For Quick Alerts
  ALLOW NOTIFICATIONS  
  For Daily Alerts

  ಇಡೀ ಕರುನಾಡೇ ಕಣ್ಣೀರಿಟ್ಟ ಕರಾಳ ದಿನಕ್ಕೆ 11 ವರ್ಷ

  By ಸಾಗರ್ ಮನಸು
  |

  ಡಾ.ರಾಜ್ ಕುಮಾರ್ ಅವರನ್ನ 'ಕನ್ನಡ ಮತ್ತು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ' ಎಂದು ಕರೆಯುತ್ತಾರೆ. ಕನ್ನಡದ ಕೀರ್ತಿ ಪತಾಕೆಯನ್ನ ವಿಶ್ವಮಟ್ಟದಲ್ಲಿ ಹಾರಿಸಿದ ಹೆಗ್ಗಳಿಕೆ ಬಂಗಾರದ ಮನುಷ್ಯನಿಗೆ ಸಲ್ಲುತ್ತದೆ.[ಡಾ.ರಾಜ್ ಕುಮಾರ್ ಮತ್ತು 'ರಾಜಕುಮಾರ': ಕಾಕತಾಳೀಯ ಅಂದ್ರೆ ಇದೇ ನೋಡಿ.!]

  ಆಡು ಮುಟ್ಟದ ಸೊಪ್ಪಿಲ್ಲ, ಡಾ.ರಾಜ್ ಅಭಿನಯಿಸದ ಪಾತ್ರವಿಲ್ಲವೆಂಬಂತೆ ನಟಿಸಿ ಕನ್ನಡ ಚಿತ್ರರಂಗದಲ್ಲಿ ದ್ರುವತಾರೆಯಾಗಿ ಮಿನುಗಿದವರು ಡಾ.ರಾಜ್. ಕನ್ನಡ ಚಲನಚಿತ್ರ ರಂಗಕ್ಕೆ ಇವರ ಕೊಡುಗೆ ಚಿರಸ್ಮರಣೀಯ.['ಗೋಕಾಕ್ ಚಳವಳಿ' ವೇಳೆ ಕನ್ನಡಿಗರಿಗಾಗಿ ಪತ್ರ ಬರೆದಿದ್ದ ಡಾ.ರಾಜ್]

  ಡಾ.ರಾಜ್ ಬಗ್ಗೆ ಹತ್ತು ಹಲವು ಸಂಗತಿಗಳು ಎಲ್ಲರಿಗೂ ಗೊತ್ತಿರಬಹುದು. ಆದರೆ ಇಂದು ಅಣ್ಣಾವ್ರ 11 ನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ, ಕನ್ನಡಿಗರಾಗಿ ಮತ್ತು ಒಬ್ಬ ಕಲಾವಿದರಾಗಿ ಡಾ.ರಾಜ್ ಯಾವ ಎಲ್ಲಾ ಪ್ರಶಸ್ತಿಗಳನ್ನು ಮೊದಲು ಪಡೆದಿದ್ದಾರೆ, ಕನ್ನಡಿಗರು ಸದಾಕಾಲ ಹೆಮ್ಮೆ ಪಡುವ ಏನೆಲ್ಲಾ ಮೊದಲ ಸಾಧನೆಗಳನ್ನು ಮಾಡಿದ್ದಾರೆ ಎಂಬ ವಿಶೇಷ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಮುಂದೆ ಓದಿರಿ...

  ವಿಶ್ವದಲ್ಲೇ ಅತಿಹೆಚ್ಚು ಪ್ರತಿಮೆಗಳನ್ನು ಹೊಂದಿರುವ ನಟ ಡಾ.ರಾಜ್

  ವಿಶ್ವದಲ್ಲೇ ಅತಿಹೆಚ್ಚು ಪ್ರತಿಮೆಗಳನ್ನು ಹೊಂದಿರುವ ನಟ ಡಾ.ರಾಜ್

  - ಅತಿ ಹೆಚ್ಚು ಪ್ರತಿಮೆಗಳನ್ನು ಹೊಂದಿರುವ ವಿಶ್ವದ ಮೊದಲ ನಟ ನಮ್ಮ ಡಾ.ರಾಜ್ ಕುಮಾರ್.

  - ನಟನೆಗೆಂದು ಗೌರವ ಡಾಕ್ಟರೇಟ್ ಪಡೆದ ಮೊದಲ ನಟ ಡಾ.ರಾಜ್

  - ನಟಿಸಿದ ಮೊದಲ ಚಿತ್ರಕ್ಕೆ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ ಪಡೆದ ಮೊದಲ ಕನ್ನಡ ನಟ ಡಾ.ರಾಜ್

  ಇತರೆ ಭಾಷೆಯಲ್ಲಿ ನಟಿಸದ ಮೊದಲ ನಟ

  ಇತರೆ ಭಾಷೆಯಲ್ಲಿ ನಟಿಸದ ಮೊದಲ ನಟ

  - ಅನ್ಯ ಭಾಷಾ ಚಿತ್ರಗಳಲ್ಲಿ ನಟಿಸದ ಪ್ರಥಮ ಕೀರ್ತಿ ಡಾ.ರಾಜ್ ರದ್ದು.

  - ಅತಿ ಹೆಚ್ಚು ದ್ವಿಪಾತ್ರ ಹಾಗೂ ತ್ರಿಪಾತ್ರಗಳಲ್ಲಿ ನಟಿಸಿದ ಪ್ರಥಮ ಕನ್ನಡಿಗ

  - ಶ್ರೇಷ್ಠ ಸಿನಿ ಪುರಸ್ಕಾರ 'ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ' ಪಡೆದ ಮೊದಲ ಕನ್ನಡಿಗ ನಟ ಸಾರ್ವಭೌಮ ಡಾ.ರಾಜ್.

  ಬಾಂಡ್ ಹೀರೋ ಡಾ.ರಾಜ್

  ಬಾಂಡ್ ಹೀರೋ ಡಾ.ರಾಜ್

  - ಭಾರತ ಚಿತ್ರರಂಗದ ಮೊಟ್ಟ ಮೊದಲ ಬಾಂಡ್ ಹೀರೋ ಡಾ.ರಾಜ್

  - ಅತಿ ಹೆಚ್ಚು ಪೌರಾಣಿಕ, ಐತಿಹಾಸಿಕ ಹಾಗೂ ಕಾದಂಬರಿ ಆಧಾರಿತ ಸದಭಿರುಚಿಯ ಚಿತ್ರಗಳಲ್ಲಿ ನಟಿಸಿದ ಏಕೈಕ ಕನ್ನಡಿಗ ಡಾ.ರಾಜ್ ಕುಮಾರ್

  - ಪ್ರಪಂಚದಾದ್ಯಂತ ಸುಮಾರು 4800ಕ್ಕೂ ಹೆಚ್ಚಿನ ರಿಜಿಸ್ಟರ್ಡ್ ಅಭಿಮಾನಿ ಸಂಘಟನೆಗಳನ್ನುಳ್ಳ ಏಕೈಕ ಏಷಿಯನ್ ಡಾ ರಾಜ್

  50 ವರ್ಷಕ್ಕೂ ಹೆಚ್ಚು ಕಾಲ ನಟನಾಗಿಯೇ ಅಭಿನಯಿಸಿದ ಮೊದಲಿಗರು ಡಾ.ರಾಜ್

  50 ವರ್ಷಕ್ಕೂ ಹೆಚ್ಚು ಕಾಲ ನಟನಾಗಿಯೇ ಅಭಿನಯಿಸಿದ ಮೊದಲಿಗರು ಡಾ.ರಾಜ್

  - ಅತಿ ಹೆಚ್ಚಿನ ಕಾಲ ಸುಮಾರು ಐವತ್ತು ವರ್ಷಗಳ ಕಾಲ ಹೀರೋ ಆಗಿಯೇ ಸೇವೆಗೈದ ಪ್ರಥಮ ಭಾರತೀಯ ನಟ ಡಾ ರಾಜ್

  - ಒಂದೇ ವರ್ಷದ ಅಂತರದಲ್ಲಿ ಮೂರು ಬಾರಿ ಸತತ (1969, 70, 71) ಹತ್ತಕ್ಕೂ ಮೀರಿದ ಉತ್ತಮ ಚಿತ್ರಗಳಲ್ಲಿ ನಟಿಸಿದ ಪ್ರಥಮ ದಾಖಲೆ ಡಾ ರಾಜ್ ಅವರದ್ದು.

  - ನಟನೆಗಷ್ಟೇ ಅಲ್ಲದೆ ಗಾಯನಕ್ಕೂ 'ರಾಷ್ಟ್ರ ಪ್ರಶಸ್ತಿ' ಪಡೆದ ಮೊದಲ ಭಾರತದ ನಟ ಡಾ ರಾಜ್[ಜೀವನ ಚೈತ್ರ ('92) ಚಿತ್ರದ ನಾದಮಯ ಹಾಡಿಗೆ].

  ಡಾ ರಾಜ್ ಜೀವಿತಾವಧಿಯಲ್ಲೇ ಅವರ ಹೆಸರಿನ ಪ್ರಶಸ್ತಿ ಪ್ರದಾನ

  ಡಾ ರಾಜ್ ಜೀವಿತಾವಧಿಯಲ್ಲೇ ಅವರ ಹೆಸರಿನ ಪ್ರಶಸ್ತಿ ಪ್ರದಾನ

  - ಡಾ ರಾಜ್ ಕುಮಾರ್ ಜೀವಿತಾವಧಿಯಲ್ಲೇ 'ಡಾ ರಾಜ್ ಕುಮಾರ್' ಹೆಸರಿನ ಪ್ರಶಸ್ತಿ ಪುರಸ್ಕಾರ ನೀಡಲಾಗುತ್ತಿತ್ತು. ಈ ದಾಖಲೆಯುಳ್ಳ ಪ್ರಥಮ ಭಾರತೀಯ ಕಲಾವಿದ ಡಾ ರಾಜ್.

  - ಶ್ರೇಷ್ಠ 'ಎನ್ ಟಿ ಆರ್ ಆಂಧ್ರ ಪ್ರಶಸ್ತಿ' (NTR Andhra Award) ಪಡೆದ ಏಕೈಕ ಕನ್ನಡ ನಟ ಡಾ ರಾಜ್ [ಡಾ.ರಾಜ್ ಡಾಕ್ಟರೇಟ್ ಪಡೆದ ಅಪರೂಪದ ಕ್ಷಣ ನೋಡಿ!]

  ಎರಡು ತಲೆಮಾರುಗಳಿಗೆ ನಾಯಕ ನಟ

  ಎರಡು ತಲೆಮಾರುಗಳಿಗೆ ನಾಯಕ ನಟ

  - ಅಮ್ಮ, ಮಗಳು ಎರಡು ತಲೆಮಾರುಗಳೊಂದಿಗೂ ನಾಯಕನಾಗಿ ನಟಿಸಿದ ದಾಖಲೆ ಡಾ ರಾಜ್ ಅವರದ್ದು(ಆದವಾನಿ ಲಕ್ಷ್ಮಿದೇವಿ ಹಾಗೂ ರೂಪಾದೇವಿ).

  - ಕಪ್ಪು ಬಿಳುಪಿನ ಸಮಯದಲ್ಲೇ ನೂರು ಯಶಸ್ವಿ ಚಿತ್ರಗಳನ್ನು ಪೂರೈಸಿದ ಏಕೈಕ ಕನ್ನಡಿಗ ಡಾ ರಾಜ್.

  'ಕೆಂಟಕಿ ಕರ್ನಲ್ ಪ್ರಶಸ್ತಿ' ಪಡೆದ ಏಕೈಕ ಭಾರತೀಯ ಡಾ.ರಾಜ್

  'ಕೆಂಟಕಿ ಕರ್ನಲ್ ಪ್ರಶಸ್ತಿ' ಪಡೆದ ಏಕೈಕ ಭಾರತೀಯ ಡಾ.ರಾಜ್

  - ಉತ್ತಮ ಅಭಿನಯಕ್ಕಾಗಿ ಫ್ರೆಂಚ್ ಸರ್ಕಾರದ ಗೌರವಯುತ 'ಕೆಂಟಕಿ ಕರ್ನಲ್ ಪ್ರಶಸ್ತಿ' ಪಡೆದ ಏಕೈಕ ಭಾರತದ ನಟ ಡಾ.ರಾಜ್

  - ಅತಿ ಹೆಚ್ಚು ಸಿನಿ ಸಂಬಂಧಿತ ಬಿರುದಾವಳಿಗಳನ್ನು ಗಳಿಸಿರುವ ಏಕೈಕ ಭಾರತೀಯ ಡಾ ರಾಜ್.

  - 'ಕರ್ನಾಟಕ ರತ್ನ' ಪ್ರಶಸ್ತಿ ಪಡೆದ ಏಕೈಕ ಕನ್ನಡ ಕಲಾವಿದ ಡಾ ರಾಜ್

  ಅಭಿಮಾನಿಗಳನ್ನೇ ದೇವರೆಂದ ಅಪರೂಪದ ಕಲಾವಿದ

  ಅಭಿಮಾನಿಗಳನ್ನೇ ದೇವರೆಂದ ಅಪರೂಪದ ಕಲಾವಿದ

  -ಹಾಗೂ ಅಭಿಮಾನಿಗಳನ್ನೇ ದೇವರೆಂದು ಕರೆದು ಇತರರಿಗೆ ಮಾದರಿ ಎನಿಸಿದ ಏಕೈಕ ಅಪರೂಪದ ಕಲಾವಿದರು ನಮ್ಮ ಡಾ.ರಾಜ್ ಕುಮಾರ್ ರವರು.

  English summary
  Today(april 12) is 11th Death anniversary of Legendary actor Dr.Rajkumar. Here is lesser known facts about Dr.Rajkumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X