Shivanna : 'ಜೈಲರ್' ಬಳಿಕ 3 ತಮಿಳು ಸಿನಿಮಾ ಕಥೆಗಳಿಗೆ ಶಿವಣ್ಣ ಗ್ರೀನ್ ಸಿಗ್ನಲ್? ಆಫರ್ ಕೊಟ್ಟವರು ಯಾರು?

ಶಿವಣ್ಣ 'ಘೋಸ್ಟ್' ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಏಕಕಾಲಕ್ಕೆ ನಾಲ್ಕು ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಈ ಸಿನಿಮಾ ಬಗ್ಗೆ ಈಗಾಗಲೇ ಕ್ರೇಜ್ ಹೆಚ್ಚಾಗಿದೆ. ಒರಿಜಿನಲ್ ಗ್ಯಾಂಗ್‌ಸ್ಟರ್ ಲುಕ್‌ನಲ್ಲಿ ಶಿವರಾಜ್‌ಕುಮಾರ್ ಅನ್ನು ನೋಡುವುದಕ್ಕೆ ಅಭಿಮಾನಿಗಳೂ ಕೂಡ ಕಾದು ಕೂತಿದ್ದಾರೆ.

ಇದು ಕರ್ನಾಟಕದ ಕಥೆಯಾದರೆ, ತಮಿಳುನಾಡಿನಲ್ಲೂ 'ಘೋಸ್ಟ್' ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದು ಕಾರಣ 'ಜೈಲರ್'. ಸೂಪರ್‌ಸ್ಟಾರ್ ರಜನಿಕಾಂತ್ ಜೊತೆ ಒಂದು ಗೆಸ್ಟ್ ಅಪಿಯರೆನ್ಸ್‌ನಲ್ಲಿ ಕಾಣಿಸಿಕೊಂಡ ಶಿವಣ್ಣ ಕ್ರೇಜಿ ಲುಕ್‌ಗೆ ಫಿದಾ ಆಗಿದ್ದಾರೆ. ಹೀಗಾಗಿ 'ಘೋಸ್ಟ್' ನೋಡುವುದಕ್ಕೆ ತಮಿಳು ಮಂದಿ ಕೂಡ ತುದಿಗಾಲಲ್ಲಿ ನಿಂತಿದ್ದಾರೆ.

list of three movies Shivarajkumar listened to scripts after the Jailer craze

'ಜೈಲರ್' ಬಳಿಕ 'ಘೋಸ್ಟ್'ಗಷ್ಟೇ ಕ್ರೇಜ್ ಅಲ್ಲ. ಶಿವಣ್ಣನನ್ನು ಹುಡುಕಿಕೊಂಡು ಈಗಾಗಲೇ ಮೂರು ಸ್ಕ್ರಿಪ್ಟ್‌ಗಳು ಬಂದಿವೆ. ಈ ಮಾತನ್ನು ಸ್ವತ: ಶಿವಣ್ಣನೇ ರಿವೀಲ್ ಮಾಡಿದ್ದಾರೆ. ಗಲಾಟ್ಟಾ ಪ್ಲಸ್‌ಗೆ ನೀಡಿದ ಸಂದರ್ಶನದಲ್ಲಿ ಸೆಂಚುರಿ ಸ್ಟಾರ್ ಆ ಮೂರು ತಮಿಳು ಸಿನಿಮಾಗಳನ್ನು ರಿವೀಲ್ ಮಾಡಿದ್ದಾರೆ. ಆ ಸಿನಿಮಾಗಳು ಯಾವುವು ಅನ್ನೋದನ್ನು ತಿಳಿಯಲು ಮುಂದೆ ಓದಿ.

"ಜೈಲರ್ ಬಳಿಕ ಬದಲಾವಣೆ ಕಂಡಿದ್ದೇನೆ"

ಶಿವಣ್ಣನಿಗೆ 'ಜೈಲರ್' ಹೊಸ ಇಮೇಜ್ ಕೊಟ್ಟಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಶಿವಣ್ಣ ಮಿಂಚಿದ್ದಾರೆ. ಈ ಸಿನಿಮಾ ಬಂದಲ್ಲಿಂದ ತಮಿಳು ಮಂದಿ ಶಿವಣ್ಣನನ್ನು ಹೊಗಳಿಕೊಂಡಾಡುತ್ತಿದ್ದಾರೆ. "ಜೈಲರ್‌ಗೂ ಮುನ್ನ ಚೆನ್ನೈಗೆ ಬಂದಿದ್ದಕ್ಕೂ, ಜೈಲರ್ ಬಳಿಕ ಚೆನ್ನೈಗೆ ಬರೋದಕ್ಕೂ ತುಂಬಾನೇ ಡಿಫ್ರೆಂಟ್ ಇದೆ. ಚೆನ್ನೈನಲ್ಲೇ ನಾನು ಹುಟ್ಟಿ ಬೆಳೆದಿದ್ದೇನೆ. ಆದರೂ, ಒಂದು ಸಿನಿಮಾ ಇಷ್ಟೆಲ್ಲ ಬದಲಾವಣೆ ತರುತ್ತೆ ಅನ್ನೋದು ನಿಜಕ್ಕೂ ಗೊತ್ತಿರಲಿಲ್ಲ." ಎಂದು ಶಿವಣ್ಣ ಸಂದರ್ಶನದ ವೇಳೆ ಸಂತಸ ಹಂಚಿಕೊಂಡಿದ್ದಾರೆ.

list of three movies Shivarajkumar listened to scripts after the Jailer craze

ಮೂರು ತಮಿಳು ಸಿನಿಮಾಗೆ ಆಫರ್

ಇದೇ ಸಂದರ್ಶನದಲ್ಲಿ ಮೂರು ಸಿನಿಮಾಗಳಿಗೆ ಆಫರ್ ಬಂದಿದ್ದಾಗಿ ಶಿವರಾಜ್‌ಕುಮಾರ್ ರಿವೀಲ್ ಮಾಡಿದ್ದಾರೆ. "ನನಗೆ ಎರಡು ಮೂರು ಆಫರ್ ಬಂದಿದೆ. ಲೀಡ್ ರೋಲ್‌ಗೇನೆ ಬಂದಿದೆ. ಎರಡು ಸಬ್ಜೆಕ್ಟ್‌ ಅಂತೂ ಅದ್ಭುತವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಿರ್ಮಾಪಕರು ತುಂಬಾ ಆಸಕ್ತಿ ತೋರುತ್ತಿದ್ದಾರೆ. ಬಜೆಟ್ ವಿಚಾರದಲ್ಲಿ ಸ್ವಲ್ಪ ಹೊಡೆತ ಬೀಳಬಹುದು ಅಂದೆ. ಇಲ್ಲ ಸರ್ ಮಾಡೋಣ ಕ್ಯಾಲಿಬರ್ ಇದೆ ಅಂತ ಹೇಳಿದ್ದಾರೆ. ಯಾಕಂದ್ರೆ, ಇದು ರೆಗ್ಯೂಲರ್ ಸಿನಿಮಾ ಅಲ್ಲ. ಸಬ್ಜೆಕ್ಟ್ ತುಂಬಾನೇ ಇಂಟ್ರೆಸ್ಟಿಂಗ್ ಆಗಿದೆ." ಎಂದು ರಿವೀಲ್ ಮಾಡಿದ್ದು, ಶಿವಣ್ಣ ಫ್ಯಾನ್ಸ್‌ಗೆ ಸರ್ಪ್ರೈಸ್ ಕೊಟ್ಟಿದ್ದಾರೆ.

ಆ ಮೂರು ಸಿನಿಮಾಗಳ್ಯಾವುವು?

ಶಿವಣ್ಣ ಈಗಾಗಲೇ ಮೂರು ಕಥೆಗಳನ್ನು ಕೇಳಿದ್ದಾರೆ. ಮೂರೂ ಕಥೆಗಳು ಕೂಡ ಇಷ್ಟ ಆಗಿದೆ. "ಕುಂಕಿ ಸಿನಿಮಾ ನಿರ್ದೇಶಕ ಪ್ರಭು ಸೋಲೊಮನ್ ಅವರದ್ದೊಂದು ಕಥೆ ಕೇಳಿದ್ದೇನೆ. ವಡಿವೇಲು ಅವರದ್ದು ಒಂದು ಕಥೆ ಕೇಳಿದ್ದೇನೆ. ತೆಂಗಪ್ಪನ್ ಅಂತ ಕಮಲ್ ಹಾಸನ್ ಅವರ ಮ್ಯಾನೇಜರ್ ಅವರು ಒಂದು ಸ್ಕ್ರಿಪ್ಟ್ ತಂದಿದ್ದರು. ಪೋರ್ಮನ್ನನ್ ಅಂತೇನೋ ಇದೆ. ಕಥೆ ಅದ್ಭುತವಾಗಿದೆ. ಅದನ್ನು ಪ್ಲ್ಯಾನ್ ಮಾಡಬೇಕಿದೆ ಅಷ್ಟೆ." ಎಂದು ಮೂರು ತಮಿಳು ಸ್ಕ್ರಿಪ್ಟ್ ಬಗ್ಗೆ ಶಿವಣ್ಣ ಹೇಳಿಕೊಂಡಿದ್ದಾರೆ.

More from Filmibeat

English summary
A list of three movies Shivarajkumar listened to scripts after the Jailer craze:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X