ನಲ್ಲಿ ಒಂದೊಳ್ಳೆ ಆತ್ಮವಿಶ್ವಾಸ ಬೆಳೆಯುತ್ತೆ ಎನ್ನುವುದು ಚಿತ್ರಮಂದಿರದ ಪ್ರದರ್ಶಕರ ವಲಯದ ಅಭಿಪ್ರಾಯ.

ಬುಕ್ ಮೈ ಶೋ ಮೂಲಗಳ ಪ್ರಕಾರ "ಟಿಕೆಟ್‌ಗಳನ್ನು ಟ್ರ್ಯಾಕ್ ಮಾಡುವುದಕ್ಕೆ ಶುರು ಮಾಡಿದ್ದಲ್ಲಿಂದ ಮ್ಯಾಕ್ಸ್ ಸಿನಿಮಾ ಅತೀ ಹೆಚ್ಚು ರೆಕಾರ್ಡ್ ಬ್ರೇಕಿಂಗ್ ಬುಕಿಂಗ್ ಆಗಿದೆ." ಎಂದು ಫಿಲ್ಮಿಬೀಟ್‌ ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.

ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ನಂಬಲಿಲ್ಲ

'ಮ್ಯಾಕ್ಸ್' ಸಿನಿಮಾವನ್ನು ಪ್ಯಾನ್ ಇಂಡಿಯಾ ಕಾನ್ಸೆಪ್ಟ್‌ ಇಟ್ಟುಕೊಂಡು ನಿರ್ಮಾಣ ಮಾಡಿರಲಿಲ್ಲ. ಕನ್ನಡ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣ ಮಾಡಲಾಗಿತ್ತು. ನಂಬಿಕೆ ಇಷ್ಟು ಮಾಡಿದ ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಕನ್ನಡ ಚಿತ್ರರಂಗದ ವ್ಯಾಪ್ತಿಯೊಳಗೆ ಕಳೆದ ಎರಡು ದಶಕಗಳಿಂದ ಸುದೀಪ್ ಆಕ್ಷನ್, ಡ್ರಾಮ, ಸೆಂಟಿಮೆಂಟ್ ಸಿನಿಮಾಗಳನ್ನು ಮಾಡಿಕೊಂಡು ಬಂದಿದ್ದರು. ಅದನ್ನೇ 'ಮ್ಯಾಕ್ಸ್' ಸಿನಿಮಾದಿಂದಲೂ ಮುಂದುವರೆಸಿ ಗೆದ್ದಿದ್ದಾರೆ.

Take a Poll

ಹೀಗಾಗಿ ಮತ್ತೆ ಥಿಯೇಟರ್‌ಗಳು ತುಂಬಿ ತುಳುಕಬೇಕು ಅಂದರೆ, ಕಿಚ್ಚ ಸುದೀಪ್ ವರ್ಷಕ್ಕೆ ಎರಡು ಸಿನಿಮಾ ಮಾಡಬೇಕು ಅನ್ನೋ ವಾದ ಒಂದು ಕಡೆ. ಹಾಗೇ ಇನ್ನೊಂದು ಕಡೆ ಪ್ಯಾನ್ ಇಂಡಿಯಾವನ್ನು ತಲೆಯಿಂದ ತೆಗೆದು ಹಾಕಿ ಮೊದಲು ಕನ್ನಡ ಚಿತ್ರರಂಗಕ್ಕೆಂದೇ ಸಿನಿಮಾ ಮಾಡಬೇಕು ಎಂದು ಹಲವು ದಿನಗಳಿಂದ ಒತ್ತಡ ಹಾಕುತ್ತಿದೆ. ಕನ್ನಡದ ಕೆಲವು ಸ್ಟಾರ್‌ಗಳು ಕನ್ನಡಕ್ಕೆ ಅಂತಲೇ ಸಿನಿಮಾ ಮಾಡುತ್ತಿದ್ದಾರೆ. ಅದರಲ್ಲಿ ಕಿಚ್ಚ ಸುದೀಪ್ ಕೂಡ ಒಬ್ಬರು.

ಸದ್ಯದ ಪರಿಸ್ಥಿತಿಯಲ್ಲಿ ಕನ್ನಡ ಚಿತ್ರರಂಗಕ್ಕೆ 'ಮ್ಯಾಕ್ಸ್' ಒಂದು ಕೇಸ್‌ ಸ್ಟಡಿ ಇದ್ದಂತೆ. ಕಂಟೆಂಟ್, ಕಥೆ ಹೇಳುವ ವಿಧಾನ, ಸ್ಟಾರ್‌ಗಳ ಆಯ್ಕೆ ಹಾಗೂ ಜನರಿಗೆ ಚಿತ್ರಮಂದಿರಲ್ಲಿ ಕೊಡುವ ಎಕ್ಸ್‌ಪೀರಿಯನ್ಸ್‌ಗೆ ಉದಾಹರಣೆಯಾಗಿ ನಿಂತಿದೆ. ಸ್ಯಾಂಡಲ್‌ವುಡ್ ಸ್ಟಾರ್‌ಗಳು ಪ್ಯಾನ್ ಇಂಡಿಯಾ ಕಡೆ ಹೋಗುವುದಕ್ಕಿಂತಲೂ ಕನ್ನಡಕ್ಕೆ ಸ್ಟಾರ್‌ಗಳ ಅವಶ್ಯಕತೆಯಿದೆ.

More from Filmibeat

English summary
Kichcha Sudeep Max Day 1 Box Office more than Kamal Haasan’s Thug Life and Dhanush–Nagarjuna Kuberaa;
Read more about: sudeep kamal haasan dhanush
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X